Andolana originals

ಕುಶಾಲನಗರ: ಕೆಎಸ್‌ಆರ್‌ಟಿಸಿ ಡಿಪೋ ಕಾಮಗಾರಿ ಚುರುಕು

ಪುನೀತ್ ಮಡಿಕೇರಿ

ಒಟ್ಟು ೮ ಕೋಟಿ ರೂ. ಮೊತ್ತದ ಯೋಜನೆ; ಸಾರಿಗೆ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ 

ಮಡಿಕೇರಿ: ಕುಶಾಲನಗರದ ಬಹು ನಿರೀಕ್ಷಿತ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಕಾಮಗಾರಿ ಭರದಿಂದ ಸಾಗಿದ್ದು,ಎಲ್ಲವೂ ಅಂದುಕೊಂಡಂತೆ ಆದರೆ ಮಳೆಗಾಲದ ಒಳಗೆ ಕಾರ್ಯಾರಂಭ ಮಾಡುವ ಎಲ್ಲಾ  ಸಾಧ್ಯತೆಗಳಿವೆ.

ಒಟ್ಟು ೮ ಕೋಟಿ ರೂ. ಮೊತ್ತದ ಈ ಯೋಜನೆಯ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನೆಲಕ್ಕೆ ಕಾಂಕ್ರೀಟ್ ಹಾಕು ವುದು ಮತ್ತು ಯಂತ್ರೋಪಕರಣಗಳ ಅಳವಡಿಕೆ ಕೆಲಸ ನಡೆಯಬೇಕಿದೆ. ಇಲ್ಲಿ ಬಸ್ ಡಿಪೋ ಆರಂಭವಾದ ನಂತರ ಕೊಡಗಿನ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಪಶ್ಚಿಮ ಘಟ್ಟದ ಸೆರಗಿನಲ್ಲಿ ಇರುವ ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿನ ಕೆಲವು ಕುಗ್ರಾಮಗಳಿಗೆ ಈಗಲೂ ಬಸ್ ಸಂಪರ್ಕವೇ ಇಲ್ಲ. ಜಿಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚು ಇರುತ್ತದೆ. ಆದರೆ, ಭಾಗ ಮಂಡಲ, ತಲಕಾವೇರಿಯಂತಹ ಯಾತ್ರಾ ಸ್ಥಳಗಳು ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ಪರಿತಪಿಸುವಂತಾಗಿದೆ. ಕೊಡಗು ಜಿಲ್ಲೆಯಲ್ಲಿ ಸದ್ಯಕ್ಕೆ ಮಡಿಕೇರಿ ಯಲ್ಲಿ ಮಾತ್ರ ಏಕೈಕ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಇದೆ. ಆದ್ದರಿಂದ ಸಾರಿಗೆ ಸಂಪರ್ಕದಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡು ಬರುತ್ತಿದೆ.

ಕೆಎಸ್‌ಆರ್‌ಟಿಸಿ ಮೂಲಗಳ ಪ್ರಕಾರ ಮಡಿಕೇರಿ ಡಿಪೋದಲ್ಲಿ ೧೧ ರಾಜಹಂಸ ಸೇರಿದಂತೆ ಒಟ್ಟು ೧೨೫ ಬಸ್‌ಗಳು ಇವೆ. ಪ್ರತಿನಿತ್ಯ ಸಂಚಾರದ ೭೦ ಮಾರ್ಗಗಳು ಸೇರಿ ೧೧೨ ಮಾರ್ಗಗಳಲ್ಲಿ ಬಸ್‌ಗಳು ಓಡಾಡುತ್ತಿವೆ. ಮೈಸೂರು, ಬೆಂಗಳೂರು ಹಾಗೂ ನಗರ ಪ್ರದೇಶಗಳಿಗೆ ಮಡಿಕೇರಿ ಡಿಪೋದಿಂದ ಹೆಚ್ಚಿನ ಬಸ್‌ಗಳನ್ನು ಬಿಡಲಾಗಿದೆ. ಆದರೆ, ಜಿಯ ಗ್ರಾಮಾಂತರ ಪ್ರದೇಶಗಳನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಆರೋಪಗಳಿವೆ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಕಚೇರಿ ಕೆಲಸಗಳಿಗೆ ತೆರಳುವವರಿಗೆ ತೊಂದರೆ ಆಗುತ್ತಿದೆ.

