• ಆರೋಪ ಸಾಬೀತು ಮಾಡಲು ಕೇಂದ್ರ ವಿಫಲ
• ಸುಪ್ರೀಂ ಮುಜುಗರದಿಂದ ಪಾರು?
ಪರಿಸರ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿದ ಅಗಾಧ ಸಾಧನೆ ಹಾಗೂ ವಿನೂತನ ಆವಿಷ್ಕಾರಗಳಿಗಾಗಿ ಜಾಗತಿಕ ಮನ್ನಣೆ ಗಳಿಸಿರುವ ಲಡಾಖ್‌ನ ಮೇರು ವ್ಯಕ್ತಿತ್ವದ ಸೋನಂ ವಾಂಗ್ಲುಕ್ ಅವರನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅನಿರೀಕ್ಷಿತವಾಗಿ ಜೈಲಿನಿಂದ ಬಿಡುಗಡೆ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ 26ರಂದು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಸೋನಂ ವಾಂಗ್ಲುಕ್ ಅವರನ್ನು ಬಂಧಿಸಿ ಕಾರಾಗೃಹದ ಕಂಬಿಗಳ ಹಿಂದೆ ತಳ್ಳಲಾಗಿತ್ತು. 170 ದಿನಗಳ ನಂತರ, ಮಾರ್ಚ್ 14ರಂದು ಜೋಧಪುರದ ಸೆಂಟ್ರಲ್ ಜೈಲಿನಿಂದ ಸೋನಂ ವಾಂಗ್ಲುಕ್ ಬಿಡುಗಡೆ ಹೊಂದಿದ್ದಾರೆ.
ಲಡಾಖಿಗಳ ಸಾಕ್ಷಿಪ್ರಜ್ಞೆಯಂತಿರುವ ಸೋನಂ ವಾಂಗ್ಚುಕ್ ಅವರನ್ನು ಸುಮಾರು ಆರು ತಿಂಗಳು ಹಿಂದೆ ಬಂಧಿಸುವಾಗ ಮತ್ತು ಈಗ ಅವರನ್ನು ಬಿಡುಗಡೆ ಮಾಡುವಾಗ ಕೇಂದ್ರ ಸರ್ಕಾರ ನೀಡಿದ ಕಾರಣಗಳು ಮಾತ್ರ ಎಂಥವರನ್ನೂ ಆಶ್ಚರ್ಯಚಕಿತಗೊಳಿಸುತ್ತವೆ, ಗೊಂದಲಕ್ಕೀಡು ಮಾಡುತ್ತವೆ. ಯಾವ ಕಾರಣಗಳಿಗಾಗಿ ಸೋನಂ ವಾಂಗ್ಚುಕ್ ಅವರನ್ನು ಬಂಧಿಸಲಾಗಿತ್ತೋ ಅವರ ಬಿಡುಗಡೆಗೂ ಅದೇ ಕಾರಣಗಳನ್ನು ಕೇಂದ್ರ ಸರ್ಕಾರ ನೀಡಿದೆ.
ಸೋನಂ ವಾಂಗ್ಚುಕ್ ಅವರ ಪ್ರಚೋದನಕಾರಿ ಭಾಷಣಗಳಿಂದ, ಸೋಷಿಯಲ್ ಮೀಡಿಯಾ ಲಂಬೋಲಿನ ಪೋಸ್ಟ್‌ಗಳಿಂದ ಲಡಾಖ್‌ನ ಶಾಂತಿ ಸುವ್ಯವಸ್ಥೆಗೆ, ವಿಶೇಷ ನೆರವಿನಿಂದ ದೇಶದಲ್ಲಿ ಅಶಾಂತಿಯ ವಾತಾವರಣ ಭದ್ರತೆಗೆ ಧಕ್ಕೆ ಆಗುತ್ತಿದೆ. ದೇಶ ವಿರೋಧಿ ಶಕ್ತಿಗಳ ಉಂಟು ಮಾಡಲು ವಾಂಗ್ಲುಕ್ ಪ್ರಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಹೊರಿಸಿ ಅವರನ್ನು ಬಂಧಿಸಲಾಗಿತ್ತು. ವಾಂಗ್ಚುಕ್ ಅವರ ಮೇಲಿನ ತನ್ನ ಆರೋಪಗಳಿಗೆ ಪೂರಕವಾದ ಮಾಹಿತಿ, ಸಾಕ್ಷಿ, ಪುರಾವೆಗಳನ್ನು ಒದಗಿಸಲು ಕಳೆದ ಆರು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈಗ ಲಡಾಖ್‌ನಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಸ್ಥಾಪಿಸುವುದಕ್ಕಾಗಿ ಮತ್ತು ಮಾತುಕತೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ವಾಂಗ್ಲುಕ್ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ದಾಖಲಾಗಿಸಲಾಗಿದ್ದ ಮೊಕದ್ದಮೆಯನ್ನು ರದ್ದುಗೊಳಿಸಿ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಗೃಹ ಇಲಾಖೆ ಹೇಳಿದೆ.
