Andolana originals

ದುಸ್ಥಿತಿಯಲ್ಲಿ ಸರ್ಕಾರಿ ಮಹಾರಾಜ ಸಂಸ್ಕೃತ ಪಾಠಶಾಲೆ ಕಟ್ಟಡ

ಪ್ರಶಾಂತ್ ಎಸ್.

ಮೈಸೂರು: ಸಂಸ್ಕೃತ, ವೇದ, ಆಗಮ ಮತ್ತು ಶಾಸ್ತ್ರಗಳನ್ನು ಬೋಽಸುವ ಪ್ರಮುಖ ಸಾಂಪ್ರದಾಯಿಕ ಶಿಕ್ಷಣ ನೀಡುತ್ತಿರುವ ನಗರದ ಸರ್ಕಾರಿ ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆ ಕಟ್ಟಡ ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿದೆ. ಕ್ರಿ.ಶ.೧೮೬೮ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ರಿಂದ ಈ ಸಂಸ್ಥೆ ಪ್ರಾರಂಭವಾಗಿದ್ದು, ನಿರ್ವಹಣೆಯ ಕೊರತೆಯಿಂದ ದುಸ್ಥಿತಿಯಲ್ಲಿದೆ.

ಸುಮಾರು ೧೫೦ ವರ್ಷಗಳ ಇತಿಹಾಸವಿರುವ ಈ ಪಾಠಶಾಲೆಯ ಕಟ್ಟಡದಲ್ಲಿ ಹಳೆಯ ಸಂಸ್ಕೃತ ಹಸ್ತಪ್ರತಿಗಳ ಅಪರೂಪದ ಸಂಗ್ರಹವನ್ನು ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಶೈಕ್ಷಣಿಕ ವಲಯದಲ್ಲಿ ವಿಶಿಷ್ಟ ಗುರುತು ಮೂಡಿಸಿದೆ.

ಗೋಡೆಗಳೆಲ್ಲಾ ಬಿರುಕುಗಳು: ಹಲವಾರು ತರಗತಿ ಕೊಠಡಿಗಳ ಗೋಡೆಗಳಲ್ಲಿ ಬಿರುಕುಗಳು ಮೂಡಿದ್ದು, ಇಂತಹ ಅಪಾಯಕಾರಿ ಸ್ಥಿತಿಯಲ್ಲೇ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳು ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚು ಮಳೆಂಯಾದರೆ ಅನಾಹುತಕ್ಕೆ ಎಡೆಮಾಡಿ ಕೊಡುವ ಸ್ಥಿತಿ ಇದೆ. ಈ ಪಾಠಶಾಲೆಯಲ್ಲಿ ಜೂನ್ ೧ರಿಂದ ಪ್ರವೇಶಾತಿ ಹಾಗೂ ತರಗತಿಗಳು ಪ್ರಾರಂಭವಾಗಲಿದ್ದು, ಸುರಕ್ಷತೆಯ ಬಗ್ಗೆ ಭೀತಿ ಎದುರಾಗಿದೆ.

ನಿರ್ವಹಣೆ ಕೊರತೆ: ಈ ಹಿಂದೆ ಮೈಸೂರು ಅರಸರು ಈ ಕಟ್ಟಡವನ್ನು ಸಂಸ್ಕೃತ ಪಾಠಶಾಲೆಗೆಂದು ಸಂಸ್ಕೃತ, ವೇದ ಹಾಗೂ ಆಗಮವನ್ನು ಕಲಿಸಲು ದಾನವಾಗಿ ಕೊಟ್ಟಿದ್ದರು. ಇದನ್ನು ನಿರ್ವಹಣೆ ಮಾಡುವಲ್ಲಿ ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತಿದೆ. ಆಗಮ ಹಾಗೂ ವೇದ ಕಲಿಕಾ ವಿಭಾಗದ ಕಟ್ಟಡ ಶಿಥಿಲವಾಗಿದ್ದು, ನೀರು ಸೋರುತ್ತದೆ. ಸಾಹಿತ್ಯ ವಿಭಾಗ (ಕಚೇರಿ ಕಟ್ಟಡ)ವೂ ಶಿಥಿಲಗೊಂಡಿವೆ.

