Andolana originals

ಕೋಟೆ: ಮೂರೂ ಜಲಾಶಯಗಳ ಹೊರ ಹರಿವು ಇಳಿಕೆ

ಪ್ರವಾಹ ಭೀತಿಯಲ್ಲಿದ್ದ ಜನತೆ ಈಗ ನಿರಾಳ: ಜಮೀನುಗಳಿಗೆ ನೀರು ಹರಿಸಲು ಆಗ್ರಹ

  • ಮಂಜು ಕೋಟೆ

ಎಚ್. ಡಿ. ಕೋಟೆ: ತಾಲ್ಲೂಕಿನ ಕಬಿನಿ, ನುಗು, ತಾರಕ ಜಲಾಶಯಗಳು ಭರ್ತಿಯಾಗಿದ್ದರಿಂದ ಹೊರ ಬಿಡಲಾಗುತ್ತಿದ್ದ ಭಾರೀ ಪ್ರಮಾಣದ ನೀರನ್ನು ಕಡಿಮೆ ಮಾಡಿರುವುದರಿಂದ ತಾಲ್ಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಹಲವು ವರ್ಷಗಳ ನಂತರ ತಾಲ್ಲೂಕಿನಲ್ಲಿರುವ ಕಬಿನಿ, ತಾರಕ, ನುಗು ಜಲಾಶಯಗಳು ಜುಲೈ ತಿಂಗಳಲ್ಲೇ ಭರ್ತಿಯಾಗಿ ರೈತರು, ಜನರಲ್ಲಿ ಸಂತಸ ಮೂಡಿತ್ತು. ಆದರೆ, ಕೇರಳದ ವಯನಾಡು, ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯ ಆರ್ಭಟದಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರಿಂದ ಪ್ರವಾಹ ಸ್ಥಿತಿ ಉಂಟಾಗಿ ಜನಸಾಮಾನ್ಯರಲ್ಲಿ ಆತಂಕ ಉಂಟಾಗಿತ್ತು.

ಆದರೆ, ೨ ದಿನಗಳಿಂದ ಮಳೆ ಪ್ರಮಾಣ ಕಡಿಮೆ ಯಾಗಿದ್ದು ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಸಹ ಕಡಿಮೆಯಾಗಿದೆ. ಇದರಿಂ ದಾಗಿ ಕಬಿನಿ ಜಲಾಶಯದಿಂದ ಹೊರಬಿಡುತ್ತಿದ್ದ ೭೦ ಸಾವಿರ ಕ್ಯೂಸೆಕ್ಸ್ ನೀರಿನ ಹೊರಹರಿ ವನ್ನು ೪೦ ಸಾವಿರ ಕ್ಯೂಸೆಕ್ಸ್‌ಗೆ ಇಳಿಸಲಾಗಿದೆ. ತಾರಕ ಜಲಾಶಯದಿಂದ ೩ ಸಾವಿರ ಕ್ಯೂಸೆಕ್ಸ್‌ನಿಂದ ೨೦೦ ಕ್ಯೂಸೆಕ್ಸ್‌ಗೆ, ನುಗು ಜಲಾಶಯದಿಂದ ೧೦ ಸಾವಿರ ಕ್ಯೂಸೆಕ್ಸ್‌ನಿಂದ ೩ ಸಾವಿರ ಕ್ಯೂಸೆಕ್ಸ್‌ಗೆ ಹೊರಹರಿವನ್ನು ತಗ್ಗಿಸಲಾಗಿದೆ.

ಒಂದೇ ತಿಂಗಳಲ್ಲಿ ಮೂರು ಜಲಾಶಯಗಳಿಂದ ೬೫ ಟಿಎಂಸಿ ನೀರನ್ನು ನದಿಯ ಮೂಲಕ ತಮಿಳು ನಾಡಿಗೆ ಹರಿಸಲಾಗಿದೆ. ಮೂರೂ ಜಲಾಶಯಗಳಿಗೆ ಒಟ್ಟು ೮೦ ಟಿಎಂಸಿ ನೀರು ಹರಿದು ಬಂದಿದೆ. ಕಬಿನಿ ಜಲಾಶಯದ ಗರಿಷ್ಟ ಮಟ್ಟ ೮೪ ಅಡಿಗಳನ್ನು ತಲುಪಿದ್ದು, ಒಳಹರಿವು ೪೦,೦೦೦ ಕ್ಯೂಸೆಕ್ಸ್‌ನಷ್ಟಿದೆ.

ನುಗು ಜಲಾಶಯದ ಗರಿಷ್ಟ ಮಟ್ಟ ೧೧೦ ಅಡಿಗಳಿದ್ದು, ಸಂಪೂರ್ಣ ಭರ್ತಿಯಾಗಿದೆ. ೫ ಸಾವಿರ ಕ್ಯೂಸೆಕ್ಸ್ ಹರಿದುಬರುತ್ತಿದೆ.