ಬಿಡುಗಡೆಗೆ ‘ಸುಪ್ರೀಂ ಭಯ’ ಕಾರಣ? : ಸೋನಂ ವಾಂಗ್ಚುಕ್ ಅವರ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ, ಹೇಬಿಯಸ್ ಕಾರ್ಪಸ್ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೆಲವು ಕಠಿಣ ಪ್ರಶ್ನೆಗಳನ್ನು ಕೇಂದ್ರ ಸರ್ಕಾರಕ್ಕೆ ಕೇಳಿತ್ತು. ವಿಶೇಷವಾಗಿ ವಾಂಗ್ಚುಕ್ ಅವರ ಮೇಲಿರುವ ಆರೋಪಗಳು, ಬಂಧನಕ್ಕೆ ನಿಖರವಾದ ಕಾರಣಗಳು ಮತ್ತು ಅದಕ್ಕೆ ಅಗತ್ಯವಿರುವ ಸಾಕ್ಷಿಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಕೇಳಿತ್ತು.
ಸುಪ್ರೀಂ ಕೋರ್ಟ್ ಈ ಕಠಿಣ ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರವನ್ನು ಕೊಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿತ್ತು. ದಿನವೇ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಬಹುದು ಅಥವಾ ತೀರ್ಪು ಕಾಯ್ದಿರಿಸಬಹುದು ಎಂಬ ಸೂಚನೆಗಳೂ ಇದ್ದವು.
ಕೋರ್ಟ್ ವಿಚಾರಣೆ ವೇಳೇ ನಡೆದ ಬೆಳವಣಿಗೆಗಳು, ವಾಂಗ್ಚುಕ್ ಅವರ ಪತ್ನಿಯ ಪರ ವಕೀಲರು ಮತ್ತು ಕೇಂದ್ರ ಸರ್ಕಾರದ ಪರ ವಕೀಲರ ವಾದವನ್ನು ಆಲಿಸಿದರೆ ತನ್ನ ಆರೋಪಗಳನ್ನು ಸಾಬೀತುಪಡಿಸಲು ಕೇಂದ್ರ ಸರ್ಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಮುಂದಿನ ಸಾಧ್ಯವಾಗಲಿಲ್ಲ ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಮಾರ್ಚ್ 17ಕ್ಕೆ ಬರಬಹುದಾದ ಪ್ರತಿಕೂಲ ತೀರ್ಪಿಗಿಂತ ಎರಡು ದಿನಗಳ ಮೊದಲೇ ಮಾರ್ಚ್ 14 ರಂದು ಕೇಂದ್ರದ ಗೃಹಸಚಿವಾಲಯ ಸೋನಂ ವಾಂಗ್ಲುಕ್ ಅವರ ಮೇಲಿನ ಆರೋಪಗಳನ್ನೆಲ್ಲ ರದ್ದುಪಡಿಸಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದೆ. ಆ ಮೂಲಕ ಸಂಭವನೀಯ ಮುಜುಗರ ಮತ್ತು ಕಾನೂನು ಸಂಘರ್ಷದಿಂದ ಪಾರಾಗುವ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ ಎಂಬ ವಿಶ್ಲೇಷಣೆಗಳಿವೆ.
ವಾಂಗ್ಚುಕ್ ಹೋರಾಟದ ಹಿನ್ನೆಲೆ : ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಲಡಾಖ್‌ನ್ನು ಜಮ್ಮು ಕಾಶ್ಮೀರದಿಂದ ಪ್ರತ್ಯೇಕಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿತ್ತು.
ಈ ಕೇಂದ್ರಾಡಳಿತ ಪ್ರದೇಶಕ್ಕೆ ತನ್ನದೇ ಆದ ವಿಧಾನಸಭೆ ಇರುವುದಿಲ್ಲ. ಲಡಾಖ್ ಮತ್ತು ಕಾರ್ಗಿಲ್ ಪ್ರದೇಶಗಳಿಗೆ ಕೇವಲ ಆಡಳಿತ ಮಂಡಳಿಗಳನ್ನು ಹೊಂದುವ ಅಧಿಕಾರವನ್ನು ನೀಡಲಾಯಿತು. ಆದರೆ, ಆ ಆಡಳಿತ ಮಂಡಳಿಗಳ ಅಧಿಕಾರ ವ್ಯಾಪ್ತಿ ಬಹಳ ಸೀಮಿತವಾಗಿತ್ತು.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ನಮ್ಮ ಭೂಮಿ, ಉದ್ಯೋಗ ಮತ್ತು ಸಂಪನ್ಮೂಲಗಳ ವಿಷಯದಲ್ಲಿ ನಾವೇ ನಿರ್ಧಾರ ಕೈಗೊಳ್ಳುವ ಅಧಿಕಾರ ನಮಗೇ ಇರುವುದಿಲ್ಲ ಎಂಬ ಆತಂಕ ಲಡಾಖಿಗಳ ಮನಸಿನಲ್ಲಿ ಗಟ್ಟಿಯಾಗಿ ಬೇರೂರಿತು. ಅಷ್ಟೇ ಅಲ್ಲದೇ ಈ ನಿರ್ಧಾರದಿಂದಾಗಿ ಲಡಾಖ್‌ನ ಸಮೃದ್ಧವಾದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವುದಕ್ಕೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂಬ ಆಕ್ರೋಶವೂ ಜನರಲ್ಲಿ ವ್ಯಕ್ತವಾಗತೊಡಗಿತು.