ಪತ್ರ ವ್ಯವಹಾರ : ಒಂದೂವರೆ ಶತಮಾನ ಕಂಡಿರುವ, ಹಳೆಯದಾದ ಕಟ್ಟಡವಿದು. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡವನ್ನು ದುರಸ್ತಿ ಮಾಡಿಕೊಡಬೇಕು ಎಂದು ಅಲ್ಲಿನ ಪ್ರಾಂಶುಪಾಲರು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಮಳೆಯಾದಾಗ ಅಲ್ಲಲ್ಲಿ ಸೋರುವುದು ಸಾಮಾನ್ಯವಾಗಿದೆ. ಹೀಗಾಗಿ, ಅದನ್ನು ತಪ್ಪಿಸಲು ಅಗತ್ಯ ದುರಸ್ತಿ ಮಾಡಬೇಕು. ಗೋಡೆಗಳಿಗೆ ಸುಣ್ಣದ ಗಾರೆಯ ಪ್ಲಾಸ್ಟರಿಂಗ್ ಆಗಬೇಕು. ಗೋಡೆಗಳಲ್ಲಿನ ಬಿರುಕು ಮುಚ್ಚಿಸಿ ಪ್ಲಾಸ್ಟರಿಂಗ್ ಮಾಡಬೇಕು. ಚಾವಣಿಯಲ್ಲಿ ಈಗ ಇರುವ ಪದರವನ್ನು ತೆಗೆದು ಸುಣ್ಣ ಮಿಶ್ರಿತ ಜಲ  ನಿರೋಧಕ ಅಳವಡಿಸಬೇಕು. ಹಾಳಾಗಿರುವ ಮರದ ಕಿಟಕಿ ಹಾಗೂ ಬಾಗಿಲುಗಳ ದುರಸ್ತಿ ಆಗಬೇಕು. ಮರದ ಕಂಬ, ಬಾಗಿಲು ಮತ್ತು ಕಿಟಕಿಗಳಿಗೆ ಪಾಲಿಶ್ ಆಗಬೇಕು ಹಾಗೂ ಕಟ್ಟಡದ ಹೊರಭಾಗಕ್ಕೆ ಬಣ್ಣ ಬಳಿಯಬೇಕು ಎಂದು ಮನವಿ ಮಾಡಲಾಗಿದೆ.

೧ ಕೋಟಿ ರೂ. ಮೊತ್ತದ ಅಂದಾಜು ಪಟ್ಟಿ ಸಲ್ಲಿಕೆ: ಕಟ್ಟಡಗಳ ದುರಸ್ತಿಯ ಅಗತ್ಯವಿರುವ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಳೆ ಬಂದಾಗ ವಿವಿಧೆಡೆ ಸೋರುತ್ತದೆ. ಶಿಥಿಲಾವಸ್ಥೆಗೆ ತಲುಪಿರುವುದರಿಂದ ಎದುರಾಗ ಬಹುದಾದ ಅಪಾಯಗಳ ಬಗ್ಗೆಯೂ ತಿಳಿಸಲಾಗಿದೆ. ಪಾರಂಪರಿಕ ಕಟ್ಟಡವಾದ್ದರಿಂದ ಪುರಾತತ್ವ ಇಲಾಖೆ ಜತೆಗೂ ಪತ್ರ ವ್ಯವಹಾರ ನಡೆಸಿದ್ದೇವೆ. ಈಚೆಗೆ ಲೋಕೋಪಯೋಗಿ ಇಲಾಖೆ ಮೂಲಕ ೧ ಕೋಟಿ ರೂ. ಮೊತ್ತಕ್ಕೆ ಅಂದಾಜುಪಟ್ಟಿ ಸಲ್ಲಿಕೆಯಾಗಿದೆ.

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಭರವಸೆ ನೀಡಿದ್ದಾರೆ. ಕಟ್ಟಡಗಳು ದುರಸ್ತಿ ಆಗುವವರೆಗೂ ಆತಂಕ ಇದ್ದದ್ದೇ ಎಂದು ‘ಆಂದೋಲನ’ ಪತ್ರಿಕೆಗೆ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಪಿ. ಸತ್ಯನಾರಾಯಣ ಮಾಹಿತಿ ನೀಡಿದರು.

ಆಗಮ ಕಲಿಕೆಗೆ ೧೫೦ ರಿಂದ ೨೦೦ ವಿದ್ಯಾರ್ಥಿಗಳು ದಾಖಲು: ಈ ಪಾಠಶಾಲೆಯಲ್ಲಿ ಕಳೆದ ವರ್ಷ ೭೦ ಮಕ್ಕಳು ಕಲಿತು ಹೋಗಿದ್ದಾರೆ. ಜೂನ್ ೧ರಿಂದ ಪ್ರವೇಶಾತಿ ಆರಂಭವಾಗಲಿದೆ. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಅರ್ಚಕರಾಗಿ ನೇಮಕಾತಿ ಹೊಂದ ಬೇಕಾದರೆ ಧಾರ್ಮಿಕ ದತ್ತಿ ಇಲಾಖೆ ಯಿಂದ ನಡೆಸುವ ಆಗಮ ಪರೀಕ್ಷೆ ಉತ್ತೀರ್ಣರಾಗಿರಬೇಕು. ಆದ್ದರಿಂದ, ಇಲ್ಲಿಗೆ ಆಗಮ ಕೋರ್ಸ್ ಓದಲೆಂದು ವಿವಿಧ ಜಿಲ್ಲೆಗಳ ಮಕ್ಕಳು ಬರುತ್ತಾರೆ. ೬ನೇ ತರಗತಿಗೆ ಇಲ್ಲಿ ಬಂದು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ.

