Andolana originals

ಕೊಡಗಿನಲ್ಲಿ ಕೋಮು ಸೌಹಾರ್ದತೆ ಸಾರಿದ ಹಬ್ಬದಾಚರಣೆ

ಮಡಿಕೇರಿ: ಹಲವಾರು ಕೋಮು ಸಂಘರ್ಷದಿಂದ ಸೂಕ್ಷ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹಬ್ಬದಾಚರಣೆ ಶಾಂತಿಯುತ ಹಾಗೂ ಸೌಹಾರ್ದತೆಯಿಂದ ನಡೆದಿದೆ.

ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಾರಿ ಪರಸ್ಪರ ಸೌಹಾರ್ದತೆಯಿಂದ ಹಬ್ಬದಾಚರಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗಣೇಶೋತ್ಸವಕ್ಕೂ ಮುನ್ನವೇ ಪೊಲೀಸ್ ಇಲಾಖೆಯಿಂದ ಧಾರ್ಮಿಕ ಮುಖಂಡರ ಸಭೆ ನಡೆಸಿ ಶಾಂತಿಯುತವಾಗಿ ಹಬ್ಬದಾಚರಣೆ ಮಾಡಲು ಕರೆ ನೀಡಲಾಗಿತ್ತು. ಈದ್ ಮಿಲಾದ್‌ಗೂ ಮುನ್ನ ಪೊಲೀಸ್ ಇಲಾಖೆ ಸಭೆಗಳನ್ನು ಆಯೋಜಿಸುವ ಮೂಲಕ ಸೌಹಾರ್ದತೆ ಯಿಂದ ಹಬ್ಬದಾಚರಣೆಗೆ ಮನವಿ ಮಾಡಲಾಗಿತ್ತು.

ಎರಡೂ ಧರ್ಮಗಳ ಮುಖಂಡರೂ ಶಾಂತಿಯುತ ಹಬ್ಬಗಳ ಆಚರಣೆಗೆ ಸಹಕಾರ ನೀಡುವ ಭರವಸೆ ನೀಡಿದ್ದರು. ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಜಿಲ್ಲೆಯ ಹಲೆವೆಡೆ ಹಿಂದೂ ಸಹೋದರರಿಗೆ ಸಿಹಿ, ಪಾನೀಯ ವ್ಯವಸ್ಥೆ ಮಾಡಿದ್ದರು. ಅದಕ್ಕೆ ಬದಲಾಗಿ ಮುಸ್ಲಿಂ ಸಮುದಾಯದವರ ಈದ್ ಮಿಲಾದ್ ಆಚರಣೆ ಸಂದರ್ಭ ದಲ್ಲಿಯೂ ಹಿಂದೂ ಬಾಂಧವರು ಸಿಹಿ ಹಾಗೂ ಪಾನೀಯ ವಿತರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಜಿಲ್ಲೆಯ ಬೋಯಿಕೇರಿ, ೭ನೇ ಹೊಸಕೋಟೆ, ಸುಂಟಿಕೊಪ್ಪ, ಕುಶಾಲ ನಗರದಲ್ಲಿ ಸೌಹಾರ್ದ ಯುತವಾಗಿ ಹಬ್ಬವನ್ನು ಆಚರಿಸಿದ್ದಾರೆ. ಪೊಲೀಸ್ ಇಲಾಖೆ ಕೂಡ ಸೌಹಾರ್ದಯುತ ಹಬ್ಬ ಆಚರಣೆ ಮಾಡಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.

ಸಾಕಷ್ಟು ಬಾರಿ ಸಂಘರ್ಷಗಳಿಂದ ಹೆಚ್ಚಿನ ಸುದ್ದಿಯಾಗುತ್ತಿದ್ದ ಜಿಲ್ಲೆಯಲ್ಲಿ ಈ ಬಾರಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ನಡೆದ ಹಬ್ಬದಾಚರಣೆ ಹೆಚ್ಚು ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಧರ್ಮದವರೂ ಪಾನೀಯ ಹಂಚುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹೊರ ಜಿಲ್ಲೆಗಳಲ್ಲಿ ಹಬ್ಬದಾಚರಣೆ ಸಂದರ್ಭದಲ್ಲಿ ಶಾಂತಿ ಕದಡುತ್ತಿರುವ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಸದ್ದಿಲ್ಲದೆ ಶಾಂತಿಯುತವಾಗಿ ಪರಸ್ಪರ ಸೌಹಾರ್ದ ತೆಯಿಂದ ಹಬ್ಬ ಆಚರಣೆ ನಡೆದಿ ರುವುದು ಶ್ಲಾಘನೀಯ.

