ಬೋಗಾದಿ ರಸ್ತೆಯಲ್ಲಿ ವೈಟ್ ಟೈಪಿಂಗ್ ಕಾರ್ಯ ಮುಗಿದಿದೆ. ಅದನ್ನು ಪ್ರಾರಂಭಿಸಿದ ಸಂದರ್ಭದಲ್ಲಿ, ರಸ್ತೆಯ ಎರಡೂ ಬದಿಯಲ್ಲಿ ಮರ ಬೆಳೆಸಲು ಅವಕಾಶ ಮಾಡಿಕೊಡಬೇಕೆಂಬ ಸಲಹೆಯನ್ನು ಒಬ್ಬ ಪರಿಸರ ಪ್ರೇಮಿಯಾಗಿ ಪತ್ರಿಕೆಗಳ ಮೂಲಕ ನೀಡಿದ್ದೆ. ಅಲ್ಲದೆ ನನಗೆ ಗೊತ್ತಿದ್ದ ಕೆಲವು ವ್ಯಕ್ತಿಗಳ ಮೂಲಕವೂ ನನ್ನ ಸಲಹೆಯನ್ನು ತಿಳಿಸಿದ್ದೆ. ಆದರೆ ಸಂಬಂಧಪಟ್ಟವರು ಈ ಬಗ್ಗೆ ಯಾರೂ ಮನಸ್ಸು ಮಾಡಲೇ ಇಲ್ಲ.
ಚಿಕ್ಕ ಚಿಕ್ಕ ಹೂವಿನ ಗಿಡಗಳನ್ನು ಎರಡೂ ಬದಿಯಲ್ಲಿ ಹಾಕಿದ್ದರೆ ಈ ರಸ್ತೆ ಸುಂದರವಾಗಿ ಕಾಣುತ್ತಿತ್ತು. ನಗರದ ಪರಿಸರವಾದಿಗಳು ಈ ಬಗ್ಗೆ ಯೋಚಿಸಲಿಲ್ಲ ಹಾಗೂ ಅರಣ್ಯ ಇಲಾಖೆಯೂ ಮನಸ್ಸು ಮಾಡಲಿಲ್ಲ. ಪ್ರತಿ ಸಲ ಈ ರಸ್ತೆಯಲ್ಲಿ ಹಾದು ಹೋಗುವಾಗ, ಹಸಿರನ್ನು ನೋಡದೆ ದುಃಖವಾಗುತ್ತದೆ. ಹಾಗೆಯೇ ಮೈಸೂರು ಮಹಾರಾಜರ ದೂರ ದೃಷ್ಟಿಯು ನನ್ನ ಕಣ್ಣ ಮುಂದೆ ಹಾದು ಹೋಗುತ್ತದೆ. ನನ್ನ ಮನೆಯ ಮುಂದೆ ಸಾಧ್ಯವಾದಷ್ಟು ಗಿಡ -ಮರಗಳನ್ನು ನಾನು ಬೆಳೆಸಿದ್ದೇನೆ ಅನ್ನುವುದೇ ನನಗಿರುವ ಸಮಾಧಾನ.
-ಹೆಚ್.ಎನ್.ತ್ಯಾಗರಾಜು, ಮೈಸೂರು
ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…
ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…
ಭೇರ್ಯ ಮಹೇಶ್ ವಾಹನ ದಟ್ಟಣೆ ಹೆಚ್ಚಳವಾಗಿರುವುದರಿಂದ ಮೇಲ್ಸೇತುವೆ ನಿರ್ಮಿಸಬೇಕೆನ್ನುವುದು ಸ್ಥಳೀಯರ ಬೇಡಿಕೆ ಕೆ.ಆರ್.ನಗರ: ತಾಲ್ಲೂಕಿನ ಡೋರ್ನಹಳ್ಳಿ ರೈಲ್ವೆ ಅಂಡರ್…
ಕೆ.ಬಿ.ರಮೇಶನಾಯಕ ೮೦ ಆಕರ್ಷಕ ದೀಪಾಲಂಕೃತ ಪ್ರತಿಕೃತಿಗಳ ನಿರ್ಮಾಣ; ೩,೫೦೦ ಡ್ರೋನ್‌ಗಳ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಸಿದ್ಧತೆ ಮೈಸೂರು: ನಾಡಹಬ್ಬ…
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಖಾಸಗಿ ಪ್ರಯೋಗಾಲಯಗಳ ಮೇಲಿನ ಅವಲಂಬನೆ ತಗ್ಗಿಸಿ, ಸರ್ಕಾರದ ಹಂತದ ಅತ್ಯಾಧುನಿಕ ಪರೀಕ್ಷಾ…