Andolana originals

ಹುಲಿಗಳ ಚಲನವಲನ ಅರಿಯಲು ಮೊಬೈಲ್ ಆ್ಯಪ್; ವ್ಯಾಘ್ರನ ಗಣತಿಗೆ ತಂತ್ರಜ್ಞಾನದ ಮೊರೆ ಹೋದ ಅರಣ್ಯ ಇಲಾಖೆ

ಮೈಸೂರು: ಅರಣ್ಯ ಪ್ರದೇಶದಲ್ಲಿ ಹುಲಿಗಳ ಚಲನವಲನ ಹುಲಿಗಳ ಅರಿಯಲು ಅರಣ್ಯ ಇಲಾಖೆ ಇದೀಗ ಮೊಬೈಲ್ ಆ್ಯಪ್ ತಂತ್ರಜ್ಞಾನದ ಮೊರೆ ಹೋಗಿದೆ. ಹುಲಿಗಳ ಕುರಿತು ಆಂತರಿಕ ಗಣತಿ ಕೈಗೊಂಡಿರುವ ಇಲಾಖೆ ಇದೇ ಮೊದಲ ಬಾರಿಗೆ ಆ್ಯಪ್ ಬಳಸಿ ಮೊಬೈಲ್ ಮೂಲಕವೇ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಈ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಇದಕ್ಕಾಗಿ ಈಗಾಗಲೇ 1000 ಮೊಬೈಲ್‌ಗಳನ್ನು ಖರೀದಿಸಲಾಗಿದೆ ಎಂದು ಡಿ.ಸಿ.ಎಫ್. ಹರ್ಷ ಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ಗಣತಿ ನಡೆಯುವ ಬಗೆ: ಪ್ರಮುಖವಾಗಿ ವನ್ಯಪ್ರಾಣಿಗಳು ಹಾದು ಹೋಗುವ ಕೇಂದ್ರೀಕೃತ ಪ್ರದೇಶಗಳಲ್ಲಿ ಗುರುತಿಸಿರುವ ಸ್ಥಳದ ಎರಡೂ ಬದಿಯಲ್ಲಿ ಅಂದರೆ ಪ್ರತಿ 2 ಚ.ಕಿ.ಮೀ.ಗೆ ಒಂದು ಕಡೆ ಸೆನ್ಸಾರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಾರ್ಗದಲ್ಲಿ ಹಾದು ಹೋಗುವ ಹುಲಿ ಜತೆಗೆ ಇತರೆ ಪ್ರಾಣಿಗಳ ಚಿತ್ರವನ್ನು ಎರಡು ಕಡೆಯೂ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಹಿಡಿಯುತ್ತವೆ. ಹುಲಿ ಮೈ ಮೇಲಿನ ಪಟ್ಟೆ ಆಧರಿಸಿ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ.

ಹುಲಿ ಗಣತಿಯನ್ನು ನಾಲ್ಕು ವಿಧಾನದಲ್ಲಿ ನಡೆಸಲಾಗುತ್ತದೆ. ಮೊದಲ ಎರಡು ಹಂತದಲ್ಲಿ ಹುಲಿ ಇರುವಿಕೆಯ ಚಿಹ್ನೆ ಮತ್ತು ಹೆಜ್ಜೆ ಗುರುತು ಮೂಲಕ ಗುರುತಿಸಲಾಗುತ್ತದೆ. ಮೂರನೇ ಹಂತದಲ್ಲಿ ಜಿಐಎಸ್ ಆ್ಯಪ್ ನೊಂದಿಗೆ ಸಿದ್ಧಪಡಿಸಿದ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಿ ಎಣಿಸಲಾಗುತ್ತದೆ. ಕೊನೆ ಹಂತದಲ್ಲಿ ಕ್ಯಾಮೆರಾ ಹಾಕದ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಿ ದತ್ತಾಂಶ ಕಲೆ ಹಾಕಲಾಗುತ್ತದೆ.

ಅರಣ್ಯದಲ್ಲೀಗ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಯಿದ್ದು, ವನ್ಯಜೀವಿಗಳ ಜೀವನ ಕ್ರಮದಲ್ಲೂ ಸಾಕಷ್ಟು ಬದಲಾವಣೆಯ ಪರ್ವ ಕಾಲವಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಉದ್ಯಾನವ್ಯಾಪ್ತಿಯ ಅಂತರಸಂತೆ ವಲಯ 4200 ಕಿ.ಮೀ.
ಈ ವ್ಯಾಪ್ತಿಯಲ್ಲಿ ಕೇವಲ 1800 ಕಿ.ಮೀ. ವ್ಯಾಪ್ತಿಯಲ್ಲಿ ದಟ್ಟ ಕಾಡಿದ್ದು ವನ್ಯಜೀವಿಗಳು ತಮ್ಮ ಸಹಜ ಜೀವನ ಕ್ರಿಯೆಗಾಗಿ ಕಾಡಿನಿಂದ ಹೊರಬರುವುದು ರೂಢಿಯಾಗಿ ಬಿಟ್ಟಿದೆ.

