Andolana originals

ರೈಲು ಪ್ರಯಾಣಿಕರಿಗೆ ಕೈಗೆಟುಕುವ ದರದ ‘ಜನತಾ ಆಹಾರ’; ಸಾಮಾನ್ಯ ಪ್ರಯಾಣಿಕರ ಹಸಿವು ನೀಗಿಸಲು ಭಾರತೀಯ ರೈಲ್ವೆ ಉತ್ತಮ ಹೆಜ್ಜೆ

ಮೈಸೂರು: ರೈಲು ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ) ಮೂಲಕ ಪರಿಚಯಿಸಿದ್ದ ‘ಜನತಾ ಆಹಾರ’ವನ್ನು ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಿಸಲು ರೈಲುನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ಎಕಾನಮಿ ದರ್ಜೆಯ ಊಟ-ತಿಂಡಿ ದೊರೆಯುವಂತೆ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಈ ಮೊದಲು ರೈಲು ನಿಲ್ದಾಣದಲ್ಲಿನ ಐಆರ್‌ಸಿಟಿಸಿ ಕ್ಯಾಟರಿಂಗ್ ಮಳಿಗೆಗಳಲ್ಲಿ ಜನತಾ ಆಹಾರ ದೊರೆಯುತಿತ್ತು. ಆದರೆ, ಹೆಚ್ಚಿನ ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ರೈಲ್ವೆ ಮಂಡಳಿಯು ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಲು ಆರ್ಥಿಕ ಮಿತವ್ಯಯದ ಜನತಾ ಆಹಾರವನ್ನು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಿಗೆ ತಂದಿದೆ.

ಪ್ರಸ್ತುತ ಮೈಸೂರು ಸೇರಿದಂತೆ 5 ರೈಲು ನಿಲ್ದಾಣಗಳಲ್ಲಿ ಜನತಾ ಆಹಾರ ಲಭ್ಯವಿದೆ. ನೈಋತ್ಯ ರೈಲ್ವೆ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಕೆಎಸ್ ಆರ್, ಯಶವಂತಪುರ, ವಿಜಯಪುರ ಹಾಗೂ ಬಳ್ಳಾರಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರಿಗೆ ಈ ಎಕಾನಮಿ ಊಟ ದೊರೆಯಲಿದೆ.

ಎರಡನೇ ದರ್ಜೆಯ ಸಾಮಾನ್ಯ ಬೋಗಿಗಳು ಬರುವ ಪ್ಲಾಟ್‌ ಫಾರಂಗಳಲ್ಲಿ ಊಟದ ಕೌಂಟರ್‌ಗಳು ಇದ್ದು, ಭಾರತೀಯ ರೈಲ್ವೆ ಜಾಲದಾದ್ಯಂತ ಸುಮಾರು 100 ರೈಲು ನಿಲ್ದಾಣಗಳಲ್ಲಿ 150ಕ್ಕೂ ಹೆಚ್ಚು ಕೌಂಟರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ದಕ್ಷಿಣ ಭಾರತದಲ್ಲಿ ನೈಋತ್ಯ ರೈಲ್ವೆಯು 34ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲು ವ್ಯವಸ್ಥೆ ಮಾಡಿದೆ ಮತ್ತು ದಿನ ಕಳೆದಂತೆ ಈ ಜನತಾ ಆಹಾರ ಕೌಂಟರ್‌ಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ನವೀನ ಸೌಲಭ್ಯಗಳನ್ನು ಒದಗಿಸಲು ಗಮನಹರಿಸಿದೆ.

ಪ್ರಯಾಣಿಕರನ್ನು ಉಲ್ಲಾಸದಿಂದ ಇರಿಸಲು ಮಾರ್ಗದುದ್ದಕ್ಕೂ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ತಂಪು ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಿದೆ. ಇದಲ್ಲದೆ, ಸಾಮಾನ್ಯ ಕೋಚ್ ಪ್ರಯಾಣಿಕರಿಗೆ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ‘ಜನತಾ ಆಹಾರ’ ವನ್ನು 20 ಮತ್ತು 50 ರೂ.ಗಳಿಗೆ ನೀಡಲಾಗಿದೆ. ಈ ಕಾರ್ಯಕ್ರಮಗಳು ಪ್ರಯಾಣಿಕರ ಯೋಗಕ್ಷೇಮವನ್ನು ಕೇಂದ್ರೀಕರಿಸುತ್ತವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಏನೇನು ಇರಲಿದೆ?

