Andolana originals

‘ಗಾಂಧೀಜಿ ಬದುಕೇ ಯುವ ಸಮೂಹಕ್ಕೆ ಪಾಠ’

ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ ವಿಚಾರ ಮಂಥನ, ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳ ಅಭಿನಂದನಾ ಸಮಾರಂಭದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ 

ಮೈಸೂರು: ಮಹಾತ್ಮ ಗಾಂಧೀಜಿಯವರ ಆತ್ಮಕಥೆ ‘ಗಾಂಧೀಜಿ ಬದುಕೇ ಯುವ ಸಮೂಹಕ್ಕೆ  ಪಾಠ’  ಹಾಗೂ ಸಮಗ್ರ ಸಾಹಿತ್ಯ ಓದಿದರೆ ಬದುಕಿನ ದೃಷ್ಟಿಕೋನ ಬದಲಾಗುತ್ತದೆ. ಸತ್ಯ, ಅಹಿಂಸೆ, ಸರಳತೆ, ತಪ್ಪು ಒಪ್ಪಿಕೊಳ್ಳುವ ನೈತಿಕ ಸ್ಥೈರ್ಯ ಮತ್ತು ಎಲ್ಲರನ್ನೂ ಪ್ರೀತಿಸುವ ಗುಣಗಳನ್ನು ಗಾಂಧೀಜಿಯವರ ಬದುಕಿನಿಂದ ಯುವ ಸಮೂಹ ಕಲಿಯಬೇಕು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಹೇಳಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ‘ಆಂದೋಲನ’ ದಿನಪತ್ರಿಕೆ, ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ನಡೆದ ‘ಗಾಂಧೀಜಿ ಅವರ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ’ ಶತಮಾನೋತ್ಸವದ ಅಂಗವಾಗಿ ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ ವಿಚಾರ ಮಂಥನ, ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಸವಣ್ಣ, ಸ್ವಾಮಿ ವಿವೇಕಾನಂದ, ಗಾಂಧಿಜಿ, ಅಂಬೇಡ್ಕರ್‌ರಂತಹ ಮಹಾನ್ ವ್ಯಕ್ತಿಗಳ ಬದುಕು ಮತ್ತು ಸಂದೇಶಗಳನ್ನು ಅಧ್ಯಯನ ಮಾಡಿದರೆ ಯುವಜನರಿಗೆ ಪ್ರೇರಣೆ ದೊರೆ ಯುತ್ತದೆ. ಗಾಂಧಿಜಿಯವರನ್ನು ಪ್ರಶ್ನಾತೀತ ವ್ಯಕ್ತಿಯಾಗಿ ನೋಡಬೇಕಿಲ್ಲ. ಅವರ ಸಾಹಿತ್ಯವನ್ನು ಆಳವಾಗಿ ಓದಿ, ಅರ್ಥ ಮಾಡಿಕೊಂಡು ಪ್ರಶ್ನಿಸಬಹುದು. ಆದರೆ ಓದದೆ, ಅರ್ಥಮಾಡಿಕೊಳ್ಳದೆ ಟೀಕಿಸುವುದು ಸರಿಯಲ್ಲ ಎಂದರು.

ಗಾಂಧಿಜಿ ಯಾರನ್ನೂ ದ್ವೇಷಿಸಲಿಲ್ಲ. ಬ್ರಿಟಿಷರನ್ನೂ ದ್ವೇಷಿಸದೆ ಅವರ ನೀತಿಗಳನ್ನುವಿರೋಧಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ೨,೩೨೯ ದಿನಗಳ ಜೈಲುವಾಸ ಹಾಗೂ ೧೪೨ ದಿನಗಳ ಉಪವಾಸದ ಮೂಲಕ ತ್ಯಾಗ ಮಾಡಿದರು. ಎಲ್ಲ ವರ್ಗದ ಜನರಿಗೂ ಸ್ವೀಕಾರಾರ್ಹವಾಗಿರುವ ನಾಯಕತ್ವದ ಅಗತ್ಯ ಇಂದಿನ ಸಮಾಜಕ್ಕಿದೆ. ಅಂತಹ ನಾಯಕತ್ವದ ಮಾದರಿ ಗಾಂಧಿಜಿಯವರಲ್ಲಿತ್ತು ಎಂದರು. ಗಾಂಧಿಜಿಯವರ ಬದುಕಿನಿಂದ ಐದು ಪ್ರಮುಖ ಗುಣಗಳನ್ನು ಕಲಿಯಬಹುದು. ದ್ವೇಷಕ್ಕೆ ಪ್ರೀತಿಯಿಂದ ಉತ್ತರಿಸುವುದು, ಸಮಾಜದಿಂದ ಹೊರಗಿಡಲ್ಪಟ್ಟವರನ್ನು ಒಳಗೊಳ್ಳುವುದು, ಕ್ಷಮೆ ಕೇಳುವ ಮುನ್ನವೇ ಕ್ಷಮಿಸುವ ಉದಾರತೆ, ತಪ್ಪುಗಳನ್ನು ಒಪ್ಪಿಕೊಳ್ಳುವ ನೈತಿಕ ಧೈರ್ಯ ಹಾಗೂ ಕಪಟವಿಲ್ಲದ ಸರಳ ಬದುಕು.