ಈ ಹಿನ್ನೆಲೆಯಲ್ಲಿ ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕಲ್ಪಿಸಬೇಕು ಮತ್ತು ಲಡಾಖ್‌ನ್ನು ಸಂವಿಧಾನದ ಆರನೇ ಅನುಸೂಚಿ ವ್ಯಾಪ್ತಿಗೆ ಸೇರಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳೊಂದಿಗೆ ಇನ್ನೂ ಹಲವು ಬೇಡಿಕೆಗಳಿಗಾಗಿ ಸ್ಥಳೀಯ ಸಂಘಟನೆಗಳ ನೇತೃತ್ವದಲ್ಲಿ ಲಡಾಖಿಗಳು ಭಾರೀ ಹೋರಾಟ ಆರಂಭಿಸಿದರು.
ಆ ಹೋರಾಟದ ನೇತೃತ್ವನ್ನು ಸೋನಂ ವಾಂಗ್ಚುಕ್ ಅವರು ವಹಿಸಿಕೊಂಡ ನಂತರ ಲಡಾಖಿಗಳ ಹೋರಾಟ ಇಡೀ ದೇಶ ಮತ್ತು ಜಗತ್ತಿನ ಗಮನ ಸೆಳೆದಿತ್ತು.
ಸಂವಿಧಾನದ ಆರನೇ ಸೂಚಿಯಲ್ಲಿ ಲಡಾಖ್‌ನ್ನು ಸೇರಿಸುವುದರಿಂದ ಸ್ಥಳೀಯ ಆದಿವಾಸಿಗಳಿಗೆ ಸಂವಿಧಾನಾತ್ಮಕ ರಕ್ಷಣೆ ದೊರೆಯುತ್ತದೆ, ಲಡಾಖ್ ನ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಲಡಾಖಿಗಳ ನಿಯಂತ್ರಣವೇ ಉಳಿಯುತ್ತದೆ. ಇದರ ಪರಿಣಾಮವಾಗಿ ಹೊರಗಡೆಯಿಂದ ಬರುವ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತಡೆದು ಲಡಾಖ್‌ನ ಪರಿಸರವನ್ನೂ ರಕ್ಷಿಸಿಕೊಳ್ಳಬಹುದು ಎಂಬುದು ಲಡಾಖಿಗಳ ಬೇಡಿಕೆಗಳಿಗೆ ಮೂಲ ಕಾರಣವಾಗಿತ್ತು.
ಸಂವಿಧಾನದ ಆರನೇ ಅನುಸೂಚಿಯಲ್ಲಿ ಇರದೇ ಇದ್ದರೆ ಮಿತಿಮೀರಿದ ಗಣಿಗಾರಿಕೆ, ದೊಡ್ಡ ದೊಡ್ಡ ಯೋಜನೆಗಳು ಲಡಾಖ್ ಬರುವ ಸಾಧ್ಯತೆಗಳಿರುತ್ತವೆ. ಇದರಿಂದ ಲಡಾಖ್‌ನ ಸೂಕ್ಷ್ಮ ಹಿಮಾಲಯದ ಪರಿಸರಕ್ಕೆ ಧಕ್ಕೆಯಾಗಿ ದೂರಗಾಮಿ ಪರಿಣಾಮಗಳು ಉಂಟಾಗುವ ಆತಂಕವಿರುತ್ತದೆ ಎಂಬುದನ್ನು ಸೋನಂ ವಾಂಗ್ಚುಕ್ ಅವರು ಜನರಿಗೆ ಅತ್ಯಂತ ಯಶಸ್ವಿಯಾಗಿ ಮನವರಿಕೆ ಮಾಡಿ ಹೋರಾಟವನ್ನು ತೀವ್ರಗೊಳಿಸಿದ್ದರು.