೨೦೨೪ರ ಜನವರಿಯಲ್ಲಿ ಕೊಡಗಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ಡಿಪೋಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಅದೇ ವರ್ಷ ಮಾ.೭ಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್‌ಗೌಡ ಕಾಮಗಾರಿಗೆ ಚಾಲನೆ ನೀಡಿದ್ದರು.

ಅಲ್ಲಿಂದ ಈಚೆಗೆ ಕಾಮಗಾರಿ ಚುರುಕಿನಿಂದ ನಡೆಯುತ್ತಿದ್ದು ಶೇ.೭೦ ಕೆಲಸ ಮುಗಿದಿರುವ ಬಗ್ಗೆ ಕೆಎಸ್‌ಆರ್‌ಟಿಸಿ ಅಽಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದಿರುವ ಕೆಲಸಗಳು ಇನ್ನು ೨ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಮಳೆಗಾಲ ಶುರುವಾಗುವುದರೊಳಗೆ ಡಿಪೋ ಕಾರ್ಯಾರಂಭಿಸುವುದು ಬಹುತೇಕ ಖಚಿತವಾಗಿದೆ.

ಒಂದು ಬಸ್ ಡಿಪೋಗೆ ಅಗತ್ಯವಿರುವ ಪೆಟ್ರೋಲ ಬಂಕ್, ವರ್ಕ್‌ಶಾಪ್, ಕಚೇರಿ, ಡಿಪೋ ಮ್ಯಾನೇಜರ್ ಚೇಂಬರ್, ಸಿಬ್ಬಂದಿ ವಸತಿ ಗೃಹ ಸೇರಿದಂತೆ ಎ ಮೂಲಭೂತ ಸೌಕರ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಎಲೆಕ್ಟ್ರಿಕ್ ಬಸ್‌ಗಳ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಟೆಂಡರ್‌ನಲ್ಲಿ ಇಲ್ಲ. ಆದರೆ, ಈಗಿನ ಅಗತ್ಯಗಳಿಗೆ ತಕ್ಕಂತೆ ಸವಲತ್ತುಗಳನ್ನು ಕಲ್ಪಿಸುವ ಚಿಂತನೆಯೂ ಅಧಿಕಾರಿಗಳಲ್ಲಿ ಇದೆ. ಸದ್ಯ ಕಟ್ಟಡ ಕೆಲಸಗಳು ಬಹುತೇಕ ಮುಗಿದಿವೆ. ಕೇಬಲ ಅಳವಡಿಕೆ, ಟ್ರಾನ್ಸ್ಫಾರ್ಮರ್ ಅಳವಡಿಕೆ, ಬಸ್ ಗಳ ಸರ್ವಿಸ್‌ಗೆ ಅಗತ್ಯ ಇರುವ ಯಂತ್ರೋಪಕರಣಗಳ ಅಳವಡಿಕೆ, ನೆಲಕ್ಕೆ ಕಾಂಕ್ರೀಟ್ ಹಾಕುವ ಕೆಲಸ ಆಗಬೇಕಿದೆ.

ಇದೀಗ ಕಾಮಗಾರಿ ಶುರುವಾಗಿರುವ ಮೈಸೂರು – ಕುಶಾಲನಗರ ಚತುಷ್ಪಥ ಹೆದ್ದಾರಿ ಬಸವನಹಳ್ಳಿ ತನಕವೂ ಬರಲಿದ್ದು, ನೂತನ ಡಿಪೋಗೆ ಈ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಜಿಎಸ್‌ಟಿ, ವಿನ್ಯಾಸ ವೆಚ್ಚ ಸೇರಿದಂತೆ ಸುಮಾರು ೮ ಕೋಟಿ ರೂ. ವೆಚ್ಚದಲ್ಲಿ ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ಡಿಪೋ ತಲೆ ಎತ್ತುತ್ತಿದೆ. ಈ ಡಿಪೋದಿಂದ ಕಾರ್ಯಾಚರಣೆ ನಡೆಸುವ ಬಸ್‌ಗಳ ಸಂಖ್ಯೆ ಇನ್ನೂ ನಿಗದಿಯಾಗಿಲ್ಲ. ಮೈಸೂರು ಮತ್ತು ಹಾಸನ ಜಿಗಳಿಗೆ ಹೊಂದಿಕೊಂಡಂತೆ ಕುಶಾಲನಗರ ಇರುವುದರಿಂದ ಇಲ್ಲಿಗೆ ಬಸ್‌ಗಳ ಬೇಡಿಕೆ ಹೆಚ್ಚಿದ್ದು, ಅದಕ್ಕೆ ಪೂರಕವಾಗಿ ಬಸ್‌ಗಳನ್ನು ಒದಗಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

