Andolana originals

34 ವರ್ಷಗಳ ಬಳಿಕ ಮತ್ತೆ ‘ಕರ್ಣಾಟ ಭಾರತ ಕಥಾಮಂಜರಿ’ ಕೃತಿ

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಮರುಮುದ್ರಣ; ಓದುಗರಿಗೆ ಲಭ್ಯ

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಮತ್ತು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಂಪಾದಕತ್ವದಲ್ಲಿ ಪ್ರಕಟಗೊಂಡ ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿ ಕೃತಿಯು ೩೮ ವರ್ಷಗಳ ಬಳಿಕ ಮರು ಮುದ್ರಣಗೊಂಡಿದೆ.

ಕನ್ನಡ ಸಾಹಿತ್ಯ ಜಿಜ್ಞಾಸುಗಳು, ವಿದ್ವಾಂಸರು, ಸಂಗೀತಗಾರರು, ಗಮಕಿಗಳು, ಕಥೆಗಾರರ ಬಹುಮುಖ್ಯ ಬೇಡಿಕೆಯಾದ ಈ ಮಹತ್ಕೃತಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವೂ ಅತ್ಯಾಸಕ್ತಿ ಯಿಂದ ಮರುಮುದ್ರಣಗೊಳಿಸಿ ಓದುಗರಿಗೆ ಲಭ್ಯವಾಗುವಂತೆ ಮಾಡಿದೆ.

ಕುಮಾರವ್ಯಾಸ ಕವಿಯ ಬಗೆಗೆ ವಿದ್ಯಾರ್ಥಿ ದಿಸೆಯಿಂದಲೂ ಅಧ್ಯಯನ ನಿರತರಾದ ವಿದ್ವಾಂಸ ಪ್ರೊ. ಕೃಷ್ಣಮೂರ್ತಿ ಹನೂರು ಮತ್ತು ಕುಮಾರವ್ಯಾಸ ಭಾರತದ ಎರಡೂವರೆ ಸಾವಿರ ಪದ್ಯಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಅಮೆರಿಕದ ಪ್ರಾಧ್ಯಾಪಕ ಪ್ರೊ.ಎಸ್.ಎನ್.ಶ್ರೀಧರ್ ಮತ್ತು ಪ್ರಸಾರಾಂಗದ ಕ್ರಿಯಾಶೀಲ ನಿರ್ದೇಶಕ ಡಾ.ಎಂ.ನಂಜಯ್ಯ ಹೊಂಗನೂರು ಅವರ ಸಮಾಗಮದಿಂದಾಗಿ ಈ ಸತ್ಕಾರ್ಯ ನೆರವೇರಿದೆ.

ಕರ್ಣಾಟ ಭಾರತ ಕಥಾಮಂಜರಿ ಕೃತಿಯ ಮರುಮುದ್ರಣಕ್ಕೆ ಪ್ರೊ.ಶ್ರೀಧರ್ ಧನ ಸಹಾಯ ಮಾಡಿದ್ದಾರೆ. ಪ್ರೊ. ಕೃಷ್ಣಮೂರ್ತಿ ಹನೂರು ಬಹಳ ಆಸ್ಥೆ ವಹಿಸಿ ಕರಡು ಪರಿಶೀಲನೆ ನಡೆಸಿದ್ದಾರೆ. ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ರಿಯಾ ಯಿತಿ ದರದಲ್ಲಿ ಬೃಹತ್ ಗ್ರಂಥವನ್ನು ಪ್ರಕಟಿಸಿದ್ದಾರೆ.

ಕೃತಿಯ ಹಿನ್ನೆಲೆ: ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ನವರು ಆಸಕ್ತಿಯ ಫಲದಿಂದ ಕರ್ಣಾಟ ಭಾರತ ಕಥಾಮಂಜರಿಯ ಒಂದು ಅಧಿಕೃತ ಜನಪ್ರಿಯ ಪಠ್ಯ ಪ್ರಕಟವಾದದ್ದು ೧೯೫೮ರಲ್ಲಿ ಆ ಕೃತಿಯ ಬೆಲೆ ೨ ರೂ.ಗಳಾಗಿತ್ತು.

೧೯೭೪ರಲ್ಲಿ ಪ್ರಭುಶಂಕರ ಅವರ ಪ್ರಸಾರಾಂಗ ನಿರ್ದೇಶಕತ್ವದ ಅವಽಯಲ್ಲಿ ಪ್ರಕಟಗೊಂಡು ಅದೂ ಒಂದು ಬಗೆಯಲ್ಲಿ ಜನಪ್ರಿಯ ಆವೃತ್ತಿಯೇ ಆಗಿ ೫ ಸಾವಿರ ಪ್ರತಿಗಳು ಮಾರಾಟವಾದವು. ಅದರ ಬೆಲೆ ೨ ರೂ. ಮತ್ತೆ ಕೆ.ಟಿ. ವೀರಪ್ಪ ನಿರ್ದೇಶಕರಾಗಿದ್ದ ೧೯೮೮ರಲ್ಲಿ ಅದೇ ಮೂಲಪ್ರತಿಯ ಮಾದರಿಯನ್ನು ಪುನರ್‌ಮುದ್ರಿಸಿ ೩೦ ರೂ.ಗಳಿಗೆ ೩೦ ಸಾವಿರ ಪ್ರತಿಗಳನ್ನು ಪ್ರಕಟಿಸಿ ಆಸಕ್ತ ಓದುಗರಿಗೆ ಒದಗಿಸಲಾಯಿತು.

