Andolana originals

ಫೈಜುಲ್ಲಾ + ನಟರಾಜ್ = ಫೈಜ್ನಟ್ರಾಜ್

ಪ್ರದೀಪ್ ಮುಮ್ಮಡಿ

ಸೈಯದ್ ಫೈಜುಲ್ಲಾ ಅವರ ಬದುಕಿನ ರೀತಿಯೇ ಅಪೂರ್ವ ಹಾಗೂ ಅನುಕರಣೀಯವಾದದ್ದು. ೧೯೭೨ರಲ್ಲಿ ದಾವಣಗೆರೆಯ ಸಂತೆಬೆನ್ನೂರಿನ ಬಾಬಾ ಸಾಹೇಬ್ ಹಾಗೂ ಖಮರುನ್ನೀಸ ಎಂಬ ದಂಪತಿ ಮಗನಾಗಿ ಸೈಯದ್ ಫೈಜುಲ್ಲಾ ಜನಿಸಿದರು. ಆ ಊರಿನವರೇ ಆದ ಶಿವಪ್ಪ, ಗಿರಿಜಮ್ಮ ಎಂಬ ದಂಪತಿಯ ಮಗ ನಟರಾಜ ಅವರೊಂದಿಗೆ ಬಾಲ್ಯದಿಂದ ಮೂಡಿಬಂದ ಅವಿನಾಭಾವ ಸ್ನೇಹವಿತ್ತು. ಎಲ್ಲದಕ್ಕೂ ಕೊರತೆಯಿದ್ದ ಆ ದಿನಗಳಲ್ಲಿ ಬಡತನವೇ ಇವರಿಬ್ಬರನ್ನು ಬಯಸಿತ್ತು. ಬಡತನವನ್ನೇ ಸವಾಲಾಗಿ ಸ್ವೀಕರಿಸಿ ಒಟ್ಟಿಗೆ ಓದಿ ಇಬ್ಬರೂ ಸರ್ಕಾರಿ ಕೆಲಸಕ್ಕೆ ಸೇರಿದರು.

೧೯೯೭ರ ಒಂದು ಕರಾಳ ದಿನದಂದು ಚಳ್ಳಕೆರೆಯಲ್ಲಿ ನಡೆದ ಅಪಘಾತದಲ್ಲಿ ನಟರಾಜ್ ತೀರಿ ಕೊಂಡರು. ವಯಸ್ಸಾದ ತಂದೆ ತಾಯಿ ಅಕ್ಕ-ತಂಗಿ ತಮ್ಮ ಇದ್ದ ತುಂಬು ಕುಟುಂಬದ ಜವಾಬ್ದಾರಿ ಯನ್ನು ಹೊತ್ತಿದ್ದ ನಟರಾಜ್ ಇದ್ದಕ್ಕಿದ್ದಂತೆತೀರಿ ಕೊಂಡದ್ದು, ಇಡೀ ಕುಟುಂಬಕ್ಕೆ ಬದುಕು ಆತ್ಮವಿಶ್ವಾಸವನ್ನೇ ಇಲ್ಲವಾಗಿಸಿತು. ಅಂತಹ ಕಷ್ಟದ ಸಂದರ್ಭದಲ್ಲಿ ಮನುಷ್ಯ ಪ್ರೀತಿಯನ್ನು ನಂಬಿದ್ದ ಫೈಜುಲ್ಲಾ ಆ ಕುಟುಂಬದ ಮಗನ ಸ್ಥಾನ ಅರ್ಥಾತ್ ನಟರಾಜ್ ಅವರ ಜಾಗವನ್ನು ತುಂಬಿದರು. ಅಷ್ಟೇ ಅಲ್ಲದೆ, ಸ್ನೇಹಿತನ ಹೆಸರನ್ನೇ ತನ್ನ ಹೆಸರಿನೊಂದಿಗೆ ಕಾನೂನಾತ್ಮಕವಾಗಿ ಸೇರಿಸಿ ಅಂದಿನಿಂದ ಫೈಜ್ನಟ್ರಾಜ್ ಸಂತೆಬೆನ್ನೂರು ಆಗಿ ನಿಜವಾದ ಸ್ನೇಹಕ್ಕೆ ಮಾದರಿಯಾದರು.

