Andolana originals

ಫೆ.6ರಂದು ಮಹದೇಶ್ವರ ದೇವಾಲಯದ ಉದ್ಘಾಟನೆ

ಎಂ.ಯೋಗಾನಂದ್

ಹಿರಿಕ್ಯಾತನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇಗುಲ; ಭಕ್ತರಿಂದ ಅನ್ನಸಂತರ್ಪಣೆ 

ಹುಣಸೂರು: ತಾಲ್ಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಮಹದೇಶ್ವರ ದೇಗುಲದ ಉದ್ಘಾಟನೆ ಫೆ.೬ರಂದು ನಡೆಯಲಿದೆ.

ಫೆ.೪ರ ಬುಧವಾರದಿಂದಲೇ ಮಲೆ ಮಹದೇಶ್ವರ ದೇವರ ಪ್ರತಿಷ್ಠಾಪನೆ ಮತ್ತು ಗೋಪುರ ಶಿಖರ, ಕಳಸ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮಕ್ಕೆ ಸಂಬಂಧಿಸಿದ ದೇವತಾ ಕಾರ್ಯಗಳು ಆರಂಭವಾಗಲಿವೆ.

ಫೆ.೪ರಂದು ಸಂಜೆ ೬ ಗಂಟೆಗೆ ತೀರ್ಥ ಸಂಗ್ರಹಣೆ, ಅಂಕುರಾರೋಹಣ, ಗಣಪತಿ ಪೂಜೆ, ಗೋಪೂಜೆ ಗ್ರಾಮ ಪ್ರದಕ್ಷಿಣೆ, ಧ್ವಜಾರೋಹಣ, ದೀಪಾರಾಧನೆ, ಸಭಾ ಪ್ರಾರ್ಥನೆ, ಪ್ರವೇಶ ಬಲಿ, ಆಲಯ ಪ್ರವೇಶ, ಮಹಾಸಂಕಲ್ಪ, ಪುಣ್ಯಾಹ, ನಾಂದಿ, ರಕ್ಷಾಬಂಧನ, ವಾಸ್ತುಪೂಜೆ, ರಕ್ಷೋಘ್ನ ಪೂಜೆ ನಡೆಯಲಿದೆ. ಫೆ.೫ರಂದು ಬೆಳಿಗ್ಗೆ ೧೧.೪೫ಕ್ಕೆ ಪೂಜಾ ಕಾರ್ಯಕ್ರಮಗಳು ಆರಂಭವಾಗಿ ತತ್ವ ಕಳಸ, ಪ್ರಧಾನ ಉಮಾಮಹೇಶ್ವರ ಕಲಶಾರಾಧನೆ, ಲಕ್ಷ್ಮೀನಾರಾಯಣ ಕಳಶ, ಬ್ರಹ್ಮ ಕಳಶ, ನವಗ್ರಹ ಕಳಶ, ಮಹಾ ಮೃತ್ಯುಂಜಯ ಕಳಶ, ಸಪ್ತಸಭಾ ಕಳಶ, ಸಪ್ತ ಮಾತೃಕಾ ಕಳಶ, ದಿಕ್ಪಾಲಕ ಕಳಶ ಪ್ರತಿಷ್ಠಾಪಿಸಿ ಈ ದೇವತಾ ಕಲಶಗಳಿಗೆ ಪೂಜಾರಾಧನೆ ಹಾಗೂ ಹೋಮ, ಹವನ ಮುಂತಾದ ಪೂಜೆಗಳು ನಡೆಯಲಿವೆ. ಫೆ.೬ರಂದು ದೇವಾಲಯದ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಬೆಳಿಗ್ಗೆ ೧೧ ಗಂಟೆಗೆ ಧಾರ್ಮಿಕ ಸಭಾ ಕಾರ್ಯ ಕ್ರಮಗಳು ನಡೆಯಲಿದ್ದು, ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರ ನಾಥ ಸ್ವಾಮಿಗಳ ಆಶೀರ್ವಾದದೊಂದಿಗೆ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಗಳುವಹಿಸಲಿದ್ದು, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಉಪಸ್ಥಿತರಿರುವರು.

ಅತಿಥಿಗಳಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಹೆಚ್. ಪಿ.ಮಂಜುನಾಥ್, ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ಜಾ.ದಳ ಮುಖಂಡರಾದ ಹರವೆ ಶ್ರೀಧರ್, ಹಿರಿಕ್ಯಾತನಹಳ್ಳಿ ಗ್ರಾಪಂ ಅಧ್ಯಕ್ಷರಾದ ಶಿಲ್ಪಶ್ರೀ, ಉದ್ಯಮಿ ದೇವರಹಳ್ಳಿ ಸೋಮ ಶೇಖರ್, ಹಿರೀಕ್ಯಾತನಹಳ್ಳಿ ದೊಡ್ಡಯಜಮಾನರಾದ ಹೆಚ್.ಆರ್.ಜಗದೀಶ್ ಯಜಮಾನರಾದ ಪಾಪಣ್ಣ ಭಾಗವಹಿಸಲಿದ್ದಾರೆ.

ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಮಧ್ಯಾಹ್ನ ೧ ಗಂಟೆಗೆ ಅನ್ನದಾಸೋಹ ನಡೆಯಲಿದೆ. ರಾತ್ರಿ ೮ ಗಂಟೆಗೆ ಚಂಡಾಸುರನ ವಧೆ ಅಥವಾ ಹೇಮಾವತಿ ಪರಿಣಯ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

” ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ನೂತನವಾಗಿ ಮಹದೇಶ್ವರ ದೇವಸ್ಥಾನವನ್ನು ಗ್ರಾಮದ ಸರ್ವ ಜನಾಂಗದವರ ಸಹಕಾರದೊಂದಿಗೆ ಕಟ್ಟಿದ್ದೇವೆ. ಫೆ.೬ರಂದು ದೇವಸ್ಥಾನ ಉದ್ಘಾಟನೆಗೊಳ್ಳಲಿದ್ದು ಗ್ರಾಮದ ಎಲ್ಲರೂ ತಮ್ಮ ಸಂಬಂಧಿಕರರಿಗೆ, ಗ್ರಾಮದಿಂದ ಬೇರೆಡೆಗೆ ಮದುವೆಯಾಗಿರುವ ಹೆಣ್ಣು ಮಕ್ಕಳ ಕುಟುಂಬಸ್ಥರಿಗೆ, ಸ್ನೇಹಿತರಿಗೆ ತಿಳಿಸಿ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು.”

-ಜಗದೀಶ್, ಗ್ರಾಮದ ಮುಖಂಡ 

 

 

ಆಂದೋಲನ ಡೆಸ್ಕ್

Recent Posts

ರೈತಾಪಿ ವರ್ಗಕ್ಕೆ ಬಿಗ್‌ ಶಾಕ್‌ ಕೊಟ್ಟ ಹವಾಮಾನ ಇಲಾಖೆ: ಏನದು ಗೊತ್ತಾ.?

ನವದೆಹಲಿ: ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…

20 mins ago

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್‌ ಅಹಮ್ಮದ್‌ ರಾಜೀನಾಮೆ

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್‌ ಅಹಮ್ಮದ್‌ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್‌ ಅಹಮ್ಮದ್‌ ಅವರು ಸಿಎಂ…

1 hour ago

ಓದುಗರ ಪತ್ರ: ನದಿ ಮಾಲಿನ್ಯ ತಡೆಗಟ್ಟಿ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…

4 hours ago

ಓದುಗರ ಪತ್ರ: ಸಚಿವ ಸೋಮಣ್ಣ ಹೇಳಿಕೆ ಸ್ವಾಗತಾರ್ಹ

ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…

4 hours ago

ಓದುಗರ ಪತ್ರ: ಅಪಾಯಕಾರಿ ಮರದ ಕೊಂಬೆ ತೆರವುಗೊಳಿಸಿ

ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…

4 hours ago

ಓದುಗರ ಪತ್ರ: ನವ ಭಾರತದ ನಿರ್ಮಾತೃ ಡಾ.ಅಂಬೇಡ್ಕರ್

ಶ್ರೇಷ್ಠ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಅವರ ಬಾಳಿಗೆ…

4 hours ago