ತಾರಕ ಜಲಾಶಯವೂ ಗರಿಷ್ಟ ಮಟ್ಟ ೧೨೫ ಅಡಿಗಳನ್ನು ತಲುಪಿದ್ದು ೩೦೦ ಕ್ಯೂಸೆಕ್ಸ್ ಒಳಹರಿವು ಬರುತ್ತಿದೆ. ಈ ಎಲ್ಲಾ ಜಲಾಶಯಗಳು ಏಕಕಾಲ ದಲ್ಲೇ ಭರ್ತಿಯಾಗಿದ್ದು, ಜಲಾಶಯಗಳಿಂದ ಕೆರೆ ಕಟ್ಟೆಗಳಿಗೆ, ರೈತರ ಜಮೀನುಗಳಿಗೆ ನೀರು ಹರಿಸಲು ಅಽಕಾರಿಗಳು ಮತ್ತು ಜನಪ್ರತಿನಿಽಗಳು ಸಕ್ರಿಯವಾಗಿ ಕೆಲಸ ನಿರ್ವಹಿಸಬೇಕಿದೆ.

ಕ್ಷೇತ್ರದ ಕಬಿನಿ, ತಾರಕ, ನುಗು ಜಲಾಶಯಗಳು ಕಳೆದ ತಿಂಗಳು ಭರ್ತಿಯಾಗಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ತಾರಕ ಮತ್ತು ನುಗು ಜಲಾಶಯಗಳಿಗೆ ಬಾಗಿನ ಅರ್ಪಿಸಲಾ ಗುವುದು. ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ ವೇಳೆ ಕ್ಷೇತ್ರದ ಮತ್ತು ಜಲಾಶಯಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದ್ದಾರೆ
-ಅನಿಲ್ ಚಿಕ್ಕಮಾದು, ಶಾಸಕರು

ಆಂದೋಲನ ಡೆಸ್ಕ್

Recent Posts

ತಂಬಾಕು ಬೆಳೆಗಾರರ ಸಮಸ್ಯೆ: ಜಿಎಸ್‌ಟಿ ಮೂಲಕ ತೆರಿಗೆ ಹಾಕುವ ಕೇಂದ್ರವು ಪರಿಹಾರ ನೀಡಲಿ ಎಂದ ಎಂ.ಲಕ್ಷ್ಮಣ್

ಮೈಸೂರು: ಕಾರ್ಪೋರೇಷನ್ ನೀರಿನ ದರ ಏರಿಕೆ ಮಾಡುತ್ತಿದ್ದಾರೆ ಎಂದು ಅರ್ಧ ಪೈಸೆ ಜಾಸ್ತಿಯಾಗಿರುವುದಕ್ಕೆ ಹೋರಾಟ ಮಾಡುತ್ತಾರೆ. ಆದರೆ ರೈತರ ಸಮಸ್ಯೆಗಳ…

21 mins ago

RSS ವಿಷ ಸರ್ಪ ಎಂಬ ಖರ್ಗೆ ಹೇಳಿಕೆ ವಿಚಾರ: ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ

ಮೈಸೂರು: RSS ವಿಷ ಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ…

36 mins ago

ಗ್ಯಾಸ್ ಸಿಲಿಂಡರ್‌ ಅಭಾವ: ಆಟೋ ಚಾಲಕರನ್ನು ಮುಂದೆ ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ: ಎಂ ಲಕ್ಷ್ಮಣ್ ಕಿಡಿ

ಮೈಸೂರು: ರಾಜ್ಯದಲ್ಲಿ ಗ್ಯಾಸ್‌ ಸಿಲಿಂಡರ್‌ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರನ್ನು ಮುಂದೆ ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರುವ…

47 mins ago

ಏಪ್ರಿಲ್.‌5ರಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ

ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಏಪ್ರಿಲ್.‌15ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಶ್ರೀಮಠದಲ್ಲಿ…

1 hour ago

ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತಗೊಳಿಸಲು ಶ್ರಮಿಸಿ : ಎಡಿಸಿ ತಾಕೀತು

ಮೈಸೂರು : ಬಾಲ ಕಾರ್ಮಿಕ ಪದ್ಧತಿಯು ದೇಶಕ್ಕೆ ಮಾರಕವಾಗಿದ್ದು, ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತವಾಗಿಸಲು ಅಧಿಕಾರಿಗಳು ಹೆಚ್ಚಿನ ಜಾಗೃತಿ…

1 hour ago

ಆಟೋ ಗ್ಯಾಸ್‌ ಕೊರತೆ ; ವದಂತಿಗಳಿಗೆ ಕಿವಿಗೊಡದಂತೆ ಸಲಹೆ

ಬೆಂಗಳೂರು : ರಾಜ್ಯದಲ್ಲಿರುವ ಆಟೋ ಮಾಲೀಕರು ಮತ್ತು ಚಾಲಕರು ಆತಂಕಕ್ಕೆ ಒಳಗಾಗಬಾರದು ಹಾಗೂ ಆಟೋ ಗ್ಯಾಸ್ ಕೊರತೆಯ ಬಗ್ಗೆ ಯಾವುದೇ…

2 hours ago