ಪ್ರೊ.ಸಿ.ನಾಗಣ್ಣ ಅವರು ನಿರ್ದೇಶಕರಾಗಿದ್ದ ಕಾಲದಲ್ಲಿ ಪ್ರತಿಯ ಅಕ್ಷರ ಕಾರ್ಯ ಜೋಡಣೆ ಆರಂಭವಾಯಿತು. ಪ್ರೊ.ಎಂ.ಜಿ.ಮಂಜುನಾಥ, ಪ್ರೊ.ಎನ್.ಎಂ. ತಳವಾರ, ಪ್ರೊ.ವಿಜಯ ಕುಮಾರಿ ಎಸ್. ಕರಿಕಲ್ ಅವರ ಅವಧಿಯಲ್ಲೂ ೮ ಸಾವಿರ ಷಟ್ಪದಿಗಳ ಬೆರಳಚ್ಚು ಕಾರ್ಯ ಮುಂದುವರಿದು ಪ್ರೊ.ಜ್ಯೋತಿ ಶಂಕರ್ ಅವರು ಕಾವ್ಯದ ಹಸ್ತಪ್ರತಿಯನ್ನು ಪರಿಶೀಲಿಸಿ ಕೊಟ್ಟಿರುತ್ತಾರೆ. ಈಗ ಪ್ರೊ.ನಂಜಯ್ಯ ಹೊಂಗನೂರು ಅವರ ಅಧಿಕಾರದ ಅವಧಿಯಲ್ಲಿ ಕೃತಿಯು ಮರು ಮುದ್ರಣಗೊಂಡು ಓದುಗರ ಕೈ ಸೇರುತ್ತಿದೆ.

ಇಂದು ಮರುಮುದ್ರಣಗೊಂಡಿರುವ ಕೃತಿಯ ಲೋಕಾರ್ಪಣೆ: 

ಮೈಸೂರು: ಮೈಸೂರು ವಿವಿ ಪ್ರಸಾರಾಂಗದಲ್ಲಿ ಮಾ. ೫ರಂದು ಮಧ್ಯಾಹ್ನ ೧೨ ಗಂಟೆಗೆ ಕುಮಾರವ್ಯಾಸ ಮಹಾಕವಿ ವಿರಚಿತ ಕರ್ಣಾಟ ಭಾರತ ಕಥಾ ಮಂಜರಿ ಕೃತಿಯ ಲೋಕಾರ್ಪಣೆ ಮತ್ತು ಪ್ರಸಾರಾಂಗ ಮಾರಾಟ ವಿಭಾಗದ ಗಣಕೀಕೃತ ಲೆಕ್ಕಪತ್ರ ನಿರ್ವಹಣಾ ವ್ಯವಸ್ಥೆಗೆ ಚಾಲನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸ ಪ್ರೊ.ಸಿ.ಪಿ. ಕೃಷ್ಣಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಅಮೆರಿಕ ಪ್ರಾಧ್ಯಾಪಕ ಪ್ರೊ.ಎಸ್.ಎನ್.ಶ್ರೀಧರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರೊ.ಕೃಷ್ಣಮೂರ್ತಿ ಹನೂರು ಕೃತಿ ಕುರಿತು ಮಾತಾಡಲಿದ್ದಾರೆ. ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಭಾಗವಹಿಸಲಿದ್ದಾರೆ.

” ೧೯೯೮ರಲ್ಲಿ ಪ್ರಕಟವಾದ ಪುಸ್ತಕವನ್ನೇ ಮಾದರಿಯಾಗಿಟ್ಟು ಕೊಂಡೇ ಹೊಸದಾಗಿ ಸಂಪಾದನಾ ಕಾರ್ಯಕ್ಕೆ ಕೈಹಾಕದೇ ಓದುಗರಿಗೆ ಸಹಾಯವಾಗುವಂತೆ ಪುಸ್ತಕದ ವಿನ್ಯಾಸ ಹಾಗೂ ಅಕ್ಷರದ ಗಾತ್ರವನ್ನುಹೆಚ್ಚಿಸಿ ಪ್ರಕಟಿಸಲಾಗಿದೆ.”

-ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರಸಾರಾಂಗ ನಿರ್ದೇಶಕ 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

4 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

4 hours ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

4 hours ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

4 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…

4 hours ago

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…

4 hours ago