Andolana originals

ಬೇಬಿ ಬೆಟ್ಟದಲ್ಲಿ ಭಾರೀ ದನಗಳ ಜಾತ್ರಾ ಮಹೋತ್ಸವ

ಎಸ್.ನಾಗಸುಂದರ್

ಪಾಂಡವಪುರ: ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಭಾರೀ ದನಗಳ ಜಾತ್ರಾ ಮಹೋತ್ಸವದಲ್ಲಿ ಚಿತ್ರನಟ ದರ್ಶನ್ ತೂಗುದೀಪ ಅವರ ಜೋಡೆತ್ತುಗಳ ದರ್ಬಾರ್ ಜೋರಾಗಿದೆ.

ಭಾರೀ ದನಗಳ ಜಾತ್ರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಚಿತ್ರನಟ ದರ್ಶನ್ ತೂಗದೀಪ ಅವರ ಕಾಕ್ರೋಚ್ ಹೆಸರಿನ ರಾಮ ಮತ್ತು ಲಕ್ಷ್ಮಣ ಜೋಡಿ ಎತ್ತುಗಳನ್ನು ಪ್ರದರ್ಶಿಸಲಾಗಿದೆ. ಆರು ಹಲ್ಲುಗಳ ಜೋಡೆತ್ತುಗಳ ಬೆಲೆ ಬರೋಬ್ಬರಿ ೨೦ ಲಕ್ಷ ರೂ. ಗಳಾಗಿದ್ದು, ಕಳೆದ ಬಾರಿಯ ಬೇಬಿಬೆಟ್ಟದ ಜಾತ್ರೆಗೆ ಬಂದಿದ್ದ ಚಿತ್ರನಟ ದರ್ಶನ್ ಮುಂದಿನ ಬಾರಿಗೆ ನನ್ನ ಎತ್ತುಗಳನ್ನು ಜಾತ್ರೆಯಲ್ಲಿ ಪ್ರದರ್ಶಿಸಲಾಗುವುದು ಎಂದಿದ್ದರು. ಅದರಂತೆ ದರ್ಶನ್ ಅವರು ತಮ್ಮ ಜೋಡೆತ್ತುಗಳನ್ನು ಜಾತ್ರಾ ಮೈದಾನದಲ್ಲಿ ಕಟ್ಟಿದ್ದಾರೆ, ದರ್ಶನ್ ಅವರ ಜೋಡೆತ್ತುಗಳನ್ನು ಸಾರ್ವಜನಿಕರು, ಯುವಕ-ಯುವತಿಯರು ವೀಕ್ಷಣೆ ಮಾಡಿ ಸೆಲಿ ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ದರ್ಶನ್ ಅವರ ಜೋಡೆತ್ತುಗಳ ನಿರ್ವಹಣೆ ವಹಿಸಿಕೊಂಡಿರುವ ದರ್ಶನ್ ಅವರ ಅಭಿಮಾನಿ ಹಿರಿಸೇವೆ ಸಂದೀಪ್ ಅವರು ಕೂಡ ೧೦ ಲಕ್ಷ ರೂ. ಬೆಲೆ ಬಾಳುವ ಹಳ್ಳಿಕಾರ್ ತಳಿಯ ಎತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ವೇದಿಕೆ ಮುಂಭಾಗ ಇರುವ ದರ್ಶನ್ ಪುಟ್ಟಣ್ಣಯ್ಯ ಅವರ ಟೆಂಟ್‌ನಲ್ಲಿ ಚಿತ್ರನಟ ದರ್ಶನ್ ಅವರ ಜೋಡೆತ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಹಳ್ಳಿಕಾರ್ ತಳಿಗಳ ಪ್ರದರ್ಶನ, ವ್ಯಪಾರ  ಜೋರು: ಬೇಬಿಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ಹಳ್ಳಿಕಾರ್ ತಳಿಗಳ ಜೋಡೆತ್ತು, ಹೋರಿ, ಕರು, ಹಸುಗಳ ದರ್ಬಾರ್ ಜೋರಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಜೋಡೆತ್ತುಗಳು ಆಗಮಿಸಿವೆ. ಜಾತ್ರೆಯಲ್ಲಿ ಒಂದು ಲಕ್ಷದಿಂದ ಹಿಡಿದು ೧೦, ೧೨ ಲಕ್ಷ ರೂ.ಗಳಿಗೂ ಅಽಕ ಬೆಲೆ ಬಾಳುವ ಹಳ್ಳಿಕಾರ್ ತಳಿಗಳನ್ನು ಜಾತ್ರೆಯಲ್ಲಿ ಕಾಣಬಹುದಾಗಿದೆ. ಜಾತ್ರೆಯಲ್ಲಿ ೫೦ ಸಾವಿರ ರೂ., ೧, ೨ ರಿಂದ ೪ ಲಕ್ಷ ರೂ.ಗಳವರೆಗೂ ಬೆಲೆ ಬಾಳುವ ಜೋಡೆತ್ತುಗಳು ಮಾರಾಟವಾಗುತ್ತಿವೆ. ಇನ್ನೂ ಕೆಲವು ರೈತರು ತಮ್ಮ ಎತ್ತುಗಳನ್ನು ಬಹುಮಾನಕ್ಕಾಗಿ ಪ್ರದರ್ಶನಕ್ಕಿರಿಸಿದ್ದಾರೆ. ರಾಸುಗಳೊಂದಿಗೆ ಆಗಮಿಸಿರುವ ರೈತರು ಜಾತ್ರಾ ಮೈದಾನದಲ್ಲಿ ಶಾಮಿಯಾನ ಹಾಕಿಕೊಂಡಿದ್ದರೆ, ಇನ್ನೂ ಕೆಲವರು ಎತ್ತಿನ ಗಾಡಿಯ ಕೆಳಗೆ, ಮರದ ಕೆಳಗೆ ಟೆಂಟ್ ಹಾಕಿಕೊಂಡು ರಾಸುಗಳ ನಿರ್ವಹಣೆ ಮಾಡುತ್ತಿದ್ದಾರೆ.

