Andolana originals

ಹನೂರು: ಸರ್ಕಾರಿ ಶಾಲಾ ಕೊಠಡಿಗೆ ಅಂಗನವಾಡಿ ಕೇಂದ್ರ ಸ್ಥಳಾಂತರ

ಪಿಲ್ಲರ್ ಕುಸಿತ ಪ್ರಕರಣ; ‘ಆಂದೋಲನ’ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು 

ಹನೂರು: ಪಟ್ಟಣದ ಅಂಗನವಾಡಿ ಒಂದನೇ ಕೇಂದ್ರವನ್ನು ಸರ್ಕಾರಿ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಖಾಲಿ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿದೆ.

ಹನೂರು ತಾಲ್ಲೂಕು ಕೇಂದ್ರ ಸ್ಥಾನದ ಅಂಗನವಾಡಿ ಒಂದನೇ ಕೇಂದ್ರವನ್ನು ಈ ಹಿಂದೆ ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದ ಆವರಣದಲ್ಲಿದ್ದ ಹಳೇ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆರಂಭಿಸಲಾಗಿತ್ತು ಆದರೆ, ಈ ಕಟ್ಟಡವನ್ನು ತಾಲ್ಲೂಕು ಅಭಿಲೇಖಾಲಯ ಕಚೇರಿಗೆ ಹಸ್ತಾಂತರ ಮಾಡಿದ್ದ ಹಿನ್ನೆಲೆಯಲ್ಲಿ ಬಳಕೆಗೆ ಯೋಗ್ಯವಿಲ್ಲದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿತ್ತು.

ನಾಲ್ಕು ದಿನಗಳ ಹಿಂದೆ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿದ್ದ ಅಂಗನವಾಡಿ ಕೊಠಡಿ ಮುಂಭಾಗದ ಪಿಲ್ಲರ್ ಕುಸಿದು ಬಿದ್ದಿತ್ತು. ಈ ವೇಳೆ ಸ್ವಲ್ಪದರಲ್ಲಿಯೇ ಮಕ್ಕಳು ಪಾರಾಗಿ ದೊಡ್ಡ ಅನಾಹುತ ತಪ್ಪಿತ್ತು.

ಈ ಸಂಬಂಧ ‘ಆಂದೋಲನ’ ದಿನಪತ್ರಿಕೆಯಲ್ಲಿ ಫೆಬ್ರವರಿ ೧೫ರ ಸಂಚಿಕೆಯಲ್ಲಿ ಅಂಗನವಾಡಿ ಶಿಥಿಲ ಕಟ್ಟಡದ ಪಿಲ್ಲರ್ ಕುಸಿತ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.

ಇದರಿಂದ ಎಚ್ಚೆತ್ತ ಕೊಳ್ಳೇಗಾಲ ಪ್ರಭಾರ ಸಿಡಿಪಿಒ ಜಯಶೀಲರವರು ಉನ್ನತೀಕರಿಸಿದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿರುವ ಖಾಲಿ ಕೊಠಡಿಯನ್ನು ಅಂಗನವಾಡಿ ಒಂದನೇ ಕೇಂದ್ರಕ್ಕೆ ನೀಡುವಂತೆ ಹನೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಮೀಪದಲ್ಲಿ ಇದ್ದ ಮತ್ತೊಂದು ಕೊಠಡಿಯನ್ನು ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗುವವರೆಗೆ ಅಂಗನವಾಡಿ ಒಂದನೇ ಕೇಂದ್ರದ ಬಳಕೆಗೆ ನೀಡಿ ಅವಕಾಶ ಮಾಡಿಕೊಟ್ಟಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಶನಿವಾರ ಕೊಠಡಿಯನ್ನು ಸ್ವಚ್ಛಗೊಳಿಸಿ ಸಾಮಗ್ರಿಗಳನ್ನು ಸ್ಥಳಾಂತರ ಮಾಡಿದ್ದಾರೆ. ೩ ದಿನಗಳಿಂದ ಅಂಗನವಾಡಿ ಒಂದನೇ ಕೇಂದ್ರದ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಇದೀಗ ಅಂಗನವಾಡಿ ಕೇಂದ್ರಕ್ಕೆ ಯೋಗ್ಯವಾದ ಕೊಠಡಿ ನೀಡಿರುವುದರಿಂದ ಸೋಮವಾರದಿಂದ ಮಕ್ಕಳನ್ನು ಕರೆತಂದು ಅಂಗನವಾಡಿ ಪ್ರಾರಂಭಿಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆ ಸೆಲ್ವಿ ರಾಣಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ತೊಂದರೆ: ತಾತ್ಕಾಲಿಕವಾಗಿ ಅಂಗನವಾಡಿ ಒಂದನೇ ಕೇಂದ್ರಕ್ಕೆ ನೀಡಲಾಗಿರುವ ಕೊಠಡಿಯ ಮುಂದೆ ಇಂದಿರಾ ಕ್ಯಾಂಟೀನ್ ನಿರ್ಮಾಣದ ವೇಳೆ ಕತ್ತರಿಸಲಾಗಿದ್ದ ಮರದ ತುಂಡುಗಳು ಹಾಗೂ ಮಣ್ಣಿನ ಗುಡ್ಡೆ ಇರುವುದರಿಂದ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ಮಣ್ಣಿನ ಗುಡ್ಡೆ ಹಾಗೂ ಮರದ ತುಂಡುಗಳು ತೆರವುಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.

