Andolana originals

ಮುಡಾ: 50:50 ಅನುಪಾತದಡಿ 1950 ಬದಲಿ ನಿವೇಶನ

ಕೆ. ಬಿ. ರಮೇಶನಾಯಕ
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಽಕಾರದಲ್ಲಿ ೫೦:೫೦ ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿ ರುವ ಹಗರಣ ಕುರಿತು ಪ್ರತ್ಯೇಕವಾಗಿ ತನಿಖೆ ನಡೆಯುತ್ತಿದ್ದು, ಕೇವಲ ಮೂರು ವರ್ಷಗಳಲ್ಲೇ ಅಂದಾಜು ೧,೯೫೦ ನಿವೇಶನ ಗಳನ್ನು ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಬಯಲಾಗಿದೆ.

ಮುಡಾ ಆಯುಕ್ತರಾಗಿದ್ದ ಎಚ್. ಎಂ. ಕಾಂತರಾಜು, ಕಾರ್ಯ ದರ್ಶಿಯಾಗಿದ್ದ ಎಂ. ಕೆ. ಸವಿತಾ ಅವರ ನೇತೃತ್ವದ ತಂಡ ಮುಡಾ ವ್ಯಾಪ್ತಿಯಲ್ಲಿದ್ದ ನಿವೇಶನಗಳನ್ನು ಗುರುತಿಸಿ ಪಟ್ಟಿ ಮಾಡಿದ್ದ ಐದು ಸಾವಿರ ನಿವೇಶನಗಳಲ್ಲಿ ಈತನಕ ೧,೯೫೦ ನಿವೇಶನಗಳನ್ನು ಬದಲಿಯಾಗಿ ಹಂಚಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ, ತನಿಖೆಯ ಆಳಕ್ಕಿಳಿದಿರುವ ಮೂರು ಸಂಸ್ಥೆಗಳೂ ಪ್ರತ್ಯೇಕವಾಗಿ ಸಲ್ಲಿಸುವ ವರದಿ ಬಹಿರಂಗವಾದ ಮೇಲೆ ಮತ್ತಷ್ಟು ಹುಳುಕು, ಹಗರಣಗಳು ಬಯಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಿಐಟಿಬಿಯು ಮುಡಾ ಆಗಿ ರೂಪುಗೊಂಡ ನಂತರ ಲಲಿತಾದ್ರಿನಗರ (ಉತ್ತರ), ಲಲಿತಾದ್ರಿನಗರ(ದಕ್ಷಿಣ), ಶಾಂತ ವೇರಿ ಗೋಪಾಲಗೌಡ ನಗರ, ಲಾಲ್ ಬಹದ್ದೂರ್ ಶಾಸಿನಗರ, ವಸಂತನಗರ ಬಡಾವಣೆ, ಹಂಚ್ಯಾ-ಸಾತಗಳ್ಳಿ ಎ ಮತ್ತು ಬಿ ವಲಯ ಬಡಾವಣೆ, ಎರಡನೇ ಹಂತ ಬಡಾವಣೆ, ದೇವನೂರು ಮೂರನೇ ಹಂತದ ಬಡಾವಣೆ, ವಿಜಯನಗರ ನಾಲ್ಕನೇ ಹಂತ, ಒಂದನೇ ಘಟ್ಟ, ಎರಡನೇ ಘಟ್ಟ ಮತ್ತು ಮೂರನೇ ಘಟ್ಟ, ರವೀಂದ್ರನಾಥ್ ಠ್ಯಾಗೋರ್ ನಗರ ಬಡಾವಣೆ, ನಾಚನಹಳ್ಳಿ-ಕುಪ್ಪಲೂರು ಮುರನೇ ಹಂತದ ಬಡಾವಣೆಗಳನ್ನು ನಿರ್ಮಿಸಲಾಯಿತು.

ಇದಲ್ಲದೆ, ಖಾಸಗಿ ಬಡಾವಣೆಗಳ ರಚನೆಗೆ ಅನುಮೋದನೆ ನೀಡಿದ್ದರಿಂದಾಗಿ ಇದುವರೆಗೂ ೧,೧೦೦ ಬಡಾವಣೆಗಳು ರಚನೆಯಾಗಿದ್ದು, ೯೦೦ ನಿವೇಶನಗಳು ಹಸ್ತಾಂತರಕ್ಕೆ ಬಾಕಿ ಇವೆ.