ಇದರೊಂದಿಗೆ ಶಾಲಾ ಕಲಿಕೆಗೆಂದು ದಳವಾಯಿ, ಡಿ. ಬನುಮಯ್ಯ, ಜೆಎಸ್‌ಎಸ್, ಮರಿಮಲ್ಲಪ್ಪ ಮೊದಲಾದ ಶಾಲೆಗಳಿಗೂ ಹೋಗುತ್ತಾರೆ. ಆಗಮ(ಆಗಮ ಪ್ರವರ, ಆಗಮ ಪ್ರವೀಣ) ಕಲಿಯಲೆಂದೇ ವಾರ್ಷಿಕ ಸರಾಸರಿ ೧೫೦ ರಿಂದ ೨೦೦ ಮಂದಿ ಇರುತ್ತಾರೆ.

” ಮಳೆ ಬಂದಾಗ ನೀರು ಸೋರದಂತೆ ಮಾಡಿಕೊಡಬೇಕು. ಸುಣ್ಣ-ಬಣ್ಣ ಬಳಿಸಿಕೊಡಬೇಕು ಎಂದು ಕೋರಿದ್ದೇವೆ. ೧೦-೧೫ ವರ್ಷಗಳಿಂದ ನಮ್ಮ ಕಟ್ಟಡ ಬಣ್ಣ ಕಂಡಿಲ್ಲ. ಹಿಂದೆಲ್ಲಾ ದಸರಾ ಸಮಯದಲ್ಲಿ ನಮ್ಮ ಪಾಠಶಾಲೆಗೂ ಬಣ್ಣ ಬಳಿಯಲಾಗುತ್ತಿತ್ತು. ಆದರೆ, ಅದು ನಿಂತಿದೆ. ಪಾರಂಪರಿಕ ಕಟ್ಟಡವನ್ನು ಉತ್ತಮವಾಗಿ ದುರಸ್ತಿಪಡಿಸಿದರೆ ಸುರಕ್ಷತೆಯ ದೃಷ್ಟಿಯಿಂದ ಎದುರಾಗಿರುವ ಆತಂಕ ದೂರಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆದಿರುವೆ. ಜತೆಗೆ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು ಅಂದಾಜು ಪಟ್ಟಿಯನ್ನು ಪರಿಶೀಲಿಸಿ ಅನುದಾನ ಬಿಡುಗಡೆಗೆ ಕ್ರಮವಹಿಸುವೆ ಎಂದು ತಿಳಿಸಿದ್ದಾರೆ.”

-ಪಿ. ಸತ್ಯನಾರಾಯಣ, ಪ್ರಾಂಶುಪಾಲರು, ಸರ್ಕಾರಿ ಮಹಾರಾಜ ಸಂಸ್ಕೃತ ಪಾಠಶಾಲೆ

” ನಾನು ವಿದ್ಯಾಭ್ಯಾಸ ಮಾಡುವಾಗಲೂ ಕಟ್ಟಡದ ಗೋಡೆಗಳು ಶಿಥಿಲವಾಗಿದ್ದವು. ಮಳೆ ಬಂದರೆ ಸೋರುತ್ತಿದ್ದು ಪಾಠ ಕೇಳಲು ಆಗದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಶಾಲೆಯ ಭದ್ರತೆಗೆ ಸೆಕ್ಯುರಿಟಿ ಕೂಡ ಇಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಕಟ್ಟಡದ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ವಿದ್ಯಾಥಿಗಳಿಗೆ ಅನುಕೂಲ ಮಾಡಿಕೊಡಬೇಕು.”

 -ಅಭಿಷೇಕ್ ಆರಾಧ್ಯ, ಹಳೆಯ ವಿದ್ಯಾರ್ಥಿ

” ಇದು ಮೈಸೂರಿನ ಹೃದಯ ಭಾಗದಲ್ಲಿರುವ ಕಟ್ಟಡವಾಗಿರುವುದರಿಂದ ಪಾರಂಪರಿಕ ನಗರಿಯ ಹೆಗ್ಗುರುತನ್ನು ನಾವು ಉಳಿಸಿಕೊಳ್ಳಬೇಕು. ಪಾರಂಪರಿಕತೆಯ ಮೌಲ್ಯವನ್ನು ನಾವು ಕಳೆದುಕೊಳ್ಳಬಾರದು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಂಸ್ಕೃತ ಶಾಲೆಯ ಕಟ್ಟಡವನ್ನು ಉಳಿಸಿಕೊಳ್ಳಬಹುದು. ಇದರಿಂದ ಶಿಥಿಲ ಕಟ್ಟಡದಿಂದಾಗುವ ಅನಾಹುತವನ್ನು ತಪ್ಪಿಸಬಹುದು.”

-ದೇವರಾಜು, ಸಾರ್ವಜನಿಕರು

 

 

ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

14 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

14 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

14 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

15 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

15 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

21 hours ago