ಹಬ್ಬದಾಚರಣೆಗಳು ಪರಸ್ಪರ ಸಾಮರಸ್ಯ ಮೂಡಿಸುವಂತಿರ ಬೇಕು. ಆ ನಿಟ್ಟಿನಲ್ಲಿ ಈ ಬಾರಿ ೨ ಧರ್ಮದವ ರಿಂದಲೂ ಸೌಹಾರ್ದಯುತ ಹಬ್ಬದಾಚರಣೆಗಳು ನಡೆದಿವೆ. ಇದು ಮುಂದುವರಿಯಬೇಕು. ಇತರ ಧರ್ಮದವರನ್ನು ಸಹೋದರರಂತೆ ಕಾಣುವ ಮನೋಭಾವನೆ ಹೆಚ್ಚಾಗಬೇಕು. ಎಲ್ಲ ಹಬ್ಬದಾಚರಣೆಗಳು ಈ ರೀತಿಯಲ್ಲಿಯೇ ನಡೆಯುವಂತಾಗಬೇಕು. ಕೊಡಗು ಮಾತ್ರವಲ್ಲದೆ ಇತರ ಜಿಲ್ಲೆ, ದೇಶದಲ್ಲಿಯೂ ಇಂತಹ ಆಚರಣೆ ನಡೆಯುವಂತಾಗಬೇಕು.
-ತಮ್ಲಿಖ್ ಧಾರಿಮಿ, ಧಾರ್ಮಿಕ ಮುಖಂಡ, ಕೊಡಗು

ಕೊಡಗು ಜಿಲ್ಲೆಯಲ್ಲಿ ಹಬ್ಬದಾಚರಣೆಗಳು ಅರ್ಥಪೂರ್ಣ ವಾಗಿ ನಡೆದಿವೆ. ಜಿಲ್ಲೆಯ ಜನರ ನೈಜ ಭಾವನೆಗಳನ್ನು ಅರಿತುಕೊಳ್ಳಬೇಕಿದೆ. ಎಲ್ಲ ಜನಾಂಗದವರು ಪ್ರೀತಿ-ವಿಶ್ವಾಸದಿಂದ ಬದುಕುವ ನಿಟ್ಟಿನಲ್ಲಿ ಇಂತಹ ಆಚರಣೆಗಳು ಅವಶ್ಯವಾಗಿವೆ. ಕೊಡಗಿನಲ್ಲಿ ಹೆಚ್ಚಿನ ಶಿಕ್ಷಣ ಪಡೆದಿರುವವರು ಇರುವುದರಿಂದ ಇಂತಹ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ. ಇದು ಎಲ್ಲೆಡೆ ಮುಂದುವರಿಯಬೇಕು.
-ಶ್ರೀ ಸದಾಶಿವ ಸ್ವಾಮೀಜಿ, ಕಿರಿಕೊಡ್ಲಿ ಮಠ, ಸೋಮವಾರಪೇಟೆ.

ನವೀನ್‌ ಡಿಸೋಜ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನವನಾದ ನಾನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮಾಡಿ ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜ್ಯಮಟ್ಟದ ವಾಹಿನಿಗಳಾದ ಸುದ್ದಿಟಿವಿ, ಸಮಯ ಟಿವಿ, ಸ್ಥಳೀಯ ವಾಹಿನಿಗಳಾದ ಕೊಡಗು ಚಾನಲ್, ಚಾನಲ್ 24 ಕರ್ನಾಟಕ ವಾಹಿನಿಗಳಲ್ಲಿ ಜಿಲ್ಲಾ ವರದಿಗಾರ, ಪತ್ರಿಕೆಗಳಾದ ಕನ್ನಡಪ್ರಭ, ಕಾವೇರಿ ಟೈಮ್ಸ್ ಸಂಸ್ಥೆಗಳಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದೇನೆ. ಸದ್ಯ ಆಂದೋಲನ ಪತ್ರಿಕೆಯಲ್ಲಿ ಕಳೆದ ಸುಮಾರು 5 ವರ್ಷಗಳಿಂದ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದರೊಂದಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿದ್ದು, ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಕೇರಂ ನೆಚ್ಚಿನ ಕ್ರೀಡೆಗಳಾಗಿವೆ.

Recent Posts

ಅಂಬೇಡ್ಕರ್‌ಗೆ ಅವಮಾನ | ಮೈಸೂರಲ್ಲಿ ಅಮಿತ್‌ ಶಾ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…

19 mins ago

ಸಿ.ಟಿ. ರವಿಗೆ ಮುತ್ತಿಗೆ ಹಾಕಿ ಹಲ್ಲೆಗೆ ಯತ್ನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…

1 hour ago

ಕಾಂಗ್ರೆಸ್‌ನವರು ನಕಲಿ ಹೋರಾಟಗಾರರು: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್‌…

3 hours ago

ಮೈಸೂರು ಮುಡಾ ಕೇಸ್:‌ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್‌

ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್‌ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…

3 hours ago

ಬಿಜೆಪಿ ಸಂಸದರಿಂದ ನನ್ನ ಮೇಲೆ ಹಲ್ಲೆ ಆಗಿದೆ: ಸ್ಪೀಕರ್‌ಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಸಂಸತ್‌ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…

3 hours ago

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಸಂವಿಧಾನಿಕ ಪದ ಬಳಸಿದ ಸಿ.ಟಿ.ರವಿ?

ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್‌ ಶಾ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…

4 hours ago