Andolana originals

ಹಿನಕಲ್ ಶಾಲೆಯಲ್ಲಿ ಫಿನ್‌ಲ್ಯಾಂಡ್ ಶಿಕ್ಷಣ

ಅನುಚೇತನ್ ಕೆ.ಎಂ. 

ಸರ್ಕಾರಿ ಶಾಲೆಯಲಿ ಅಂತಾರಾಷ್ಟ್ರೀಯ ಮಾದರಿ ಕಲಿಕೆಗೆ ಅವಕಾಶ!

ಮೈಸೂರು: ರೋಬೊಟಿಕ್ ಶಿಕ್ಷಣ! ಕೃತಕ ಬುದ್ಧಿಮತ್ತೆ, ೩ಡಿ ಪ್ರಿಂಟಿಂಗ್ ತಂತ್ರಜ್ಞಾನ… ಈ ಅತ್ಯಾಧುನಿಕ ಬೋಧನ ವ್ಯವಸ್ಥೆ ಇರುವ ಶಾಲೆ ಎಂದರೆ ಎರಡನೇ ಯೋಚನೆಯೇ ಇಲ್ಲದೆ ಯಾವುದೋ ಖಾಸಗಿ ವಿದ್ಯಾಸಂಸ್ಥೆ ಅನಿಸುವುದು ಸಹಜ. ಆದರೆ, ಇದು ಸರ್ಕಾರಿ ಪ್ರಾಥಮಿಕ ಶಾಲೆ! ಅದೂ ಫಿನ್ ಲ್ಯಾಂಡ್ ಮಾದರಿಯನ್ನು ಹೊಂದಿರುವ ಶಾಲೆ ಎಂಬುದೇ ಆಶ್ಚರ್ಯಕರ ಸಂಗತಿ.

ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ನಗರದ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಜಗತ್ತಿನಲ್ಲಿ ಅತ್ಯುತ್ತಮವಾದ ಫಿನ್‌ಲ್ಯಾಂಡ್ ಮಾದರಿಯ ಶಿಕ್ಷಣವನ್ನು ಶಿಕ್ಷಕರೊಬ್ಬರು ತಮ್ಮ ವೈಯಕ್ತಿಕ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದಾರೆ.

ಫಿನ್‌ಲ್ಯಾಂಡ್ ಮಾದರಿ ಶಿಕ್ಷಣ: ಇಡೀ ಜಗತ್ತಿನಲ್ಲಿ ಅತ್ಯುತ್ತಮ ಶಿಕ್ಷಣ ಫಿನ್‌ಲ್ಯಾಂಡ್ ದೇಶದಲ್ಲಿ ದೊರೆಯುತ್ತಿದ್ದು ಇದರಿಂದ ಸೂರ್ತಿ ಪಡೆದ, ಹಿನಕಲ್ ಸರ್ಕಾರಿ ಶಾಲೆಯ ಶಿಕ್ಷಕ ಮಧುಸೂದನ್ ಅವರು ಒಂದು ವರ್ಷದ ಹಿಂದೆ ತಮ್ಮ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣದ ಜೊತೆಗೆ ಅನುಭವಾತ್ಮಕ ಕಲಿಕೆ ನೀಡುವ ನಿಟ್ಟಿನಲ್ಲಿ ೬ ತಿಂಗಳುಗಳು ಶಿಕ್ಷಣ ಮಾದರಿಗೆ ಅನುಗುಣವಾಗಿ ತಮ್ಮ ಸ್ನೇಹಿತರು ಹಾಗೂ ಹಲವಾರು ತಜ್ಞರೊಂದಿಗೆ ಸಂಶೋಧನೆ ನಡೆಸಿ ೨೦೨೪ರ ಜೂನ್ ತಿಂಗಳಿಂದ ಅನುಭವಾತ್ಮಕ ಕಲಿಕೆ ನೀತಿಯನ್ನು ಅಳವಡಿಸಿಕೊಂಡಿದ್ದಾರೆ.

೨೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಈ ಶಾಲೆಯಲ್ಲಿ ೫ರಿಂದ ೭ನೇ ತರಗತಿವರೆಗಿಮ ಮಕ್ಕಳಿಗಾಗಿ ಒಂದು ವಿಜ್ಞಾನ ಲ್ಯಾಬ್ ನಿರ್ಮಿಸಿ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ತರಬೇತಿ ನೀಡಲಾಗುತ್ತಿದೆ.

ಏನಿದು ಅನುಭವಾತ್ಮಕ ಕಲಿಕೆ?: ಶಿಕ್ಷಕ ಮಧುಸೂದನ್ ವೈಯಕ್ತಿಕವಾಗಿ ೩ ಲಕ್ಷ ರೂ.ಗಳನ್ನು ವಿನಿಯೋಗಿಸಿ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಕಲಿಕೆ ಮಾದರಿಯಲ್ಲಿ ರೋಬೊಟಿಕ್ಸ್ ಶಿಕ್ಷಣ, ಕೃತಕ ಬುದ್ಧಿಮತ್ತೆ, ೩ಡಿ ಪ್ರಿಂಟಿಂಗ್ ತಂತ್ರಜ್ಞಾನ, ವರ್ಚುವಲ್ ರಿಯಾಲಿಟಿ, ಬೇಸಿಕ್ ಎಲೆಕ್ಟ್ರಾನಿಕ್ಸ್ ಕಲಿಕೆ, ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಇಂಗ್ಲಿಷ್ ಕಲಿಕೆ ರೀತಿಯ ಶಿಕ್ಷಣ ತರಬೇತಿ ವ್ಯವಸ್ಥೆಯನ್ನು ಮಾಡಿದ್ದಾರೆ.

ಇದಲ್ಲದೆ, ಕೆಲವು ಖಾಸಗಿ ಕಂಪೆನಿಗಳ ಸಹಕಾರದಿಂದ ತಮ್ಮದೇ ಆದ ಕೆಲವೊಂದು ಸಾ- ವೇರ್ ಸೃಷ್ಟಿಸಿ ಹೊಸ ಚಿಂತನೆಗಳೊಂದಿಗೆ ತರಬೇತಿ ನೀಡಲಾಗುತ್ತಿದೆ. ಅದರಲ್ಲಿ ಸಂಪೂರ್ಣ ಗುರಿ ಸಾಧಿಸಲು ಸರಾಸರಿ ೧೫ ಲಕ್ಷ ರೂ. ಬೇಕಾಗಲಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ನಮ್ಮ ವಿದ್ಯಾರ್ಥಿಗಳಲ್ಲದೆ ಬೇರೆ ಶಾಲೆಗಳ ಮಕ್ಕಳಿಗೂ ತರಬೇತಿ ನೀಡುತ್ತೇವೆ ಎಂಬುದಾಗಿ ಮಧುಸೂದನ್  ಹೇಳುತ್ತಾರೆ.

ಏನೆಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ?: ಹೊಸ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್ ತರಗತಿ ಹಾಗೂ ೧ನೇ ಮತ್ತು ೨ನೇ ತರಗತಿ ಮಕ್ಕಳಿಗೆ ಪ್ರೊಜೆಕ್ಟರ್ ಮೂಲಕ ಸ್ಮಾರ್ಟ್ ಕ್ಲಾಸ್ ನಡೆಸಲು ಅವಕಾಶ ಇದೆ. ತಮ್ಮದೇ ಆದ ಒಂದು ವೆಬ್‌ಸೈಟ್ ಸೃಷ್ಟಿಸಿಕೊಂಡು ಕ್ಯೂಆರ್ ಕೋಡ್ ಹಾಗೂ ಸ್ಕ್ಯಾನರ್ ಮೂಲಕ ಮಕ್ಕಳ ದಾಖಲಾತಿ ನಮೂದಿಸಲಾಗುತ್ತದೆ. ದಾಖಲಾದ ಹಾಜರಾತಿಯು ಮಕ್ಕಳ ಪೋಷಕರ ಮೊಬೈಲ್‌ಗೆ  ಸಂದೇಶದ ಮೂಲಕ ರವಾನೆಯಾಗುವಂತೆಯೂ ಮಾಡಲಾಗಿದೆ. ಇದರಿಂದ ಮಕ್ಕಳ ಚಲನವಲನದ ಬಗ್ಗೆ ಪೋಷಕರಿಗೆ ತಿಳಿಯುವಂತಾಗುತ್ತದೆ. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ವೆಬ್‌ಸೈಟ್ ಮುಖಾಂತರ ಪಡೆದುಕೊಳ್ಳುವ ರೀತಿಯಲ್ಲಿ ಸಾ-ವೇರ್ ಅಭಿವೃದ್ಧಿ ಪಡಿಸಿದ್ದು, ಪೋಷಕರೂ ಪ್ರತಿಯೊಂದು ಮಾಹಿತಿಯನ್ನೂ ಮೊಬೈಲ್‌ನಲ್ಲಿ ಮೂಲಕ ನೋಡುವ ಅವಕಾಶ ಕಲ್ಪಿಸಲಾಗಿದೆ.