ಸೂಪರ್ ಸ್ಟಾರ್ ರೈತ ಪ್ರಶಸ್ತಿಗೆ ಭಾಜನರಾಗಿರುವ ಶ್ಯಾದನಹಳ್ಳಿ ಗ್ರಾಮದ ಸಾವಯವ ಕೃಷಿಕ ಚಲುವರಾಜು ಅವರು ಜಾತ್ರೆಯಲ್ಲಿ ೫ ಲಕ್ಷ ರೂ. ಬೆಲೆಬಾಳುವ ೨ ಹಲ್ಲುಗಳ ಹಳ್ಳಿಕಾರ್ ತಳಿಯ ಜೋಡೆತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಪ್ರತಿ ವರ್ಷವೂ ಜೋಡೆತ್ತುಗಳನ್ನು ಪ್ರದರ್ಶನಕ್ಕೆ ಇಡುವ ಚಲುವರಾಜು ಅವರು ಚಿನ್ನದ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಸಾವಯವ ಕೃಷಿಕರಾಗಿರುವ ಚಲುವರಾಜು ಎತ್ತುಗಳನ್ನು ವೀಕ್ಷಣೆ ಮಾಡಲು ಬರುವ ರೈತರಿಗೆ ಸಾವಯವ ಬೆಲ್ಲದ ನಿಂಬೆಹಣ್ಣಿನ ಜೂಸ್ ನೀಡಿ ಸ್ವಾಗತಿಸುತ್ತಿದ್ದದ್ದು ವಿಶೇಷವಾಗಿತ್ತು. ಮಠದ ವತಿಯಿಂದ ಪ್ರಸಾದ ವಿನಿಯೋಗ ಶ್ರೀ ರಾಮಯೋಗೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಮಠದ ವತಿಯಿಂದ ನಿತ್ಯ ಜಾತ್ರೆಗೆ ಬರುವ ಭಕ್ತರು, ರೈತರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ.

” ಇದೇ ಮೊದಲ ಬಾರಿಗೆ ದರ್ಶನ್ ಒಡೆತನದ ಕಾಕ್ರೋಚ್ ಎತ್ತು ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕಳೆದ ವರ್ಷ ಜಾತ್ರೆಗೆ ಬಂದಿದ್ದ ದರ್ಶನ್ ಅವರು ಮುಂದಿನ ಬಾರಿಗೆ ತಮ್ಮ ಎತ್ತುಗಳನ್ನು ಕಟ್ಟಲಾಗುವುದು ಎಂದು ಹೇಳಿದ್ದರು. ಅದರಂತೆ ಈ ಭಾರಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಟೆಂಟ್‌ನಲ್ಲಿ ಎತ್ತುಗಳನ್ನು ಪ್ರದರ್ಶನ ಮಾಡಲಾಗಿದೆ.”

-ಹಿರಿಸೇವೆ ಸಂದೀಪ್, ದರ್ಶನ್ ಎತ್ತುಗಳ ನಿರ್ವಾಹಕ.

ಆಂದೋಲನ ಡೆಸ್ಕ್

Recent Posts

ಏಪ್ರಿಲ್ 1ರಿಂದ ಜಾರಿ ಟೋಲ್‌ ದರ ಹೆಚ್ಚಳ ; ಮೈ-ಬೆಂ ಹೆದ್ದಾರಿ ಪ್ರಯಾಣವೂ ದುಬಾರಿ

ಬೆಂಗಳೂರು : ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ…

4 mins ago

ಮಧ್ಯಪ್ರಾಚ್ಯ ಸಂಘರ್ಷ : ಇಂಧನ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಮಹತ್ವದ ಸಭೆ

ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಪೆಟ್ರೋಲಿಯಂ, ವಿದ್ಯುತ್ ಮತ್ತು ರಸಗೊಬ್ಬರ ವಲಯಗಳ ಪರಿಶೀಲನೆಗಾಗಿ ಪ್ರಧಾನಿ ನರೇಂದ್ರ…

45 mins ago

ಕರ್ನಾಟಕ ಹೈಕೋರ್ಟ್‌ : 70 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು : 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. ಕಾನೂನು ಪದವಿ ಸೇರಿದಂತೆ ವಿವಿಧ…

52 mins ago

ಸಿಲಿಂಡರ್‌ಗೆ ಮುಗಿಬಿದ್ದ ಜನ : ಪೊಲೀಸ್‌ ರಕ್ಷಣೆಯಲ್ಲಿ ಸಿಲಿಂಡರ್‌ ವಿತರಣೆ

ಕೆ.ಆರ್.ಪೇಟೆ : ಗೃಹ ಬಳಕೆ ಸಿಲಿಂಡರ್ ಸಿಗುವುದಿಲ್ಲ ಎಂದು ಏಕಾಏಕಿ ನೂರಾರು ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ಜಮಾಯಿಸಿದ ಪರಿಣಾಮ…

1 hour ago

ಒಮ್ಮತದ ಅಭ್ಯರ್ಥಿ ಆಯ್ಕೆ ಆಗಿದೆ ; ಅಲ್ಪಸಂಖ್ಯಾತರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ : ಡಿಸಿಎಂ ಡಿ.ಕೆ

ಬೆಂಗಳೂರು : ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಆಗಿದೆ ಎಂದು ಉಪ ಮುಖ್ಯಮಂತ್ರಿ…

2 hours ago

ಮೇಲುಕೋಟೆಯಲ್ಲಿ ವಾಹನ ದಟ್ಟಣೆ ; ನಿಯಂತ್ರಣಕ್ಕೆ ಶಾಸಕರ ಸೂಚನೆ

ಮೇಲುಕೋಟೆ : ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಮತ್ತು ಉತ್ಸವ ಬೀದಿಗಳಲ್ಲಿ ಭಕ್ತರ ವಾಹನ ನಿಲುಗಡೆಯನ್ನು ನಿಯಂತ್ರಿಸಬೇಕು ಎಂದು ಮೇಲುಕೋಟೆ…

2 hours ago