Andolana originals

ಮತ್ತಿಗೋಡಿನಲ್ಲಿ ದಸರಾ ಆನೆಗಳ ನಿತ್ಯ ದರ್ಶನ; 1 ಕೋಟಿ ರೂ. ವೆಚ್ಚದಲ್ಲಿ ಆನೆ ಶಿಬಿರ ಅಭಿವೃದ್ಧಿ

ಮೈಸೂರು: ಇನ್ನು ಅಭಿಮನ್ಯು ಸೇರಿದಂತೆ ದಸರಾ ಆನೆಗಳ ವೀಕ್ಷಣೆಗೆ ಮತ್ತೊಂದು ದಸರಾ ಬರುವ ತನಕ ಕಾಯಬೇಕಿಲ್ಲ. ದಸರಾ ಆನೆಗಳ ನೆಚ್ಚಿನ ತಾಣ ಮುತ್ತಿಗೋಡು ಆನೆ ಶಿಬಿರ ಸದ್ಯದಲ್ಲೇ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರವನ್ನು ಪ್ರವಾಸಿಗರ ಆಕರ್ಷಣೆಗಾಗಿ 1 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗಿದೆ.

ಇತ್ತೀಚೆಗೆ ಮೃತಪಟ್ಟ ಮೈಸೂರು ದಸರಾ ಆನೆ ಅರ್ಜುನ ಮತ್ತು ಮತ್ತೊಂದು ಆನೆ ಅಭಿಮನ್ಯುವನ್ನು ಆನೆಚೌಕೂರು ವಲಯ ವ್ಯಾಪ್ತಿಗೆ ಸೇರುವ ಮತ್ತಿಗೋಡಿನ ಶಿಬಿರದಲ್ಲೇ ಪಳಗಿಸಿದ್ದು ಹಲವು ಆನೆಗಳಿಗೆ ಆಶ್ರಯವಾಗಿರುವ ಮತ್ತಿಗೋಡು ಆನೆ ಶಿಬಿರ ಸಾರ್ವಜನಿಕ ಪ್ರವೇಶಕ್ಕೆ ಈವರೆಗೂ ಮುಕ್ತವಾಗಿರಲಿಲ್ಲ. ಆದರೂ ತಿತಿಮತಿ-ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರು ಮಾರ್ಗ ಮಧ್ಯೆ ಆನೆಗಳು ಕಾಣಿಸಿಕೊಂಡರೆ ದೂರದಲ್ಲೇ ನಿಂತು ನೋಡಿ, ಮುಂದೆ ಸಾಗುತ್ತಿದ್ದರು. ಇದೀಗ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೂಕ್ತ ಮೂಲ ಸೌಕರ್ಯ, ತಂಗಲು ಅಗತ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.

ಆನೆ ಶಿಬಿರದ ಸುತ್ತಮುತ್ತಲಿನ ಸುಂದರ ವಾತಾವರಣವನ್ನು ಆಸ್ವಾದಿಸಲು ಅನು ಕೂಲವಾಗುವಂತೆ ವಾಕಿಂಗ್ ಪಾತ್, ಅಲ್ಲಲ್ಲಿ ಮುಕ್ತವಾದ ಕುಟೀರಗಳ ನ ನಿರ್ಮಿಸಲಾಗಿದೆ. ಇನ್ನು ಆನೆ ಶಿಬಿರದ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಕಮಾನು ಕೂಡ ಆಕರ್ಷಕವಾಗಿದೆ. ಶಿಬಿರದ ಒಳಗೆ ಕಾಲಿಡುತ್ತಿದ್ದಂತೆ ಪರಿಸರದ ಮೇಲೆ ಆಗುತ್ತಿರುವ ಅತಿಕ್ರಮಣ ಕುರಿತು ಹಲವು ಭಿತ್ತಿಚಿತ್ರಗಳು ಗಮನ ಸೆಳೆಯುತ್ತವೆ.

