Andolana originals

ಶಿಕ್ಷಕರ ಜೇಬಿಗೆ ಹೊರೆಯಾದ ಬಿಸಿಯೂಟ

ಎಸ್.ಎಸ್.ಭಟ್

ಬೇಳೆ, ಎಣ್ಣೆಗೆ ಶಿಕ್ಷಣ ಇಲಾಖೆ ವಿಧಿಸಿರುವ ದರವೇ ಶಿಕ್ಷಕರಿಗೆ ಹೊರೆ

ನಂಜನಗೂಡು: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಬಿಸಿಯೂಟ ಶಿಕ್ಷಕರ ಪಾಲಿಗೆ ಅತ್ತ ಉಗುಳಲೂ ಆಗದ, ಇತ್ತ ನುಂಗಲೂ ಆಗದ ಬಿಸಿ ತುಪ್ಪದಂತಾಗಿ, ಜೇಬಿಗೆ ಹೊರೆಯಾಗಿ ಅವರೆಲ್ಲ ಪರದಾಡುವಂತಾಗಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿ ಈಗಾಗಲೇ ೧೨ ದಿನಗಳು ಕಳೆದು ಹೋಗಿವೆ. ಬಿಸಿಯೂಟಕ್ಕೆ ಸರಬರಾಜು ಮಾಡುತ್ತಿರುವ ಎಣ್ಣೆ ಹಾಗೂ ಬೇಳೆಯ ಟೆಂಡರ್ ಈಗಾಗಲೇ ಮುಗಿದಿದ್ದು, ಹೊಸ ಟೆಂಡರ್ ಆಗದೆ ಅವರೆಡೂ ಸರಬರಾಜಾಗುತ್ತಿಲ್ಲ.

ಎಣ್ಣೆ ಹಾಗೂ ಬೇಳೆಯಿಲ್ಲದೆ ಅಡುಗೆ ಹೇಗೆ? ಬಿಸಿಯೂಟ ಹೇಗೆ? ಅದಕ್ಕಾಗಿ ಸರ್ಕಾರವೇ ಬದಲಿ ವ್ಯವಸ್ಥೆಗೆ ಆದೇಶ ನೀಡಿದೆ. ಆ ಆದೇಶವೇ ಈಗ ಶಿಕ್ಷಕರ ಜೇಬಿಗೆ ಕನ್ನ ಕೊರೆಯ ತೊಡಗಿದೆ. ಈವರೆಗೂ ಶಿಕ್ಷಣ ಇಲಾಖೆಯೇ ಟೆಂಡರ್ ಮೂಲಕ ಎಣ್ಣೆ, ಬೇಳೆ ಸೇರಿದಂತೆ ಬಿಸಿಯೂಟದ ಪದಾರ್ಥಗಳನ್ನು ಸರಬರಾಜು ಮಾಡುತ್ತಿತ್ತು.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ೨೨-೫-೨೦೨೬ ಹೊರಡಿಸಲಾದ ಆದೇಶದಲ್ಲಿ ಹೊಸ ಟೆಂಡರ್ ಆಗಿ ಬೇಳೆ ಮತ್ತು ಎಣ್ಣೆ ಸರಬರಾಜಾಗುವವರೆಗೆ ಪರಿವರ್ತನಾ ದರದಲ್ಲಿ ಇವೆರಡನ್ನೂ ಆಯಾ ಶಾಲೆಯ ಶಿಕ್ಷಕರೇ ಖರೀದಿಸಲು ಅನುಮತಿ ನೀಡಿದ ಇಲಾಖೆಯು ಎಣ್ಣೆ ಹಾಗೂ ಬೇಳೆಗೆ ಪ್ರತಿ ಕೆಜಿಗೆ ವಿಧಿಸಿದ ದರವೇ ಈಗ ಶಿಕ್ಷಕರ ಪಾಲಿಗೆ ನುಂಗಲಾರದ ತುತ್ತಾಗಿದೆ.

ಅಂಗಡಿಗಳಲ್ಲಿ ಪ್ರತಿ ಕೆಜಿ ತೊಗರಿ ಬೇಳೆಯ ದರ ಕನಿಷ್ಠ ೧೪೦ ರೂ. ಆದರೆ ಸರ್ಕಾರ ೧೦೫ ರೂ.ಗಳಲ್ಲಿ ಖರೀದಿಸಿ ಎಂದು ಆದೇಶ ನೀಡಿದೆ. ಉಳಿದ ೩೫ ರೂ. ನೀಡುವವರಾರು? ಎಂಬ ಪ್ರಶ್ನೆ ಉದ್ಭವಿಸಿದೆ. ಸೂರ್ಯಕಾಂತಿ ಎಣ್ಣೆ ಕೆಜಿಗೆ ೧೮೦ ರೂ. ಇದ್ದರೆ ಸರ್ಕಾರ ವಿಧಿಸಿರುವ ದರ ೧೬೦ ರೂ. ಹಾಗಾ ದರೆ ೨೦ ರೂ.ಗಳನ್ನು ಯಾರು ನೀಡಬೇಕು?

ಈ ಹಣವನ್ನು ಶಿಕ್ಷಕರು ಎಲ್ಲಿಂದ ಭರಿಸಬೇಕು ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ಮೊಟ್ಟೆ ತಿನ್ನುವ ಪ್ರತಿ ವಿದ್ಯಾರ್ಥಿಗೂ ಶಿಕ್ಷಕರ ಕೈನಿಂದ ತಲಾ ೧.೪೦ ರೂ. ಹೆಚ್ಚುವರಿ ಖರ್ಚಾಗುತ್ತಿದೆ. ಸರ್ಕಾರ ತಲಾ ಒಂದು ಮೊಟ್ಟೆಗೆ ೫.೨೦ ರೂ.ದರ ನಿಗದಿಪಡಿಸಿದರೆ ಅಂಗಡಿಗಳಲ್ಲಿ ಮೊಟ್ಟೆ ಬೆಲೆ ಕನಿಷ್ಠ ೬.೬೦ ರೂ. ಇದೆ.

ಮೊಟ್ಟೆ, ಬೇಳೆ, ಎಣ್ಣೆಯಿಂದಾಗಿ ಬಿಸಿಯೂಟದ ಹೊಣೆಗಾರಿಕೆಯ ಶಿಕ್ಷಕರಿಗೆ ತಲಾ ಒಂದು ಮಗುವಿಗೆ ದಿನಕ್ಕೆ ಕನಿಷ್ಠ ೩ ರೂ. ಹೆಚ್ಚುವರಿ ಖರ್ಚಾಗುತ್ತಿದ್ದು, ೪೦ ಮಕ್ಕಳಿರುವ ಬಿಸಿಯೂಟದ ಶಿಕ್ಷಕರು ದಿನಕ್ಕೆ ೧೨೦ ರೂ.ಗಳನ್ನು ತಮ್ಮ ಜೇಬಿನಿಂದ ಖರ್ಚುಮಾಡಲೇ ಬೇಕಾಗಿರುವುದು ನಮ್ಮ ಶಿಕ್ಷಕರ ಪಾಲಿಗೆ ಬಿಸಿ ತುಪ್ಪವಾಗಿದೆ.

” ಬಿಸಿಯೂಟ ಜವಾಬ್ದಾರಿಯಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು ಎಂದು ರಾಜ್ಯಾದ್ಯಂತ ಹೋರಾಟ ಮಾಡಬೇಕಾದ ಸಂದರ್ಭ ಎದುರಾಗಿದೆ. ಸರ್ಕಾರದ ಆದೇಶದಂತೆ ನಡೆದುಕೊಂಡರೆ ಬಿಸಿಯೂಟದ ಶಿಕ್ಷಕರು ತಮ್ಮ ವೇತನದ ಬಹುಪಾಲನ್ನು ಮಕ್ಕಳ ಊಟಕ್ಕೇ ವ್ಯಯಿಸಬೇಕಾಗುತ್ತದೆ. ಆದ್ದರಿಂದ ನಮಗೆ ಬಿಸಿಯೂಟದ ಉಸಾಬರಿಯೇ ಬೇಡ.”

-ಕೆ.ಬಿ.ಶಶಿಕುಮಾರ್, ಜಿಲ್ಲಾಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

” ಬಿಸಿಯೂಟದ ಬೇಳೆ, ಎಣ್ಣೆ ಹಾಗೂ ಮೊಟ್ಟೆಯ ದರ ಶಿಕ್ಷಕರಿಗೆ ಹೊರೆಯಾಗಿರುವುದು ಇದೀಗ ತಮ್ಮ ಗಮನಕ್ಕೆ ಬಂದಿದ್ದು ತಕ್ಷಣ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸಲಾಗುವುದು.”

-ರಶ್ಮಿ ಮಹೇಶ್, ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ

” ತೊಗರಿ ಬೇಳೆ, ಎಣ್ಣೆ ಹಾಗೂ ಮೊಟ್ಟೆಯಿಂದಾಗಿ ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿರುವ ವಿಷಯ ಇದೀಗ ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಎಂ ಗಮನಕ್ಕೂ ತಂದು ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.”

– ಕೆ.ವಿವೇಕಾನಂದ, ವಿಧಾನ ಪರಿಷತ್ ಸದಸ್ಯ

” ಜೂ.೧೭ರಂದು ಪ್ರಾಥಮಿಕ ಶಿಕ್ಷಕರ ಸಂಘದ ಸರ್ವ ಸದಸ್ಯರ ಸಭೆ ಕರೆದಿದ್ದು, ಬಿಸಿಯೂಟದಿಂದ ಶಿಕ್ಷಕರಿಗೆ ಆಗುತ್ತಿರುವ ತೊಂದರೆ ಕುರಿತು ಚರ್ಚಿಸಿ ಮುಂದಿನ ಕ್ರಮದ ನಿರ್ಣಯ ತೆಗೆದುಕೊಳ್ಳಲಾಗುವುದು.”

– ಚಂದ್ರಶೇಖರ ನುಗ್ಲಿ, ರಾಜ್ಯಾಧ್ಯಕ್ಷ ಪ್ರಾ.ಶಾ.ಶಿ.ಸಂಘ

 

 

 

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

1 hour ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

5 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

5 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

5 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

5 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

5 hours ago