” ಹನೂರು ಪಟ್ಟಣದ ಅಂಗನವಾಡಿ ಒಂದನೇ ಕೇಂದ್ರ ಕಾರ್ಯಾ ಚರಿಸುತ್ತಿದ್ದ ತಾತ್ಕಾಲಿಕ ಕೊಠಡಿ ಶಿಥಿಲಗೊಂಡು ಪಿಲ್ಲರ್ ಕುಸಿತವಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದ್ದು, ಈ ಬಗ್ಗೆ ‘ಆಂದೋಲನ’ ದಿನಪತ್ರಿಕೆ ವರದಿ ಪ್ರಕಟಿಸಿದ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿದಿರುವುದು ಸಂತಸ ತಂದಿದೆ.”

-ಸ್ಪೂರ್ತಿ, ಪೋಷಕರು.

ಆಂದೋಲನ ಡೆಸ್ಕ್

Recent Posts

ವಿಶ್ವಕಪ್‌ ಗೆದ್ದ ಬಳಿಕ ರೈಲು ಹತ್ತಿ ಬಂದ ಶಿವಂ ದುಬೆ!

ಮುಂಬೈ : ಭಾರತ ತಂಡ ಟಿ20 ವಿಶ್ವಕಪ್ 2026ರಲ್ಲಿ ನ್ಯೂಜಿಲೆಂಡ್‌ನ್ನು 96 ರನ್‌ಗಳಿಂದ ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಫೈನಲ್‌ನಲ್ಲಿ…

4 mins ago

ಫಾರುಕ್ ಹತ್ಯೆ ಯತ್ನ : ಆರೋಪಿ ಕಮಲ್‌ ಸಿಂಗ್‌ ಹೇಳಿದ್ದೇನು?

ಜಮ್ಮು : ರಾಷ್ಟ್ರೀಯ ಸಮ್ಮೇಳನ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಡಾ. ಫಾರುಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ಸಂಜೆ…

21 mins ago

ಅಡುಗೆ ಅನಿಲ ಕೊರತೆ ; ಸಂಸದರು ಬಾಯಿ ಬಿಡಬೇಕು ; ಡಿ.ಕೆ.ಶಿವಕುಮಾರ್‌

ಬೆಂಗಳೂರು : ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕೊರತೆ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಬೇಕು. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು…

48 mins ago

ಫಲ ನೀಡಿದ ಮಾತುಕತೆ : ಹಾರ್ಮುಜ್ ಜಲಸಂಧಿ ದಾಟಿದ ತೈಲ ಟ್ಯಾಂಕರ್‌

ಹೊಸದಿಲ್ಲಿ : ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿ ಬಂದ್ ಆಗುವ ಆತಂಕದಲ್ಲಿದ್ದ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ.…

1 hour ago

ವೈರಲ್‌ ಹುಡುಗಿ ʻಮೊನಾಲಿಸಾʼ ಮದುವೆಗೆ ತಂದೆ ವಿರೋಧಿಸಿದ್ದೇಕೆ….. ಯಾರಿ ಈ ಹುಡುಗ?

ತಿರುವನಂತಪುರಂ : 2025ರ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ವೈರಲ್ ಸ್ಟಾರ್ ಮೊನಾಲಿಸಾ ಭೋಸ್ಲೆ ಅವರು ತಮ್ಮ ಪ್ರಿಯಕರ ಮುಹಮ್ಮದ್…

2 hours ago

32 ವರ್ಷಗಳ ನಂತರ ನಾಗರತ್ನಮ್ಮ ಸ್ಮಾರಕಕ್ಕೆ ಅಭಿವೃದ್ಧಿ ಭಾಗ್ಯ

ಸಿಎಂಗೆ ಶಾಸಕ ಗಣೇಶ್ ಪ್ರಸಾದ್ ಮನವಿ; ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ:…

2 hours ago