Andolana originals

ನ್ಯಾಯ ಸಿಗುವ ಭರವಸೆಯಿಂದ ಪ್ರತಿದಿನ ಹೋರಾಟ

ದೂರುದಾರ ವ್ಯಕ್ತಿಯ ಪರ ವಕಾಲತ್ತು ವಹಿಸಿರುವ ಸರ್ವೋಚ್ಚ ನ್ಯಾಯಾಲಯದ ವಕೀಲ ಧನಂಜಯ ಆಂತರ್ಯದ ಮಾತು ಇಲ್ಲಿದೆ.

ಪ್ರಕರಣದ ತನಿಖೆ ನಡೆಸಿದರೆ ಯಾರು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಪೊಲೀಸ್ ಇಲಾಖೆ ಭಯ ಪಡುತ್ತಿದೆ. ಇವರು ಯಾರ ಬಳಿ ಸಂಬಳ ಪಡೆಯುತ್ತಿದ್ದಾರೆ? ನಾವು ಏನು ಮಾಡಿದರೂ ನಡೆಯುತ್ತದೆ ಎಂದು ಪೊಲೀಸರು ತಿಳಿದುಕೊಂಡಿದ್ದಾರೆ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಅಸಹಜ ಸಾವುಗಳು ಹಾಗೂ ಹೆಣ್ಣುಮಕ್ಕಳ ಮೃತ ದೇಹಗಳನ್ನು ಗೌಪ್ಯವಾಗಿ ಹೂತಿರುವ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ತಂಡ ರಚನೆ ಮಾಡಿರುವುದರಿಂದ ಹೂತುಹೋಗಿದ್ದ ಪ್ರಕರಣಕ್ಕೆ ಮರುಜೀವ ಬಂದಂತಾಗಿದ್ದು, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ.

ಒಂದೆಡೆ ಪ್ರಕರಣದ ತನಿಖೆಯ ಕುರಿತು ಕುತೂಹಲ ಹೆಚ್ಚಾಗಿದ್ದರೆ, ಅಲ್ಲಿ ನಡೆದಿರುವ ಅಸಹಜ ಸಾವುಗಳು, ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ ಪ್ರಕರ ಣವನ್ನು ಕೈಗೆತ್ತಿಕೊಂಡಿರುವ ವಕೀಲರ ಆತ್ಮವಿಶ್ವಾಸ ನುಡಿಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಹೋರಾಟಗಾರರಿಗೆ ಕೊಂಚ ಭರವಸೆ ಮೂಡಿಸಿದೆ.

ಈ ನಡುವೆ ಪ್ರಕರಣದ ದೂರುದಾರ, ಅನಾಮಿಕ ವ್ಯಕ್ತಿಯ ಪರವಾಗಿ ವಕಾಲತ್ತು ವಹಿಸಿರುವ ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಕೆ.ವಿ.ಧನಂಜಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಒಳನೋಟಗಳನ್ನು ತೆರೆದಿಟ್ಟಿದ್ದು, ಅವರು ‘ಥರ್ಡ್ ಐ’ ಎಂಬ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿರುವ ದೂರುದಾರ ನ್ಯಾಯಾಲಯದ ಎದುರು ಜು.೩ರಂದು ಹಾಜರಾದರು.  ಜು.೪ರಂದು ಎಫ್ಐಆರ್ ದಾಖಲಿಸಲಾಯಿತು.  ದೂರುದಾರ ವ್ಯಕ್ತಿ ಹೇಳುತ್ತಿರುವುದು ಸುಳ್ಳೋ,  ಸತ್ಯವೋ ಎಂದು ಯೋಚಿಸುವಲ್ಲಿ ಸಾಮಾನ್ಯ ಜನರಿಗೆ ಇರುವಷ್ಟು ಕುತೂಹಲ ಕೂಡ ಪೊಲೀಸ್ ಇಲಾಖೆಗೆ ಇಲ್ಲವಾಗಿತ್ತು. ದೂರು ದಾಖಲಾಗಿ ಹದಿನೈದು ದಿನಗಳು ಕಳೆದರೂ ಪ್ರಕರಣದ  ತನಿಖೆಗೆ ಪ್ರಕ್ರಿಯೆ ಆರಂಭಿಸಲಿಲ್ಲ. ಪೊಲೀಸರು ಕತ್ತೆ ಕಾಯುತ್ತಿದ್ರಾ?.

