Andolana originals

ಒಂದು ಕಾಲದಲ್ಲಿ ದಾಂದಲೆಕೋರನಾಗಿದ್ದ ಮಹೇಂದ್ರ

 

ಮೈಸೂರು: ಒಂದು ಕಾಲದಲ್ಲಿ ಜಮೀನು, ತೋಟ, ಗದ್ದೆಗಳಿಗೆ ನುಗ್ಗಿ ದಾಂದಲೆ ನಡೆಸಿ ಪುಂಡಾಟಿಕೆ ಮೆರೆದಿದ್ದ ‘ಕರಿ’ಯ ಇದೀಗ ಫುಲ್ ಸೈಲೆಂಟ್ ಆಗಿದ್ದಾನೆ! ಸಿಕ್ಕಾಪಟ್ಟೆ ವೈಲೆಂಟ್ ಅಂತ ಕುಖ್ಯಾತಿ ಪಡೆದಿದ್ದ ಒಂಟಿ ಸಲಗ ಬಹಳ ಬೇಗ ಪಳಗಿ, ಶಾಂತ ಸ್ವಭಾವ ಮೈಗೂಡಿಸಿಕೊಂಡಿದೆ. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಇದೀಗ ಅರಮನೆ ನಗರಿಗೂ ಬಂದಿದ್ದಾನೆ!

ಇದು ದಸರಾ ಮಹೋತ್ಸವದಲ್ಲಿ ಭಾಗಿ ಯಾಗಲು ಕಾಡಿನಿಂದ ನಾಡಿಗೆ ಗಜಪಡೆಯ ಎರಡನೇ ತಂಡದಲ್ಲಿ ಬಂದಿರುವ ‘ಮಹೇಂದ್ರ’ ಆನೆ ಲೈಫ್ ಸ್ಟೋರಿ.

2016ರ ಸಂದರ್ಭ. ರಾಮನಗರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ದಾಂದಲೆ ನಡೆಸಿ ಸ್ಥಳೀ ಯರ ಆತಂಕಕ್ಕೆ ಕಾರಣವಾಗಿದ್ದ ಪುಂಡಾನೆಯನ್ನು ಸೆರೆ ಹಿಡಿಯಲು ಆ ಭಾಗದ ರೈತರು ಹಾಗೂ ಜನಪ್ರತಿನಿಧಿಗಳು ಆಗ್ರಹಿಸಿದ್ದರು.

ಕೊನೆಗೂ ತೋಟವೊಂದರಲ್ಲಿ ಯಾವುದೇ ಅಳುಕಿಲ್ಲದೇ ಬೀಡುಬಿಟ್ಟಿದ್ದ ಪುಂಡಾನೆಯನ್ನು ಸೆರೆ ಹಿಡಿಯಲಾಗಿತ್ತು.

ಬಳಿಕ ಅದನ್ನು ನಾಗರಹೊಳೆಯ ಬಳ್ಳೆ ಆನೆ ಶಿಬಿರಕ್ಕೆ ಕರೆತಂದು ಪಳಗಿಸಲಾಯಿತು. ಆರಂಭದ ದಿನಗಳಲ್ಲಿ ರೋಷಾವೇಶದಿಂದ ವರ್ತಿಸುತ್ತಿದ್ದ ಮಹೇಂದ್ರ ದಿನಕಳೆದಂತೆ ಶಿಬಿರದ ವಾತಾವರಣಕ್ಕೆ ಒಗ್ಗಿದ. ಬಹಳ ಬೇಗ ಪುಂಡಾಟಿಕೆಯನ್ನೆಲ್ಲ ಮರೆತು ಶಾಂತ ಸ್ವಭಾವ ಮೈಗೂಡಿಸಿಕೊಂಡ ಆನೆಗೆ ‘ಮಹೇಂದ’ ಎಂದು ಹೆಸರಿಡಲಾಯಿತು.