20 ರೂ.ಗಳಿಗೆ ಉಪ್ಪಿನಕಾಯಿ ಸ್ಯಾಸೆ ಜೊತೆಗೆ ಜನತಾ ಆಹಾರ ದೊರೆಯಲಿದೆ. 325 ಗ್ರಾಂ ಪೂರಿ ಮತ್ತು ಬಜ್ಜಿ ಅಥವಾ 200 ಗ್ರಾಂ ಚಿತ್ರಾನ್ನ ಅಥವಾ 200 ಗ್ರಾಂ ಮೊಸರನ್ನ ಅಥವಾ 200 ಗ್ರಾಂ ಹುಳಿಅನ್ನ ಇಲ್ಲವೇ 200 ಗ್ರಾಂ ದಾಲ್-ಕುಲ್ಲ ದೊರೆಯಲಿದೆ. 50 ರೂ.ಗಳಿಗೆ ದಕ್ಷಿಣ ಭಾರತ ಶೈಲಿಯ ಬಗೆ ಬಗೆಯ 350 ಗ್ರಾಂ ಚಿತ್ರಾನ್ನ, ಮೊಸರನ್ನ, ಹುಳಿಅನ್ನ ಉಳ್ಳ ಕಾಂಬೋಮೀಲ್ ಇಲ್ಲವೇ ಪೊಂಗಲ್, ಮಸಾಲೆ ದೋಸೆಗಳನ್ನು ಪಡೆಯಬಹುದು. 3 ರೂ.ಗೆ 200 ಮಿಲಿ ಲೀಟ‌ರದ ಸೀಲ್ ವಾಟರ್ ಗ್ಲಾಸ್ ದೊರೆಯಲಿದೆ.

ರೈಲುಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಈವರೆಗೆ ಕೇಟರಿಂಗ್ ಸ್ಟಾಲ್‌ಗಳಲ್ಲಿ ಲಭ್ಯವಿದ್ದ ಜನತಾ ಊಟ ಯೋಜನೆಯನ್ನು ಈಗ ಪ್ಲಾಟ್ ಫಾರ್ಮ್ ಕೌಂಟರ್‌ಗಳಲ್ಲಿ ಪ್ರಯಾಣಿಕರು ಸುಲಭವಾಗಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಕಾಯ್ದಿರಿಸದ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆರೋಗ್ಯಕರ ಮತ್ತು ಕೈಗೆಟಕುವ ಆಹಾರವನ್ನು ಪಡೆಯುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಅರಿತ ಭಾರತೀಯ ರೈಲ್ವೆಯು ಎಕಾನಮಿ ಊಟ ‘ಜನತಾ ಆಹಾರ’ ಯೋಜನೆಯನ್ನು ಪರಿಚಯಿಸಿದೆ. ನೈಋತ್ಯ ರೈಲ್ವೆ ವಲಯದ ಎಲ್ಲ ಪ್ರಮುಖ ಕೇಂದ್ರಗಳಲ್ಲೂ ಎಕಾನಮಿ ಊಟದ ಕೌಂಟರ್‌ಗಳು ಇರಲಿವೆ.

-ಡಾ.ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ

ಗಿರೀಶ್ ಹುಣಸೂರು

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ನಿವಾಸಿಯಾದ ನಾನು 1999ರಿಂದ ಪತ್ರಕರ್ತನಾಗಿ ಕಾರ್ಯ ನಿರ್ವಹಣೆ, 1999ರಿಂದ ಮೂರು ವರ್ಷ ವಿಜಯಕರ್ನಾಟಕ ಪತ್ರಿಕೆ ಅರೆಕಾಲಿಕ ವರದಿಗಾರ, ಮೈಸೂರು ಮಿತ್ರ, ಬಳಿಕ ಮೈಸೂರಿನ ಮಹಾನಂದಿ, ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹೊಸದಿಗಂತ, ಉದಯವಾಣಿ ಪತ್ರಿಕೆಗಳಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಣೆ, ಉದಯವಾಣಿ ಪತ್ರಿಕೆ ಮೈಸೂರು ಬ್ಯುರೋ ಮುಖ್ಯಸ್ಥನಾಗಿ ಆರು ವರ್ಷ ಕಾರ್ಯನಿರ್ವಹಣೆ ಮಾಡಿದ್ದು, ಕಳೆದ ಒಂದೂವರೆ ವರ್ಷಗಳಿಂದ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ.

Recent Posts

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

1 hour ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

1 hour ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

1 hour ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

1 hour ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

1 hour ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

2 hours ago