ಸ್ವತಃ ಸೋನಂ ವಾಂಗ್ಚುಕ್ ಅವರು ಕೊರೆಯುವ ಮೈನಸ್ ಡಿಗ್ರಿ ತಾಪಮಾನದಲ್ಲಿ ಹಲವು ಬಾರಿ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಲೇಕ್‌ನಿಂದ ದೆಹಲಿವರೆಗೆ ಸಾವಿರಾರು ಕಿಲೋಮೀಟರ್ ಪಾದಯಾತ್ರೆಯನ್ನು ನಡೆಸಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಹೋರಾಟ ಹಿಂಸೆಗೆ ತಿರುಗಿ ನಾಲ್ಕು ಯುವಕರ ಸಾವಿಗೆ ಕಾರಣವಾದ ನಂತರ, ಸೋನಂ ವಾಂಗ್ಚುಕ್ ಪ್ರಚೋದನೆಯಿಂದಲೇ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು.
ಸೋನಂ ವಾಂಗ್ಚುಕ್ ಪರಿಚಯ: ವೃತ್ತಿಯಿಂದ ಎಂಜಿನಿಯರ್ ಆಗಿರುವ ಸೋನಂ ವಾಂಗ್ಲುಕ್ ಅವರು ಶಿಕ್ಷಣ ತಜ್ಞ, ವಿಜ್ಞಾನಿ, ಪರಿಸರ ಹೋರಾಟಗಾರ ಹಾಗೂ ಸಮಾಜ ಸುಧಾರಕ. ಲಡಾಖ್‌ನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಕೀರ್ತಿ ವಾಂಗ್ಲುಕ್‌ಗೆ ಸಲ್ಲಬೇಕು. ಪ್ರತಿಷ್ಠಿತ ರಾಮನ್ ಮ್ಯಾಗ್ನೆಸೆ ಪ್ರಶಸ್ತಿ, ಪದ್ಮಶ್ರೀ ಪುರಸ್ಕಾರ ಸೇರಿದಂತೆ ಹದಿನೈದಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಸೋನಂ ವಾಂಗ್ಲುಕ್ ಅವರಿಗೆ ದೊರೆತಿವೆ.
ಲಡಾಖ್‌ನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದಕ್ಕಾಗಿ ‘ಸೂಡೆಂಟ್ಸ್ ಎಜುಕೇಷನ್ ಆ್ಯಂಡ್ ಕಲ್ಬರಲ್ ಮೂವ್‌ಮೆಂಟ್ ಆಫ್ ಲಡಾಖ್ (SECMOL) ಸಂಸ್ಥೆಯನ್ನು ಸ್ಥಾಪಿಸಿ ಕೌಶಲ ಆಧರಿತ ಅಸಂಪ್ರದಾಯಿಕ ಶಿಕ್ಷಣ ಪದ್ಧತಿಯನ್ನು ಆರಂಭಿಸಿದ್ದು ಇವರ ಹೆಗ್ಗಳಿಕೆ.
ಬಾಲಿವುಡ್‌ನ ಯಶಸ್ವಿ ಸಿನಿಮಾ ‘3 ಈಡಿಯಟ್ಸ್’ ಸೋನಂ ವಾಂಗ್ಚುಕ್ ಅವರ ಬದುಕು ಸಾಧನೆಯಿಂದ ಪ್ರೇರಿತವಾಗಿತ್ತು. ಆ ಚಿತ್ರದಲ್ಲಿ ಅಮೀರ್ ಖಾನ್ ನಿರ್ವಹಿಸಿದ ಪುನ್ಹುಖ್ ವಾಂಗ್ಡು ಪಾತ್ರಕ್ಕೆ ಸೋನಂ ವಾಂಗ್ಚುಕ್ ಅವರೇ ಪ್ರೇರಣೆ ಎಂದು ಹೇಳಲಾಗುತ್ತದೆ.
ಮಹಾದೇಶ್ ಎಂ.ಗೌಡ ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದಿಂದ ಪ್ರಾರಂಭವಾಗಿರುವ ಯುಗಾದಿ ಜಾತ್ರಾ ಮಹೋತ್ಸವ ಮಾರ್ಚ್ 19ರವರೆಗೆ…
ಅಧಿಕಾರಿಗಳ ಮನವೊಲಿಕೆಗೆ ಸಮ್ಮತಿಸುತ್ತಿರುವ ಭೂ ಮಾಲೀಕರು ಕೆ.ಬಿ.ರಮೇಶನಾಯಕ ಮೈಸೂರು : ದಶಕಗಳಿಂದಲೂ ಬಡ-ಮಧ್ಯಮ ವರ್ಗದ ಜನರಿಗೆ ನಿವೇಶನ ಹಂಚಿಕೆ ಮಾಡಲು,…
ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ…
ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಶನಿವಾರ ಹಾಗೂ ಯುಗಾದಿ ಜಾತ್ರಾ…
ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು…
ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು…