ಹಳ್ಳಿಗಳ ಹಬ್ಬ, ಜಾತ್ರೆಗಳಲ್ಲಿ ಬಲೂನ್‌ಗಳ ಮಾರಾಟ
ಅವಘಡ ಸಂಭವಿಸಿದರೆ ಯಾರು ಹೊಣೆ?
2025ರ ವರ್ಷಾಂತ್ಯದಲ್ಲಿ ಮೈಸೂರಿನಲ್ಲಿ ನಡೆದಿದ್ದ ಸ್ಫೋಟ
ಬಲೂನ್‌ಗಳಿಗೆ ಗ್ಯಾಸ್ ತುಂಬಲು ಸ್ಥಳ ನಿಗದಿಗೆ ಒತ್ತಾಯ
ಚಿರಂಜೀವಿ ಸಿ ಹುಲ್ಲಹಳ್ಳಿ
ಮೈಸೂರು: ಜಿಲ್ಲೆಯಲ್ಲಿ ಈಗ ಜಾತ್ರೆಗಳ ಸಂಭ್ರಮ… ಪ್ರತಿ ಗ್ರಾಮದಲ್ಲಿಯೂ ಗ್ರಾಮ ದೇವತೆ, ಮಾರಮ್ಮ ಹಬ್ಬಗಳ ಸಡಗರ… ಇಂತಹ ಸಂಭ್ರಮಕ್ಕೆ ಮಕ್ಕಳ ಕೈಯಲ್ಲಿ ‘ತಲೆ ಕುಣಿಸುತ್ತಾ’ ಅತ್ತಿಂದಿತ್ತ ವಾಲಾಡುವ ಬಣ್ಣ ಬಣ್ಣದ ಬಲೂನ್‌ಗಳು ಕೂಡ ಮೆರುಗು ತುಂಬುತ್ತವೆ. ಆದರೆ, ಈ ಬಾರಿ ಅಂತಹ ಬಲೂನ್‌ಗಳ ರಂಗು ಪೋಷಕರನ್ನು ಭೀತಿಗೊಳಿಸಿವೆ. ಅದಕ್ಕೆ ಕಾರಣ ಬಲೂನ್ ಗಳಲ್ಲಿ ತುಂಬಿರುವ ‘ಹೀಲಿಯಂ ಗ್ಯಾಸ್!’
ನಂಜನಗೂಡು, ಎಚ್.ಡಿ.ಕೋಟೆ, ತಿನರಸೀಪುರ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರತಿ ಹಳ್ಳಿಗಳಲ್ಲಿಯೂ ಗ್ರಾಮ ದೇವತೆ ಹಬ್ಬಗಳನ್ನು ಆಚರಿಸಲಾಗುತ್ತಿದೆ. ನಿತ್ಯ ಒಂದಲ್ಲ ಒಂದು ಊರಿನಲ್ಲಿ ಮಾರಮ್ಮನ ಹಬ್ಬ ನಡೆಯುತ್ತಲೇ ಇದೆ.
ಪುರಿ, ಖಾರ ತಿಂಡಿಗಳು, ಸಿಹಿ ತಿನಿಸುಗಳು, ಪೂಜಾ ಸಾಮಗ್ರಿಗಳು, ಮಕ್ಕಳ ಆಟಿಕೆಗಳು, ಹೀಲಿಯಂ ಬಲೂನ್‌ಗಳ ವ್ಯಾಪಾರವೂ ಜೋರಾಗಿದೆ. ಇಲ್ಲಿ ಬಿಸಿ ಗಾಳಿ ತುಂಬಿ ಬಲೂನ್‌ಗಳನ್ನು ನೋಡಿದಾಗ, ಕಳೆದ ತಿಂಗಳು ಅಂಬಾ ವಿಲಾಸ ಅರಮನೆ ಮುಂಭಾಗ ಜಯಮಾತಾಂಡ ದ್ವಾರದ ಬಳಿ ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡು ಮೂವರು ಸಾವಿಗೀಡಾದ ಘಟನೆ ಬಹುತೇಕ ಹಿರಿಯರ ಕಣ್ಣ ಮುಂದೆ ತೇಲಿ ಹೋಗುವುದು ನಿಶ್ಚಿತ.
ಸಾಮಾನ್ಯವಾಗಿ ಪ್ರತಿ ಹಳ್ಳಗಳಲ್ಲಿ ಮಾರಮ್ಮ ಜಾತ್ರೆಗಳು ನಡೆಯುವ ಸ್ಥಳಗಳಲ್ಲಿ ಹೀಲಿಯಂ ಬಲೂನ್ ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹಬ್ಬಕ್ಕೆ ಸುತ್ತಮುಲ ಊರುಗಳಿಂದ ನೆಂಟರಿಷ್ಟರನ್ನು ಆಹ್ವಾನಿಸಿರುತ್ತಾರೆ. ಹೀಗಾಗಿ ಒಂದೆ ಕಡೆ ಸಾವಿರಾರು ಜನರು ಸೇರುತ್ತಾರೆ. ಇದರ ನಡುವೆಯೇ ಹೀಲಿಯಂ ಗ್ಯಾಸ್‌ಗಳನ್ನು ಬಳಕೆ ಮಾಡಿ ಬಲೂನ್ ಮಾರಾಟ ಮಾಡುವುದು ನಡೆಯುತ್ತಿದೆ. ಒಂದು ವೇಳೆ ಅವಘಡ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ವ್ಯಾಪಾರಕ್ಕಿಲ್ಲ ಮಾನದಂಡಗಳು
ಹೊರ ರಾಜ್ಯಗಳಿಂದ ಜಾತ್ರೆಗಳಲ್ಲಿ ವ್ಯಾಪಾರ ನಡೆಸುವ ವ್ಯಾಪಾರಿಗಳು ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಜಾತ್ರೆ ನಡೆಯುವ ಸ್ಥಳ, ಹೆಚ್ಚು ಜನ ಸೇರುವ ದೇವಾಲಯದ ಆವರಣದಲ್ಲಿಯೇ ಬಲೂನ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ನಿಯಂತ್ರಿಸುವ ಸಂಬಂಧ ರಾಜ್ಯ ರ್ಸಾರ ಅಥವಾ ಸ್ಥಳೀಯ ಸಂಸ್ಥೆಗಳಿಂದ ಯಾವುದೇ ಆದೇಶ ಹೊರಬಿದ್ದಿಲ್ಲ ಎಂಬುದು ಸಾರ್ವಜನಿಕರ ಆತಂಕವಾಗಿದೆ.