ಅರಣ್ಯದಲ್ಲಿ ಸಹಜತೆಯನ್ನು ಕಾಪಾಡುವಲ್ಲಿ ಬದ್ಧತೆ ಅವಶ್ಯಕ. ವನ್ಯಜೀವಿಗಳ ಆಹಾರ ಚಕ್ರದಲ್ಲಿ ಹುಲಿಯ ಪಾತ್ರವೇ ಬಹುಮುಖ್ಯ. ಅರಣ್ಯದಲ್ಲಿನ ನೀರಿನ ಸಂಪನ್ಮೂಲ ಅಭಿವೃದ್ಧಿಗೂ ಈ ವನ್ಯಜೀವಿಗಳ ಆಹಾರ ಚಕ್ರವೇ ಬಹುಮುಖ್ಯ. ಹೀಗಾಗಿ ಯಾವುದೇ ಪ್ರಾಣಿಗಳ ಜೊತೆ ಲಘುವಾಗಿ ನಡೆದುಕೊಳ್ಳದೇ ಅರಣ್ಯದಲ್ಲಿ ಸಹಜತೆಯನ್ನು ಕಾಪಾಡಿಕೊಳ್ಳಲು ಇಲಾಖೆ ಶ್ರಮಿಸುತ್ತಿದೆ ಎಂದು ಡಿ.ಸಿ.ಎಫ್. ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ನಾಗರಹೊಳೆ ಉದ್ಯಾನವನದ ಕಚೇರಿಯಲ್ಲಿ ಇತ್ತೀಚೆಗೆ ಗಣತಿದಾರರಿಗೆ ತರಬೇತಿಯನ್ನೂ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಹರ್ಷಕುಮಾರ್, ಪರಿಸರದ ಕುರಿತು ಕಾಳಜಿ ಮತ್ತು ಅಧ್ಯಯನದ ಜೊತೆಗೆ ಹುಲಿ ಗಣತಿ ಕಾರ್ಯಕ್ಕೆ ಬಂದಿರುವ ಸ್ವಯಂಸೇವಕರು ಕಾಡಿನೊಳಗೆ ವನ್ಯಜೀವಿಗಳ ದೈನಂದಿನ ಬದುಕಿಗೆ ಯಾವುದೇ ತೊಂದರೆಯಾಗದಂತೆ ಗಣತಿ ಕಾರ್ಯದಲ್ಲಿ ತೊಡಗಬೇಕೆಂದು ಮಾಹಿತಿ ನೀಡಿದರು.

ಹುಲಿ ಗಣತಿ ಅತ್ಯಂತ ಕಷ್ಟಕರವಾಗಿದ್ದು, ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸುವ ಎಲ್ಲಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಹುಲಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿಯ ಶ್ರಮ ಅಪಾರವಾದದ್ದು. ಹಾಗೆ ಕಾಡ್ಗಿಚ್ಚು ಕುರಿತು ಗಮನಹರಿಸುವಂತೆ ಸೂಚನೆ ನೀಡಿದ್ದೇವೆ.

• ಹರ್ಷಕುಮಾರ್ ಚಿಕ್ಕನರಗುಂದ, ಡಿಸಿಎಫ್ ನಾಗರಹೊಳೆ ಹುಲಿ ಸಂರಕಿತ ಪ್ರದೇಶ

ಪ್ರಶಾಂತ್‌ ಎಸ್

ಮೈಸೂರಿನವನಾದ ನಾನು ಪದವಿಯಲ್ಲಿ ಪತ್ರಿಕೋದ್ಯಮ ‌ಮಾಡಿದ್ದು 2015ರಿಂದ ನ್ಯೂಸ್ 1 ಕನ್ನಡದಿಂದ(ಟಿವಿ) ಪ್ರಾರಂಭಿಸಿ ,ಯಶ್ ಟೆಲ್ (ಟಿವಿ) ಇಂಡಿಯನ್ (ಟಿ ವಿ) ಪ್ರಜಾನುಡಿ ಪತ್ರಿಕೆ, ಪ್ರತಿನಿಧಿ ಪತ್ರಿಕೆ ಸಂಸ್ಥೆಯಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸಿದ್ದೇನೆ. ಕಳೆದ ಎರಡು ವರ್ಷಗಳಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನಗೆ ಹಾಡುಗಳನ್ನು ಕೇಳುವುದು, ಅರಣ್ಯಗಳನ್ನು ಸುತ್ತುವುದು ಹಾಗೂ ಅರ್ಥಶಾಸ್ತ್ರದ ಕಡೆ ಹೆಚ್ಚು ಒಲವು ಇದ್ದು ಪತ್ರಿಕಾ ರಂಗದಲ್ಲಿ ಅರಣ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ.

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

1 hour ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago