Andolana originals

ಸಾವಿರಾರು ಸೈನಿಕರ ಜೀವನ್ಮರಣದ ಪ್ರಶ್ನೆಯಾಗಿತ್ತು

ಕೈಲಾಶ್ ಶ್ರೇಣಿಯ ರೇಚಿನ್ ಲಾ ಪಾಸ್‌ನತ್ತ ಮುನ್ನುಗ್ಗುತ್ತಿರುವ ಚೀನಾದ ಟ್ಯಾಂಕ್‌ಗಳನ್ನು ತಡೆಯಲು ಒಂದೇ ಒಂದು ಗುಂಡು ಹಾರಿಸಿದರೂ ಆ ದೇಶದೊಂದಿಗೆ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡುವ ಸಾಧ್ಯತೆಗಳು ದಟ್ಟವಾಗಿದ್ದವು. ಅಂಥದೊಂದು ಪರಿಸ್ಥಿತಿಯನ್ನು ಬಯಸಿಯೇ ಭಾರತದ ಸೇನೆಯನ್ನು ಪ್ರಚೋದಿಸಲು ಚೀನಾ ಮುಂದಾಗಿದೆಯೋ ಏನೋ ಎಂಬ ಸಂಶಯವೂ ಇತ್ತು. ಆ ಸೂಕ್ಷ್ಮ ಪರಿಸ್ಥಿತಿಯಲ್ಲಿ ಜನರಲ್ ನರವಣೆ ಮೌನವಾಗಿ ಕುಳಿತಿದ್ದರು. ‘ಗೋಡೆಯ ಮೇಲಿನ ಗಡಿಯಾರದ ಟಿಕ್ ಟಿಕ್ ಶಬ್ದವೊಂದನ್ನು ಬಿಟ್ಟರೆ ಬೇರೇನೂ ಕೇಳಿಸುತ್ತಿರಲಿಲ್ಲ, ಜೂನ್ ತಿಂಗಳಿಂದ ಮಾಡಿಕೊಂಡಿರುವ ಎಲ್ಲ ಸಿದ್ಧತೆಗಳ ಬಗ್ಗೆ ಮನದಲ್ಲೇ ವಿಶ್ಲೇಷಣೆ ನಡೆಯುತ್ತಿತ್ತು, ಸರಬರಾಜು, ತರಬೇತಿ, ದುರ್ಗಮ ಭೂ ಪ್ರದೇಶ, ಹೊಸ ಪಡೆಗಳ ಗಸ್ತು ತಿರುಗುವಿಕೆ, ಯಾಂತ್ರೀಕೃತ ಪಡೆಗಳ ಸೇರ್ಪಡೆ ಎಲ್ಲವೂ ಈ ಕ್ಷಣಕ್ಕೆ ಸಾಕ್ಷಿಯಾಗಿವೆ. ಅದು ಮಕ್ಕಳು ಮರಳಿನಲ್ಲಿ ಮಾದರಿಗಳನ್ನು ನಿರ್ಮಿಸಿ ಆಡುವ ಯುದ್ಧದ ರೀತಿಯ ಆಟವಾಗಿರಲಿಲ್ಲ.

