ಇ-ಟೆಂಡರ್ ಮೂಲಕ ನಡೆದ 53 ಮಳಿಗೆಗಳು ಹರಾಜು ಪ್ರಕ್ರಿಯೆ ; 16 ಮಳಿಗೆಗಳು ಅನರ್ಹ
ಮಡಿಕೇರಿ: ನಗರಸಭೆ ಅಧಿನದಲ್ಲಿರುವ 53 ಮಳಿಗೆಗಳ ಹರಾಜು ಪ್ರಕ್ರಿಯೆ ಇ-ಟೆಂಡರ್ ಮೂಲಕ ಇತ್ತೀಚೆಗೆ ನಡೆದಿದ್ದು, ದಾಖಲೆ ಮೊತ್ತಕ್ಕೆ ಬಿಡ್ಡಿಂಗ್ ಆಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಯಾರೂ ನಿರೀಕ್ಷಿಸದ ರೀತಿಯಲ್ಲಿ ಕಳೆದ ಬಾರಿಗಿಂತಲೂ 4-5 ಪಟ್ಟು, ಕೆಲವರಂತೂ ಹತ್ತು ಪಟ್ಟಿಗೂ ಹೆಚ್ಚು ದರ ನೀಡಿ ಮಳಿಗೆಗಳನ್ನು ಬಿಡ್ಡಿಂಗ್ ಮೂಲಕ ಪಡೆದುಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ. 53 ಮಳಿಗೆಗಳ ಪೈಕಿ 16 ಮಳಿಗೆಗಳು ಸಿಂಗಲ್ ಬಿಡ್, ಕಳೆದ ಬಾರಿಗಿಂತ ಕಡಿಮೆ ಮೊತ್ತದ ಬಿಡ್ ಎಂಬ ಕಾರಣಕ್ಕೆ ಅನರ್ಹಗೊಂಡಿವೆ.
ಕಳೆದ 12 ವರ್ಷಗಳ ಹಿಂದೆ ಬಿಡ್ಡಿಂಗ್ ಮೂಲಕ ಮಳಿಗೆ ಖರೀದಿಸಿ ಅವಽ ಕೊನೆಗೊಂಡ ಸಂದರ್ಭವಿದ್ದ ಬಾಡಿಗೆಯ ಮೊತ್ತ ಹಾಗೂ ಈ ಬಾರಿ ಹರಾಜಾಗಿರುವ ಮೊತ್ತದ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ. ಯಾರೂ ನಿರೀಕ್ಷಿಸಿದ ದರದಲ್ಲಿ ವ್ಯಾಪಾರಿಗಳು ಮಳಿಗೆ ಪಡೆದುಕೊಂಡಿ ರುವುದು ನಿಬ್ಬೆರಗಾಗುವಂತೆ ಮಾಡಿದೆ. 53 ಮಳಿಗೆಗಳ ಪೈಕಿ ಅನರ್ಹಗೊಂಡ 16 ಮಳಿಗೆಗಳನ್ನು ಹೊರತುಪಡಿಸಿದರೆ ಒಟ್ಟು 37 ಮಳಿಗೆಗಳ ಬಿಡ್ಡಿಂಗ್ ಅಂತಿಮಗೊಂಡಿದೆ. ಕಳೆದ 12 ವರ್ಷಗಳ ಅವಧಿಗೆ ಹರಾಜಾದ
ಒಟ್ಟು 53 ಮಳಿಗೆಗಳಿಗೆ ಕೊನೆ ತಿಂಗಳ ಒಟ್ಟು ಬಾಡಿಗೆ ರೂ. 4,72,619 ಆಗಿತ್ತು. ಈ ವರ್ಷ ರೂ.10,60,138ಗೆ ಮಳಿಗೆಗಳು ಹರಾಜಾಗಿವೆ. ಶೇ. 224 ಲಾಭಾಂಶವನ್ನು ನಗರಸಭೆ ಪಡೆದಿದೆ. ಗಣನೀಯ ಪ್ರಮಾಣದಲ್ಲಿ ಬಿಡ್ಡುದಾರರು ಮಳಿಗೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದ ರೊಂದಿಗೆ ತಿಂಗಳಿಗೆ ಇಷ್ಟೊಂದು ಪ್ರಮಾಣದ ಬಾಡಿಗೆ ನೀಡಿ ವ್ಯವಹಾರ ನಡೆಸಬಹುದಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.
12 ವರ್ಷದ ಅವಧಿಗೆ ಬಿಡ್ ಮೂಲಕ ಅಂಗಡಿಯನ್ನು ವ್ಯಾಪಾರಿಗಳು ಪಡೆಯಲು ಅವಕಾಶವಿದ್ದು, ಬಿಡ್‌ನಲ್ಲಿ ಸೂಚಿಸಿದ ಮೊತ್ತ ಪ್ರತಿ ತಿಂಗಳ ಬಾಡಿಗೆಯಾಗಿರುತ್ತದೆ. ಪ್ರತಿ ೩ ವರ್ಷಕ್ಕೊಮ್ಮೆ ದರವನ್ನು ಹೆಚ್ಚಿಸಲು ಅವ ಕಾಶವಿದೆ. ಬಿಡ್ಡಿಂಗ್ ಮೂಲಕ ಮಳಿಗೆ ಪಡೆದವರು ಹಣ ನೀಡದಿದ್ದರೆ ಠೇವಣಿ ರೂಪದಲ್ಲಿ ಪಾವತಿಸಿದ್ದ ಹಣವನ್ನು ಮುಟ್ಟು ಗೋಲು ಹಾಕಿಕೊಳ್ಳಬಹುದಾಗಿದೆ ಎಂದು ನಗರಸಭೆ ಆಯುಕ್ತ ರಮೇಶ್ ತಿಳಿಸಿದ್ದಾರೆ.
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…