ಅನುಭವ ಇಲ್ಲದ ತನಿಖಾಧಿಕಾರಿ: ಎಸ್‌ಐಟಿ ರಚನೆಗೂ ಮುನ್ನ ೩೫ ವರ್ಷ ವಯಸ್ಸಿನ ಪಿಎಸ್‌ಐ ಪ್ರಕರಣದ ತನಿಖಾಧಿಕಾರಿ ಯಾಗಿದ್ದರು. ಆತನಿಗೆ ಯಾವ ಅನುಭವವಾಗಿದೆ ಅಂತ ತನಿಖಾಧಿಕಾರಿಯಾಗಿ ನೇಮಿಸಿದರು.

ಅನುಭವವೇ ಇಲ್ಲದ ವ್ಯಕ್ತಿಗೆ ಪ್ರಕರಣದ ತನಿಖೆ ವಹಿಸಿದ್ದು ಏಕೆ?: ಅನುಭವಕೆ  ಅರ್ಥವೇ ಇಲ್ಲವೆ? ದೂರುದಾರ ವ್ಯಕ್ತಿ ಹೇಳಿದಂತೆ ಮೃತದೇಹ ಅಥವಾ ಅಸ್ಥಿಪಂಜರಗಳನ್ನು ಹೊರ ತೆಗೆದರೆ ಅವರದೂರಿಗೆ ಪುಷ್ಟಿ ಬರಲಿದೆ. ಜೊತೆಗೆ ನ್ಯಾಯಾಧೀಶರ ಮುಂದೆ ಕೆಲವು ಆರೋಪಿಗಳ ಹೆಸರನ್ನು ಅವರು ಹೇಳಿದ್ದಾರೆ. ವಿಚಾರಣೆ ನಡೆಸುವವರು ಒಂದು ವೇಳೆ ದೂರುದಾರ ವ್ಯಕ್ತಿಗೆ ಅನೇಕ ಅವಕಾಶಗಳನ್ನು ಕೊಟ್ಟು ಶವಗಳನ್ನು ಹೊರ ತೆಗೆಯದೆ ಇದ್ದರೆ ಸುಳ್ಳು ದೂರಿನ ಆರೋಪದ ಹಿನೆ ಲೆಯಲ್ಲಿ ಆ ವ್ಯಕ್ತಿ ವಿರುದ  ಕಾನೂನು ಕ್ರಮವಾಗಲಿದೆ. ಈ ಅಂಶವನ್ನು ದೂರುದಾರ ವ್ಯಕ್ತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದು ಸುಳ್ಳು ದೂರು ಎಂದು ನಿರೂಪಿಸಲಾದರೂ ಪೊಲೀಸ್ ಇಲಾಖೆ ಹದಿನೈದು ದಿನಗಳಿಂದ ತನಿಖೆ ನಡೆಸಬೇಕಿತ್ತು.

ದೂರಿನಲ್ಲಿರುವ ಅಂಶಗಳನ್ನು ನಂಬುವುದಿಲ್ಲ ಎನ್ನುವವರೂ ದೂರಿನಲ್ಲಿ ಸತ್ಯ ಅಡಗಿರಬಹುದು ಎಂಬುದನ್ನು ಪೊಲೀಸ್ ಇಲಾಖೆಯೇ ದೃಢಪಡಿಸುತ್ತಿದೆ. ಆದರೆ, ಪ್ರಕರಣ ತನಿಖೆ ನಡೆಸಿದರೆ ಯಾರು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಪೊಲೀಸ್ ಇಲಾಖೆ ಭಯ ಪಡುತ್ತಿದೆ? ಇವರು ಯಾರ ಬಳಿ ಸಂಬಳ ಪಡೆಯುತ್ತಿದ್ದಾರೆ? ನಾವು ಏನು ಮಾಡಿದರೂ ನಡೆಯುತ್ತದೆ ಎಂದು ಪೊಲೀಸರು ತಿಳಿದುಕೊಂಡಿದ್ದಾರೆ. ಆದರೆ, ಈ ಪ್ರಕರಣದ ವಕೀಲರು ಪೊಲೀಸರ ಚಳಿ ಬಿಡಿಸಲಿದ್ದಾರೆ.

