ಕೆ.ಪಿ.ಮದನ್
ಗಮನ ಸೆಳೆಯುವ ಆರೋಗ್ಯ ಇಲಾಖೆ ಮಳಿಗೆ; ಅಂಗಾಂಗ ಮಾದರಿಗಳ ಪ್ರದರ್ಶನ
ಮೈಸೂರು: ಸಾರ್ವಜನಿಕ ಆರೋಗ್ಯ ಸೇವೆಗಳು, ತಾಯಿ ಮತ್ತು ಶಿಶುಗಳ ಆರೋಗ್ಯ ರಕ್ಷಣೆ ಮತ್ತು ಜನ ಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಬೇಕೆ? ಹಾಗಿದ್ದಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಳಿಗೆಗೆ ಭೇಟಿ ನೀಡಿ…
ಜನರಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಟ ದಿ.ಪುನೀತ್ ರಾಜ್‌ಕುಮಾರ್ ನೆನಪಿನಾರ್ಥ ಜಾರಿಗೆ ತರಲಾಗಿರುವ ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ದೊರೆಯುವ ಸೌಲಭ್ಯಗಳ ಕುರಿತ ಮಾಹಿತಿ ಇಲ್ಲಿ ದೊರೆಯಲಿದೆ.
ಪುನೀತ್ ರಾಜ್‌ಕುಮಾರ್ ಹೃದಯ ಹಿಡಿದಿರುವ ಬೃಹತ್ ಕಟೌಟ್ ಮಳಿಗೆಗೆ ಜನರನ್ನು ಸ್ವಾಗತಿಸುತ್ತದೆ. ಒಳಗೆ ಹೆಜ್ಜೆ ಇಟ್ಟರೆ ಮಗುವಿಗೆ ಎದೆ ಹಾಲು ಉಣಿಸುತ್ತಿರುವ ತಾಯಿಯ ಪ್ರತಿಕೃತಿ, ದೃಷ್ಟಿಯ ಉಡುಗೊರೆ ಬೆಳಕಿನ ಪರಂಪರೆ ವಾಕ್ಯದಡಿ ನೇತ್ರದಾನದ ಮಹತ್ವ ಸಾರುವ ಕಣ್ಣು, ಮೆದುಳು ಆರೋಗ್ಯ ಉಪಕ್ರಮದ ಮೆದುಳಿನ ಪ್ರತಿಕೃತಿ, ಗೃಹ ಯೋಜನೆ, ಹೆಣ್ಣು ಭ್ರೂಣಹತ್ಯೆ ಹತ್ಯೆ ನಿಲ್ಲಿಸಿ, ಹೆಣ್ಣು ಮಕ್ಕಳನ್ನು ಉಳಿಸಿ ಎಂದು ಗರ್ಭಿಣಿಯೊಬ್ಬಳು ಬೇಡುತ್ತಿರುವ ದೃಶ್ಯ ಮನ ಮುಟ್ಟುವಂತಿವೆ. ಜೊತೆಗೆ ಗೃಹ ಆರೋಗ್ಯ ಯೋಜನೆ, ಆಂಬ್ಯುಲೆನ್ಸ್ ಸೇವೆ, ತಂಬಾಕು ಸೇವನೆಯಿಂದ ಮಾನವನ ಆರೋಗ್ಯದ ಮೇಲಾಗುವ ದುಷ್ಪರಿಣಾ ಮಗಳ ಕುರಿತ ಪ್ರತಿಕೃತಿಗಳು ಎಲ್ಲರ ಗಮನ ಸೆಳೆಯುತ್ತಿವೆ.
ಅಂಗಾಂಗ ಮಾದರಿಗಳ ಪ್ರದರ್ಶನ: ಗರ್ಭಧಾರಣೆ ಸಂದರ್ಭದ ಪ್ರಕ್ರಿಯೆಗಳು, ಗರ್ಭಧಾರಣೆ, ಶಿಶುವಿನ ಬೆಳವಣಿಗೆ ಹಂತದ ಮಾದರಿಗಳು, ಮಾನವನ ಮೆದುಳು, ಹೃದಯ, ಮೂತ್ರಪಿಂಡ, ಶ್ವಾಸಕೋಶಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳ ಜೊತೆಯಲ್ಲಿ ಆಯಾ ಅಂಗಾಂಗಗಳ ಬಗ್ಗೆ ಮಾಹಿತಿಯನ್ನೂ ನೀಡಲಾಗಿದೆ.