ಈ ಗುಣಗಳು ಅವರ ನಾಯಕತ್ವವನ್ನು ವಿಶಿಷ್ಟವಾಗಿಸಿವೆ. ಗಾಂಧೀಜಿ ಯವರ ಕನಸಿನ ಸಮಾಜವನ್ನು ರಾಷ್ಟ್ರಕವಿ ಕುವೆಂಪು ಅವರು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸಾಲಿನಲ್ಲಿ ಸುಂದರವಾಗಿ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಈ ಆಶಯವನ್ನು ಜೀವನದ ಭಾಗವಾಗಿಸಿಕೊಂಡರೆ ಗಾಂಧಿಜಿಯವರ ಚಿಂತನೆಗಳನ್ನು ಅಳವಡಿಸಿಕೊಂಡಂತೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಅಂತಾ ರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾ ಗ್ರಾಹಕ ಕೃಪಾಕರ ಮಾತನಾಡಿ, ಗಾಂಧಿಜಿ ಯವರ ಸರಳತೆ, ವಿನಯ, ದೂರದೃಷ್ಟಿ ಮತ್ತು ಅಹಿಂಸೆಯ ಚಿಂತನೆಗಳು ಇಂದಿಗೂ ಜಗತ್ತಿಗೆ ಮಾದರಿಯಾಗಿವೆ. ಆದರೆ ಭಾರತ ದಲ್ಲಿಯೇ ಗಾಂಧಿಜಿಯವರ ವಿಚಾರಧಾರೆ ಗಳನ್ನು ಮರೆಸುವ ಪ್ರಯತ್ನಗಳು ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಅವರ ಚಿಂತನೆ ಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅಗತ್ಯವಿದೆ ಎಂದರು.

‘ಆಂದೋಲನ’ ದಿನಪತ್ರಿಕೆಯ ಸಂಪಾದಕ ರವಿ ಕೋಟಿ ಮಾತನಾಡಿ, ಗಾಂಧಿಜಿಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಗೋಡ್ಸೆ ಜನ್ಮದಿನ ಆಚರಣೆಯಂತಹ ಬೆಳವಣಿಗೆಗಳನ್ನು ಗಮನಿಸಿದಾಗ ಮುಂದಿನ ಪೀಳಿಗೆಗೆ ಗಾಂಧಿಜಿ ಅವರ ಬದುಕು ಮತ್ತು ಚಿಂತನೆಗಳನ್ನು ಪರಿಚಯಿಸುವ ಅಗತ್ಯ ಮನವರಿಕೆಯಾಯಿತು. ಈ ಕುರಿತು ಹಿರಿಯರೊಂದಿಗೆ ಚರ್ಚಿಸಿ ದಾಗ ಅಭಿಯಾನದ ಕಲ್ಪನೆ ಮೂಡಿತು ಎಂದರು. ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಗಾಂಧಿಜಿಯವರ ಸತ್ಯ, ಅಹಿಂಸೆ, ಶಾಂತಿ, ಸಹಬಾಳ್ವೆ ಮತ್ತು ಸಹಿಷ್ಣುತೆಯ ವಿಚಾರಧಾರೆಗಳು ಹಿಂದೆಯೂ ಪ್ರಸ್ತುತವಾಗಿದ್ದವು, ಇಂದಿಗೂ ಪ್ರಸ್ತುತವಾಗಿವೆ. ಮುಂದೆಯೂ ಅವುಗಳ ಪ್ರಸ್ತುತತೆ ಕಡಿಮೆಯಾಗುವುದಿಲ್ಲ. ವಿದ್ಯಾರ್ಥಿಗಳು ಗಾಂಧಿಜಿಯವರ ಜೀವನಮೌಲ್ಯಗಳನ್ನು ಅರ್ಥಮಾಡಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು.

‘ಆಂದೋಲನ’ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವಿಚಂದ್ರ ಚಿಕ್ಕಕೆಂಪಿಹುಂಡಿ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್ ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಅಹಿಂಸಾ ಚಳವಳಿಯಿಂದಲೇ ಬ್ರಿಟಿಷರನ್ನು ನಡುಗಿಸಿದವರು ಗಾಂಧೀಜಿ: ಅರವಿಂದ ಚೊಕ್ಕಾಡಿ

‘ಗಾಂಧಿ ವ್ಯಕ್ತಿತ್ವ ಮತ್ತು ವಿಚಾರ: ಸಮಕಾಲೀನ ಸಂದರ್ಭ’ ಕುರಿತು ವಿಷಯ ಮಂಡನೆ ಮಾಡಿದ ಹಿರಿಯ ಲೇಖಕರ ಅಭಿಮತ ಮೈಸೂರು: ವಿವಿಧ ಸಂಸ್ಥಾನಗಳು,…

20 mins ago

ಗಾಂಧೀಜಿ ಚಿಂತನೆಗೆ ಒರೆಗಲ್ಲಾದ ಸತ್ಯಾನ್ವೇಷಣೆ

‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಹಿರಿಯ ಗಾಂಧಿವಾದಿಗಳು, ವಿದ್ಯಾರ್ಥಿಗಳು ಮೈಸೂರು: ಮಧ್ಯಪ್ರಾಚ್ಯದೇಶಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ತನ್ನ…

38 mins ago

ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಲೋಕಸಭಾ ಸ್ಥಾನಗಳ ಸಂಖ್ಯೆ…

18 hours ago

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಇಂಡಿಯಾ ಮೈತ್ರಿಕೂಟದ ವಿರೋಧ | ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ನವದೆಹಲಿ: ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ವಿರೋಧಿಸುವುದಾಗಿ ಇಂಡಿಯಾ ಮೈತ್ರಿಕೂಟ ಘೋಷಿಸಿದೆ. ನವೆಂಬರ್ 30ರಂದು ಲೋಕಸಭೆಯಲ್ಲಿ ಮಸೂದೆ ಚರ್ಚೆಗೆ ಬರುವ ನಿರೀಕ್ಷೆಯಿದೆ. ಲೋಕಸಭೆಯ…

18 hours ago

ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ | ಭರವಸೆ ಈಡೇರಿಸಲು ಬದ್ಧ ಎಂದ ಮೋದಿ

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಭರವಸೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು…

19 hours ago