ಜನನಿಬಿಡ ಪ್ರದೇಶಗಳಲ್ಲಿ ನಿಷೇಧ?
ತಮ್ಮ ಬದುಕಿನ ಬಂಡಿ ಎಳೆಯುವ ಸಲುವಾಗಿ ಹೊರ ರಾಜ್ಯಗಳಿಂದ ಅನೇಕ ಮಂದಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಅನೇಕ ಮಂದಿ ಜಿಲ್ಲೆಗೆ ಆಗಮಿಸಿ ಬಲೂನ್‌ಗಳ ವ್ಯಾಪಾರ ನಡೆಸುತ್ತಾರೆ. ಅದೇ ಅವರ ಬದುಕಿಗೆ ಆಧಾರ. ಹಾಗಂತ ಜನರ ಸುರಕ್ಷತೆಯನ್ನು ಕಡೆಗಣಿಸುವುದೂ ಸಲ್ಲದು. ಹಾಗಾಗಿ ನೂರಾರು ಜನರು ಸೇರುವ ಮತ್ತು ಜಾತ್ರೆಗಳು ನಡೆಯುವ ಸ್ಥಳದಿಂದ ಸುರಕಿತ ಅನಿಸಬಹುದಾದಷ್ಟು ದೂರದಲ್ಲಿ ಬಲೂನ್ ಗಳಿಗೆಹೀಲಿಯಂಗ್ಯಾಸ್ ತುಂಬಿಕೊಳ್ಳುವುದನ್ನು ಕಡ್ಡಾಯಗೊಳಿಸುವುದು ಸೂಕ್ತ ಎನ್ನುತ್ತಾರೆ ಮಾರಿಹಬ್ಬದ ಸಂಭ್ರಮದಲ್ಲಿದ್ದ ಶಂಕರಪುರದ ಶಿವು.
ಹೀಲಿಯಂ ಗ್ಯಾಸ್ ಬಲೂನ್ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಶೀಘ್ರದಲ್ಲಿ ಹೀಲಿಯಂ ಗ್ಯಾಸ್ ಬಲೂನ್ ಮಾರಾಟಗಾರರು ಅನುಸರಿಸಬೇಕಾದ ನಿಯಮ ಕುರಿತು ಹೊಸ ಆದೇಶ ಹೊರಡಿಸುವ ಬಗ್ಗೆ ಚಿಂತಿಸಲಾಗುವುದು.
ಮಲ್ಲಿಕಾರ್ಜುನ್ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಮೈಸೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮೂವರು ಅಸುನೀಗಿದ ಘಟನೆಯ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವ ವ್ಯಾಪಾರಸ್ಥರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬೇಕು. ಬಲೂನ್ ಗಳ ಮಾರಾಟಕ್ಕಾಗಿ ಹೊರ ರಾಜ್ಯಗಳಿಂದ ಬರುವವರ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲು ಕ್ರಮವಹಿಸಬೇಕು.
• ಮಲ್ಲೇಶ್, ಉಪಾಧ್ಯಕ್ಷ, ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ
ಕಠ್ಮಂಡು: ಜೀಪ್ ಪ್ರಪಾತಕ್ಕೆ ಬಿದ್ದು 20 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ರೋಲ್ಪಾದಲ್ಲಿ ನಡೆದಿದ್ದು, ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ…
ನವದೆಹಲಿ: ಈ ಬಾರಿ ಮೇ ತಿಂಗಳಿನಲ್ಲಿ ದೇಶದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಹಾಗೂ ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ ಎಂದು…
ಇಸ್ಲಾಮಾಬಾದ್: ನಿಷೇಧಿತ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಉನ್ನತ ಕಮಾಂಡರ್ ಪಾಕಿಸ್ತಾನದ ಬಹಾವಲ್ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಉನ್ನತ ಉಗ್ರಗಾಮಿ ಕಾರ್ಯಕರ್ತನನ್ನು ಅಪರಿಚಿತ ವಾಹನವೊಂದು…
ನವದೆಹಲಿ: ಅಮೇರಿಕಾ-ಇರಾನ್ ಯುದ್ಧದ ಹೊರತಾಗಿಯೂ ಏಪ್ರಿಲ್.2026ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ದಾಖಲೆಗರಿಷ್ಠ ರೂ 2.43 ಲಕ್ಷ ಕೋಟಿ ತಲುಪಿದೆ. ಏಪ್ರಿಲ್‌ನಲ್ಲಿ…
ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 993 ರೂ. ಏಕಾಏಕಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ…
ಚೆನ್ನೈ : ತಮಿಳುನಾಡಿನ ದಶಕಗಳ ದ್ರಾವಿಡ ರಾಜಕಾರಣಕ್ಕೆ ಸವಾಲು ಹಾಕಿ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’…