ಮುಡಾ ಆಸ್ತಿಗಳನ್ನು ರಕ್ಷಿಸಿ, ಕಾನೂನು ಪ್ರಕಾರವಾಗಿ ಜನರಿಗೆ ನಿವೇಶನಗಳನ್ನು ಹಂಚುವುದು ಅಥವಾ ಬಹುಮಹಡಿ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುವ ಬದಲಿಗೆ ಭೂಮಿ ನೀಡಿದವರಿಗೆ ಪರಿಹಾರದ ರೂಪದಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಮುಡಾ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ನೀಡಿರುವ ಪ್ರಕರಣಗಳು ಜಾಸ್ತಿಯಾಗಿದ್ದರೆ, ನ್ಯಾಯಾಲಯದ ಆದೇಶದಂತೆಯೂ ಹಂಚಿಕೆ ಮಾಡಲಾಗಿದೆ. ಎಚ್. ಎಂ. ಕಾಂತರಾಜು ಅವರು ಆಯುಕ್ತರಾಗಿ ಮುಡಾ ಆಸ್ತಿಗಳನ್ನು ಗುರುತುಪಡಿಸಿ ಖಾಲಿ ನಿವೇಶನಗಳನ್ನು ಪಟ್ಟಿ ಮಾಡಿದ್ದರು. ಆದರೆ, ಅದರಲ್ಲಿ ಡಾ. ಡಿ. ಬಿ. ನಟೇಶ್, ಜಿ. ಟಿ. ದಿನೇಶ್ ಕುಮಾರ್ ಅವರ ಅವಧಿಯಲ್ಲೇ ಅಂದಾಜು ೧,೯೫೦ ನಿವೇಶನಗಳನ್ನು ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ. ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ನಡೆಸುತ್ತಿರುವ ತನಿಖೆಯಲ್ಲಿ ಮೊದಲ ಹಂತದಲ್ಲಿ ಆಂತರಿಕವಾಗಿ ತಯಾರಿಸಿರುವ ವರದಿಯಲ್ಲಿ ಈ ಅಂಶಗಳು ಅಡಕವಾಗಿವೆ. ರಾಜ್ಯ ಸರ್ಕಾರ ನೀಡಿರುವ ಗಡುವಿನೊಳಗೆ ವರದಿ ಸಲ್ಲಿಸಬೇಕಿರುವ ಕಾರಣ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆ ಸಂಗ್ರಹಿಸಿ,ಅದನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದೆ. ಈಗ ಭೂ ಪರಿಹಾರ ಮತ್ತು ಬೇರೆ ಕಾರಣಕ್ಕಾಗಿ ಬದಲಿ ನಿವೇಶನಗಳನ್ನು ಮಂಜೂರು ಮಾಡಿರುವ ಕಡತಗಳ ಪರಿಶೀಲನೆಯಲ್ಲಿ ಅಕ್ರಮಗಳು ಪತ್ತೆಯಾಗಿದ್ದು, ಮತ್ತಷ್ಟು ಹಂಚಿಕೆ ಆಗಿರಬಹುದೆಂದು ನಿರೀಕ್ಷಿಸಲಾಗಿದೆ. ಪ್ರಮುಖ ನಾಲ್ಕು ಪ್ರಕರಣಗಳಲ್ಲಿ ೮೧, ೯೭, ೫೮ ಹಾಗೂ ೪೧ ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ವರದಿಯಲ್ಲಿ ಕಾಣಿಸಲಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

ಸಿಎಂ ಒಲವು: ೫೦:೫೦ ಅನುಪಾತದ ನಿವೇಶನಗಳನ್ನು ರದ್ದುಪಡಿಸಲು ಮುಡಾ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಿರುವ ಕಾರಣ ಸಿದ್ದ ರಾಮಯ್ಯ ಅವರು ಕೂಡ ನಿವೇಶನಗಳ ರದ್ದತಿಗೆ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ. ಪಿ. ಎನ್. ದೇಸಾಯಿ ವರದಿ ಬಂದ ಮೇಲೆ ಕಾನೂನಾತ್ಮಕವಾಗಿ ಹಂಚಿಕೆ ಮಾಡಿರುವುದನ್ನು ಹೊರತುಪಡಿಸಿ ಬೇರೆ ಎಲ್ಲಾ ಅಕ್ರಮ ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಸಚಿವ ಸಂಪುಟದ ಹಿರಿಯ ಸದಸ್ಯರಿಂದ ಸಲಹೆ ಪಡೆದಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳು ಇವೆ.