ನಟರಾಜ್ ಸಾವಿನ ನಂತರ ಅದೇ ಕೊರಗಿನಲ್ಲಿ ಅವರ ತಂದೆಯೂ ಅಸುನೀಗಿದರು. ನಟರಾಜರ ಸಾವಿನ ನಂತರ ಬಂದ ಸ್ವಲ್ಪ ಹಣದಿಂದ ಗಿರಿಜಮ್ಮ ಅವರಿಗೆ ಎರಡು ಎಮ್ಮೆಗಳನ್ನು ತೆಗೆದುಕೊಟ್ಟು ಆರ್ಥಿಕ ಸ್ವಾವಲಂಬನೆಗೆ ನೆರವಾದರು. ಕ್ರಮೇಣ ಮಗ ಮತ್ತು ಗಂಡನ ಚಿಂತೆಯಲ್ಲಿ ಗಿರಿಜಮ್ಮನೂ ತೀರಿಕೊಂಡರು. ಎಂತಹ ಕಠಿಣ ಸಂದರ್ಭದಲ್ಲೂ ಸ್ನೇಹಿತನ ಕುಟುಂಬದೊಂದಿಗೆ ನಿಂತ ಫೈಜ್ನಟ್ರಾಜ್ ಇತರ ಸ್ನೇಹಿತರೊಟ್ಟಿಗೆ ಸೇರಿ ಗುಡಿಸಲಿದ್ದ ಜಾಗದಲ್ಲಿ ಕೆಂಪಂಚಿನ ಮನೆಯನ್ನು ನಿರ್ಮಿಸಿದರು. ನಟರಾಜ್ ಅವರ ತಂಗಿ ಮದುವೆ ಮಾಡಿದ್ದಲ್ಲದೆ, ತಮ್ಮನಿಗೂ ವಿವಾಹ ಮಾಡುವ ಮೂಲಕ ಸಾಂಸಾರಿಕ ಜವಾಬ್ದಾರಿಯನ್ನು ಕಟ್ಟಿಕೊಟ್ಟರು.

ಈಗ ಎಲ್ಲರೂ ಸುಸ್ಥಿತಿಯಲ್ಲಿದ್ದಾರೆ. ಈಗಲೂ ಯಾವುದೇ ಹಬ್ಬ ಹರಿದಿನಗಳಲ್ಲಿ ನಟರಾಜ್ ಹಾಗೂ ಫೈಜ್ನಟ್ರಾಜ್ ಅವರ ಕುಟುಂಬಗಳ ಸದಸ್ಯರು ಒಟ್ಟಿಗೆ ಸೇರುತ್ತಾರೆ. ನೆಂಟರು ಇಷ್ಟರಾಗಿ ಒಂದೇ ಕುಟುಂಬವಾಗಿದ್ದಾರೆ. ಹಿಂದೂ – ಮುಸ್ಲಿಂ ತಾಕಲಾಟಗಳು ಅತಿರೇಕದಲ್ಲಿರುವ ಪ್ರಸಕ್ತ ಸಂದರ್ಭದಲ್ಲಿ ನೀವು ಹೀಗೆ ಬದುಕಲು ಪ್ರೇರಣೆ ಏನು? ಎಂದು ಕೇಳಿದರೆ, ‘ಹಿಂದೂ ಮುಸ್ಲಿಂಗಿಂತ ಸದ್ಯಕ್ಕೆ ಮನುಷ್ಯನಾಗುವುದು ಮುಖ್ಯ ಗೆಳೆಯ ಹುಲ್ಲಲ್ಲಿ ಮುಳ್ಳು ಬೇಡ ದನಕರುಗಳನ್ನೂ ಪ್ರೀತಿಸುವುದು ಮುಖ್ಯ ಗೆಳೆಯ ಎದೆಯಲೊಂದು ತುಟಿಯಲೊಂದು ಮಾತುಗಳೇಕೆ ಹೇಳು ನಾಲ್ಕು ದಿನದ ಬದುಕು, ಬೇಕಾಗಿ ಬಾಳುವುದು ಮುಖ್ಯ ಗೆಳೆಯ ಮಸೀದಿ ಮಂದಿರ ಚರ್ಚುಗಳಿರಲಿ ಅವುಗಳ ಪಾಡಿಗೆ ಬಿಟ್ಟು ಬಿಡು ನೆಮ್ಮದಿ ಎಂದರೆ ಈಗ ಹಸಿದವನಿಗನ್ನವನಿಕ್ಕುವುದು ಮುಖ್ಯ ಗೆಳೆಯ’ ಎಂದು ಕವಿತೆ ಹೇಳುತ್ತಾರೆ. ಹೀಗೆ ಸೌಹಾರ್ದ ಬದುಕಿನ ಮಾದರಿಯಂತಿರುವ ಫೈಜ್ನಟ್ರಾಜ್ ತಮ್ಮ ಸಾಹಿತ್ಯ ಸೇವೆಯಿಂದಲೂ ನಾಡಿಗೆ ಬೇಕಾದವರಾಗಿದ್ದಾರೆ.