ಬ್ರೈನ್ ಮ್ಯಾಪಿಂಗ್ ಮಾಡಿ ಎಲ್ಲವನ್ನೂ ಮರೆತು ಬಿಡು ಅನ್ನುವುದಕ್ಕಾ?:  ಇದೊಂದು ವಿನೂತನ ಪ್ರಕರಣ. ೧೦೦ ವರ್ಷಗಳಿಗೊಮ್ಮೆ ಇಂತಹ ಪ್ರಕರಣ ಬರುವುದಿಲ್ಲ.  ಕಾನೂನಿನ ಭಯದಿಂದ ಹೂತಿರುವ ಶವ ತೆಗೆಯುತೆ ನೆಂದು ದೂರದಾರ ನ್ಯಾಯಾಲಯಕ್ಕೆ ಬಂದಿಲ್ಲ. ಭಗವಂತನ ಭಯದಿಂದ ನಾನು ದೂರು ಕೊಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ,  ದೂರುದಾರರ ಓಡಿ ಹೋಗುತ್ತಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಇದನ್ನೇ  ನ್ಯಾಯಾಧೀಶರ ಮುಂದೆ ಹೇಳಬಹುದಿತ್ತು. ಪತ್ರಿಕಾ ಪ್ರಕಟಣೆ ಹೊರಡಿಸುವ ಅವಶ್ಯಕತೆ ಏನಿತ್ತು.

ದೂರುದಾರ ಹೇಳುತ್ತಿರುವ ಸ್ಥಳಗಳಿಗೆ ಕರೆದುಕೊಂಡು ಹೋಗುವ ಬದಲು ಆತನ ಬ್ರೈನ್ ಮ್ಯಾಪಿಂಗ್ ಮಾಡಬೇಕು. ನಾರ್ಕೊ ಅನಾಲಿಸಿಸ್ ಆಗಬೇಕು ಎನ್ನುತ್ತಿರುವುದು  ಮೂರ್ಖತನ.  ದೂರುದಾರ ಜಾಗ ತೋರಿಸುತ್ತೇನೆ ಅಂದಾಗ ಬ್ರೈನ್ ಮ್ಯಾಪಿಂಗ್ ಮಾಡೋದು ದಡ್ಡತನ ಅಲ್ಲವಾ? ಬ್ರೈನ್ ಮ್ಯಾಪಿಂಗ್ ಮಾಡಿ ಎಲ್ಲವನ್ನೂ ಮರೆತು ಬಿಡು ಅನ್ನುವುದಕ್ಕಾ?

ಪೊಲೀಸರ  ಹೇಳಿಕೆಗಳು ಬಹಳ ವಿಚಿತ್ರವಾಗಿದೆ: ತನಿಖೆ ನಡೆಯದೇ ವಿಳಂಬ ಆಗುತ್ತಿರುವುದರಿಂದ ಪ್ರಕರಣ ಇಷ್ಟು ದಿನ ಬಂದಿದೆ. ತನಿಖೆ ನಡೆದಿದ್ದರೆ  ಜು.೬ರಂದೇ ಪ್ರಕರಣ ಮುಕ್ತಾಯ ಆಗುತ್ತಿತ್ತು.  ದೂರುದಾರನಿಂದ ಸ್ವೀಕರಿಸಿದ ಮಾಹಿತಿಯನ್ನು ಹೊರಗಡೆ ಲೀಕ್ ಮಾಡಿದ್ದಾರೆ. ಇದರ ವಿರುದ್ಧ ಡಿಜಿಪಿ ಬಳಿ ದೂರು ದಾಖಲಾಗಿದೆ.  ಆತನಿಗೆ ರಕ್ಷಣೆ ನೀಡುವ ಸ್ಥಳದ ಮಾಹಿತಿಯೂ ಲೀಕ್ ಆಗಿದೆ.

ಲೋಕಲ್ ಇಂಟಲೆಕ್ಷನ್ಸ್ ಸನ್ಮಾನದ ಹೊರತಾಗಿಯೂ ಮೃತದೇಹಗಳು ಇರಬಹುದು ಎಂದು ಇಂಟಲಿಜೆನ್ಸ್ ಹೇಳುತ್ತಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅಂದರೆ ಒಂದು ಗ್ರಾಮದಲ್ಲಿ ಎಲ್ಲಿ ಶವಗಳು ಇರಬಾರದೋ ಅಂತಹ ಸ್ಥಳಗಳಲ್ಲಿ ಶವಗಳಿದ್ದರೆ ಅವು ಅಪರಾಧಗಳಿಗೆ ಒಳಪಟ್ಟ ದೇಹಗಳೇ ಅಲ್ಲವೆ?  ಇಲ್ಲಿರುವ ಶವಗಳು ದೂರುದಾರನಿಗೆ ಗೊತ್ತಿದೆ ಅಂತ ಅರ್ಥ ಅಲ್ಲವೆ? ದೂರಿನಲ್ಲಿ ಹೇಳಿರುವ ಅಂಶಗಳನ್ನು ಪೊಲೀಸರೇ ಎತ್ತಿ ಹಿಡಿದು ದೂರುದಾರನ ಮೇಲೆ ನಂಬಿಕೆ ಹೆಚ್ಚಿಸುತ್ತಿದ್ದಾರೆ.  ಹೂತಿಟ್ಟ ಶವದ ಮಹಜರು ನಡೆಸಲು ದೂರುದಾರನೊಂದಿಗೆ ವಕೀಲರು ತೆರಳಿ ಒಂದು ಗಂಟೆ ಕಾದರೂ ಪೊಲೀಸರು ಬರಲಿಲ್ಲ.

ಅಂತಿಮವಾಗಿ ನಾವು ಬರುವುದಿಲ್ಲ ಎಂದು ಹೇಳಿಬಿಟ್ಟರು. ಅಂದು ಪೊಲೀಸರು ಬಂದಿದ್ದರೆ ಪ್ರಕರಣ ಇಷ್ಟೊತ್ತಿಗೆ ಇತ್ಯರ್ಥವಾಗುತ್ತಿತ್ತು. ಆತ ಏನು ತೆಗೆಯುವುದಿಲ್ಲ ಎಂದರೆ ಮೊದಲು ಆತನ ವಿರುದ್ಧ ಮೊಕದ್ದಮೆ ಹಾಕಿ ಎಂದು ನಾನೇ ಮೊದಲು ಹೇಳುತ್ತೇನೆ.

ಕೇರಳ ಸರ್ಕಾರ ತನಿಖೆ ನಡೆಸಲಿ: ಧರ್ಮಸ್ಥಳಕ್ಕೆ ಎಲ್ಲ ರಾಜ್ಯಗಳಿಂದಲೂ ಜನರು ಬರುತ್ತಾರೆ. ಕೇರಳದಿಂದಲೂ ಜನರು ಬಂದಿರುವ ಸಾಧ್ಯತೆ ಇದೆ. ಈ ಸಾಧ್ಯತೆಗಳ ಹಿನ್ನೆಲೆಯಿಂದ ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆಗೆ ಸಹಕಾರ ಕೊಡುತ್ತೇವೆ ನಮಗೆ ಅವಕಾಶ ಕೊಡಿ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇರಳ ಸರ್ಕಾರ ಮನವಿ ಮಾಡಿಕೊಳ್ಳಬಹುದು. ಇದು ರಾಜ್ಯದ ಸಾರ್ವಭೌಮತ್ವವನ್ನು ಕಡಿಮೆ ಮಾಡುವುದಿಲ್ಲ.  ಈಗ ಬಂದಿರುವ ದೂರಿನ ಕಾರಣ ಗಮನಿಸಿದರೆ ಬೇರೆ ರಾಜ್ಯಗಳಿಗೂ ಕರ್ನಾಟಕ ಸರ್ಕಾರ ವಿವರಣೆ ನೀಡಬೇಕು. ಪ್ರಕರಣದಲ್ಲಿ ತಾನು ನಡೆಸಿದ ತನಿಖೆ ಪಾರದರ್ಶಕತೆಯನ್ನು ಹೇಳಬೇಕು. ಈ ಹಿನ್ನೆಲೆಯಿಂದಲೇ ಕೇರಳ ಸರ್ಕಾರ ತನಿಖೆಗೆ ಸಹಕಾರ ನೀಡಲಿ ಅಂತ ನಾನು ಹೇಳಿದ್ದು. ಆದರೆ, ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು.

