Andolana originals

ದಸರಾ: ಮಿನುಗು ದೀಪಗಳ ಅಲಂಕಾರ!

ಕೆ.ಬಿ.ರಮೇಶ ನಾಯಕ

ನಾಡಹಬ್ಬದಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾ ಮಾದರಿಯಲ್ಲಿ ದೀಪಗಳ ಅಳವಡಿಕೆ 

೧೩೬ ಕಿ.ಮೀ. ಉದ್ದದ ದೀಪಾಲಂಕಾರ, ಪ್ರಮುಖ ವೃತ್ತಗಳು ವರ್ಣಮಯ

ವಿದ್ಯುತ್ ದೀಪಗಳಿಂದ ಕಂಗೊಳಿಸುವ ಅರಮನೆ ನಗರಿ ಮೈಸೂರು

ದೀಪಾಲಂಕಾರಕ್ಕೆ ೧೦ ಕೋಟಿ ರೂಪಾಯಿ ವೆಚ್ಚ

ಮೈಸೂರು: ಮೈಸೂರು ದಸರಾ ಎಂದಾಕ್ಷಣ ಜಗಜಗಿಸುವ ವಿದ್ಯುತ್ ದೀಪಗಳ ಸರಮಾಲೆ, ಅಲಂಕೃತ ಗೊಂಡ ಉದ್ಯಾನಗಳು, ಸಿಂಗರಿಸಿದ ಪಾರಂಪರಿಕ ಕಟ್ಟಡಗಳು, ವೃತ್ತಗಳು ಹಾಗೂ ರಸ್ತೆಗಳು ಲಕ್ಷಾಂತರ ಜನರ ಮನಸ್ಸನ್ನು ಮೋಡಿ ಮಾಡಲಿದ್ದು, ಮೊದಲ ಬಾರಿಗೆ ಮಿನುಗು ದೀಪಗಳ (ಮೂಮೆಂಟ್ಲೈಟ್) ಅಲಂಕಾರ ಮಾಡಲಾಗುತ್ತಿದೆ.

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಅಳವಡಿಸುವ ದೀಪಾಲಂಕಾರದ ಮಾದರಿಯ ಜತೆಗೆ ಮೊಟ್ಟ ಮೊದಲ ಬಾರಿಗೆ ಸ್ಥಳೀಯರು ಹಾಗೂ ಹೊರಗಿನ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಮಿನುಗುವ ದೀಪಗಳನ್ನು ರಾಜಮಾರ್ಗಗಳಲ್ಲಿ ಅಳವಡಿಸಲಾಗುತ್ತಿದೆ. ನೋಡುವ ವ್ಯಕ್ತಿಗೆ ದೀಪಗಳು ಮಿನುಗುತ್ತಲೇ ಕಣ್ಮುಂದೆ ಹಾದು ಹೋಗುವ ರೀತಿಯಲ್ಲಿ ಮುದ ನೀಡಲಿವೆ.

ಕಳೆದ ವರ್ಷ ೧೨೦ ಕಿ.ಮೀ ಹಾಗೂ ೯೦ ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ ದೀಪಾಲಂಕಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ನಗರದಲ್ಲಿ ಹೆಚ್ಚುವರಿ ೧೬ ಕಿ.ಮೀ. ಜತೆಗೆ ಒಟ್ಟು ೧೩೬ ಕಿ.ಮೀ. ವಿದ್ಯುತ್ ದೀಪಾಲಂಕಾರ ಮಾಡುವ ಜತೆಗೆ ಪ್ರಮುಖ ೧೧೬ ವೃತ್ತಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡುತ್ತಿರುವುದರಿಂದ ಎಲ್ಲ ದಿಕ್ಕುಗಳೂ ಬೆಳಕಿನಮಯವಾಗಲಿವೆ.

ದೀಪಾಲಂಕೃತಗೊಳ್ಳುವ ವೃತ್ತಗಳು: ವಿಶೇಷವಾಗಿ ಚಾಮರಾಜ ವೃತ್ತ, ಕೃಷ್ಣರಾಜ ಒಡೆಯರ್ ವೃತ್ತ, ಜಯಚಾಮರಾಜ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಫೌಂಟೇನ್ ವೃತ್ತ, ಎಂಡಿಎ ವೃತ್ತ, ರೈಲ್ವೆ ನಿಲ್ದಾಣ, ದಾಸಪ್ಪ ವೃತ್ತ, ಕೌಟಿಲ್ಯ ವೃತ್ತ, ಜಲದರ್ಶಿನಿ ರಸ್ತೆಯ ಕಲಾಮಂದಿರ ವೃತ್ತ, ಸರ್ಕಾರಿ ಅತಿಥಿಗೃಹ ಮಾರ್ಗದ ಕಮಾನು ದ್ವಾರ, ಬಾಬು ಜಗಜೀವನ್‌ರಾಮ್ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ, ಮೈಸೂರು-ಬೆಂಗಳೂರು ರಸ್ತೆಯ ಕಮಾನು ಗೇಟು, ಅಗ್ರಹಾರ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳನ್ನು ದೀಪಾಲಂಕೃತಗೊಳಿಸಲಾಗುತ್ತದೆ.

