ಚಿರಂಜೀವಿ ಸಿ.ಹುಲ್ಲಹಳ್ಳಿ
ಮೊದಲ ಬಾರಿಗೆ ದಸರಾದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಹೇಮಾವತಿ, ರೂಪ ಆನೆಗಳೂ ಭಾಗಿ
ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ದೈತ್ಯದೇಹಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ೧೧ ವರ್ಷದ ಹೇಮಾವತಿ ಮತ್ತು ರೂಪ ಆನೆಗಳು ಭಾಗವಹಿಸುತ್ತಿದ್ದು, ಜಂಬೂ ಸವಾರಿಗೆ ಮೆರುಗು ನೀಡಲಿವೆ.
ಆನೆ ಶಿಬಿರಗಳಲ್ಲಿರುವ ಬಹುಪಾಲು ಹೆಣ್ಣಾನೆಗಳ ವಯಸ್ಸು ೫೦ ದಾಟಿರುವುದರಿಂದ ವನ್ಯಜೀವಿ ಕಾಯ್ದೆಯಡಿ ಅವುಗಳನ್ನು ದಸರೆಗೆ ಕರೆತರಲು ಆಗದ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಆನೆಗಳು ಮೈಸೂರಿನ ರಾಜ ಬೀದಿಗಳಲ್ಲಿ ಹೆಜ್ಜೆ ಹಾಕಲು ಸಜ್ಜುಗೊಳಿಸಲಾಗಿದೆ. ಕಳೆದ ಬಾರಿ ಭಾಗವಹಿಸಿದ್ದ ರೋಹಿತ, ಹಿರಣ್ಯ ಮತ್ತು ವರಲಕ್ಷ್ಮೀ ಆನೆಗಳ ಬದಲಾಗಿ ಅಜಾನುಬಾಹು ಶ್ರೀಕಂಠ, ರೂಪ ಮತ್ತು ಹೇಮಾವತಿ ಆನೆಗಳನ್ನು ದಸರಾಗೆ ಪರಿಚಯಿಸಲಾಗುತ್ತಿದೆ. ಜೊತೆಗೆ ಎರಡನೇ ಹಂತದ ಆನೆಗಳನ್ನು ಸಿದ್ಧಗೊಳಿಸುವ ಉದ್ದೇಶದಿಂದ ತರಬೇತಿಗೆ ಅರಣ್ಯ ಇಲಾಖೆ ಮುಂದಾಗಿದೆ.
ಹುಲಿಗೆ ಅಂಜದ ದೈತ್ಯ ಶ್ರೀಕಂಠ!:
೨೦೧೪ರಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದಿದ್ದ ದೈತ್ಯ ಕಾಡಾನೆಯೊಂದಕ್ಕೆ ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆನಪಿಗಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂದು ಹೆಸರಿಡಲಾಗಿದೆ. ೨೦೧೪ರಲ್ಲಿ ಶನಿವಾರಸಂತೆ ಅರಣ್ಯ ಭಾಗದಲ್ಲಿ ಸೆರೆಹಿಡಿದಿದ್ದ ನಾಲ್ಕು ಆನೆಗಳ ಪೈಕಿ ಅಜಾನುಬಾಹು ಆನೆಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂದು ಹೆಸರಿಡಲಾಗಿತ್ತು. ಮತ್ತಿಗೋಡು ಆನೆ ಶಿಬಿರದಲ್ಲಿರುವ ಶಾಂತ ಸ್ವಭಾವದ ೫೬ ವರ್ಷದ ಈ ಆನೆ ೫,೫೦೦ ತೂಕ ಹೊಂದಿದೆ.