ಮೊದಲಿಗೆ ಮಾವುತ ವಿನೋದ್ ರಾಜ್ ಎಂಬಾತ ನೀಡಿದ ಅತ್ಯುತ್ತಮ ತರಬೇತಿ ಯಿಂದಾಗಿ ಆರೇಳು ತಿಂಗಳಲ್ಲೇ ಮಾವುತರ ಆಜ್ಞಾಧಾರಕ ಆನೆಯಾಗಿ ಪರಿವರ್ತನೆಗೊಂಡಿದ್ದು ಮಹೇಂದ್ರ ಆನೆಯ ವಿಶೇಷ. ಸದ್ಯ ಮಹೇಂದ್ರ, ಮಾವುತ ರಾಜಣ್ಣ ಅವರ ಉಸ್ತುವಾರಿಯಲ್ಲಿದ್ದಾನೆ. ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಲು ಗುರುವಾರ ಮೈಸೂರಿಗೆ ಆಗಮಿಸಿರುವ ಮಹೇಂದ್ರ, ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದಾನೆ.

ಮಾವುತನ ಮಾತು ತಪ್ಪದ ಮಹೇಂದ್ರ!
ಎಷ್ಟು ಸೌಮ್ಯ ಸ್ವಭಾವವೋ ಅಷ್ಟೇ ಧೈರ್ಯ ಮತ್ತು ದಿಟ್ಟ ಮನೋಭಾವ ಹೊಂದಿರುವ ಮಹೇಂದ್ರ, ಮಾವುತ ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ಜತೆಗೆ ಶಿಬಿರದಲ್ಲಿ ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಯೂ ಆಗಿದ್ದಾನೆ.

ಶ್ರೀರಂಗಪಟ್ಟಣ ದಸರಾದ ಅಂಬಾರಿ ಆನೆ
2022 ಮತ್ತು 2023ರ ಶ್ರೀರಂಗಪಟ್ಟಣ ದಸರಾದಲ್ಲಿ ಮಹೇಂದ್ರ ಸತತವಾಗಿ 2 ಬಾರಿ ಅಂಬಾರಿ ಹೊತ್ತು ಯಶಸ್ವಿಯಾಗಿದ್ದಾನೆ. ಆ ಮೂಲಕ ನಾನೂ ಮೈಸೂರಿನ ರಾಜ ಮಾರ್ಗದಲ್ಲಿ ಚಿನ್ನದ ಅಂಬಾರಿ ಹೊರಲು ಸಮರ್ಥನಿದ್ದೇನೆ ಎಂಬ ಸಂದೇಶ ನೀಡಿದ್ದಾನೆ.

ಈತ ಎಲ್ಲರ ಆಕರ್ಷಣೆ
ಮಹೇಂದ್ರ ಆನೆ ಸತತ 3 ವರ್ಷಗಳಿಂದ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದೆ. ನಾಗರಹೊಳೆಯ ಮತ್ತಿಗೋಡು ಕ್ಯಾಂಪಿನಿಂದ ಮೂರನೇ ಬಾರಿಗೆ ಮೈಸೂರಿಗೆ ಬಂದಿದ್ದು, ಎಲ್ಲರ ಆಕರ್ಷಣೆಯಾಗಿದ್ದಾನೆ. 41 ವರ್ಷದ ಮಹೇಂದ್ರ 4,910 ಕೆಜಿ ತೂಗುತ್ತಾನೆ. 2.75 ಮೀ. ಎತ್ತರ ಹಾಗೂ 3.25 ಮೀ. ಉದ್ದ ಇದ್ದಾನೆ.

ಜಿ ತಂಗಂ ಗೋಪಿನಾಥಂ

ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮದವನಾದ ನಾನು ಸದ್ಯ,‌ ಮೈಸೂರಿನಲ್ಲಿ ನೆಲೆಸಿದ್ದೇನೆ. 2019ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿಎ ( ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ ) ಪದವಿಯನ್ನು ಮುಗಿಸಿದ್ದೇನೆ. ನಂತರ 2021ರಲ್ಲಿ‌ ಮೈಸೂರು ವಿಶ್ವವಿದ್ಯಾನಿಲಯದ‌ಲ್ಲಿ ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ 2 ವರ್ಷಗಳ ‌ಕಾಲ ಅನುಭವ ಪಡೆದುಕೊಂಡಿದ್ದೇನೆ. ವಿಜಯವಾಣಿ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ಸಹಾಯಕ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಕಳೆದ 8 ತಿಂಗಳಿಂದ ಮೈಸೂರಿನ ಆಂದೋಲನ‌ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಗಂಗವಾಡಿ ಬಳಿ ಚಿರತೆ ದಾಳಿ : ಮೂರು ಕರು ಸಾವು