ಸೃಜನಶೀಲ ಬರವಣಿಗೆಯಲ್ಲಿ ತಮ್ಮನ್ನು ತಾವು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಫೈಜ್ನಟ್ರಾಜ್ ಸಂತೆ ಬೆನ್ನೂರು ಕಾವ್ಯನಾಮದೊಂದಿಗೆ ಬರೆಯು ತ್ತಾರೆ. ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಇದುವರೆಗೂ ೧೩ ಕೃತಿಗಳನ್ನು ರಚಿಸಿದ್ದಾರೆ. ಸದ್ದು ಮಾಡದೆ, ಸುದ್ದಿಯಾಗದೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು.

ಫೈಜ್ ಅವರು ತಮ್ಮ ಕನ್ನಡ ಅಧ್ಯಾಪಕ ಡಿ.ಎಸ್. ರಾಮಚಂದ್ರ ಮತ್ತು ಗೆಳೆಯ ನಟರಾಜರಿಂದ ಸಾಹಿತ್ಯಕ ಸ್ಛೂರ್ತಿ ಪಡೆದವರು. ಹಲವಾರು ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ. ಮನುಷ್ಯನಿಗೆ ಮಾನವೀಯಳಜಿ ಮುಖ್ಯವೇ ಹೊರತು ಜಾತಿ ಅಥವಾ ಮತ್ಯಾವುದೂ ಅಲ್ಲ! ಅನ್ನುವ ಫೈಜ್ನಟ್ರಾಜ್ ಬದುಕು ಇತರರಿಗೆ ಮಾದರಿ.

ಸಾಮರಸ್ಯಕ್ಕೆ ಬೇರೆ ಹೆಸರು ಬೇಕೆ?:  ನಟರಾಜ್ ಸಾವಿನ ನಂತರ ಅದೇ ಕೊರಗಿನಲ್ಲಿ ಅವರ ತಂದೆಯೂ ಅಸುನೀಗಿದರು. ನಟರಾಜರ ಸಾವಿನ ನಂತರ ಬಂದ ಸ್ವಲ್ಪ ಹಣದಿಂದ ಗಿರಿಜಮ್ಮ ಅವರಿಗೆ ಎರಡು ಎಮ್ಮೆಗಳನ್ನು ತೆಗೆದುಕೊಟ್ಟು ಆರ್ಥಿಕ ಸ್ವಾವಲಂಬನೆಗೆ ನೆರವಾದರು. ಕ್ರಮೇಣ ಮಗ ಮತ್ತು ಗಂಡನ ಚಿಂತೆಯಲ್ಲಿ ಗಿರಿಜಮ್ಮನೂ ತೀರಿಕೊಂಡರು.ಎಂತಹ ಕಠಿಣ ಸಂದರ್ಭದಲ್ಲೂ ಸ್ನೇಹಿತನ ಕುಟುಂಬದೊಂದಿಗೆ ನಿಂತ ಫೈಜ್ನಟ್ರಾಜ್ ಇತರ ಸ್ನೇಹಿತರೊಟ್ಟಿಗೆ ಸೇರಿ ಗುಡಿಸಲಿದ್ದ ಜಾಗದಲ್ಲಿ ಕೆಂಪಂಚಿನ ಮನೆಯನ್ನು ನಿರ್ಮಿಸಿದರು

ಆಂದೋಲನ ಡೆಸ್ಕ್

Recent Posts

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಲೋಕಾ ಪೊಲೀಸ್‌ ಕಸ್ಟಡಿಗೆ : ಕೋರ್ಟ್‌ ಆದೇಶ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್‌…

7 hours ago

ಅನಾರೋಗ್ಯ ಹಿನ್ನಲೆ ದುಬಾರೆ ಸಾಕಾನೆ ʻತಕ್ಷʼ ಸಾವು

ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…

9 hours ago

ಮೈಸೂರು | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕು ಇರಿತ

ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…

10 hours ago

ಮಹಿಳಾ ಉದ್ಯೋಗಿಗೆ ಕಿರುಕುಳ : ಕಾರ್ಖಾನೆ ಮಾಲೀಕನ ವಿರುದ್ದ ದೂರು

ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…

10 hours ago

ಚಾಮುಂಡೇಶ್ವರಿ ದರ್ಶನ : ಸೇವಾ ಶುಲ್ಕ ಏರಿಕೆಗೆ ಖಂಡನೆ

ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…

10 hours ago

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

11 hours ago