ಸಾರಿಗೆ ನಿಗಮವು ನಿರ್ವಾಹಕರಿಗೆ ಕೊಟ್ಟಿರುವ ಹೊಸ ಟಿಕೆಟ್ ಯಂತ್ರದಿಂದ ಸಮಸ್ಯೆ
• ಚಿರಂಜೀವಿ ಸಿ.ಹುಲ್ಲಹಳ್ಳಿ
ಮೈಸೂರು: ‘ಹೊಸ ಯಂತ್ರದ ತಾಂತ್ರಿಕ ದೋಷದಿಂದ ನಿತ್ಯ ಕೈಯಿಂದ ಹಣ ಕಟ್ಟುತ್ತಿದ್ದೇವೆ…, ಒಂದು ಟಿಕೆಟ್‌ಗೆ ಮೂರು ಆಪ್ಷನ್ ಒತ್ತಬೇಕು…, ಟಿಕೆಟ್ ಕೊಡಲು ಕಷ್ಟವಾಗುತ್ತಿದ್ದು, ಲೋಪಗಳನ್ನು ಸರಿಪಡಿಸಿ…’
ಇದು ಟಿಕೆಟ್ ಕೊಡಲು ಇಲಾಖೆ ನೀಡಿರುವ ಹೊಸ ಟಿಕೆಟ್ ಯಂತ್ರದಲ್ಲಿನ ಲೋಪಗಳನ್ನು ಬಗೆಹರಿಸುವಂತೆ ಕೆಎಸ್‌ಆರ್‌ಟಿಸಿ ಬಸಿನ ನಿರ್ವಾಹಕರು ತಮಗಾಗುತ್ತಿರುವ ಸಮಸ್ಯೆಗಳನ್ನು ಲೆಡ್ಜರ್ ಬರೆದು ಬೇಡಿಕೊಳ್ಳುತ್ತಿರುವ ಪರಿ.
ಸಾರಿಗೆ ನಿಗಮವು ಬಸ್ಸಿನ ನಿರ್ವಾಹಕರಿಗೆ ಕೊಟ್ಟಿರುವ ಹೊಸ ಟಿಕೆಟ್ ಯಂತ್ರದ ಬಳಕೆಯಿಂದ ಆಗುತ್ತಿರುವ ಸಮಸ್ಯೆಯನ್ನು ಹಣ ಕಟ್ಟುವ ವಿಭಾಗದಲ್ಲಿ ಸಮಸ್ಯೆಗಳನ್ನು ಬರೆಯಲು ಇಟ್ಟಿರುವ ಲೆಕ್ಚರ್ ಪುಸ್ತಕದಲ್ಲಿ ಬರೆಯುವುದರ ಜೊತೆಗೆ ಮೌಖಿಕವಾಗಿ ಮನವಿ ಮಾಡುತ್ತಿದ್ದರೂ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ.
ಹಳೆಯ ಯಂತ್ರವೂ ಕೀ ಬಟನ್‌ಗಳ ಸಹಾಯದಿಂದ ಕ್ಷಣಾರ್ಧದಲ್ಲಿ ಟಿಕೆಟ್ ಕೊಡುತ್ತಿದ್ದೆವು. ಒಂದು ಟಿಕೆಟ್‌ಗೆ ಒಂದು ಆಕ್ಷನ್ ಇತ್ತು. ಜೊತೆಗೆ ಮರು ಟಿಕೆಟ್ ಕೊಡುವ ಆಯ್ಕೆ ಇತ್ತು. ಆದರೆ, ಹೊಸ ಯಂತ್ರದಲ್ಲಿ ಇದಕ್ಕೆ ತದ್ವಿರುದ್ಧ ಆಕ್ಷನ್ ಹೊಂದಿದೆ ಎಂದು ಆರೋಪಿಸುತ್ತಿದ್ದಾರೆ.
ಹೊಸ ಯಂತ್ರವು ಸಂಪೂರ್ಣ ಟಚ್ ಸ್ಕ್ರೀನ್ ಆಪ್ಷನ್‌ಗಳಿಂದ ಕೂಡಿದೆ. ಒಂದು ಟಿಕೆಟ್‌ಗೆ ಮೂರು ಆಯ್ಕೆಗಳನ್ನು ಒತ್ತಬೇಕು. ಯಂತ್ರದಲ್ಲಿರುವ ಅಕ್ಷರಗಳ ಫಾಂಟ್ ಸೈಜ್ ತುಂಬಾ ಸಣ್ಣದಾಗಿದ್ದು, ಇದನ್ನು ತುಂಬಾ ಹತ್ತಿರದಿಂದ ನೋಡುವಂತಾಗಿದೆ.
ಜತೆಗೆ ಮರು ಆಯ್ಕೆಯ ಪ್ರಕ್ರಿಯೆ ಇಲ್ಲ. ಇದರಿಂದ ಒಂದು ಟಿಕೆಟ್ ಕೊಡಲು ನಿಮಿಷಗಳಷ್ಟು ಸಮಯ ಬೇಕಾಗುತ್ತಿದೆ. ಇದರಿಂದ ಬಸ್ಸುಗಳು ತುಂಬ ರಸ್ ಆದ ಸಂದರ್ಭದಲ್ಲಿ 15-20 ನಿಮಿಷ ಟಿಕೆಟ್ ಕೊಡುವ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ದಸರಾ ವಸ್ತುಪ್ರದರ್ಶನ, ದೀಪಾಲಂಕಾರ ಇರುವುದರಿಂದ ಪ್ರತಿ ಟ್ರಿಪ್‌ನಲ್ಲೂ ಬಸ್ಸು ರಶ್ ಆಗುತ್ತಿವೆ. ಅದರಲ್ಲಿಯೂ ಸಂಜೆ ವೇಳೆಗೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಸಾರ್ವಜನಿಕರು ತುಂಬ ತ್ರಾಸದಾಯಕವಾಗಿ ಪ್ರಯಾಣಿಸುತ್ತಿದ್ದಾರೆ. ಇದರ ಮಧ್ಯೆ ಹೊಸ ಯಂತ್ರದಿಂದ ಟಿಕೆಟ್ ಕೊಡಲು ನಿರ್ವಾಹಕರು ಪರದಾಡುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ಬೆಂಗಳೂರಿನ ಬಿಎಂಟಿಸಿ ಬಸ್ಸುಗಳಲ್ಲಿ ಈಗಾಗಲೇ ಡಿಜಿಟಲ್ ಯಂತ್ರಗಳನ್ನು ನೀಡಲಾಗಿದ್ದು, ಆನ್‌ಲೈನ್ ಮೊಬೈಲ್ ಪೇಮೆಂಟ್ ಮೂಲಕ ಟಿಕೆಟ್ ಪಡೆಯುವ
ಅವಕಾಶ ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದ ಎಲ್ಲ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಆನ್ ಲೈನ್ ಪೇಮೆಂಟ್‌ಗೆ ಅನುವು ಮಾಡಿಕೊಡುವ ಉದ್ದೇಶದಿಂದ ಇಲಾಖೆಯು ಖಾಸಗಿ ಸಂಸ್ಥೆಯಿಂದ ಟಿಕೆಟ್ ಯಂತ್ರಗಳನ್ನು ಪಡೆದು ನಿರ್ವಾಹಕರಿಗೆ ನೀಡಿದೆ.
ಮೈಸೂರು ನಗರ ಮತ್ತು ಜಿಲ್ಲಾದಾದ್ಯಂತ ಕೆಎಸ್‌ಆರ್‌ಟಿಸಿಯ ಎಲ್ಲ ಬಸ್ ಡಿಪೋಗಳಲ್ಲಿನ ನಿರ್ವಾಹಕರಿಗೂ ಹಳೆಯ ಯಂತ್ರವನ್ನು ಪಡೆದು ಹೊಸ ಯಂತ್ರಗಳನ್ನು ಕೊಡಲಾಗಿದ್ದು, ಕೆಲವು ನಿರ್ವಾಹಕರು ನಿಧಾನವಾಗಿ ಯಂತ್ರದ ಬಳಕೆಯನ್ನು ಕಲಿತುಕೊಳ್ಳುತ್ತಿದ್ದಾರೆ. ಕೆಲವರು ತುಂಬಾ ತೊಂದರೆ ಪಡುತ್ತಿದ್ದಾರೆ. ಟಚ್ ಸ್ಟೀನ್ ಮೊಬೈಲ್ ಬಳಸದ ನಿರ್ವಾಹಕರು ಮಾತ್ರ ಟಿಕೆಟ್ ಯಂತ್ರ ಬಳಸಲು ಸಾಧ್ಯವಾಗದೆ ರಜಾ ಪಡೆದುಕೊಳ್ಳುತ್ತಿರುವ ಪ್ರಸಂಗಗಳೂ ನಡೆದಿವೆ. ನಮ್ಮನ್ನು ಸೇರಿದಂತೆ ವಯಸ್ಸಾದ ಕಂಡಕ್ಟರ್‌ಗಳು ನಿತ್ಯ 200ರಿಂದ 300 ರೂಪಾಯಿ ಕಳೆದುಕೊಳ್ಳುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಬಸ್ ಕಂಡಕ್ಟರ್ ಒಬ್ಬರು ‘ಆಂದೋಲನ’ದೊಂದಿಗೆ ಅಳಲು ತೋಡಿಕೊಂಡರು.
ಹೊಸ ಯಂತ್ರವನ್ನೇ ಬಳಸುತ್ತೇವೆ. ಆದರೆ, ಯಂತ್ರದಲ್ಲಿನ ಲೋಪಗಳನ್ನು ಸರಿಪಡಿಸಿಕೊಡಬೇಕು. ಅಕ್ಷರಗಳು ದಪ್ಪವಾಗಿ ಕಾಣುವಂತೆ ಮಾಡಬೇಕು. ಆಯ್ಕೆಗಳನ್ನು
ಕಡಿಮೆ ಮಾಡಿ ಜೊತೆಗೆ ಮರು ಟಿಕೆಟ್ ಬರುವ ಆಯ್ಕೆಗಳನ್ನು ಸೇರಿಸಬೇಕು ಎಂದು ನಿರ್ವಾಹಕರೊಬ್ಬರು ಮನವಿ ಮಾಡಿದ್ದಾರೆ.
ಗ್ರಾಮಾಂತರದಲ್ಲಿ 940 ಮತ್ತು ನಗರದಲ್ಲಿ 500 ಮಂದಿ ನಿರ್ವಾಹಕರಿಗೆ ಹೊಸ ಯಂತ್ರಗಳನ್ನು ನೀಡಲಾಗಿದೆ. ಯಂತ್ರದಲ್ಲಿನ ಲೋಪಗಳ ಕುರಿತು. ನಿರ್ವಾಹಕರ ದೂರಗಳನ್ನು ಪರಿಗಣಿಸಲಾಗಿದ್ದು, ಕಂಡಕ್ಟರ್‌ಗೆ ಅನುಕೂಲವಾಗುವ ಮಾದರಿಯಲ್ಲಿ 51 ಪ್ರಕ್ರಿಯೆಗಳನ್ನು ಪರಿಷ್ಕರಿಸಲಾಗಿದೆ. ಇನ್ನೊಂದು 15 ದಿನಗಳಲ್ಲಿ ಕಂಡಕ್ಟರ್‌ಗಳು ಹೊಸ ಯಂತ್ರಗಳನ್ನು ಸೂಲಲಿತವಾಗಿ ಬಳಸುವಂತೆ ಸರಿಪಡಿಸಲಾಗುವುದು.
• ಶ್ರೀನಿವಾಸ್, ನಿಯಂತ್ರಣಾಧಿಕಾರಿ, ಗ್ರಾಮಾಂತರ ವಿಭಾಗ .
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…