Andolana originals

ಇಂದಿನಿಂದ ಎಚ್.ಡಿ.ಕೋಟೆಯಲ್ಲಿ ಮಿನಿ ದಸರಾ

ಮಂಜು ಕೋಟೆ

ಲಕ್ಷ್ಮೀ ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿ ಉತ್ಸವ, ನವರಾತ್ರೋತ್ಸವಕ್ಕೆ ಸಿದ್ಧತೆ 

ಎಚ್.ಡಿ.ಕೋಟೆ: ಪಟ್ಟಣದ ಮುಜರಾಯಿ ಇಲಾಖೆಯ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನ ಮತ್ತು ಹೌಸಿಂಗ್ ಬೋರ್ಡಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸೆ.೨೧ರಿಂದ ವಿಜಯದಶಮಿ ಉತ್ಸವ ಮತ್ತು ನವರಾತ್ರೋತ್ಸವ ಕಾರ್ಯಕ್ರಮಗಳನ್ನು ನಡೆಸಲು ಸಮಿತಿಯವರು ಸಕಲ ಸಿದ್ಧತೆ ನಡೆಸಿದ್ದಾರೆ.

ಮಿನಿ ದಸರಾ ಹಿನ್ನೆಲೆಯಲ್ಲಿ ಶ್ರೀ ವರದರಾಜ ಸ್ವಾಮಿ ದೇವಸ್ಥಾನ ಹಾಗೂ ಚಾಮುಂಡೇಶ್ವರಿ ದೇವಸ್ಥಾನಗಳಿಗೆ ಸುಣ್ಣ ಬಣ್ಣ ಹೊಡೆದು ಅಲಂಕರಿಸಿದ್ದು, ಪ್ರಮುಖ ರಸ್ತೆಗಳಲ್ಲಿ ಎರಡೂ ದೇವಸ್ಥಾನಗಳಿಂದ ಪ್ರತ್ಯೇಕವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಶ್ರೀ ವರದರಾಜಸ್ವಾಮಿ ದೇವಸ್ಥಾನದಲ್ಲಿ ವರದರಾಜಸ್ವಾಮಿ, ಶ್ರೀದೇವಿ, ಭೂದೇವಿ ಲಕ್ಷ್ಮೀ ದೇವರ ಮೂರ್ತಿಗೆ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ದೇವರ ಮೂರ್ತಿಗೆ ಭಾನುವಾರದಿಂದ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ, ಉಯ್ಯಾಲೋತ್ಸವ, ಕಲ್ಯಾಣೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

ಅ.೨ರ ಗುರುವಾರ ವಿಜಯದಶಮಿ ದಿನದಂದು ಸಂಜೆ ೫ ಗಂಟೆಗೆ ಮಿನಿ ದಸರಾದಲ್ಲಿ ಎರಡೂ ದೇವಸ್ಥಾನಗಳ ಮೂಲ ದೇವರುಗಳ ಮೂರ್ತಿಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ. ಇದರಲ್ಲಿ ಅನೇಕ ಕಲಾತಂಡಗಳು, ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ನಂತರ ಪೊಲೀಸ್ ಇಲಾಖೆ ಮೂಲಕ ಬನ್ನಿಮರಕ್ಕೆ ಪೊಲೀಸ್ ಪೂಜೆ ನೆರವೇರಲಿದೆ.

ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಶಾಸಕ ಅನಿಲ್ ಚಿಕ್ಕಮಾದು, ತಹಸಿಲ್ದಾರ್ ಶ್ರೀನಿವಾಸ್, ಪುರಸಭಾ ಅಧ್ಯಕ್ಷರಾದ ಶಿವಮ್ಮ ಚಾಕಹಳ್ಳಿ ಕೃಷ್ಣ, ಉಪಾಧ್ಯಕ್ಷರಾದ ಆಸಿಫ್, ಮಧುಕುಮಾರ್, ದೇವಸ್ಥಾನ ಸಮಿತಿಯ ಮುಖ್ಯಸ್ಥರಾದ ಬಿ.ಎಸ್.ರಂಗ ಅಯ್ಯಂಗಾರ್, ಪ್ರಸಾದಿ, ನಟರಾಜ್, ಸತೀಶ್, ತಿರುಮಲಾಚಾರ್, ಶ್ರೀಧರ್, ಡೇರಿ ಶ್ರೀಕಾಂತ್, ಜಯಂತ್, ಡಿಶ್ ದೇವರಾಜು, ಪೂರ್ಣೇಶ್, ಪ್ರಮೋದ್, ಕೆಂಡಗಣ್ಣ, ಪರಶಿವ, ಮಂಜುನಾಥ್, ವೆಂಕಟೇಶ್, ನಾಗರಾಜು, ಸಿದ್ದರಾಜು, ನಾಗಣ್ಣ, ಬ್ಯಾಂಕ್ ವೀರಪ್ಪ, ಪುರಸಭೆ ಸದಸ್ಯರು, ಎಲ್ಲಾ ಸಮುದಾಯದವರು ಮುಂದಾಗಿದ್ದಾರೆ.

” ಎಲ್ಲಾ ಕಾರ್ಯಕ್ರಮಗಳು ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲಾ ಸಮುದಾಯದವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿವೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.”

ಆಂದೋಲನ ಡೆಸ್ಕ್

Recent Posts

ಎಚ್‌ಡಿಕೆಯನ್ನು ಸಿಎಂ ಮಾಡ್ತೀವಿ ಎಂದು ವಿಜಯೇಂದ್ರ, ಅಶೋಕ್‌ ಹೇಳಲಿ: ದಿನೇಶ್‌ ಗುಂಡೂರಾವ್‌ ಸವಾಲು

ಬೆಂಗಳೂರು: ನಾವು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ವಿಜಯೇಂದ್ರ ಹಾಗೂ ಆರ್.‌ಅಶೋಕ್‌ ಹೇಳಲಿ…

7 mins ago

ಮನರೇಗಾ ಹೆಸರು ಬದಲಾವಣೆ ಖಂಡಿಸಿ ನಾಳೆ ಬೃಹತ್‌ ಧರಣಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮನರೇಗಾ ಯೋಜನೆಯ ಹೆಸರನ್ನು ವಿಬಿ ಜೀ ರಾಮ್‌ ಜೀ ಎಂದು ಬದಲಾವಣೆ ಮಾಡಿದ ಕೇಂದ್ರ ಸರ್ಕಾರದ ನಡೆ ವಿರುದ್ಧ…

12 mins ago

ರಾಜ್ಯಪಾಲರ ವಿರುದ್ಧ ರಾಜ್ಯ ಸರ್ಕಾರ ನಡೆದುಕೊಂಡ ಕ್ರಮ ಸರಿಯಲ್ಲ: ಮಾಜಿ ಮೇಯರ್‌ ಶಿವಕುಮಾರ್‌

ಮೈಸೂರು: ವಿಧಾನಮಂಡಲ ಜಂಟಿ ಅಧಿವೇಶನದ ದಿನದಂದು ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆದುಕೊಂಡ ಕ್ರಮ ಕರ್ನಾಟಕದ ಇತಿಹಾಸದಲ್ಲೇ ನಡೆದ…

15 mins ago

ಮ್ಯಾನ್ಮಾರ್‌ನಲ್ಲಿ ಶೌರ್ಯ ಘರ್ಜನೆ: 9 ಮಂದಿ ಉಗ್ರರ ಸಂಹಾರ

ಮ್ಯಾನ್ಮಾರ್‌ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಅತ್ಯಂತ ಸಾಹಸಮಯ ಕೋವರ್ಟ್‌ ಆಪರೇಷನ್‌ ವಿವರಗಳು ಈಗ ಬೆಳಕಿಗೆ ಬಂದಿವೆ. ಕಳೆದ ವರ್ಷ…

19 mins ago

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಸಜೀವ ದಹನ

ಡಾಕಾ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಕುಟುಂಬವು ಇದನ್ನು ಯೋಜಿತ ಕೊಲೆ ಎಂದು ಆರೋಪಿಸಿದೆ. ಬಾಂಗ್ಲಾದೇಶದ…

22 mins ago

ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣು

ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳನ್ನು ತಾಯಿ ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು…

25 mins ago