ಕಳೆದ ವರ್ಷ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟ ಪರಾಕ್ರಮಿ ಅರ್ಜುನನಂತೆ ಭಾರಿ ಮೈಕಟ್ಟು ಹೊಂದಿರುವ ಈ ಆನೆಯು ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಳಗಿದೆ. ಅದರಲ್ಲೂ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಯಾವ ಅಂಜಿಕೆಯಿಲ್ಲದೇ ಮುನ್ನುಗ್ಗುವ ಶ್ರೀಕಂಠ ಅಜಾನುಬಾಹು ಅಷ್ಟೇ ಅಲ್ಲದೇ ಧೈರ್ಯಶಾಲಿ ಆನೆ ಆಗಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್:
ವಯಸ್ಸು: ೫೬ ವರ್ಷ
ಎತ್ತರ: ೨.೮೬ ಮೀಟರ್
ಉದ್ದ: ೩.೨೫ ಮೀಟರ್
ತೂಕ: ೫,೫೦೦ ಕೆಜಿ
ಶಿಬಿರ: ಮತ್ತಿಗೋಡು
ಮಾವುತ: ರಾಧಾಕೃಷ್ಣ
ಕಾವಾಡಿ: ಓಂಕಾರ್
ಸರ್ಕಸ್ ಮಾಡುತ್ತಿದ್ದ ರೂಪ!:
ಶ್ರೀಕಂಠನ ಜೊತೆಗೆ ಭೀಮನಕಟ್ಟೆ ಆನೆ ಶಿಬಿರದ ರೂಪ ಮೊದಲ ಬಾರಿಗೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದೆ. ೨೦೧೬ರಲ್ಲಿ ಪ್ರಕೃತಿ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಸ್ ಕಂಪೆನಿಯಿಂದ ರಕ್ಷಿಸಿ ಅರಣ್ಯ ಇಲಾಖೆಯವರು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ಇದು ಎಲ್ಲರ ನೆಚ್ಚಿನ ಆನೆಯಾಗಿz
ರೂಪ
ವಯಸ್ಸು: ೪೪ ವರ್ಷ
ಎತ್ತರ: ೨.೪೫ ಮೀ.
ಉದ್ದ: ೨.೯೦ ಮೀ.
ತೂಕ: ೩,೫೦೦ ಕೆ.ಜಿ
ಶಿಬಿರ: ಭೀಮನಕಟ್ಟೆ
ಮಾವುತ: ಮಂಜುನಾಥ್
ಕಾವಾಡಿ: ಮಂಜು
ಶಾಂತ ಸ್ವರೂಪಿ ೧೧ ವರ್ಷದ ಹೇಮಾವತಿ: ಪ್ರಪ್ರಥಮ ಬಾರಿಗೆ ಮೈಸೂರಿನ ರಾಜ ಬೀದಿಗಳಲ್ಲಿ ಹೆಜ್ಜೆ ಹಾಕಲು ಶಾಂತ ಸ್ವಭಾವದ ೧೧ ವರ್ಷದ ಹೇಮಾವತಿ ಆನೆ ಸಜ್ಜಾಗಿದೆ. ೨೦೧೪ರ ನವೆಂಬರ್ ತಿಂಗಳಲ್ಲಿ ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಜನಿಸಿದೆ. ಅಲ್ಲಿಯೇ ಆಡಿ ಬೆಳೆದಿದೆ. ಮನುಷ್ಯರನ್ನು ಚೆನ್ನಾಗಿ ಹೊಂದಿಕೊಂಡಿದೆ. ಶಿಬಿರದ ವಾತಾವರಣಕ್ಕೆ ಹೊಂದಿಕೊಂಡಿರುವ ಹೇಮಾವತಿ, ಮಾವುತರು ನೀಡಿದ ತರಬೇತಿಯಿಂದ ಶಿಸ್ತು, ಶಾಂತ ಸ್ವಭಾವ ಮತ್ತು ಕೌಶಲಗಳ ಮೂಲಕ ಗಮನ ಸೆಳೆದಿದೆ. ಇದೀಗ ಈ ಆನೆಯು ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.
ಹೇಮಾವತಿ
ವಯಸ್ಸು: ೧೧ ವರ್ಷ
ಎತ್ತರ: ೨.೨೫ ಮೀ.
ಉದ್ದ: ೨.೮ ಮೀ.
ತೂಕ: ೨,೫೦೦ ಕೆಜಿ
ಶಿಬಿರ: ದುಬಾರೆ
ಮಾವುತ: ನಯಾಜ್ ಪಾಷ
ಕಾವಾಡಿ: ಜೆ.ಎನ್.ಅಬಿಲ್
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…