ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಎದುರಿಸಿದ ಬಹುದೊಡ್ಡ ಸವಾಲು ನರಹಂತಕ ವೀರಪ್ಪನ್ ಸೆರೆ ಯಿಂದ ರಾಜಕುಮಾರ್ ಅವ ರನ್ನು ಬಿಡಿಸುವುದಾಗಿತ್ತು. ೨೦೦೦ ಜುಲೈ ೩೦, ಭೀಮನ ಅಮಾವಾಸ್ಯೆ ದಿನ ರಾತ್ರಿ. ಗಾಜನೂರಿನಲ್ಲಿ ತಂಗಿದ್ದ ರಾಜಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಮುಖ್ಯಮಂತ್ರಿಗಳಾಗಿದ್ದ ಕೃಷ್ಣ ಅವರಿಗೆ ನೀಡಲು ತನ್ನ ಬೇಡಿಕೆಗಳ ಕ್ಯಾಸೆಟ್ ಒಂದನ್ನು ಪಾರ್ವತಮ್ಮ ರಾಜಕುಮಾರ್ ಅವರ ಕೈಯಲ್ಲಿ ಕೊಟ್ಟಿದ್ದ.
ರಾತ್ರೋರಾತ್ರಿ ಅಲ್ಲಿಂದ ಹೊರಟು ಬಂದ ಪಾರ್ವತಮ್ಮ ರಾಜಕುಮಾರ್ ಅವರು ನೇರವಾಗಿ ಕೃಷ್ಣ ಅವರ ಮನೆಗೆ ತೆರಳುತ್ತಾರೆ. ಅಲ್ಲಿ ನಡೆದ ಘಟನೆಯನ್ನು ವಿವರಿಸಿ, ವೀರ ಪ್ಪನ್ ಕೊಟ್ಟ ಕ್ಯಾಸೆಟ್ಟನ್ನು ಅವರ ಕೈಗಿಡುತ್ತಾರೆ. ಅವತ್ತು ಕೃಷ್ಣ ಅವರಲ್ಲದೆ ಬೇರೆ ಯಾರೇ ಮುಖ್ಯಮಂತ್ರಿ ಆಗಿದ್ದರೂ ಏನಾಗುತ್ತಿತ್ತೋ ಏನೋ. ಅವರ ತಾಳ್ಮೆ, ಸಹನೆ, ಎಲ್ಲಕ್ಕಿಂತ ಹೆಚ್ಚಾಗಿ ವಿವೇಕ ರಾಜಕುಮಾರ್ ಅವರು ಮರಳುವಂತೆ ಮಾಡಿತ್ತು ಎಂದರೆ ತಪ್ಪಿಲ್ಲ. ಅಕ್ಕನನ್ನು ಆ ವೇಳೆಗೆ ಸಮಾಧಾನ ಪಡಿಸಿದ್ದೇ ಅಲ್ಲದೆ, ನಾನಿದ್ದೇನೆ; ಎದೆಗುಂದಬೇಡಿ. ರಾಜಕುಮಾರ್ ಅವರನ್ನು ಮರಳಿ ಕರೆತರುವ ಜವಾಬ್ದಾರಿ ನಮ್ಮದು, ಎಂದದ್ದೇ ಅಲ್ಲದೆ, ನೆರೆಯ ತ. ನಾಡಿನ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ರಾಜಕುಮಾರ್ ಅವರನ್ನು ವೀರಪ್ಪನ್ ಕಪಿಮುಷ್ಟಿಯಿಂದ ಬಿಡಿಸಿ ತರು ವಲ್ಲಿ ಯಶಸ್ವಿಯಾದರು ಎನ್ನುತ್ತಾರೆ ಪಾರ್ವ ತಮ್ಮನವರ ಸೋದರ ಚಿನ್ನೇಗೌಡರು.
ವೀರಪ್ಪನ್ ವಶದಲ್ಲಿ ೧೦೭ ದಿನಗಳ ಕಾಲ ಇದ್ದ ರಾಜಕುಮಾರ್ ಅವರನ್ನು ಅಂತಿಮವಾಗಿ ೧೦೮ನೇ ದಿನ ನೆಡುಮಾರನ್ ತಂಡ ಬಿಡಿಸಿಕೊಂಡು ಬರುವ ವರೆಗೆ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಕೃಷ್ಣ ಅವರಿಗೆ ಪ್ರತಿಕ್ಷಣವೂ ಸವಾಲಿನದಾಗಿತ್ತು.
ಅವರ ಶಿಸ್ತು-ಕೆಲಸ ಸದಾ ನಮಗೆ ಮಾದರಿ
ನಮ್ಮ ತಂದೆಗೆ ಎಸ್.ಎಂ. ಕೃಷ್ಣ ಅವರ ಮೇಲೆ ವಿಶೇಷವಾದ ಗೌರವವಿತ್ತು. ಮುಖ್ಯಮಂತ್ರಿ ಎಂದರೆ ಕೃಷ್ಣ ಅವರ ತರಹ ಇರಬೇಕು ಎಂದು ಹೇಳುತ್ತಿದ್ದರು. ಅವರು ಶಿಸ್ತು ಮತ್ತು ಕೆಲಸ ಸದಾ ನಮಗೆ ಮಾದರಿ. ನಮ್ಮ ತಂದೆಯವರು ಅಪಹರಣ ಆಗಿದ್ದ ಸಂದರ್ಭದಲ್ಲಿ ನಮ್ಮ ಜೊತೆಗೆ ಅವರು ನಿಂತಿದ್ದು, ಯಾವತ್ತೂ ಮರೆಯುವುದಕ್ಕೆ ಸಾಧ್ಯವಿಲ್ಲ. ಅವರಷ್ಟೇ ಅಲ್ಲ, ಅವರ ಕುಟುಂಬದ ಜೊತೆಗೆ ನಮ್ಮ ಕುಟುಂಬಕ್ಕೆ ಒಳ್ಳೆಯ ಒಡನಾಟವಿತ್ತು. ಅವರ ನಿಧನ ನಿಜಕ್ಕೂ ದುಃಖ ತರಿಸುತ್ತದೆ. ಆ ನಷ್ಟ ಯಾವತ್ತಿದ್ದರೂ ನಷ್ಟವೇ. ಅವರಿಗೆ ೯೨ ವರ್ಷ ವಯಸ್ಸಾಗಿತ್ತು ಎಂದು ಸಮಾ ಧಾನಪಟ್ಟುಕೊಂಡರೂ, ಅವರ ಅಗಲಿಕೆಯ ವಿಷಯ ಕೇಳಿದಾಗ ಕಷ್ಟವಾಗುತ್ತದೆ. ಅವರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕೊಡಲಿ, ಅವರ ಕುಟುಂಬದವರ ಜೊತೆಗೆ ನಾವು ಸದಾ ಇದ್ದೇ ಇರುತ್ತೇವೆ. -ಶಿವರಾಜಕುಮಾರ್, ಹಿರಿಯ ನಟ
ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…
ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…
ಮಂಡ್ಯ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು. ಮಂಡ್ಯ ತಾಲ್ಲೂಕಿನ…
ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…
ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…
ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…