ಚಾಮರಾಜನಗರ : ತಾಲ್ಲೂಕಿನ ಗಂಗವಾಡಿ ಗ್ರಾಮದ ಬಳಿ ಶನಿವಾರ ರಾತ್ರಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ…

58 mins ago

ರೈಲು ಪ್ರಯಾಣ ದರ ಹೆಚ್ಚಳ : 500 ಕಿ.ಮೀ.ಗೆ 10ರೂ ಏರಿಕೆ

ಹೊಸದಿಲ್ಲಿ : ದೇಶಾದ್ಯಂತ ಡಿಸೆಂಬರ್ 26 ರಿಂದ ಅನ್ವಯವಾಗುವಂತೆ ರೈಲ್ವೆ ಇಲಾಖೆಯು ಪ್ರಯಾಣ ದರ ಏರಿಕೆ ಮಾಡಿದೆ. ಪರಿಷ್ಕೃತ ದರಗಳಂತೆ,…

1 hour ago

‌ಗುಂಡ್ಲುಪೇಟೆ | ಬಾಳೆ ತೋಟದಲ್ಲಿ ಹುಲಿ ಪ್ರತ್ಯಕ್ಷ

ಗುಂಡ್ಲುಪೇಟೆ : ತಾಲ್ಲೂಕಿನ ಮುಕ್ತಿ ಕಾಲೋನಿ ಗ್ರಾಮದ ಜಮೀನೊಂದರ ಬಾಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು ಜನರು ಕಿರುಚಾಡಿ, ಪಟಾಕಿ ಸಿಡಿಸಿದರೂ…

1 hour ago

ವನ್ಯಜೀವಿ ಛಾಯಾಗ್ರಹಕರಾಗುವ ಮೊದಲು ಕಾಡಿನ ಭಾಷೆ ಅರಿಯಿರಿ : ಕೃಪಾಕರ್‌ ಸೇನಾನಿ

ಮೈಸೂರು : ವನ್ಯಜೀವಿ ಛಾಯಾಗ್ರಹಣ ಹಾಗೂ ಸಾಕ್ಷ್ಯಚಿತ್ರ ತಯಾರಕರಾಗುವ ಮೊದಲು ಕಾಡಿನ ಭಾಷೆ ಅರಿತುಕೊಂಡಿರಬೇಕು ಎಂದು ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ್…

1 hour ago

ಶಾಲಾ ಮಕ್ಕಳಿಂದ ಹೆರಿಟೇಜ್‌ ಫ್ಲ್ಯಾಶ್‌ಮೊಬ್‌ ಪ್ರದರ್ಶನ : ಮನಗೆದ್ದ ಹೆರಿಟೇಜ್ ಟ್ರೆಷರ್ ಹಂಟ್

ಮೈಸೂರು : ಮುಂಜಾನೆಯ ಚುಮುಚುಮು ಚಳಿಗೆ, ಸೂರ್ಯ ಇನ್ನೂ ಮಂಜಿನ ನಡುವೆ ಕಣ್ಣು ಬಿಡುವ ಮುನ್ನವೇ ಅರಮನೆಯ ಕೋಟೆ ಆಂಜನೇಯ…

2 hours ago

ರಾಜ್ಯದಲ್ಲಿ ಇಬ್ಬರು ತಲೆಕೆಟ್ಟ ಮಂತ್ರಿಗಳಿದ್ದಾರೆ: ಶಾಸಕ ಜನಾರ್ಧನ ರೆಡ್ಡಿ

ಕೊಪ್ಪಳ: ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಅಧಿಕೃ ಹಸ್ತಾಂತರವಾಗಬಹುದು ಎಂದು ಶಾಸಕ ಜನಾರ್ಧನ ರೆಡ್ಡಿ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಕೊಪ್ಪಳದಲ್ಲಿ…

2 hours ago