” ಕುಶಾಲನಗರ ತಾಲ್ಲೂಕಿನ ಜನರ ಬಹು ದಿನಗಳ ಬೇಡಿಕೆ ಈಡೇರುವ ಕಾಲ ಬಂದಿದೆ. ಬಸವನ ಹಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಕೆಲಸಗಳು ಚುರುಕಾಗಿ ನಡೆದಿವೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ೧-೨ ತಿಂಗಳಲ್ಲಿ ಡಿಪೋ ಸಂಪೂರ್ಣ ಸಿದ್ಧವಾಗಲಿದೆ. ಕುಶಾಲನಗರ ಡಿಪೋ ಕಾರ್ಯಾರಂಭ ಮಾಡಿದ ನಂತರ ಜಿಯ ಸಾರಿಗೆ ಸಮಸ್ಯೆಗಳು ಬಹುತೇಕ ಪರಿಹಾರ ಆಗುವ ನಿರೀಕ್ಷೆ ಇದೆ.”

-ಡಾ.ಮಂಥರ್‌ಗೌಡ, ಮಡಿಕೇರಿ ಶಾಸಕ 

 

 

 

ಆಂದೋಲನ ಡೆಸ್ಕ್

Recent Posts

ಕರ್ನಾಟಕ ಸೋಲಿಸಿ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿದ ಜಮ್ಮು-ಕಾಶ್ಮೀರ

ಹುಬ್ಬಳ್ಳಿ: ಹನ್ನೊಂದು ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟಕ್ಕೇರುವ ಕರ್ನಾಟಕದ ಕನಸು ನನಸಾಗಲಿಲ್ಲ. ಇದೇ ಮೊದಲ ಬಾರಿಗೆ ಫೈನಲ್‌ಗೆ ಬಂದು, ಜಮ್ಮು-ಕಾಶ್ಮೀರ…

1 hour ago

ಹನೂರಿನಲ್ಲಿ ವಿಜೃಂಭಣೆಯಿಂದ ನಡೆದ ಸೇವಾಲಾಲ್‌ ಜಯಂತಿ ಕಾರ್ಯಕ್ರಮ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ತಾಲೂಕು ಕೇಂದ್ರದಲ್ಲಿ ವಿಭಾಗಿಯ ಮಟ್ಟದ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು…

2 hours ago

ಹಣೆಯಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ: ಡಿ.ಕೆ.ಸುರೇಶ್‌

ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿಕೆ ನೀಡಿದ್ದಾರೆ. ಈ…

2 hours ago

ಸದ್ದಿಲ್ಲದೆ ಸಮಾಜಸೇವೆಗೆ ನಿಂತ ಎಂಬಿಶ್ರೀ ಪ್ರತಿಷ್ಠಾನ ತಂಡ

ಹೇಮಂತ್‌ಕುಮಾರ್ ಮಂಡ್ಯ: ನಗರದ ಹಲವಾರು ಬಡಾವಣೆಗಳಲ್ಲಿನ ರಸ್ತೆಗಳು ಸಾರ್ವಜನಿಕ ಮೂತ್ರಾಲಯವಾಗಿ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಎಲ್ಲೆಂದರಲ್ಲಿ ಕಸ ಎರಚಾಡುತ್ತ…

2 hours ago

ನಟ ದರ್ಶನ್‌ ವಿರುದ್ಧ ಸುಳ್ಳು ದಾಖಲೆ ಸೃಷ್ಟಿ ಆರೋಪ: ಕನ್ನಡ ಒಕ್ಕೂಟದಿಂದ ಧರಣಿಗೆ ಕರೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್‌ ವಿರುದ್ಧ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ…

2 hours ago

ಇರಾನ್‌ ಮೇಲೆ ಅಮೇರಿಕಾ ಹಾಗೂ ಇಸ್ರೇಲ್‌ ಜಂಟಿ ದಾಳಿ

ಟೆಹರಾನ್:‌ ಇರಾನ್‌ ಮತ್ತು ಇಸ್ರೇಲ್‌ ನಡುವೆ ಯುದ್ಧದ ಕಾರ್ಮೋದ ಹೆಚ್ಚಿದ್ದು, ಇರಾನ್‌ನ ಸರ್ವೋಚ್ಛ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ…

2 hours ago