ಮುಂದಿನ ಕೆಲವೇ ನಿಮಿಷಗಳಲ್ಲಿ ಅವರು ನೀಡುವ ಯಾವುದೇ ಆದೇಶ ಸಾವಿರಾರು ಸೈನಿಕರ ಜೀವನ್ಮರಣದ ಪ್ರಶ್ನೆಯೂ ಆಗಿತ್ತು. ಇಂಥ ಸಂದರ್ಭದಲ್ಲಿ ಏನು ಮಾಡಬೇಕೆಂದು ಮನಸ್ಸು ಸ್ಪಷ್ಟವಾಗಿ ಹೇಳುತ್ತಿತ್ತಾದರೂ ಅದು ಸಂಪೂರ್ಣವಾಗಿ ಹರಳುಗಟ್ಟಿರಲಿಲ್ಲ. ಏಕೆಂದರೆ, ಖಂಡಿತವಾಗಿಯೂ ಅದು ಸುಲಭದ ತೀರ್ಮಾನವಾಗಿರಲಿಲ್ಲ. ಕೆಲವು ಕ್ಷಣಗಳ ನಂತರ ಜನರಲ್ ನರವಣೆ ತಮ್ಮ ನಿರ್ಧಾರವನ್ನು ಕೈಗೊಂಡರು. ‘ಮೊದಲ ಗುಂಡು ನಾವು ಹಾರಿಸುವುದಿಲ್ಲ’ ಎಂದು ಜನರಲ್ ಯೋಗೇಶ್ ಜೋಶಿ ಅವರಿಗೆ ಸೂಚನೆ ಕೊಟ್ಟರು. ನಾವೇ ಮೊದಲು ಗುಂಡು ಹಾರಿಸಿದರೆ, ‘ನಾವಾಗೇ ಈ ಯುದ್ಧವನ್ನು ಆರಂಭಿಸಿಲ್ಲ, ಭಾರತೀಯ ಯೋಧರು ನಮ್ಮ ಮೇಲೆ ಗುಂಡು ಹಾರಿಸಿದ್ದಕ್ಕೆ ನಾವು ಪ್ರತಿದಾಳಿಮಾತ್ರ ಮಾಡಿದ್ದೇವೆ’ ಎಂದು ಸಮರ್ಥಿಸಿಕೊಳ್ಳುವುದಕ್ಕೆ ಅವರಿಗೆಸಾಧ್ಯವಾಗುತ್ತದೆ ಹಾಗೂ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಲು ಕಾರಣವೂ ಸಿಗುತ್ತದೆ’ ಎಂಬುದು ಜನರಲ್ ನರವಣೆ ಅವರ ಅಭಿಪ್ರಾಯವಾಗಿತ್ತು ಎಂದು ಪುಸ್ತಕವನ್ನು ಆಧರಿಸಿ ಪತ್ರಿಕೆ ವಿವರಿಸಿದೆ…