ಭಾವಿ ರಾಜಕಾರಣಿಗಳ ಆಪ್ತರಿಗೂ ಹಂಚಿಕೆ
ಮುಡಾ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ರಾಜಕಾರಣಿಗಳ ಆಪ್ತರು, ನೆಂಟರ ಹೆಸರುಗಳಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡಿದ್ದು, ಇವರೆಲ್ಲರಿಗೂ ತನಿಖೆ ಬಿಸಿ ಮುಟ್ಟುವ ಸಾಧ್ಯತೆ ಇದೆ. ಲೋಕಾಯುಕ್ತ ಅಧಿಕಾರಿಗಳು ಸಿಎಂ ಪತ್ನಿ ಪಾರ್ವತಿ ಅವರ ಹೆಸರಿಗೆ ಮಂಜೂರಾಗಿದ್ದ ೧೪ ನಿವೇಶನಗಳ ಬಗ್ಗೆ ಮಾತ್ರ ತನಿಖೆ ನಡೆಸುತ್ತಿದ್ದಾರೆ. ಜಾರಿ ನಿರ್ದೇಶನಾಲಯದ ಅಽಕಾರಿಗಳು ಹಣದ ವ್ಯವಹಾರ ನಡೆದಿರುವ ಶಂಕೆಯ ಆಧಾರದ ಮೇಲೆ ಮತ್ತೊಂದು ರೂಪದಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಪಿ. ಎನ್. ದೇಸಾಯಿ ನೇತೃತ್ವದ ವಿಚಾರಣಾ ಆಯೋಗವು ೨೦೦೬ರಿಂದ ೨೦೨೪ ರವರೆಗೆ ನಡೆದಿರುವ ಬದಲಿ ನಿವೇಶನಗಳ ಹಂಚಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದು ಅನೇಕರಲ್ಲಿ ಆತಂಕ ಮೂಡಿಸಿದೆ.

 

ಆಂದೋಲನ ಡೆಸ್ಕ್

Recent Posts

ಮೈಸೂರು ಮುಡಾ ಕಚೇರಿಗೆ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಭೇಟಿ

ಮೈಸೂರು: ರಾಜ್ಯದಲ್ಲಿ ಮೈಸೂರು ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಇಂದು ತನಿಖೆಯ ಭಾಗವಾಗಿ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರು…

9 hours ago

ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನೇ ಓದಿಲ್ಲ ಎಂದ ರಾಹುಲ್‌ ಗಾಂಧಿ

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನೇ ಓದಿಲ್ಲ. ಈ ಬಗ್ಗೆ ನನಗೆ ಗ್ಯಾರಂಟಿಯಿದೆ ಎಂದು ಲೋಕಸಭೆ ವಿರೋಧ ಪಕ್ಷದ…

9 hours ago

ಆದಿವಾಸಿಗಳ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಉದ್ಬೂರು ಹಾಡಿ ಹಾಗೂ ಕೆರೆಹಾಡಿಗೆ ಸಿಎಂ ಸಿದ್ದರಾಮಯ್ಯ ಅವರಿಂದು ಭೇಟಿ ನೀಡಿ, ಆದಿವಾಸಿಗಳ…

9 hours ago

ರಾಜ್ಯದಲ್ಲಿ ನವೆಂಬರ್.‌14ರಿಂದ ಮತ್ತೆ ಮಳೆಯ ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ…

9 hours ago

ಶಬರಿಮಲೆಗೆ ತೆರಳುವವರಿಗೆ ಸಿಹಿಸುದ್ದಿ ನೀಡಿದ ಕೆಎಸ್‌ಆರ್‌ಟಿಸಿ

ಬೆಂಗಳೂರು: ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ವೋಲ್ವೋ ಬಸ್…

10 hours ago

ಕಾಂಗ್ರೆಸ್‌ ವಿರುದ್ಧ ಮತ್ತೆ ಗುಡುಗಿದ ಪ್ರಧಾನಿ ನರೇಂದ್ರ ಮೋದಿ

ಮುಂಬೈ: ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವಲ್ಲಿ ಕಾಂಗ್ರೆಸ್‌ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ…

10 hours ago