Andolana originals

ಶ್ರೀರಂಗಪಟ್ಟಣ ದಸರಾಗೆ ವರ್ಣರಂಜಿತ ತೆರೆ

ಹೇಮಂತ್‌ ಕುಮಾರ್‌

ಶ್ರೀರಂಗಪಟ್ಟಣ ಪಟ್ಟಣದಲ್ಲಿ ಹತ್ತು ಹಲವು ನಾಲ್ಕು ದಿನಗಳ ಕಾಲ ಕಲಾಪ್ರಿಯರಿಗೆ ರಸದೌತನ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ

ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅ.4ರಿಂದ 7ರ ವರೆಗೆ ನಡೆದ ನಾಡಹಬ್ಬ ದಸರಾ ಮಹೋತ್ಸವ ಈ ಮಣ್ಣಿನ ಪರಂಪರೆ, ಸಾಂಸ್ಕೃತಿಕ ವೈಭವಗಳನ್ನು ಪಸರಿಸುವ ಮೂಲಕ ಸೋಮವಾರ ಸಂಪನ್ನಗೊಂಡಿತು.

ಅ.4ರಂದು ಮೊದಲ ದಿನದ ಕಾರ್ಯಕ್ರಮವಾಗಿ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ನಡೆದ ಜಂಬೂ ಸವಾರಿ ಮೆರವಣಿಗೆಗೆ ಚಲನಚಿತ್ರ ನಟ ಶಿವರಾಜ್ ಕುಮಾರ್ ಚಾಲನೆ ನೀಡಿ, ದಸರಾ ಆರಂಭಗೊಂಡ ಮೂಲ ಸ್ಥಳದಲ್ಲೇ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎನ್ನುವ ಮೂಲಕ ಶ್ರೀರಂಗಪಟ್ಟಣದ ದಸರಾ ಮಹತ್ವವನ್ನು ತಿಳಿಸಿದ್ದರು. ದಸರಾದಲ್ಲಿ ಯಾವುದೇ ಅವಘಡಗಳಿಗೆ ಆಸ್ಪದ ನೀಡದಂತೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ನಾಲ್ಕು ದಿನಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಕಾರ್ಯಕ್ರಮಗಳನ್ನು ನಡೆಸಿದ್ದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕಿರಂಗೂರು ಬನ್ನಿ ಮಂಟಪದಿಂದ ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ಮೈದಾನದವರೆಗೆ ಸುಮಾರು 3 ಕಿ.ಮೀ. ದೂರ ಮಹೇಂದ್ರ ಆನೆ ಮೂರನೇ ಬಾರಿಗೆ ಯಾವುದೇ ಅಡ್ಡಿ ಆತಂಕವಿಲ್ಲದೇ ಚಾಮುಂಡೇಶ್ವರಿ ಉತ್ಸವವನ್ನು ಗಜ ಗಾಂಭೀರ್ಯದಿಂದ ಹೊತ್ತು ಸಾಗುವ ಮೂಲಕ ಸಾವಿರಾರು ಜನರ ಸಂತಸವನ್ನು ಇಮ್ಮಡಿಗೊಳಿಸಿತ್ತು.

ಜಂಬೂ ಸವಾರಿ ಮೆರವಣಿಗೆ ಸಾಗಿದ ಇಕ್ಕೆಲಗಳಲ್ಲಿ ಸಹಸ್ರಾರು ಮಂದಿ ಕುಳಿತು ವೀಕ್ಷಣೆ ಮಾಡಿ ಶ್ರೀರಂಗಪಟ್ಟಣ ದಸರೆಗೂ ಮಹತ್ವವಿದೆ ಎಂಬುದನ್ನು
ಸಾಬೀತುಪಡಿಸಿದರು.

ಆ ಬಳಿಕ ನಡೆದ ವೈವಿಧ್ಯಮಯ ಮತ್ತು ಎಲ್ಲ ಕಲಾ ಕ್ಷೇತ್ರಗಳನ್ನೂ ಸ್ಪರ್ಶಿಸಿದ ಸಂಘಟನಾತ್ಮಕ ಹಾಗೂ ಕ್ರಿಯಾಶೀಲತೆಗೆ ಕನ್ನಡಿ ಹಿಡಿದಂತಹ ಕಾರ್ಯಕ್ರಮಗಳು ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿತ್ತು.