ಟಯೈ (ಟಿಐಇ) ಜಾಗತಿಕ ಸಭೆಯಲ್ಲಿ ಭಾಗಿ: 

ಬೆಂಗಳೂರಿನಲ್ಲಿ ನಡೆದ ಟಯೈ ಗ್ಲೋಬಲ್ ಸಮ್ಮಿಟ್‌ನಲ್ಲಿ ಸುಮಾರು ೩೬ ದೇಶಗಳಿಂದ ಆಗಮಿಸಿದ್ದವರ ಪೈಕಿ ಹಿನಕಲ್ ಸರ್ಕಾರಿ ಶಾಲೆಯ ೫ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಗ್ರೇ ವಾಟರ್ ಶುದ್ಧೀಕರಣ ಎಂಬ ಪ್ರಾಯೋಗಿಕದೊಂದಿಗೆ ದಿನ ನಿತ್ಯ ಮನೆಯಲ್ಲಿ ಶೌಚಾಲಯ ನೀರನ್ನು ಹೊರತುಪಡಿಸಿ, ಇತರ ತ್ಯಾಜ್ಯದ ನೀರನ್ನುಶುದ್ಧೀಕರಿಸಿ ಗಾರ್ಡನ್‌ಗಳಿಗೆ, ಶೌಚಾಲಯಕ್ಕೆ, ಬಟ್ಟೆ, ಪಾತ್ರೆ ತೊಳೆಯಲು ಬಳಸುವ ಮಾದರಿಯನ್ನು ಸಿದ್ಧಪಡಿಸಿ ಪ್ರಸ್ತುತಪಡಿಸಲಾಗಿದೆ.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಭಾಜನ ಮಧುಸೂದನ್: 

ಮಧುಸೂದನ್ ಅವರು ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಹಾಗೂ ಗಣಿತ ಬೋಽಸುತ್ತಾರೆ. ಕಳೆದ ವರ್ಷ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈಸೂರಿನವರಾದ ಇವರು ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸಂಶೋಧಕರಾಗಿ ಗುರುತಿಸಿಕೊಂಡಿದ್ದು, ಕಬಡ್ಡಿ ಆಟದಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಸಚಿವರಿಂದ ಪ್ರಶಂಸೆ:

” ನಮ್ಮ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಾಲೆಗೆ ಭೇಟಿ ನೀಡಿ, ಶಿಕ್ಷಕರ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಗಳಿಂದಲೂ ತರಬೇತಿಗಾಗಿ ನಮ್ಮ ಶಾಲೆಗೆ ಭೇಟಿ ನೀಡುತ್ತಾರೆ. ಅತ್ಯುತ್ತಮ ಗೌರವ ದೊರಕಿರುವುದು ನಮಗೆ ಹಾಗೂ ಶಾಲೆಗೆ ದೊರಕಿರುವ ಸೌಭಾಗ್ಯ”

ಸದಾಶಿವಪ್ಪ , ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿನಕಲ್.

” ಹೊಸ ರೀತಿಯ ವಿಶಿಷ್ಟ ಮಾದರಿಯ ಶಿಕ್ಷಣ ತರಬೇತಿ ನೀಡುತ್ತಿರುವುದು ತುಂಬಾ ಹೆಮ್ಮೆಯಾಗುತ್ತದೆ. ಶಿಕ್ಷಕ ಮಧುಸೂದನ್ ಅವರು ಮಾದರಿ ಶಿಕ್ಷಕರಾಗಿದ್ದಾರೆ. ಶಿಕ್ಷಕರೊಂದಿಗೆ ಚರ್ಚಿಸಿ ಬೇರೆ ಶಾಲೆಯ ಮಕ್ಕಳಿಗೂ ಇಂತಹ ತರಬೇತಿ ನೀಡುವಂತಹ ವ್ಯವಸ್ಥೆ ಕಲ್ಪಿಸಬೇಕೆಂಬ ಆಶಯವಿದೆ.”

ಎಂ.ಪ್ರಕಾಶ್, ಕ್ಷೇತ್ರ ಶಿಕ್ಷಣ ಅಽಕಾರಿ, ಮೈಸೂರು ತಾಲ್ಲೂಕು ವಲಯ

ಆಂದೋಲನ ಡೆಸ್ಕ್

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

3 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

4 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

4 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

4 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

5 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

5 hours ago