ಫಲಿಸಿದ ಯುದ್ಧತಂತ್ರ: ಗುಂಡು ಹಾರಿಸುವ ಬದಲು ಭಾರತದ ಮಧ್ಯಮ ಗಾತ್ರದ ಫಿರಂಗಿಗಳನ್ನು ರೇಚಿನ್ ಲಾ ಪಾಸ್‌ನ ಮುಂಭಾಗದಲ್ಲಿರುವ ಇಳಿಜಾರುಗಳಲ್ಲಿ ಚೀನಾದ ಸೈನಿಕರತ್ತ ಮುಖ ಮಾಡಿ ನಿಯೋಜಿಸುವಂತೆ ಜನರಲ್ ನರವಣೆ ಅವರು ಆದೇಶಿಸಿದರು. ಭಾರತದ ಗಡಿಯತ್ತ ಮುನ್ನುಗ್ಗುವ ಪ್ರಯತ್ನವನ್ನು ಚೀನಾದ ಟ್ಯಾಂಕ್‌ಗಳು ತಕ್ಷಣ ನಿಲ್ಲಿಸದಿದ್ದರೆ ಭೌತಿಕವಾಗಿ ಹತ್ತಿರದಲ್ಲೇ ಇರುವ ಚೀನಿ ಸೈನಿಕರನ್ನು ಮೇಲ್ಭಾಗದಿಂದ ಸುಲಭವಾಗಿ ಗುರಿಯಾಗಿಸಿಕೊಳ್ಳುವ ರೀತಿಯಲ್ಲಿ ನಮ್ಮ ಫಿರಂಗಿಗಳನ್ನು ನಿಯೋಜಿಸುವುದು, ಗುಂಡು ಹಾರಿಸದೇ ನಾವು ಚೀನಿ ಸೈನಿಕರನ್ನು ತಡೆಗಟ್ಟುವುದಕ್ಕೆ ಉಳಿದಿದ್ದ ಏಕೈಕ ಅಂತಿಮ ಉಪಾಯವಾಗಿತ್ತು, ಭಾರತದ ಗಡಿಯಿಂದ ಕೆಲವೇ ಮೀಟರ್ ದೂರದಲ್ಲಿದ್ದ ಚೀನಿಯರ ಟ್ಯಾಂಕ್ಗಳ ಚಲನೆ ಸ್ಥಗಿತವಾಯಿತು. ಭಾರತದ ಗಡಿಯಿಂದ ತುಸು ದೂರದಲ್ಲಿಯೇ ಚೀನಾದ ಟ್ಯಾಂಕ್‌ಗಳು ನಿಂತವು. ಭಾರತದ ಮಧ್ಯಮ ಗಾತ್ರದ ಟ್ಯಾಂಕ್‌ಗಳಿಗೆ ಚೀನಿಯರ ಲಘು ಟ್ಯಾಂಕ್‌ಗಳು ನಿಜಕ್ಕೂ ಸಮನಾಗಿರಲಿಲ್ಲ. ಆದರೂ ಒಂದು ಪೂರ್ಣ ಪ್ರಮಾಣದ ಯುದ್ಧಕ್ಕೆ ಹೋಗುವುದಕ್ಕೆ ಅದು ಸರಿಯಾದ ಸಮಯವಾಗಿರಲಿಲ್ಲ. ಮಧ್ಯಮ ಗಾತ್ರದ ಫಿರಂಗಿಗಳನ್ನು ಚೀನಿಯರತ್ತ ಮುಖ ಮಾಡಿ ನಿಯೋಜಿಸುವುದು ಒಂದು ರೀತಿಯ ಜಾಣ ನಡೆಯಾಗಿತ್ತು, ಜನರಲ್ ನರವಣೆ ಅವರು ಮಾಡಿದ ರಣತಂತ್ರ ಕೆಲಸ ಮಾಡಿತು, ಚೀನಾದ ಸೈನ್ಯವೇ ಮೊದಲು ಕಣ್ಣು ಮಿಟುಕಿಸಿತು ಎಂದು ಆ.೩೧ರ ರಾತ್ರಿ ನಡೆದ ವಿದ್ಯಮಾನಗಳನ್ನು ಎಳೆಎಳೆಯಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ‘ದಿ ಕ್ಯಾರವಾನ್’ ವರದಿ ಮಾಡಿದೆ.

ಚೀನಾದ ಟ್ಯಾಂಕ್‌ಗಳ ಚಲನೆ ನಿಂತಿದ್ದರಿಂದಾಗಿ ಬಿಕ್ಕಟ್ಟು ಕೊನೆಗೊಂಡಿರಲಿಲ್ಲವಾದರೂ ಗರಿಷ್ಟ ಅಪಾಯದ ಕ್ಷಣ ಮರೆಯಾಗಿತ್ತು. ಮರುದಿನ ಬೆಳಿಗ್ಗೆ ಎರಡೂ ಕಡೆಯವರು ಚುಶುಲ್-ವೋಲ್ಡೋ ಸಭೆಯ ಸ್ಥಳದಲ್ಲಿ ಫ್ಲ್ಯಾಗ್ ಸಭೆ ನಡೆಸಲು ಒಪ್ಪಿಕೊಂಡರು. ಕೈಲಾಸ ಪರ್ವತ ಶ್ರೇಣಿಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಲಾಗಿತ್ತು, ಭಾರತವು ಯುದ್ಧತಂತ್ರದ ಪ್ರಯೋಜನವನ್ನು ಸಹ ತಕ್ಕಮಟ್ಟಿಗೆ ಪಡೆದುಕೊಂಡಿತ್ತು.