ಮುಖ್ಯವಾಗಿ ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶೇಖ್ ತನ್ವಿ‌ ಆಸಿಫ್, ಎಸ್‌ ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ಪರಿಶ್ರಮಕ್ಕೆ ಒತ್ತಾಗಿ ನಿಂತವರು ಶ್ರೀರಂಗಪಟ್ಟಣ ತಹಸಿಲ್ದಾರ್ ಹಾಗೂ ತಾಲ್ಲೂಕು ಆಡಳಿತದ ಸಿಬ್ಬಂದಿ ಅತಿಶಯೋಕ್ತಿಯಾಗಲಾರದು.

ಹೌದು, ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಕೆಲವೊಂದು ಲೋಪದೋಷಗಳು ಸಹಜ. ಇದನ್ನು ಆಯೋಜಕರ ಗಮನಕ್ಕೆ ತಂದು ಮುಂದೆ ಈ ಈ ರೀತಿಯಾಗದಂತೆ ನೋಡಿಕೊಳ್ಳುವಂತೆ ಎಚ್ಚರಿಸುವುದೂ ಮಾಧ್ಯಮಗಳ ಕರ್ತವ್ಯವೂ ಹೌದು. ಅದೇ ರೀತಿ ಈ ಬಾರಿ ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ, ಝಂಡಾ ಬತೇರಿ ಸೇರಿದಂತೆ ಕೆಲವೊಂದು ಸ್ಥಳಗಳಲ್ಲಿ ದೀಪಾಲಂಕಾರ ಸೇರಿದಂತೆ ಮಹತ್ವದ ಸ್ಥಾನಮಾನ ಕಲ್ಪಿಸಲಾಗಿಲ್ಲ ಎಂಬ ಆರೋಪಗಳು ಆಯೋಜಕರಿಗೆ ಸೂಕ್ತವಾದ ಸಲಹೆಯಾಗಿದೆ.

ಉಳಿದಂತೆ ನೂರಾರು ಕಲಾವಿದರು, ಅನೇಕ ಸಂಘಟನೆಗಳು ಹಾಗೂ ಸ್ಥಳೀಯ ಮತ್ತು ಪ್ರಚಲಿತದಲ್ಲಿರುವ ಗ್ಲಾಮರಸ್‌ ಕಲಾವಿದರಿಗೆ ಸಂಭಾವನೆಯಲ್ಲಿ ಕೆಲವು ಅಸಂಗತಗಳು ಚರ್ಚಾಸ್ಪದವಾಗಿಯೇ ಅಂತ್ಯಗೊಳ್ಳುತ್ತಿವೆ. ಇದು ಇಂದು ನಿನ್ನೆಯ ವಿವಾದವಲ್ಲ. ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡದಿದ್ದರೆ ಕಾರ್ಯಕ್ರಮ ಸಪ್ಪೆ ಎನ್ನುವವರು, ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡದಿದ್ದರೆ ಜಿಲ್ಲಾಡಳಿತ ಪಕ್ಷಪಾತಿ ಎನ್ನುವಂತಹ ಆರೋಪಗಳು ಈ ಹಿಂದೆಯೂ ಕೇಳಿಬಂದಿತ್ತು. ಒಟ್ಟಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಾಲ್ಕು ದಿನಗಳ ಕಾಲ ನಡೆದ ಶ್ರೀರಂಗಪಟ್ಟಣ ದಸರಾ ಕ್ರೀಡೆ, ಸಂಸ್ಕೃತಿ, ಜನಪದ, ಸಿನಿಮಾ, ರಂಗಭೂಮಿ, ತಾಳವಾದ್ಯ ಇವೇ ಮುಂತಾದ ಕ್ಷೇತ್ರಗಳ ಎಲ್ಲ ಕಲಾವಿದರಿಗೂ ಅವಕಾಶ ಕಲ್ಪಿಸುವಂತಹ ಪ್ರಯತ್ನ ನಡೆದಿದ್ದು ಗಮನಾರ್ಹ ಸಂಗತಿ.

ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಸಮಾರೋಪ ಚಟುವಟಿಕೆಗಳ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ದರ್ಶನ್‌ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ. ಕುಮಾರ, ಎಡಿಸಿ ನಾಗರಾಜು, ಜಿಪಂ ಸಿಇಒ ತನೀ‌ ಆಸಿಫ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿಂದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಆಂದೋಲನ ಡೆಸ್ಕ್

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

28 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

33 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

42 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago