Andolana originals

ಮೊದಲ ಹಂತದಲ್ಲಿ193 ಸರ್ಕಾರಿ ಮಾಂಟೆಸ್ಸರಿ

ಅಂಗನವಾಡಿ ನೌಕರರ ಮುಷ್ಕರ ಮುಗಿಯುತ್ತಿದ್ದಂತೆ ತರಗತಿ ಶುರು…

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಯೋಜನೆಯಡಿ ಸರ್ಕಾರಿ ಮಾಂಟೆಸ್ಸರಿ (ಎಲ್‌ಕೆಜಿ, ಯುಕೆಜಿ) ಆರಂಭಕ್ಕೆ ಜಿಲ್ಲೆಯಲ್ಲೂ ಸಾಂಕೇತಿಕವಾಗಿ ಚಾಲನೆ ದೊರಕಿದ್ದು, ಮೊದಲನೇ ಹಂತದಲ್ಲಿ ೧೯೩ ಅಂಗನವಾಡಿಗಳಲ್ಲಿ ಮಾಂಟೆಸ್ಸರಿ ತರಗತಿಗಳು ಆರಂಭವಾಗಲಿವೆ.

ಅಂಗನವಾಡಿ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಕುಳಿತಿರುವ ಕಾರಣ ಮಾಂಟೆಸ್ಸರಿ ತರಗತಿಗಳು ಮುಷ್ಕರ ಅಂತ್ಯಗೊಂಡ ನಂತರ ಶುರುವಾಗಲಿವೆ. ಕರ್ನಾಟಕದಲ್ಲಿ ಅಂಗನವಾಡಿಗಳು ಆರಂಭಗೊಂಡು ೫೦ ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಳೆದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕಪಡೆ ಲೋಕಾರ್ಪಣೆ ಹಾಗೂ ಗೃಹಲಕ್ಷ್ಮಿ ಬ್ಯಾಂಕ್‌ಗೆ ಮುಖ್ಯಮಂತ್ರಿ ಚಾಲನೆ ಕೊಟ್ಟರು. ಇದೇ ವೇಳೆ, ವರ್ಚುವಲ್ ಮೂಲಕ ಆಯಾ ಜಿಲ್ಲೆಗಳಲ್ಲಿ ಮಾಂಟೆಸ್ಸರಿ ತರಗತಿಗಳ ಪ್ರಾರಂಭಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ವರ್ಚುವಲ್ ಕಾರ್ಯಕ್ರಮವನ್ನು ಚಾ.ನಗರದ ರಾಮಸಮುದ್ರದ ೪ನೇ ಅಂಗನವಾಡಿ ಕೇಂದ್ರದಲ್ಲಿಯೂ ಆಯೋಜನೆ ಮಾಡಲಾಗಿತ್ತು.

೩ರಿಂದ ೬ವರ್ಷದ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿದ್ದು ಜಿಲ್ಲೆಯಲ್ಲಿ ಒಟ್ಟು ೧,೪೪೪ ಕೇಂದ್ರಗಳಿವೆ. ಈ ಪೈಕಿ ೨೯೩ ಕೇಂದ್ರಗಳಲ್ಲಿ ಮಾಂಟೆಸ್ಸರಿ ಶಿಕ್ಷಣ (ಪೂರ್ವ ಪ್ರಾಥಮಿಕ ಶಿಕ್ಷಣ) ನೀಡಲು ಗುರುತಿಸಿ ಅಲ್ಲಿನ ಅಂಗನವಾಡಿಗಳ ಮೇಲ್ವಿಚಾರಕಿಯರಿಗೆ ತರಬೇತಿ ನೀಡಲಾಗಿದೆ. ಮೊದಲನೇ ಹಂತದಲ್ಲಿ ೧೯೩ ಕಡೆ ಮಾಡಲಾಗಿದ್ದು,೨ನೇ ಹಂತದಲ್ಲಿ ಇನ್ನು ೧೦೦ ಕಡೆ ೧೫ರಿಂದ ೨೦ದಿನಗಳಲ್ಲಿ ಮಾಂಟೆಸ್ಸರಿ ಪ್ರಾರಂಭಿಸುವ ಸಿದ್ಧತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ. ಹೀಗೆ ಹಂತಹಂತವಾಗಿ ಎಲ್ಲೆಡೆ ಮಾಂಟೆಸ್ಸರಿ ತೆರೆಯುವ ಇರಾದೆ ಸರ್ಕಾರದ್ದಾಗಿದೆ. ಸಿಡಿ, ಪೆನ್‌ಡ್ರೈವ್ ಬಳಸಿ ಸ್ಮಾರ್ಟ್ ಕ್ಲಾಸ್ ಮಾಡುವುದರಿಂದ ಇದಕ್ಕೆ ಬೇಕಾದ ನೆಟ್ ವರ್ಕ್ ಇತ್ಯಾದಿ ಸಿದ್ದತೆಯನ್ನು ಮೊದಲನೇ ಹಂತದಲ್ಲಿ ಶುರುವಾಗುವ ಅಂಗನವಾಡಿ ಕೇಂದ್ರಗಳಲ್ಲಿ ಮಾಡಿಕೊಳ್ಳಲಾಗಿದೆ.೨ನೇ ಹಂತದಲ್ಲಿ ಪ್ರಾರಂಭಮಾಡುವ ಮಾಂಟೆಸ್ಸರಿಗಳಲ್ಲಿ ಇದೇ ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ:-ವನ್ಯಜೀವಿಗಳಿಂದ ರಕ್ಷಿಸಿಕೊಳ್ಳಲು ಜಾಲರಿ ತಂತಿಬೇಲಿಗೆ ಮೊರೆ

