Andolana originals

ಕೋಟೆಯಲ್ಲಿ ಸಡಗರದ ನವರಾತ್ರಿ ಉತ್ಸವಕ್ಕೆ ತೆರೆ

ಅರ್ಥಪೂರ್ಣವಾಗಿ ನಡೆದ ಮಿನಿ ದಸರಾ, ಗಮನ ಸೆಳೆದ ಪೊಲೀಸರ ಬನ್ನಿ ಪೂಜೆ
ಮಂಜು ಕೋಟೆ
ಎಚ್.ಡಿ.ಕೋಟೆ: ಪಟ್ಟಣದಲ್ಲಿ ಶನಿವಾರ ಶ್ರೀ ವರದರಾಜ ಸ್ವಾಮಿ, ಶ್ರೀದೇವಿ, ಭೂದೇವಿ ಮತ್ತು ಚಾಮುಂಡೇಶ್ವರಿ ಉತ್ಸವ ಮೂರ್ತಿಗಳ ಮೆರವಣಿಗೆಯೊಂದಿಗೆ ಮಿನಿ ದಸರಾ ಮತ್ತು ನವರಾತ್ರಿ ಉತ್ಸವ ಅರ್ಥಪೂರ್ಣವಾಗಿ ನೆರವೇರಿತು.

ಹೌಸಿಂಗ್‌ ಬೋರ್ಡ್‌ನಲ್ಲಿರುವ ಚಾಮುಂಡೇ ಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ದೇವಿಗೆ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 3.30ರ ಸಂದರ್ಭದಲ್ಲಿ ಬೆಳ್ಳಿ ರಥದಲ್ಲಿ ಕೂರಿಸಿದ ಚಾಮುಂಡೇಶ್ವರಿ ಉತ್ಸವಮೂರ್ತಿಯೊಂದಿಗೆ ವಾದ್ಯಗೋಷ್ಠಿ, ಕಲಾತಂಡಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು. ಮೊದಲನೇ ಮುಖ್ಯರಸ್ತೆಯಲ್ಲಿರುವ ಚೋಳರ ಕಾಲದ ವರದರಾಜಸ್ವಾಮಿ ದೇವಸ್ಥಾನದಲ್ಲಿ ಶ್ರೀ ವರದರಾಜಸ್ವಾಮಿ ಮತ್ತು ಭೂದೇವಿ, ಶ್ರೀದೇವಿ ದೇವರ ಉತ್ಸವ ಮೂರ್ತಿಗಳ ಮೆರವಣಿಗೆಗೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಸಮಿತಿಯವರು ಚಾಲನೆ ನೀಡಿದರು.

ಇದಕ್ಕೂ ಮುನ್ನ ಸರ್ಕಲ್ ಇನ್‌ಸ್ಪೆಕ್ಟರ್ ಶಬೀರ್ ಹುಸೇನ್‌ ಸಬ್‌ ಇನ್ ಸೆಕ‌ ಪ್ರಕಾಶ್ ಮತ್ತಿತರರು ಪೊಲೀಸ್ ಪರೇಡ್ ನೆರವೇರಿಸಿ, ಉತ್ಸವಮೂರ್ತಿ ಗಳಿಗೆ ಗೌರವ ಸಲ್ಲಿಸಿದರು. ಅನೇಕ ಕಲಾತಂಡಗಳು, ವಾದ್ಯಗೋಷ್ಠಿಗಳು, ಸ್ತಬ್ಧಚಿತ್ರಗಳೊಡನೆ ಚಾಮುಂಡೇಶ್ವರಿ ಮತ್ತು ವರದರಾಜಸ್ವಾಮಿ ಉತ್ಸವಮೂರ್ತಿಗಳ ಮೆರವಣಿಗೆ ಮೊದಲನೇ ಮುಖ್ಯ ರಸ್ತೆಯಿಂದ ಚಾಮುಂಡೇಶ್ವರಿ ದೇವಸ್ಥಾನದ ಬನ್ನಿಮರದವರೆಗೆ ನಡೆಯಿತು. ನಂತರ ಅಲ್ಲಿರುವ ಬನ್ನಿಮರಕ್ಕೆ ಪೊಲೀಸ್ ಇಲಾಖೆಯವರು ಪೊಲೀಸ್ ಪೂಜೆ ನೆರವೇರಿಸಿದರು. ಈ ಮೂಲಕ 9 ದಿನಗಳಿಂದ ವರದರಾಜಸ್ವಾಮಿ ಮತ್ತು ಚಾಮುಂಡೇಶ್ವರಿ, ಬೀರೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ನವರಾತ್ರಿ ಮತ್ತು ವಿಜಯದಶಮಿಯ ದಸರಾಕ್ಕೆ ತೆರೆ ಬಿದ್ದಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಗಳ ಮುಖ್ಯಸ್ಥರಾದ ಬಿ.ಎಸ್‌.ರಂಗ ಅಯ್ಯಂಗಾರ್, ನಟರಾಜ್, ಡೇರಿ ಶ್ರೀಕಾಂತ್, ತಿರುಮಲಾಚಾರ್, ಡಿಶ್ ದೇವರಾಜ್, ಪೂರ್ಣೇಶ್, ಸತೀಶ್ ಆರಾಧ್ಯ, ಸೋಮಶೇಖರ್, ವಿನಯ್ ಭಜರಂಗಿ, ಶ್ರೀನಿವಾಸ್, ಪ್ರಮೋದ್, ನಾಗರಾಜ್ ಶೆಟ್ಟಿ, ಬ್ಯಾಂಕ್ ವೀರಪ್ಪ, ನಾಗಣ್ಣ, ರಮೇಶ್, ಕುಲುಮೆ ಜೈಶಂಕರ್, ದಿವಾಕರ, ಶಿವರಾಜ್, ಅಯ್ಯಂಗಾರ್ ಪ್ರಸಾದಿ, ಹೈರಿಗೆ ಮಾದೇಗೌಡ, ಆರಾಧ್ಯ, ಚಂದ್ರ ಮೌಳಿ, ಸತೀಶ, ನಾಗರಾಜು, ಗಣೇಶಾಚಾರ್, ಮೀನು ರಾಜಣ್ಣ, ಶಶಿ, ಮಂಜು ಕೋಟೆ, ಶ್ರೀಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಳೆಯಲ್ಲೂ ಜನರಿಂದ ವೀಕ್ಷಣೆ:
ಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಸುರಿದ ವಿಪರೀತ ಮಳೆಯ ನಡುವೆಯೂ ಜನಸಾಮಾನ್ಯರು ವಿಜಯದಶಮಿ ಉತ್ಸವ, ಮಿನಿ ದಸರಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

7 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

8 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

8 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

9 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

9 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

13 hours ago