ಇದನ್ನು ಹೊರತುಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಳಿಗೆಯಲ್ಲಿ ೧೦ ರಿಂದ ೧೯ ವರ್ಷ ವಯಸ್ಸಿನ ಮಕ್ಕಳ ಆರೋಗ್ಯ ದೃಷ್ಟಿಯಿಂದ ಜಾರಿಗೆ ತರಲಾಗಿರುವ ಸ್ನೇಹ ಕ್ಲಿನಿಕ್, ೧೮ ವರ್ಷ ಒಳಗಿನ ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ಮಾಡದಂತೆ ಶಿಕ್ಷಣ ಮೊದಲು-ಮದುವೆ ನಂತರ ಎನ್ನುವ ಫಲಕ, ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ, ಸಾಪ್ತಾಹಿಕ ಕಬ್ಬಿಣ ಮತ್ತು ಪೋಲಿಕ್ ಆಮ್ಲ ಪೂರಕ (ಡಬ್ಲ್ಯುಐಎಫ್ಎಸ್), ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ, ತಾಯಿ ಮತ್ತು ಮಗುವಿನ ಆರೈಕೆ,ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ಟೋಲ್ ಫ್ರೀ ಕಾಲ್, ಕಾಂಗರೂ ಮಾದರಿ ಆರೈಕೆ, ಮಕ್ಕಳ ಆರೈಕೆ, ಆರೋಗ್ಯದ ಮರುಸ್ಥಾಪನೆಗಾಗಿ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳು, ಸಾರ್ವತ್ರಿಕ ಲಸಿಕಾ ಅಭಿಯಾನ, ಗರ್ಭ ನಿರೋಧಕ ಸಾಧನಗಳು, ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ, ಮಾನಸಿಕ ಆರೋಗ್ಯ ಕಾರ್ಯಕ್ರಮ, ಶ್ರವಣ ಸಂಜೀವಿನಿ, ಕ್ಷಯ ಮುಕ್ತ ಕರ್ನಾಟಕ: ಕ್ಷಯರೋಗ- ಮುಕ್ತ ಗ್ರಾಮಗಳು,ಆಯುಷ್ಮಾನ್ ಆರೋಗ್ಯ ಕೇಂದ್ರ, ಋತುಚಕ್ರ ಕುರಿತಾದ ‘ನನ್ನ ಮೈತ್ರಿ’ ಸೇರಿದಂತೆ ಆರೋಗ್ಯ ಇಲಾಖೆಯಿಂದ ಪರಿಚಯಿಸ ಲಾಗಿರುವ ವಿನೂತನ ಕಾರ್ಯ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ವಸ್ತು ಪ್ರದರ್ಶನ ಅವಧಿ ಮುಗಿ ಯುವವರೆಗೂ ಇಲ್ಲಿ ದೊರೆಯಲಿದೆ.
” ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಸೌಲಭ್ಯಗಳನ್ನೂ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಮಳಿಗೆ ತೆರೆಯಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಬಂದು ವೀಕ್ಷಿಸಿ,ಇದರ ಬಗ್ಗೆಅರಿವು ಮೂಡಿಸಿಕೊಂಡು, ಸೌಲಭ್ಯಗಳ ಲಾಭ ಪಡೆಯಲು ಮುಂದಾಗಿದ್ದಾರೆ.”
-ಡಾ. ಕುಮಾರಸ್ವಾಮಿ, ಡಿಎಚ್‌ಒ
” ವಸ್ತು ಪ್ರದರ್ಶನ ಆವರಣದಲ್ಲಿ ತೆರೆಯಲಾಗಿರುವ ಆರೋಗ್ಯ ಇಲಾಖೆಮಳಿಗೆ ಅತ್ಯಂತ ಉಪಯುಕ್ತವಾಗಿದೆ. ಎಲ್ಲವನ್ನೂ ತಾಳ್ಮೆಯಿಂದ ವೀಕ್ಷಿಸಿದರೆ ಆರೋಗ್ಯ ಸೇವೆಯ ಬಗ್ಗೆ ಹಲವು ಮಾಹಿತಿಗಳು ಲಭ್ಯವಾಗುತ್ತವೆ. ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯದ ಕುರಿತ ಕಾಳಜಿ ಎಲ್ಲರಿಗೂ ಅವಶ್ಯವಿದೆ. ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದವರು ಈ ಮಳಿಗೆಗೂ ಭೇಟಿ ನೀಡಿದರೆ ಅಗತ್ಯ ಮಾಹಿತಿ ತಿಳಿದುಕೊಳ್ಳಬಹುದು.”
-ಎಚ್.ಆರ್.ವಾಣಿಶ್ರೀ, ಪ್ರೌಢಶಾಲಾ ಶಿಕ್ಷಕಿ
ಪಂಜು ಗಂಗೊಳ್ಳಿ ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…
ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…
ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…
ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…
ಕೆ.ಬಿ.ರಮೇಶನಾಯಕ ಮೈಸೂರು: ಕಪಿಲಾ ನದಿ ತೀರದ ಸುತ್ತೂರಿನಲ್ಲಿ ಆರುದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮದಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ…