ಚಾಮರಾಜನಗರ: ಜಿಲ್ಲೆಯ ಗಡಿಯಲ್ಲಿ ರುವ ಕೇರಳದ ವಯನಾಡಿನ ಮೇಪ್ಪಾಡಿ ಸುತ್ತಮುತ್ತ ಸುರಿದ ಭಾರೀ ಮಳೆಯಿಂದ ಉಂಟಾದ ಭೂ ಕುಸಿತದಿಂದ ಚೂರಲ್ ಮಲೈಯಲ್ಲಿ ನಿರ್ಮಿಸಿದ್ದ ಮನೆ ಕೊಚ್ಚಿ ಹೋಯಿತು. ಭವಿಷ್ಯದಲ್ಲಿ ಏನು ಮಾಡಬೇಕೆಂಬ ದಿಕ್ಕು ತೊಚುತ್ತಿಲ್ಲ. . . ಎಂದು ಪ್ರವಿದಾ ಎಂಬವರು ಆತಂಕ ವ್ಯಕ್ತಪಡಿಸಿದರು.
ಮೇಪ್ಪಾಡಿಯಲ್ಲಿರುವ ತಂದೆ ಮನೆಗೆ ಬಾಣಂತನಕ್ಕೆ ಹೋಗಿದ್ದೆ. ಭೂ ಕುಸಿತ ಸಂಭವಿಸಿದ್ದರಿಂದ ಮೇಪ್ಪಾಡಿಯ ನಿವಾಸಿ ಗಳನ್ನು ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಿದ್ದಾರೆ. ಆದರೆ, ನಾನು ನಮ್ಮತಾಯಿ ಲಕ್ಷ ಮ್ಮ, ತಂದೆ ಕೃಷ್ಣ ಅವರ ಜೊತೆ ಚಾಮರಾಜನಗರದಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಬಂದು ಉಳಿದು ಕೊಂಡಿದ್ದೇನೆ ಎಂದು ಹೇಳಿಕೊಂಡರು.
ಸೋಮವಾರ ತಡರಾತ್ರಿ ಭೂ ಕುಸಿತ ಸಂಭವಿಸಿದಾಗ ನನ್ನ ಪತಿ ವಿನೋದ್ ತಮ್ಮ ತಾಯಿಯೊಡನೆ ಇದ್ದರು. ನಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಅರಚಿಕೊಂಡಾಗ ವಿನೋದ್ ಹೋಗಿ ನೋಡಿದ್ದಾರೆ. ಕೊಟ್ಟಿಗೆಯಲ್ಲಿ ನೀರು ತುಂಬಿಕೊಂ ಡಿತ್ತು. ಎಚ್ಚೆತ್ತುಕೊಂಡ ವಿನೋದ್ ತಮ್ಮ ತಾಯಿ ಜೊತೆ ಎತ್ತರದ ಜಾಗಕ್ಕೆ ಹೋಗಿ ನಿಂತಿದ್ದರು.
ಸೋಮವಾರ ಬೆಳಿಗಿನ ಜಾವ ೨. ೧೫ರಿಂದ ಮಂಗಳವಾರ ಸಂಜೆ ೫. ೧೫ ಗಂಟೆ ತನಕ ನಿಂತೇ ಕಾಲ ಕಳೆದಿದ್ದಾರೆ. ನಂತರ ರಕ್ಷಣಾ ತಂಡದ ಹೆಲಿಕಾಪ್ಟರ್ ಮೂಲಕ ಅವರನ್ನು ಮೇಪ್ಪಾಡಿಯ ನಿರಾಶ್ರಿತರ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಈ ಬಗ್ಗೆ ವಿನೋದ್ ನನಗೆ -ನ್ ಕರೆ ಮಾಡಿ ತಿಳಿಸಿದ್ದಾರೆ ಎಂದು ಪ್ರವಿದಾ ‘ಆಂದೋಲನ’ಕ್ಕೆ ಹೇಳಿದರು.
ಪತಿ ವಿನೋದ್ ಕಾಲಿಗೆ ಗಾಯವಾಗಿದ್ದು, ನಿರಾಶ್ರಿತರ ಶಿಬಿರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರ ಬರುವಿಕೆಗಾಗಿ ಕಾಯುತ್ತಿದ್ದೇನೆ ಎಂದು ಕಣ್ಣೀರಿಟ್ಟರು.
ಪತಿ ವಿನೋದ್ ಚೂರಲ್‌ಮಲೈನಲ್ಲಿ ನಡೆಸುತ್ತಿದ್ದ ಹೋಂ ಸ್ಟೇ ಮೇಲೆ ಮರ ಬಿದ್ದು ಹಾನಿಯಾಗಿದೆ. ನಾವು ವಾಸವಿದ್ದ ಮನೆ, ಹಸು, ಬೈಕ್, ಚಿನ್ನಾಭರಣ, ಬಟ್ಟೆಗಳು, ಟಿವಿ, ಫ್ರಿಜ್ ಎಲ್ಲವೂ ನೀರಿನಲ್ಲಿ ಕೊಚ್ಚಿಹೋಗಿವೆ. ನಾವು ಎಲ್ಲವನ್ನೂ ಕಳೆದುಕೊಂಡು ಬರಿಗೈಲಿದ್ದೇವೆ. ಮುಂದೇನು ಮಾಡಬೇಕು ಎಂಬುದೇ ಚಿಂತೆಯಾಗಿದೆ ಎಂದು ಪ್ರವಿದಾ ನೋವು ತೋಡಿಕೊಂಡರು.
ನನ್ನ ಪತಿ ಗುಂಡ್ಲುಪೇಟೆ ತಾಲ್ಲೂಕಿನ ಕೋಡಹಳ್ಳಿ ಗ್ರಾಮದವರು. ೪ ವರ್ಷಗಳ ಹಿಂದೆ ನಮ್ಮ ಮದುವೆಯಾಯಿತು. ನಾವು ಚೂರಲ್‌ಮಲೈನಲ್ಲಿಯೇ ಬದುಕು ಕಟ್ಟಿಕೊಂಡಿ ದ್ದೆವು. ಕೋಡಹಳ್ಳಿಯಲ್ಲಿ ಸ್ವಂತ ಮನೆಯೂ ಇಲ್ಲ ಎಂದು ತಿಳಿಸಿದರು.
ಮುಂದೆ ಏನು ಮಾಡಬೇಕೆಂಬುದೇ ಚಿಂತೆ :
ಪತಿ ಬೇಗ ವಾಪಸ್ ಬರಲಿ
ಪ್ರವಿದಾ ಪತಿ ವಿನೋದ್, ನಮ್ಮ ಅತ್ತೆಯವರನ್ನು ಆದಷ್ಟು ಬೇಗ ನಮ್ಮ ಬಳಿಗೆ ಕಳುಹಿಸಬೇಕು. ವಯನಾಡಿನಲ್ಲಿ ಮಳೆ ಕಡಿಮೆಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಚೂರಲ್‌ಮಲೈಗೆ ಮರಳುತ್ತೇವೆ. ಕೇರಳ ಸರ್ಕಾರ ನಮಗೊಂದು ಮನೆ ನಿರ್ಮಿಸಿಕೊಡಬೇಕು. ಅಲ್ಲದೆ, ಪರಿಹಾರ ನೀಡಿ ನಾವು ಮತ್ತೊಮ್ಮೆ ತಳಮಟ್ಟದಿಂದ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಬೇಕು. ?
ಪ್ರವಿದಾ, ಸಂತ್ರಸ್ತ ವಿನೋದ್ ಅವರ ಪತ್ನಿ
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…