ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ
ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ ಲಭ್ಯವಾಗುತ್ತಿದ್ದ ಪಟ್ಟಣದ ಪೊಲೀಸ್ ಕ್ಯಾಂಟೀನ್ ಶಾಸಕರ ಪರಿಶ್ರಮದಿಂದ ಮತ್ತೆ ಪ್ರಾರಂಭಗೊಂಡಿದ್ದು, ಅನೇಕ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬಡವರಲ್ಲಿ ಸಂತಸ ಮೂಡಿಸಿದೆ.
ಹುಣಸೂರಿನ ಪೊಲೀಸ್ ಕ್ಯಾಂಟೀನ್ ಅನ್ನು ಪೊಲೀಸರು, ದೂರುದಾರರು, ಮಧ್ಯವರ್ತಿಗಳು ಅಡ್ಡವನ್ನಾಗಿ ಮಾಡಿ ಕೊಂಡಿದ್ದನ್ನು ಗಮನಿಸಿದ್ದ ಎಸ್‌ಪಿ ವಿಷ್ಣುವರ್ಧನ್ ಅವರು ಮೈಸೂರು ಜಿಲ್ಲೆಯ ಹುಣಸೂರು, ಎಚ್.ಡಿ.ಕೋಟೆ, ಹುಲ್ಲಹಳ್ಳಿ, ನಂಜನಗೂಡು, ತಿ.ನರಸೀಪುರ ದಲ್ಲಿ ಪೊಲೀಸ್ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿರು ವವರಿಗೆ ಸಂಪೂರ್ಣವಾಗಿ ಬಂದ್ ಮಾಡುವಂತೆ ಕಳೆದ ವಾರ ಆದೇಶಿಸಿದ್ದರು. ಇದರಿಂದ ಕಡಿಮೆ ದರದಲ್ಲಿ ತಿಂಡಿ, ಊಟ ನೀಡುತ್ತಿದ್ದ ಕ್ಯಾಂಟೀನ್ಗಳು ಬಂದ್ ಆಗಿದ್ದವು. ಇದರಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬಡವರುಬೇಸರ ವ್ಯಕ್ತಪಡಿಸಿದ್ದರು.
ಈ ಬಗ್ಗೆ ‘ಆಂದೋಲನ’ ದಿನಪತ್ರಿಕೆ ಸಮಗ್ರ ವರದಿ ಪ್ರಕಟಿಸಿತ್ತು. ಇದನ್ನು ಶಾಸಕ ಅನಿಲ್ ಚಿಕ್ಕಮಾದು ಗಮನಿಸಿ ಹಾಗೂ ತಾಲ್ಲೂಕಿನ ಹಲವು ವಿದ್ಯಾರ್ಥಿಗಳು, ಬಡವರು, ಕಾರ್ಮಿಕರು, ಮುಖಂಡರು ದೂರವಾಣಿ ಕರೆ ಮಾಡಿ ಪೊಲೀಸ್ ಕ್ಯಾಂಟೀನ್ ಅನ್ನು ಪ್ರಾರಂಭಿಸಬೇಕೆಂದು ತಮಗೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಎಸ್‌ಪಿ ವಿಷ್ಣುವರ್ಧನ್ ರವರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಯಾವ ಪೊಲೀಸ್ ಕ್ಯಾಂಟೀನ್ ಅಡ್ಡಾ ಆಗಿ ಪರಿವರ್ತನೆಯಾಗಿದೆಯೋ ಅದನ್ನು ಮುಚ್ಚಿಸಿ. ನಮ್ಮ ತಾಲ್ಲೂಕಿನ ಪೊಲೀಸ್ ಕ್ಯಾಂಟೀನ್ ಬಹಳ ಜನರಿಗೆ ಉಪಯುಕ್ತವಾಗಿದೆ. ಅದು ಯಾವುದೇ ಕಾರಣಕ್ಕೂ ಬಂದ್ ಆಗಬಾರದು. ಅದನ್ನು ಮತ್ತೆ ಪ್ರಾರಂಭಿಸಲು ಸಂಬಂಧ ಪಟ್ಟವರಿಗೆ ಸೂಚಿಸಬೇಕೆಂದು ತಿಳಿಸಿದ್ದರು.
ಬಳಿಕ ಎಸ್‌ಪಿ ವಿಷ್ಣುವರ್ಧನ್ ಅವರು ೨ ದಿನಗಳ ಕಾಲ ಪರಿಶೀಲನೆ ನಡೆಸಿ, ಪಟ್ಟಣದಲ್ಲಿ ಪೊಲೀಸ್ ಕ್ಯಾಂಟೀನ್‌ನ್ನು ಮತ್ತೆ ಪ್ರಾರಂಭಿಸಿ ಕೆಲಸ ನಿರ್ವಹಿಸುವಂತೆ ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ್ ಅವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಕ್ಯಾಂಟೀನ್ ನಿರ್ವಾಹಕರಾದ ಉಡುಪಿ ಅರುಣ್ ಅವರು ಪ್ರಾರಂಭಿಸಿದ್ದಾರೆ. ಈಗ ಎಂದಿನಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು, ಪೊಲೀಸರು, ಬಡವರು ಕಡಿಮೆ ದರದಲ್ಲಿ ತಿಂಡಿ, ಊಟವನ್ನು ಪಡೆದುಕೊಳ್ಳುತ್ತಿದ್ದಾರೆ.
” ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಪೊಲೀಸ್ ಕ್ಯಾಂಟೀನ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಅನೇಕ ಜನರಿಗೆ ಉಪಯುಕ್ತವಾಗಿದೆ. ಯಾವುದೇ ಲೋಪಗಳು ಆಗದಿದ್ದರೂ ಬಂದ್ ಆಗಿದ್ದರಿಂದ ಬಡವರಿಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿ ಎಸ್‌ಪಿ ಅವರ ಜೊತೆ ಮಾತನಾಡಿ ಕ್ಯಾಂಟೀನ್ ಅನ್ನು ಮತ್ತೆ ಪ್ರಾರಂಭಿಸಲು ಸೂಚಿಸಿದ್ದು, ಆರಂಭವಾಗಿದೆ.”
-ಅನಿಲ್ ಚಿಕ್ಕಮಾದು, ಶಾಸಕರು
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆಯ ಅಂತಿಮ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಮೈಕೆಲ್…
ಮೈಸೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ…
ಮೈಸೂರು: 2026ರ ಮೊದಲ ದಿನವಾದ ಇಂದು ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಹೊಸ ವರ್ಷದ ಅಂಗವಾಗಿ…
ಮೈಸೂರು: ಹೊಸ ವರ್ಷ ಎಂದು ಮೋಜು ಮಸ್ತಿ ಮಾಡದೇ ರಸ್ತೆ ಬದಿಯ ನಿರಾಶ್ರಿತರಿಗೆ ಹೂದಿಕೆಗಳನ್ನು ನೀಡುವ ಮೂಲಕ ಯುವಕರ ತಂಡ…
ಮೈಸೂರು: ನೂತನ ವರ್ಷವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು.…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ…