ಅನುಚೇತನ್ ಕೆ.ಎಂ.
ಹಾಪ್‌ಕಾಮ್ಸ್ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯ ಪ್ರಮುಖ ಅಂಶಗಳು:
ನೂತನ ಮಳಿಗೆ ನಿರ್ಮಾಣಕ್ಕೆ ಅನುದಾನ ನೀಡಬೇಕು
ನವೀನ ಮಾದರಿಯ ಆಕರ್ಷಕ ಮಳಿಗೆ ನಿರ್ಮಾಣ ಮಾಡಬೇಕು
ಖಾಯಂ ನೌಕರರ ನೇಮಕಾತಿ ಮಾಡಬೇಕು
ಮೈಸೂರು: ಹಣ್ಣು, ತರಕಾರಿ ಬೆಳೆಯುವ ರೈತರು, ಖರೀದಿಸುವ ಗ್ರಾಹಕರ ಹಿತಚಿಂತನೆಯೊಂದಿಗೆ ತಾಜಾ ತರಕಾರಿಗಳು, ವಿವಿಧ ಹಣ್ಣುಗಳ ವಹಿವಾಟು ನಡೆಸುತ್ತಿರುವ ಜಿಲ್ಲಾ ಹಾಪ್‌ಕಾಮ್ಸ್‌ಗೆ ನಗರದ ಹೊರ ವಲಯಕ್ಕೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಉತ್ಸಾಹ ಬಂದಿದೆ.
ನಗರದ ಹಲವು ಪ್ರಮುಖ ಜಾಗಗಳಲ್ಲಿ ಜಿಲ್ಲಾ ತೋಟಗಾರಿಕೆ ಸಂಘ(ಜಿಲ್ಲಾ ಹಾಪ್‌ಕಾಮ್ಸ್)ವು ಮೈಸೂರು ಜಿಲ್ಲೆ ಹಾಗೂ ನಗರ ಸೇರಿದಂತೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟದ ೩೬ ಮಳಿಗೆಗಳನ್ನು ತೆರೆದಿದ್ದು, ಉತ್ತಮ ರೀತಿಯಲ್ಲಿ ಮಾರಾಟ ಕಾರ್ಯ ನಡೆಸುತ್ತಿದೆ. ಹಾಗಾಗಿ ತೋಟಗಾರಿಕೆ ಇಲಾಖೆಯು ಹಾಪ್‌ಕಾಮ್ಸ್ ಮಳಿಗೆಗಳನ್ನು ನಗರದ ಹೊರವಲಯಕ್ಕೂ, ವಿಸ್ತರಿಸುವ ಚಿಂತನೆ ನಡೆಸುತ್ತಿದೆ.
ಹಾಪ್‌ಕಾಮ್ಸ್ ಕಾರ್ಯವೈಖರಿ ಹೇಗೆ?: ವಿಶೇಷವಾಗಿ ಮಾರಾಟ ಮಳಿಗೆಗಳಲ್ಲಿ ರೈತರಿಂದಲೇ ನೇರವಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಪ್ರತಿದಿನ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸರ್ಕಾರದ ಅನುದಾನವಿಲ್ಲದಿದ್ದರೂ ಹಾಪ್‌ಕಾಮ್ಸ್ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ರೈತರಿಗೆ ಮಾರುಕಟ್ಟೆಯ ದರಕ್ಕಿಂತ ೨ ರೂ. ಹೆಚ್ಚು ನೀಡಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಲಾಗುತ್ತದೆ. ೪ರಿಂದ ೫ ರೂ. ಲಾಭಾಂಶದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ.
ಇದರಿಂದ ಗ್ರಾಹಕರಿಗೆ ಹೆಚ್ಚಿನ ಹಣ ಉಳಿತಾಯ ವಾಗುತ್ತದೆ. ಅಲ್ಲದೆ, ರೈತರಿಗೆ ಮಾರುಕಟ್ಟೆಗಿಂತ ಹೆಚ್ಚು ಲಾಭವೂ ದೊರೆಯುವಂತಾಗುತ್ತದೆ.
ನಗರದ ಸರಸ್ವತಿಪುರಂ, ಕುವೆಂಪುನಗರ, ಗೋಕುಲಂ, ಸಿದ್ದಾರ್ಥನಗರ, ಯಾದವಗಿರಿ, ನಗರ ಬಸ್ ನಿಲ್ದಾಣದ ಹತ್ತಿರ, ತಾಲ್ಲೂಕುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ೩೬ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ನಗರದ ರಿಂಗ್ ರಸ್ತೆಯ ಒಳಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ರಿಂಗ್ ರಸ್ತೆಯ ಹೊರ ವಲಯದಲ್ಲಿ ಹಾಗೂ ನಗರದ ಉಳಿದ ಪ್ರಮುಖ ಬಡಾವಣೆಗಳಲ್ಲಿ ತೆರೆಯಲು ಜಿಲ್ಲಾ ತೋಟಗಾರಿಕೆ ಇಲಾಖೆ ಯೋಜನೆ ರೂಪಿಸಿ ವಿಸ್ತರಣೆಯ ಸಿದ್ಧತೆ ನಡೆಸುತ್ತಿದೆ. ಸರ್ಕಾರ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದೆ.
ಆನ್‌ಲೈನ್ ಹಾಗೂ ಖಾಸಗಿ ಮಾರಾಟಗಾರರ ಸ್ಪರ್ಧೆಯ ನಡುವೆಯೂ ಪದಾರ್ಥಗಳ ಗುಣ ಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಹಾಪ್‌ಕಾಮ್ಸ್ ಯಶಸ್ವಿಯಾಗಿದೆ. ಅಲ್ಲದೆ ಆದಾಯಗಳಿಕೆಯಲ್ಲೂ ಮುಂಚೂಣಿಯಲ್ಲಿದೆ. ಪ್ರತಿವರ್ಷವು ೧೨ರಿಂದ ೧೬ ಕೋಟಿ ರೂ. ವಹಿವಾಟು ನಡೆಯಲಿದೆ. ಪ್ರತಿ ತಿಂಗಳು ೧ರಿಂದ ೧.೫ ಕೋಟಿ ರೂ. ಆದಾಯ ಗಳಿಕೆ ಇದೆ. ಒಟ್ಟು ಮಾರಾಟ ಮಳಿಗೆಗಳಲ್ಲಿ ೯೭ ಮಂದಿ ನೌಕರರಿದ್ದು, ಕೆಲವರು ನಿವೃತ್ತಿ ಹೊಂದಿದ್ದಾರೆ. ಸದ್ಯಕ್ಕೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿ ಕೊಳ್ಳಲಾಗಿದ್ದು, ಕೆಲವರು ಏಕಾಏಕಿ ಕೆಲಸ ಬಿಡುತ್ತಿದ್ದಾರೆ. ಹಾಗಾಗಿ ಖಾಯಂ ನೌಕರರನ್ನು ನೇಮಕ ಮಾಡಿ ಕೊಂಡರೆ ಹಾಪ್‌ಕಾಮ್ಸ್ ವ್ಯವಹಾರ ವಿಸ್ತರಣೆಗೆ ಅನು ಕೂಲವಾಗುತ್ತದೆ ಎಂಬುದು ನೌಕರರೊಬ್ಬರ ಮಾತು.
” ಗ್ರಾಹಕರು ಹಾಗೂ ರೈತರ ಹಿತದೃಷ್ಟಿಯಿಂದ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದು, ಕೋವಿಡ್ ಬಳಿಕವೂ ಮಳಿಗೆಗಳನ್ನು ಹೊಸದಾಗಿ ತೆರೆಯಲಾಗಿತ್ತು. ಬೇಡಿಕೆ ಹೆಚ್ಚಿರುವ ಕಾರಣ ಮಳಿಗೆಗಳನ್ನು ವಿಸ್ತರಿಸುವ ಕೆಲಸ ಪ್ರಾರಂಭಿಸಲಿದ್ದೇವೆ. ಇದರಿಂದ ಇಲಾಖೆಗೆ ಹೆಚ್ಚಿನ ಲಾಭ ದೊರೆಯಲಿದೆ.”
-ಇಂಧೂದರ, ವ್ಯಪಸ್ಥಾಪಕ ನಿರ್ದೇಶಕರು, ಮೈಸೂರು ಜಿಲ್ಲಾ ಹಾಪ್‌ಕಾಮ್
ಬೆಂಗಳೂರು: ಕೇಂದ್ರ ಸರ್ಕಾರ ಜಿಎಸ್‌ಟಿ ಕೊಡದಿದ್ದರಿಂದ ರಾಜ್ಯದ ಬೆಳವಣಿಗೆ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. 2026-27ನೇ ಸಾಲಿನ ಬಜೆಟ್…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ಅತ್ಯಂತ ಜನಪರ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಂತಸ…
ಮೈಸೂರು: ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ಉನ್ನತೀಕರಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೧೮೦ ಕೋಟಿ ರೂ. ಅನುದಾನ ಘೋಷಿಸಿ,…
ಬೆಂಗಳೂರು: ಸ್ಲೋಗನ್ ರಾಮಯ್ಯನವರ ಬಜೆಟ್ಟಿನ ಸುದೀರ್ಘ ಪ್ರಲಾಪ ಆಲಿಸಿದೆ. ಅವರಿಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ…
ಮೈಸೂರು: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ರೈತರ ಪಾಲಿಗೆ ತೀವ್ರ ನಿರಾಸೆ ತಂದಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ಮಂಡಿಸಿದ ರಾಜ್ಯ ಬಜೆಟ್ ಅನ್ನು ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಸಿದ್ದರಾಮಯ್ಯ ಅವರು…