ರಸ್ತೆ ರಸ್ತೆಗಳೂ ಬೆಳಕುಮಯ: ಪ್ರತಿವರ್ಷದಂತೆ ಅಲಂಕೃತ ಗೊಳ್ಳುವ ಜಂಬೂ ಸವಾರಿ ಸಾಗುವ ಸಯ್ಯಾಜಿರಾವ್ ರಸ್ತೆ, ನಗರದ ರೈಲು ನಿಲ್ದಾಣದಿಂದ ಇರ್ವಿನ್ ರಸ್ತೆ, ಚಾಮುಂಡಿ ಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ಸಾಗುವ ರಸ್ತೆ, ನಂಜನಗೂಡು ರಸ್ತೆ, ಹರ್ಷ ರಸ್ತೆ, ಅಶೋಕ ರಸ್ತೆ, ಮಹದೇಶ್ವರ ರಸ್ತೆ, ಹುಣಸೂರು ರಸ್ತೆ, ಜೆಎಲ್‌ಬಿ ರಸ್ತೆ, ಮೈಸೂರು -ಬೆಂಗಳೂರು ರಸ್ತೆ, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಬುಲೇವಾರ್ಡ್ ರಸ್ತೆ, ಸಿದ್ಧಾರ್ಥನಗರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ದೀಪಾಲಂಕೃತಗೊಳ್ಳಲಿವೆ.

ಕಟ್ಟಡಗಳಿಗೂ ದೀಪಾಲಂಕಾರ: ಜಿಲ್ಲಾಧಿಕಾರಿ ಕಚೇರಿ, ಜಿಪಂ, ನ್ಯಾಯಾಲಯ, ನಗರಪಾಲಿಕೆ, ಕಾಡಾ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳು, ಪಾರಂಪರಿಕ ಕಟ್ಟಡಗಳಿಗೂ ಬೆಳಕಿನ ಸಂಭ್ರಮವಾಗಲಿದೆ. ಈಗಾಗಲೇ ನಗರ ಹಾಗೂ ಹೊರವಲಯದಲ್ಲಿ ಸಾರ್ವಜನಿಕರ ಉದ್ಯಾನಗಳಿಗೂ ದೀಪಾಲಂಕಾರ ಮಾಡುವ ಕೆಲಸ ನಡೆಯುತ್ತಿದೆ. ರಾತ್ರಿ ೭ ಗಂಟೆಗೆ ಅರಮನೆಗೆ ವಿದ್ಯುತ್ ದೀಪ ಹಾಕುತ್ತಿದ್ದಂತೆ ಇಡೀ ನಗರ ಕ್ಷಣಾರ್ಧದಲ್ಲಿ ಜಗಮಗಿಸಲಿದೆ.

” ೧೦ ಕೋಟಿ ರೂ. ಖರ್ಚು: ಈ ಬಾರಿಯ ದಸರಾ ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲು ಅಂದಾಜು ೯ರಿಂದ ೧೦ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈಗಾಗಲೇ ದೀಪಾಲಂಕಾರಕ್ಕೆ ಬೇಕಾದ ಹಣವನ್ನು ಭರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ.ಜಾರ್ಜ್ ಮಾರ್ಗದರ್ಶನದಲ್ಲಿ ಈ ಪ್ರಕ್ರಿಯೆ ಮಾಡಲಾಗುತ್ತಿದೆ. ಈಗಾಗಲೇ ತುಂಡು ಗುತ್ತಿಗೆ ನೀಡಲಾಗಿದೆ. ಅರಮನೆಯ ದೀಪಗಳ ಮಾದರಿಗೆ ಹೋಲಿಕೆ ರೀತಿಯಲ್ಲಿ ದೀಪಗಳನ್ನು ಅಳವಡಿಸುವ ಜತೆಗೆ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಚಿತ್ತಾಕರ್ಷಕ ದೀಪಗಳನ್ನು ಅಳವಡಿಸುತ್ತಿರುವುದು ವಿಶೇಷವಾಗಿದೆ.”

” ದಸರಾ ಆಚರಣೆ ಮೈಸೂರಿನ ಸಾಂಸ್ಕೃತಿಕ ವೈಭವವಾಗಿದೆ. ಜಂಬೂ ಸವಾರಿಯಂತೆ ದೀಪಾಲಂಕಾರವೂ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಈ ಆಚರಣೆಯಿಂದ ಇಂದಿನ ಪೀಳಿಗೆಗೆ ನಮ್ಮ ಪೂರ್ವಿಕರ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯವಾಗಿದೆ. ನಮ್ಮ ಇಲಾಖೆಯ ಕರ್ತವ್ಯದೊಂದಿಗೆ ದಸರಾ ಉತ್ಸವದಲ್ಲಿ ಭಾಗಿಯಾಗಲು ಇದೊಂದು ಸುವರ್ಣಾವಕಾಶವಾಗಿದೆ. ಈ ಬಾರಿ ಅಂದಾಜು ೧೦ ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ.”

-ಕೆ.ಎಂ.ಮುನಿಗೋಪಾಲ ರಾಜು, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್

ಆಂದೋಲನ ಡೆಸ್ಕ್

Recent Posts

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

2 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

3 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

4 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

4 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

5 hours ago

ಅಧಿಕಾರ ಶಾಶ್ವತವಲ್ಲ : ‘ನನ್ನ ತಂದೆಯ ಇಚ್ಛೆಯಂತೆಯೇ ನಡೆಯುವೆ’ ; ಯತೀಂದ್ರ

ಚಿಕ್ಕೋಡಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ…

5 hours ago