Andolana originals

ಕೆಎಸ್‌ಐಸಿ: ೧೫ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಅಂತ್ಯ

ತಿ.ನರಸೀಪುರ: ಪಟ್ಟಣದ ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಽಸಿ ಕಳೆದ ೧೫ ದಿನಗಳಿಂದ ವಿವಿಧ ಸಂಘಟನೆಗಳವರು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯಗೊಂಡಿದೆ.

ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ರವರು ಈ ವಿಷಯ ಪ್ರಸ್ತಾಪಿಸಿದಾಗ ರೇಷ್ಮೆ ಸಚಿವ ಕೆ. ವೆಂಕಟೇಶ್‌ರವರು ಇದಕ್ಕೆ ಪ್ರತಿಕ್ರಿಯೆ ನೀಡಿ, ಕ್ರೀಡಾಂಗಣ ಜಾಗದ ಕುರಿತು ಅಧಿಕಾರಿಗಳು ನೀಡಿದ ವರದಿ ಮೇರೆಗೆ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗದ ಹಸ್ತಾಂತರ ಮಾಡಿ ಕ್ರಮ ಕೈಗೊಳ್ಳಲಾಗಿತ್ತು. ಈಗ ಸ್ಥಳದ ವಸ್ತುಸ್ಥಿತಿಯನ್ನು ಅರಿತು ಅದನ್ನು ಕೈಬಿಟ್ಟು ಬೇರೆ ಕಡೆ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಕೈಬಿಡಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ದಸಂಸ ಸಂಘಟನೆಗಳು, ಪರಿಸರವಾದಿ ಗಳು, ಕನ್ನಡ ಸೇನೆ – ಕರ್ನಾಟಕ, ಪಕ್ಷದ ಮುಖಂಡರುಗಳು ತಿಳಿಸಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು, ಮಾತನಾಡಿ, ಸರ್ಕಾರ ಕ್ರೀಡಾಂಗಣ ನಿರ್ಮಾಣ ಮಾಡುವುದಿಲ್ಲ ಎಂಬ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಯದುವೀರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎನ್. ಮಹೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯ ಯತೀಂದ್ರ, ರೇಷ್ಮೆ ಕಾರ್ಖಾನೆ ಉಳಿಸಿ ಹೋರಾಟ ಸಮಿತಿಯ ಎಲ್ಲಾ ಪ್ರತಿಭಟನಾಕಾರರಿಗೂ ಕೃತಜ್ಞತೆ ಸಲ್ಲಿಸುತ್ತೇವೆ. ಇವರ ಪ್ರತಿಫಲದಿಂದ ನ್ಯಾಯ ದೊರಕಿದ್ದು, ನಾವು ಪ್ರತಿಭಟನೆ ಯನ್ನು ಕೈಬಿಟ್ಟಿದ್ದೇವೆ ಎಂದು ತಿಳಿಸಿದರು.

” ರೇಷ್ಮೆ ಕಾರ್ಖಾನೆ ಉಳಿಸಿ ಹೋರಾಟ ಸಮಿತಿ ರಚಿಸಿ, ವಿವಿಧ ಸಂಘಟನೆಗಳ ಮುಖಂಡರು ನಡೆಸಿದ ಹೋರಾಟದ ಪ್ರತಿಫಲದಿಂದ ಕೆಎಸ್‌ಐಸಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಿಲ್ಲ ಎಂದು ಸರ್ಕಾರ ಪ್ರಕಟಿಸಿರುವುದರಿಂದ ನಮ್ಮ ಹೋರಾಟವನ್ನು ಹಿಂಪಡೆದಿದ್ದೇವೆ.”

-ಕಿರುಗಸೂರು ಶಂಕರ್, ಕಬ್ಬು ಬೆಳೆಗಾರರ ಸಂಘ

” ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್. ಸಿ. ಮಹದೇವಪ್ಪ ಹಾಗೂ ತಾಲ್ಲೂಕಿನ ಎಲ್ಲಾ ಸಂಘಟನೆಗಳನ್ನು ದಿಕ್ಕು ತಪ್ಪಿಸಿ ಕೆಎಸ್‌ಐಸಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಹುದು ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.”

-ಆರ್.ಅರ್ಜುನ್, ಪುರಸಭಾ ಮಾಜಿ ಸದಸ್ಯ 

 

 

ಆಂದೋಲನ ಡೆಸ್ಕ್

Recent Posts

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡಿಜಿಟಲ್‌ ಅರೆಸ್ಟ್‌ ಪ್ರಕರಣ: ಎಚ್ಚೆತ್ತುಕೊಳ್ಳದ ಜನತೆ

ಬೆಂಗಳೂರು: ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಡಿಜಿಟಲ್‌ ಅರೆಸ್ಟ್‌ನಿಂದ ಕೋಟ್ಯಂತರ ರೂ. ಹಣವನ್ನು…

4 mins ago

ವಾಟಾಳ್‌ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಸಚಿವ ಶಿವರಾಜ್‌ ತಂಗಡಗಿ

ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಸಚಿವ…

41 mins ago

ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ. ಹೋಟೆಲ್‌ನವರು ಒಂದು ವಾರ ಸಹಿಸಿಕೊಳ್ಳಲೇಬೇಕು ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.…

2 hours ago

ನಾಲ್ಕೈದು ದಿನಗಳ ನಂತರ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಮಾಜಿ ಸಿಎಂ…

2 hours ago

ಇರಾನ್‌ ನೂತನ ಸುಪ್ರೀಂ ಲೀಡರ್‌ಗೆ ಕಾಲು ಕಟ್‌, ಕೋಮಾಗೆ ಜಾರಿಗೆ ಮೊಜ್ತಾಬಾ

ಟೆಹರಾನ್:‌ ಇಸ್ರೇಲ್ ಮತ್ತು ಇರಾನ್‌ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇರಾನ್‌ ದೇಶಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದೆ.…

3 hours ago

ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಔತಣಕೂಟ: ಯಾವ ದಿನ ಗೊತ್ತಾ.?

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಕೆಲ ದಿನಗಳ ಹಿಂದೆ ಡಿನ್ನರ್‌ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಕೂಡ ಸಚಿವರಿಗೆ…

4 hours ago