ತೀರಾ ಕಳಪೆ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಮತ್ತೊಬ್ಬರು ಸರ್ಕಾರವನ್ನು ಪ್ರಶ್ನೆ ಮಾಡಬೇಕು.  ಸಾಧಾರಣ ಜೀವನದಲ್ಲಿ ನಮ್ಮನ್ನು ಮತ್ತೊಬ್ಬರು ಗಮನಿಸುತ್ತಿದ್ದಾರೆ ಎಂದರೆ ಆ ವ್ಯಕ್ತಿ ನಡೆ ಬದ್ಧತೆಯಲ್ಲಿರುತ್ತದೆ. ಅದೇ ಮಾದರಿಯಲ್ಲಿ ಕೇರಳ ಸರ್ಕಾರ ತನಿಖೆಗೆ ಸಹಕಾರ ನೀಡುವುದು ಉತ್ತಮವಾದದ್ದು.

ಯಾವ ವಿರೋಧಕ್ಕೂ ಜಗ್ಗದೆ ಹೋರಾಟ ಮಾಡುತ್ತಿದ್ದೇವೆ: ಎಸ್‌ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಯಲಿದೆ ಎಂದು ಬಹಳ ಆತ್ಮವಿಶ್ವಾಸ ಇಟ್ಟುಕೊಂಡಿದ್ದೇನೆ. ನಮಗೂ ಸಾಕಷ್ಟು ವಕೀಲರು ಬೆಂಬಲ ಕೊಡುತ್ತಿದ್ದಾರೆ. ಆದರೆ,  ಪ್ರಕರಣವನ್ನು ಕೆಲವು ವಕೀಲರು ಟೀಕೆ ಮಾಡುತ್ತಿದ್ದಾರೆ. ಇಂತವರು ನ್ಯಾಯಾಲಯದಲ್ಲಿ ಬಂದು ವಾದ ಮಾಡಬೇಕು. ನಮಗೆ ನ್ಯಾಯ ಸಿಗುವ ಭರವಸೆಯಿಂದ ಪ್ರತಿದಿನ ಹೋರಾಟ ಮಾಡುತ್ತಿದ್ದೇವೆ. ಎಷ್ಟೇ ವಿರೋಧ ಬಂದರೂ ಇದರಲ್ಲಿ ನ್ಯಾಯ ಸಿಗಬಹುದು ಎಂಬುದು ನಮ್ಮ ನಂಬಿಕೆ. ಹೀಗಾಗಿ ಯಾವ ವಿರೋಧಕ್ಕೂ ಜಗ್ಗದೆ ಹೋರಾಟ ಮಾಡುತ್ತಿದ್ದೇವೆ.

ಒಬ್ಬ ವ್ಯಕ್ತಿಯ ವಿರುದ್ಧ ಸುದ್ದಿ ಪ್ರಸಾರ ಮಾಡಬಾರದೆಂಬ ಆದೇಶ ತಪ್ಪು: ಕೇರಳದ ಪ್ರಮುಖ ಮಾಧ್ಯಮಗಳಲ್ಲಿ ಧರ್ಮಸ್ಥಳ ಪ್ರಕರಣದ ಸುದ್ದಿಗಳು ಬಿತ್ತರವಾಗುತ್ತಿವೆ. ರಾಜ್ಯದ ಮೇನ್‌ಸ್ಟ್ರೀಮ್ ಮಾಧ್ಯಮಗಳಲ್ಲಿ ಧರ್ಮಸ್ಥಳದ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದ ಮೂಲಕ ನ್ಯಾಯಾಲಯ ತನ್ನ ಲಿಮಿಟ್ ಕ್ರಾಸ್ ಮಾಡಿದೆ.  ಇಂತಹ ಆದೇಶ ನೀಡಲು ಯಾರು ಅಧಿಕಾರ ಕೊಟ್ಟರು? ಒಬ್ಬ ವ್ಯಕ್ತಿ ವಿರುದ್ಧ ಹೇಳಿಕೆ ಕೊಡಬಾರದು ಎಂಬ ಆದೇಶವನ್ನು ಒಪ್ಪಿಕೊಂಡರೆ ವಕೀಲ ವೃತ್ತಿಗೆ ಗೌರವ ಇರುವುದಿಲ್ಲ. ನ್ಯಾಯಾಽಶರನ್ನು ಕೇಳಬೇಕಲ್ಲವೆ? ಇಂತಹ ಆದೇಶ ಹೇಗೆ ಕೊಟ್ಟರು ಎಂದು ನ್ಯಾಯಾಲಯ ಅಥವಾ ವಿಧಾನಸಭೆ ಹೇಳಿದ್ದೆ ಅಂತಿಮವಲ್ಲ. ಎಲ್ಲವೂ ಬ್ಯಾಲೆನ್ಸ್ ಆಗಿ ಇರಬೇಕು. ಯಾವುದಾದರೂ ಒಂದು ಅಂಗ ತಪ್ಪು ಮಾಡಿದಾಗ ಮತ್ತೊಂದು ಎಚ್ಚರಿಸಬೇಕು.

– ಕೆ.ವಿ.ಧನಂಜಯ

ಆಂದೋಲನ ಡೆಸ್ಕ್

Recent Posts

ಆಂದೋಲನ ವರದಿ ಫಲಶ್ರುತಿ : ಪಚ್ಚೆದೊಡ್ಡಿ ಗ್ರಾಮದ ಶಾಲೆ ಮಕ್ಕಳಿಗೆ ವಾಹನ ಸೌಲಭ್ಯ

ಡಿಸಿ ಶಿಲ್ಪಾನಾಗ್‌ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಮಕ್ಕಳನ್ನು ಕರೆತರಲು ಕ್ರಮ ಹನೂರು : ಅಂತೂ ಇಂತೂ…

22 mins ago

ನಾನೇ ವಿಪಕ್ಷ ನಾಯಕ ಎಂದ ಯತ್ನಾಳ್

ಬೆಳಗಾವಿ : ನಾನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಲ್ಲ, ನಿಜವಾದ ವಿರೋಧ ಪಕ್ಷದ ನಾಯಕ ನಾನೇ ಎಂದು ವಿಧಾನಸಭೆ ಕಲಾಪದ…

29 mins ago

ಬಿಳಿಗಿರಿ ರಂಗನಬೆಟ್ಟ ಅಭಿವೃದ್ಧಿ ಕಾರ್ಯ ಪರಿಶೀಲನೆಯಲ್ಲಿದೆ : ಸಚಿವ .ಎಚ್.ಕೆ.ಪಾಟೀಲ್‌

ಬೆಳಗಾವಿ : ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟ ಪ್ರದೇಶವನ್ನು 5.75…

43 mins ago

ರೈತರಿಗೆ ಗುಂಡು ಹೊಡೆಸಿದ್ದ ಬಿಜೆಪಿಗರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ : ಸಚಿವೆ ಹೆಬ್ಬಾಳಕರ್‌

ಬೆಳಗಾವಿ : ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ‌.‌ ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು…

1 hour ago

ಮೈಸೂರಿನಲ್ಲಿ 300 ಎಕರೆ ಜಮೀನಿನಲ್ಲಿ ಲೇಔಟ್‌ ನಿರ್ಮಾಣ: ಸಚಿವ ಭೈರತಿ ಸುರೇಶ್‌

ಬೆಳಗಾವಿ: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಅತಿವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಸುಮಾರು 300 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿ ಸಾರ್ವಜನಿಕರಿಗೆ…

2 hours ago

ಋತುಚಕ್ರ ರಜೆ: ತಡೆಯಾಜ್ಞೆ ಮಾರ್ಪಡಿಸಿ ನಾಳೆಗೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಆದರೆ ಈ…

2 hours ago