Andolana originals

ರೋಮಾಂಚನಕಾರಿ ಜಲ ಸಾಹಸ ಕ್ರೀಡೋತ್ಸವ…

ಚಾಮರಾಜನಗರ: ತಾಲ್ಲೂಕಿನ ಸುವರ್ಣಾವತಿ ಜಲಾಶಯದಲ್ಲಿ ಏರ್ಪಡಿಸಿರುವ ಎರಡು ದಿನಗಳ ‘ಜಿಲ್ಲಾ ಮಟ್ಟದ ಜಲ ಸಾಹಸ ಕ್ರೀಡೋತ್ಸವವನ್ನು’ ಜೆಟ್ ಸ್ಕೀ ಜಲ ವಾಹನಕ್ಕೆ ಮತ್ತು ಗಂಗಾ ಆರತಿಗೆ ಚಾಲನೆ ಕೊಡುವ ಮೂಲಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಉದ್ಘಾಟಿಸಿದರು.

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಅಟ್ಟುಗೂಳಿಪುರ ಬಳಿಯ ಸುವರ್ಣಾವತಿ ಜಲಾಶಯದಲ್ಲಿ ಆಯೋಜಿಸಲಾಗಿದ್ದು ಮೊದಲ ದಿನವೇ ನೂರಾರು ಸಂಖ್ಯೆಯಲ್ಲಿ ಯುವ ಜನರು ಭಾಗವಹಿಸಿ ಸಂಭ್ರಮಿಸಿದರು.

ಜಲ ಸಾಹಸ ಕ್ರೀಡೆಗಳಲ್ಲಿ ಬಳಸುವ ಪ್ರಮುಖ ವಾಹನಗಳು ಮತ್ತು ಉಪಕರಣಗಳಾದ ಜೆಟ್ ಸ್ಕೀ ಬನಾನಾ ಬೋಟ್, ಕಯಾಕಿಂಗ್ ಮತ್ತು ರಾಫ್ಟ್‌ಗಳ ಮೂಲಕ ಜಲಾಶಯದ ನೀರಿನಲ್ಲಿ ವೇಗವಾಗಿ ಅಡ್ಡಾಡುವ ದೃಶ್ಯ ಮೈನವಿರೇಳಿಸುವಂತಿತ್ತು.

ಜಲವಾಹನಗಳು ಜಲಾಶಯದ ನೀರಿನಲ್ಲಿ ವೇಗವಾಗಿ ಚಲಿಸುವ ವೇಳೆ ಜಾಲಿ ಮೂಡಿನಲ್ಲಿ ನೀರಿಗೆ ಬಿದ್ದು ನಂತರ ಈಜಿಕೊಂಡು ದಡ ಸೇರುವ ತರುಣರ ಸಂಭ್ರಮ ಮೇರೆ ಮೀರಿತ್ತು. ಸುರಕ್ಷತೆ ದೃಷ್ಟಿಯಿಂದ ಎಲ್ಲರಿಗೂ ಲೈಫ್ ಜಾಕೆಟ್ ತೊಡಿಸಲಾಗಿತ್ತು. ಈಜು ಪರಿಣಿತರನ್ನು ಕೂಡ ನಿಯೋಜನೆ ಮಾಡಲಾಗಿತ್ತು. ವಿವಿಧ ೧೮ ಜಲವಾಹನಗಳು ನೀರಿಗೆ ಇಳಿದಿದ್ದವು. ಕಾರ್ಬೊರೇಟ್ ಸಮಸ್ಯೆಯಿಂದ, ಮೊದಲ ದಿನ ಮೋಟಾರ್ ಬೋಟ್ ಕಾರ್ಯ ನಿರ್ವಹಿಸಲಿಲ್ಲ, ಶುಕ್ರವಾರ ಇದೂ ನೀರಿಗೆ ಇಳಿಯಲಿದೆ ಎಂದು ಸಂಘಟಕರು ಮಾಹಿತಿ ನೀಡಿದರು. ಮೈಸೂರಿನ ಮಹಾಜನ ಕಾಲೇಜು, ಮಾನಸ ಗಂಗೋತ್ರಿಯ ವಿದ್ಯಾರ್ಥಿಗಳ ತಂಡವಲ್ಲದೇ ಚಾಮರಾಜ ನಗರದ ಸರ್ಕಾರಿ ವೈದ್ಯಕೀಯ ಕಾಲೇಜು , ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೆಎಸ್‌ಎಸ್ ಕಾಲೇಜು, ಕೃಷಿ ಕಾಲೇಜು ಹೀಗೆ ನಾನಾ ಕಾಲೇಜುಗಳಿಂದ ೩೦೦ಕ್ಕೂ ಹೆಚ್ಚು ಯುವಕ, ಯುವತಿಯರು ಜಲಸಾಹಸ ಕ್ರೀಡೋತ್ಸವದಲ್ಲಿ ಮೊದಲ ದಿನ ಭಾಗವಹಿಸಿದ್ದಾಗಿ ಯುವ ಜನಸೇವೆ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕರಾದ ಸುರೇಶ್ ಮಾಹಿತಿ ನೀಡಿದರು.

ಉಚಿತ ಪ್ರವೇಶದ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಕಾಣಿಸಿಕೊಂಡರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವೈದ್ಯಕೀಯ ತಂಡ , ಆಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿತ್ತು. ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಿದ್ದಲ್ಲದೇ ಮಧ್ಯಾಹ್ನ ಉಪಾಹಾರ ಕೂಡ ನೀಡಲಾಯಿತು.

ಜಿಪಂ ಸಿಇಒ ಮೋನಾ ರೋತ್ ಅವರು ಕುಟುಂಬ ಸಮೇತ ಭಾಗಿಯಾಗಿದ್ದರು. ಜಿಲ್ಲಾಧಿಕಾರಿ ಶ್ರೀರೂಪ , ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮೊದಲಾದವರು ಉದ್ಘಾಟನೆ ವೇಳೆ ಹಾಜರಿದ್ದರು. ಶುಕ್ರವಾರ ಜಲ ಸಾಹಸ ಕ್ರೀಡೋತ್ಸವದಲ್ಲಿ ಇನ್ನೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.

ಆಂದೋಲನ ಡೆಸ್ಕ್

Recent Posts

ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್

ಎಚ್.ಹಾಲಪ್ಪ ಸಮಾನತೆ ಇಲ್ಲದೆ ಪ್ರಜಾಪ್ರಭುತ್ವ ಅಪೂರ್ಣ ಎಂದು ನಂಬಿದ್ದ ತಮ್ಮ ಕಾರ್ಯಪ್ರವೃತ್ತಿಯಿಂದ ಸಮಾಜದಲ್ಲಿ ಸಮಾನತೆಯನ್ನು ಜೀವಂತಗೊಳಿಸಿದ ದೇಶದಾದ್ಯಂತ ಬಾಬೂಜಿ ಎಂದೇ…

2 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕರ್ನಾಟಕ, ಮಹಾರಾಷ್ಟ್ರದಲ್ಲಿ ಮತ್ತೆ ಹಿಂದಿ ವಿವಾದ

ಹಿಂದಿ ಭಾಷೆಯ ಪ್ರಶ್ನೆ ಮತ್ತೆ ವಿವಾದವನ್ನು ಉಂಟು ಮಾಡಿದೆ. ತನ್ನ ಮಾತೃ ಭಾಷೆಯಲ್ಲದ ಮತ್ತು ಉತ್ತರ ಭಾರತದ ರಾಜ್ಯಗಳ ಮಾತೃ…

2 hours ago

ಕಾಫಿ ಉದ್ಯಮದ ಮೇಲೆ ಮಧ್ಯಪ್ರಾಚ್ಯ ಯುದ್ಧದ ಎಫೆಕ್..!

ನವೀನ್ ಡಿಸೋಜ ಶಿಪ್‌ಮೆಂಟ್ ವಿಳಂಬ, ಕಂಟೇನರ್ ಕೊರತೆ, ಹಡಗುಗಳ ಅಭಾವ, ಇಂಧನ ಅನಿಶ್ಚಿತತೆ ಕಾಫಿ ಉತ್ಪಾದನಾ ವಲಯದಲ್ಲಿ ಗೊಂದಲದ ವಾತಾವರಣ …

2 hours ago

ಭೂತ್ ಜೋಲೋಕಿಯಾ: ಖಾರ ಎನ್ನಬೇಕೋ ಇಲ್ಲಾ ಬೆಂಕಿಯ ಬಾಣ ಎನ್ನಬೇಕೋ

ನಂದಿನಿ ಎನ್. ಹತ್ತು ಜನರಿಗಾಗುವಷ್ಟು ಅಡುಗೆಗೆ ಕೇವಲ ೨ ಮೆಣಸಿನ ಕಾಯಿ ಸಾಕು ಎಂದರೆ ನಂಬುತ್ತೀರಾ!? ನಾಗಾಲ್ಯಾಂಡ್ ಪ್ರವಾಸದಲ್ಲಿ ಅಲ್ಲಿನ…

2 hours ago

ಬಿಕೋ ಎನ್ನುತ್ತಿರುವ ದುಬಾಯಿ ಬೀದಿಗಳು, ಭವಿಷ್ಯದ ಕಳವಳದಲ್ಲಿ ಅನಿವಾಸಿ ಭಾರತೀಯರು

ತಾಜ್ ಗಡಿನಾಡು ಇರಾನ್ ಮೇಲೆ ಫೆಬ್ರವರಿ ಅಂತ್ಯಕ್ಕೆ ಆರಂಭಗೊಂಡ ಅಮೆರಿಕ-ಇಸ್ರೇಲ್ ದೇಶಗಳ ಜಂಟಿ ಯುದ್ಧ ತಿಂಗಳು ಕಳೆದರೂ ಇನ್ನೂ ಅಂತ್ಯಗೊಂಡಿಲ್ಲ.…

2 hours ago

ಅನೈತಿಕ ಚಟುವಟಿಕೆಗಳ ತಾಣವಾದ ಬಾಬೂಜಿ ಭವನ

ಮಂಜು ಕೋಟೆ ಕೋಟೆ: ೧೦ ವರ್ಷಗಳಿಂದ ಬಳಕೆಗೆ ಬಾರದ ಕಟ್ಟಡ; ಮತ್ತೊಂದು ಕಾಮಗಾರಿಯೂ ನನೆಗುದಿಗೆ  ಎಚ್.ಡಿ.ಕೋಟೆ: ಪಟ್ಟಣದ ಹೃದಯ ಭಾಗದಲ್ಲಿ…

2 hours ago