Andolana originals

ಓದುಗರ ಪತ್ರ: ಫ್ಲೆಕ್ಸ್ ಮುಕ್ತವೆಂಬುದು ಸಾಂಪ್ರದಾಯಿಕ ಮಾತಾಗಬಾರದಲ್ಲವೇ?

ಮೈಸೂರು ನಗರವನ್ನು ಫ್ಲೆಕ್ಸ್ ಮುಕ್ತವಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿರುವುದು ಸ್ವಾಗತಾರ್ಹವಾಗಿದೆ. ದಸರಾ ಸಮಯದಲ್ಲಿ ಮೈಸೂರಿನಲ್ಲಿ ತಮ್ಮದೂ ಸೇರಿದಂತೆ ಯಾರ ಫ್ಲೆಕ್ಸ್ ಅಥವಾ ಪ್ರಚಾರ ಸಾಮಗ್ರಿಗಳನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಹಾಕಬಾರದೆಂದು ಅಧಿಕಾರಿಗಳಿಗೆ ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿರುವುದು ಸಾಂಪ್ರದಾಯಿಕ ಹೇಳಿಕೆಯಂತಾಗಬಾರದು.

ಈ ಫ್ಲೆಕ್ಸ್ ಸಂಸ್ಕೃತಿ ಹೆಚ್ಚುತ್ತಿರುವ ಓಲೈಕೆಯ ರಾಜಕಾರಣದ ಒಂದು ಭಾಗವಾಗಿದೆ. ತಮ್ಮ ನಾಯಕರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಅಥವಾ ರಾಜಕೀಯ ಲಾಭ ಪಡೆಯಲು ಇಂತಹ ಪ್ರಚಾರ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ವಿಶೇಷವಾಗಿ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಶುಭ ಕೋರಲು ಫ್ಲೆಕ್ಸ್ ಗಳನ್ನು ಎಗ್ಗಿಲ್ಲದೆ ಬಳಸಲಾಗುತ್ತಿದೆ.

ಮೈಸೂರು ನಗರದಲ್ಲಿ ಫ್ಲೆಕ್ಸ್ ಗಳು, ಬಂಟಿಗ್ಸ್‌ಗಳ ಹಾವಳಿ ಮಿತಿ ಮೀರಿದೆ. ಇದು ನಗರದ ಸೌಂದರ್ಯವನ್ನು ಹಾಳು ಮಾಡುತ್ತದೆ ಎಂದು ಹಲವರು ಹೇಳುತ್ತಿದ್ದರೂ ಅದೂ ಕೇಳಿಸಿದ ಕೂಗಾಗಿದೆ. ಇನ್ನು ಮುಂದಾದರೂ ಎಲ್ಲೆಂದರಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಕುವವರ ವಿರುದ್ಧ ನಗರ ಪಾಲಿಕೆಯ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳಲಿ.

-ಕೆ.ವಿ.ವಾಸು, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂತು ಎಟಿಎಂನಲ್ಲಿ ‘ತೇಪೆ’ ಹಾಕಿದ ನೋಟು!

ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…

2 mins ago

ಓದುಗರ ಪತ್ರ: ಅರಳುವ ಪ್ರತಿಭೆಗಳಿಗೆ ಸಮಯ ಹೆಚ್ಚು ಸಿಗಲಿ

ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…

4 hours ago

ಅಗಲಿದ ದೃಶ್ಯಬ್ರಹ್ಮ ಸಿಂಗೀತಂ, ‘ನಟಸಮ್ರಾಟ್’ ನಾನಾ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ   ಜಲಸಂರಕ್ಷಣೆಯ ಬೃಹತ್ ಕ್ರಾಂತಿಯನ್ನೇ ಮಾಡಿದ ಪಾಟೇಕರ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಮ್ಮೆ ಕಾಲವು ತರುವ…

4 hours ago

ಮಹಾಲಯ ಅಮಾವಾಸ್ಯೆಗೆ ಮ.ಬೆಟ್ಟ ಸಜ್ಜು

ಮಹಾದೇಶ್ ಎಂ.ಗೌಡ ೩ ದಿನಗಳ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ; ಪ್ರಾಧಿಕಾರದಿಂದ ಸಕಲ ಸಿದ್ಧತೆ  ಹನೂರು: ಮಹಾಲಯ ಅಮಾವಾಸ್ಯೆ…

5 hours ago

ಮಹೇಂದ್ರನ ಸುತ್ತ ಅನುಮಾನದ ಹುತ್ತ!

ಚಿರಂಜೀವಿ ಸಿ.ಹುಲ್ಲಹಳ್ಳಿ ಕಬಿನಿ ಕಿಂಗ್ ಮಹೇಂದ್ರ ತಾಲೀಮು ಅರ್ಧಕ್ಕೆ ಮೊಟಕು ಆತಂಕದಲ್ಲಿ ದಸರಾ ಗಜಪಡೆಯ ಅಭಿಮಾನಿಗಳು ಮೈಸೂರು: ಮಹಾಭಾರತದ ಭೀಮನ…

5 hours ago

ನಲ್ಲೂರು ಅಮಾನಿ ಕೆರೆಗೆ ಹರಿದು ಬಂದ ನೀರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೃಪೆ ತೋರಿದ ವರುಣ ಮಳೆ ಮುಂದುವರಿದರೆ ತಾಲ್ಲೂಕಿನ ದೊಡ್ಡ ಕೆರೆ ತುಂಬುವುದು ಖಚಿತ  ಗುಂಡ್ಲುಪೇಟೆ:…

5 hours ago