ಕಟ್ಟಡ ವ್ಯವಸ್ಥಿತವಾಗಿರುವ ಅದರಲ್ಲಿಯೂ ಸರ್ಕಾರಿ ಶಾಲಾ ಸಮುಚ್ಚಯದ ಒಳಗಿರುವ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಕವಾಗಿ ಮಾಂಟೆಸ್ಸರಿ ಶುರು ಕಾಣುತ್ತಿವೆ. ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಯುಸಿ ವ್ಯಾಸಂಗ ಮಾಡಿರುವ ಅಂಗನವಾಡಿ ಮೇಲ್ವಿಚಾರಕಿಯರು ಇರುವ ಕೇಂದ್ರಗಳನ್ನು ಮಾಂಟೆಸ್ಸರಿ ಪ್ರಾರಂಭದ ವೇಳೆ ಆದ್ಯತೆಯಾಗಿ ಪರಿಗಣಿಸಲಾಗಿದೆ.

ಮೊದಲ ಹಂತದಲ್ಲಿ ಯಾವ ಕಡೆ ಎಷ್ಟು ಮಾಂಟೆಸ್ಸರಿ?: 

ಚಾ.ನಗರ ಜಿಲ್ಲೆಯಲ್ಲಿ ಐದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ (ಸಿಡಿಪಿಒ) ಕಚೇರಿಗಳಿದ್ದು ಇದರನುಸಾರ ಚಾಮರಾಜನಗರ ಸಿಡಿಪಿಒ ವ್ಯಾಪ್ತಿಯಲ್ಲಿ ೬೨, ಗುಂಡ್ಲುಪೇಟೆ ಭಾಗದಲ್ಲಿ ೪೩, ಸಂತೇಮರಹಳ್ಳಿ ಭಾಗದಲ್ಲಿ ೨೩, ಕೊಳ್ಳೇಗಾಲ (ಹನೂರು ಸೇರಿ) ವ್ಯಾಪ್ತಿಯಲ್ಲಿ ೬೦ ಮತ್ತು ಯಳಂದೂರಿನ ೩ ಅಂಗನವಾಡಿ ಕೇಂದ್ರಗಳಲ್ಲಿ ಮೊದಲನೇ ಹಂತದಲ್ಲಿ ಮಾಂಟೆಸ್ಸರಿ ಪ್ರಾರಂಭಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.

” ಚಾ.ನಗರ ಜಿಲ್ಲೆಯಲ್ಲಿನ ಒಟ್ಟು ೧,೪೪೪ ಅಂಗನವಾಡಿಗಳ ಪೈಕಿ ೧,೦೮೧ಸ್ವಂತ ಕಟ್ಟಡ ಹೊಂದಿವೆ. ಶಾಲೆ, ಗ್ರಾಪಂ ಕಟ್ಟಡ, ಸಮುದಾಯ ಕಟ್ಟಡ ಹೀಗೆ ಸರ್ಕಾರಿ ಅಧೀನದ ಕಟ್ಟಡಗಳಲ್ಲಿ ಸುಮಾರು ೨೦೦ ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಉಳಿದವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರ್ಕಾರಿ ಮಾಂಟೆಸ್ಸರಿ ಪ್ರಾರಂಭಕ್ಕೂ ಮೊದಲು ಎಲ್ಲ ಅಂಗನವಾಡಿಗಳಿಗೂ ಸ್ವಂತ ಕಟ್ಟಡ ವ್ಯವಸ್ಥೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.”

” ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಭೌತಿಕ ಮಟ್ಟವನ್ನು ಉತ್ತಮ ಪಡಿಸಲು ಮತ್ತು ೧ನೇ ತರಗತಿಗೆ ದಾಖಲಾಗುವ ಸಂದರ್ಭದಲ್ಲಿ ಇತರ ಮಕ್ಕಳ ಜೊತೆ ಸ್ಪರ್ಧೆ ಮಾಡುವ ಮಟ್ಟಕ್ಕೆ ಕೊಂಡೊಯ್ಯಲು ಅನುಕೂಲ ಆಗುವಂತೆ ಅಂಗನವಾಡಿಗಳಲ್ಲಿ ಮಾಂಟೆಸ್ಸರಿಗಳನ್ನು ಸರ್ಕಾರ ಪ್ರಾರಂಭ ಮಾಡಿದೆ.ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ೧೯೩ ಕಡೆ ಮಾಂಟೆಸ್ಸರಿ ಪ್ರಾರಂಭಕ್ಕೆ ಚಾಲನೆ ದೊರಕಿದೆ.”

ಸುರೇಶ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಆಂದೋಲನ ಡೆಸ್ಕ್

Recent Posts

ಮೈಸೂರು| ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಮೈಸೂರು: ರಾಜ್ಯದ ಉಭಯ ಸದನದಲ್ಲಿ ನಿನ್ನೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಅವರು ಸರ್ಕಾರದ ಭಾಷಣವನ್ನು ಮೊಟಕುಗೊಳಿಸಿ ಹೊರ ನಡೆದ ನಡೆಯನ್ನು…

14 mins ago

ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಹೈಕೋರ್ಟ ಗ್ರೀನ್‌ ಸಿಗ್ನಲ್‌

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಬೈಕ್‌ ಟ್ಯಾಕ್ಸಿಗಳಿಗೆ ಲೈಸೆನ್ಸ್‌ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ ತೀರ್ಪು ನೀಡಿದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು…

39 mins ago

ಹನೂರು| ಅಪರಿಚಿತ ವಾಹನ ಡಿಕ್ಕಿ: ಬೈಕ್‌ ಸವಾರ ಸಾವು

ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದು ವಾಪಸ್‌ ಬರುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿಯಾದ…

57 mins ago

ಸಿಸಿ ಕ್ಯಾಮರಾ ಸುಳಿವು ಆಧರಿಸಿ ಇಬ್ಬರು ಜಾನುವಾರು ಕಳ್ಳರ ಬಂಧನ

ನಂಜನಗೂಡು: ಸಿಸಿ ಕ್ಯಾಮರಾ ಸುಳಿವು ಆಧರಿಸಿ ಇಬ್ಬರು ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ನಂಜನಗೂಡು ಟೌನ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆ…

1 hour ago

ಹನೂರು| ಲೊಕ್ಕನಹಳ್ಳಿ-ಒಡೆಯರಪಾಳ್ಯ ಮಾರ್ಗಮಧ್ಯೆ ಎರಡು ಚಿರತೆಗಳು ಪ್ರತ್ಯಕ್ಷ: ಆತಂಕದಲ್ಲಿ ವಾಹನ ಸವಾರರು

ಮಹಾದೇಶ್‌ ಎಂ ಗೌಡ  ಹನೂರು: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಭಕ್ತನ ಮೇಲೆ ಚಿರತೆ…

2 hours ago

ಓದುಗರ ಪತ್ರ: ನಗರ ಸಾರಿಗೆ ಬಸ್‌ಗಳಿಂದ ಪರಿಸರ ಮಾಲಿನ್ಯ

ಮೈಸೂರಿನ ಕುವೆಂಪುನಗರ ಮಾರ್ಗದಲ್ಲಿ ಸಂಚರಿಸುವ ನಗರ ಸಾರಿಗೆಯ ಕೆಲವು ಬಸ್ಸುಗಳಿಂದ ವಿಪರೀತವಾಗಿ ಕಪ್ಪು ಹೊಗೆ ಬರುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಆರೋಗ್ಯದ…

5 hours ago