” ಕರ್ತವ್ಯನಿರತ ಸೇನೆಯ ಹಿರಿಯ ಅಧಿಕಾರಿಗಳು ಪುಸ್ತಕ ಬರೆಯುವುದಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳಿವೆ. ಭಾರತೀಯ ಸೇನೆಯ ಸೇವಾ ಕಾಯಿದೆ ೧೯೫೦ ಮತ್ತು ಸೇವಾ ಕಾಯಿದೆ ೧೯೫೪ರ ಪ್ರಕಾರ, ಸೇನಾ ಅಧಿಕಾರಿಗಳು ಕೇಂದ್ರ ಸರ್ಕಾರದ ಪರವಾನಿಗೆ ಇಲ್ಲದೇ ಮಿಲಿಟರಿ ಕಾರ್ಯಾಚರಣೆಗಳು, ಸೂಕ್ಷ್ಮ ಮಾಹಿತಿಗಳು, ರಾಜಕೀಯ ನಿರ್ಧಾರಗಳು ಹಾಗೂ ಸೇವಾಮಾಹಿತಿ ಕುರಿತಂತೆ ಪುಸ್ತಕಗಳನ್ನು ಬರೆಯುವಂತಿಲ್ಲ.  ಅಷ್ಟೇ ಅಲ್ಲ, ಯಾವುದೇಮಾಧ್ಯಮದಲ್ಲಿ ಲೇಖನಗಳನ್ನು ಬರೆಯುವುದು, ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದು, ಭಾಷಣ, ಉಪನ್ಯಾಸ ಮಾಡುವುದಕ್ಕೂ ಅವಕಾಶ ಇರುವುದಿಲ್ಲ. ಈ ನಿಯಮಗಳನ್ನು ಉಲ್ಲಂಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವೂ ಕೇಂದ್ರ ಸರ್ಕಾರಕ್ಕಿದೆ. ಈ ಎಲ್ಲ ನಿಯಮಗಳು ನಿವೃತ್ತ ಸೇನಾ ಅಧಿಕಾರಿಗಳಿಗೂ ಅನ್ವಯವಾಗುತ್ತವೆಯೋ ಎಂಬ ಸ್ಪಷ್ಟತೆ ಇಲ್ಲ. ಆದರೆ, ಲೆಫ್ಟಿನೆಂಟ್ ಜನರಲ್ ಅಥವಾ ಅದಕ್ಕಿಂತ ಉನ್ನತ ರ‍್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಸೇನಾ ಕಾರ್ಯಾಚರಣೆ ಕುರಿತಂತೆ ಪುಸ್ತಕ ಪ್ರಕಟಣೆ ಮಾಡುವ ಮೊದಲು ರಕ್ಷಣಾ ಇಲಾಖೆ ಮತ್ತು ಸೇನಾ ಪ್ರಧಾನ ಕಚೇರಿಗೆ ಮಾಹಿತಿ ನೀಡುವುದು ಕಡ್ಡಾಯ ಎಂಬ ನಿಯಮವಿದೆ ಎಂದೂ ಹೇಳಲಾಗುತ್ತದೆ. ವಿಶೇಷವಾಗಿ ಗಡಿಯಲ್ಲಿ ನಡೆಯುವ ಸಂಘರ್ಷಗಳು ಮತ್ತು ಯುದ್ಧದಂಥ ಸ್ಥಿತಿಯ ಕುರಿತಂತೆ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಮೊದಲು ಪೂರ್ವ ಅನುಮತಿ ಪಡೆಯಲೇಬೇಕು ಎಂದೂ ಹೇಳಲಾಗುತ್ತಿದೆ.”

 

 

ಆಂದೋಲನ ಡೆಸ್ಕ್

Recent Posts

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆದಿಚುಂಚನಗಿರಿ : ಬಿಗಿ ಪೊಲೀಸ್‌ ಭದ್ರತೆ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…

5 hours ago

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

6 hours ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

7 hours ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

7 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

8 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

8 hours ago