1 ಕೋಟಿ ರೂ.ವೆಚ್ಚದಲ್ಲಿ ಶಿಬಿರ ಅಭಿವೃದ್ಧಿ: ರಾಜ್ಯ ಸರ್ಕಾರದ ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ಮತ್ತಿಗೋಡು ಆನೆ ಶಿಬಿರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಶಿಬಿರದಲ್ಲಿ ಆನೆಗಳಿಗೆ ಆಶ್ರಯ ಮತ್ತು ಆಹಾರ ತಾಣಗಳು, ಶಿಬಿರಕ್ಕೆ ಸಮೀಪಿಸುವ ರಸ್ತೆ, ವಾಹನಗಳ ಪಾರ್ಕಿಂಗ್ ಸೌಲಭ್ಯ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ, ಇದು ಈಗ ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಖಚಿತಪಡಿಸಿದ್ದಾರೆ.

ಆಧುನಿಕ ತಂತ್ರಜ್ಞಾನ ಬಳಕೆ: ಹಿಂದಿನಿಂದ ಇಂದಿನವರೆಗೂ ಮಾನವ ಹಾಗೂ ವನ್ಯಜೀವಿ ಸಂಘರ್ಷ ನಡೆಯುತ್ತಲೇ ಇದೆ. ಆದರೆ ಮೈಸೂರು, ಕೊಡಗು, ಚಾಮರಾಜನಗರ ಸೇರಿದಂತೆ ಹಲವೆಡೆ ಕಾಡಾನೆಗಳಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಈಗಾಗಲೇ ವಿಶೇಷವಾಗಿ ಅರಣ್ಯ ಇಲಾಖೆ ಪ್ರಾಣಿಗಳ ಸಂಘರ್ಷ ಕುರಿತು ಆಗಾಗ್ಗೆ ಅರಿವು ಮೂಡಿಸುವ ಸಭೆಯನ್ನು ಮಾಡುತ್ತಿದ್ದಾರೆ. ಅಲ್ಲದೇ ವಿಶೇಷವಾಗಿ ಮತ್ತಿಗೋಡು ಆನೆ ಕ್ಯಾಂಪ್‌ನ್ನು ಕೂಡ ಜಾಗೃತಿ ಮೂಡಿಸುವ ಕೇಂದ್ರವನ್ನಾಗಿ ರೂಪಿಸಲಾಗುತ್ತಿದೆ. ಕ್ಯಾಮೆರಾಗಳು ಮತ್ತು ಡ್ರೋನ್‌ಗಳು ಸೇರಿದಂತೆ ಶಿಬಿರವು ಸರ್ವ ಸಜ್ಜಿತ ಸಲಕರಣೆಗಳೊಂದಿಗೆ ಸಿದ್ಧಗೊಂಡಿದೆ. ಒಂದು ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದ್ದು, ಶಿಬಿರವು ಪ್ರಮುಖ ಸ್ಥಳದಲ್ಲಿ ಇರುವುದರಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆಯಿದೆ.

2 -3 ಗಂಟೆ ಕಾಲ ಕಳೆಯಬಹುದು: ಆನೆಗಳ ಶಿಬಿರವಾಗಿರುವುದರಿಂದ ಇಲ್ಲಿ ಪ್ರವಾಸಿಗರು ಆನೆಗಳ ಆರೈಕೆ ಬಗೆಯನ್ನು ವೀಕ್ಷಿಸಬಹುದು. ಮುಂಜಾನೆಯೇ ಶಿಬಿರಕ್ಕೆ ತೆರಳಿದರೆ ಆನೆಗಳ ಮಜ್ಜನ ವೀಕ್ಷಿಸಬಹುದು. ವಿಶೇಷವಾಗಿ ಶಿಬಿರವು
2-3 ಗಂಟೆಗಳ ಕಾಲ ಉಳಿದುಕೊಂಡು ಗಜರಾಜರ ಬಗ್ಗೆ ತಿಳಿದುಕೊಳ್ಳಲು ಇರುವ ಉತ್ತಮ ಮಾರ್ಗವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರವಾಸಿಗರಿಗೆ ಇರುವ ವಿಶೇಷ ವೀಕ್ಷಣೆ: ದಸರಾ ಆನೆಗಳು ಸೇರಿದಂತೆ ಇತರೆ ಆನೆಗಳ ಕುರಿತು ಸಮಗ್ರ ಮಾಹಿತಿ, ವನ್ಯಜೀವಿಗಳಿಗೆ ಬಳಸುವ ಕೋವಿ, ಕಾರ್ಯಾಚರಣೆಗೆ ಬಳಸುವ ಸಲಕರಣೆಗಳು, ಕ್ಯಾಮೆರಾ ಟ್ಯಾಪ್, ಡ್ರೋನ್‌ಗಳು, ವೈರ್‌ಲೆಸ್ ಉಪಕರಣಗಳು, ಆನೆಗಳ ದೈನಂದಿನ ಚಟುವಟಿಕೆಗಳು, ಆನೆಗಳ ಆರೈಕೆ, ಅಹಾರ ಪದ್ಧತಿ ಬಗ್ಗೆಯೂ ಇಲ್ಲಿ ಮಾಹಿತಿ ದೊರೆಯುತ್ತದೆ.

ಕುಡಿಯುವ ನೀರು, ಸುಸಜ್ಜಿತ ಶೌಚಾಲಯ: ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯ ಇದೆ. ಆನೆ ಕ್ಯಾಂಪಿನ ಉದ್ಯಾನವನದ ಸಸಿಗಳಿಗೆ ನೀರುಣಿಸಲಾಗುತ್ತಿದೆ. ಬರಡಾಗಿದ್ದ ಸ್ಥಳವನ್ನು ಗಮನಸೆಳೆಯುವಂತೆ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಕೆರೆಗೆ ಪಕ್ಕದಲ್ಲಿರುವ ಹೊಳೆಯಿಂದ ನೀರಿನ ಸಂಪರ್ಕ ಕಲ್ಪಿಸಿ ಈ ಪ್ರದೇಶವನ್ನು ಇನ್ನಷ್ಟು ಆಕರ್ಷಣೀಯವನ್ನಾಗಿ ಮಾಡಿದ್ದಾರೆ.

ಪ್ರಶಾಂತ್‌ ಎಸ್

ಮೈಸೂರಿನವನಾದ ನಾನು ಪದವಿಯಲ್ಲಿ ಪತ್ರಿಕೋದ್ಯಮ ‌ಮಾಡಿದ್ದು 2015ರಿಂದ ನ್ಯೂಸ್ 1 ಕನ್ನಡದಿಂದ(ಟಿವಿ) ಪ್ರಾರಂಭಿಸಿ ,ಯಶ್ ಟೆಲ್ (ಟಿವಿ) ಇಂಡಿಯನ್ (ಟಿ ವಿ) ಪ್ರಜಾನುಡಿ ಪತ್ರಿಕೆ, ಪ್ರತಿನಿಧಿ ಪತ್ರಿಕೆ ಸಂಸ್ಥೆಯಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸಿದ್ದೇನೆ. ಕಳೆದ ಎರಡು ವರ್ಷಗಳಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನಗೆ ಹಾಡುಗಳನ್ನು ಕೇಳುವುದು, ಅರಣ್ಯಗಳನ್ನು ಸುತ್ತುವುದು ಹಾಗೂ ಅರ್ಥಶಾಸ್ತ್ರದ ಕಡೆ ಹೆಚ್ಚು ಒಲವು ಇದ್ದು ಪತ್ರಿಕಾ ರಂಗದಲ್ಲಿ ಅರಣ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ.

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago