Andolana originals

ಕಾಡಾನೆಗಳ ಹಾವಳಿ ತಡೆಗೆ ಆನೆ ವಿಹಾರಧಾಮ..!

2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ; ಹುಲಿ ಸಂರಕ್ಷಿತಾರಣ್ಯ ಮಾದರಿಯಲ್ಲಿ ನಿರ್ಮಿಸಲು ಚಿಂತನೆ

ನವೀನ್‌ ಡಿಸೋಜ

ಮಡಿಕೇರಿ: ಅರಣ್ಯದಂಚಿನಲ್ಲಿ ನಡೆಯುತ್ತಿರುವ ಕಾಡಾನೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಹಾಸನ ಮತ್ತು ಕೊಡಗಿನಲ್ಲಿ ಆಣಿ ವಿಹಾರಧಾಮ ನಿರ್ಮಿಸಲು ಸರ್ಕಾರ ಮುಂದಾಗಿದೆ.ಈ ಕುರಿತು ಇತ್ತೀಚೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬೆಳಗಾವಿ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.

ಅರಣ್ಯದಂಚಿನ ಗ್ರಾಮಗಳು ಮತ್ತು ಕೋಟಿ ಜಮೀನುಗಳಿಗೆ ಲಗ್ಗೆ ಇಡುವ ಕಾಡಾನೆಗಳ ಉಪಟಳ ತಡೆಗೆ ಇಂತಹದೊಂದು ಹೊಸ ಪ್ರಯೋಗದ ಅಗತ್ಯತೆ ಬಗ್ಗೆ ಇತ್ತೀಚೆಗೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅರಣ್ಯ ಸಚಿವರೊಂದಿಗೆ ಚರ್ಚಿಸಿದ್ದರು. ಸದ್ಯ ಅದೇ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಚಿಂತನೆ ನಡೆಸಿದೆ.

ಈ ಹಿಂದೆ ಬೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ನಿವೃತ್ತ ಮುಖ್ಯಸ್ಥ ಸಿ.ಬಿ.ಕುಶಾಲಪ್ಪ ಮತ್ತು ಹಿರಿಯ ತಜ್ಞರ ತಂಡ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿತ್ತು. ಕಾಡಿನಿಂದ ತೋಟಗಳಿಗೆ ಬಂದು ಇಲ್ಲಿಯೇ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಮರಳಿಸುವುದು ಅಥವಾ ಕಾಡಿನಲ್ಲಿರಿಸಿ ಬೇಲಿ ಹಾಕುವುದು ಅವೈಜ್ಞಾನಿಕ ಕ್ರಮವಾಗಿದ್ದು, ಈ ಆಣೆಗಳಿಗಾಗಿಯೇ ಒಂದು ಸ್ಥಳವನ್ನು ಗುರುತಿಸಿ ಅಲ್ಲಿ ಅವುಗಳಿಗೆ ಬೇಕಾದ ನೀರು, ಆಹಾರ ಲಭಿಸುವಂತೆ ಮಾಡುವುದು. ಬಳಿಕ ಈ ಪ್ರದೇಶಕ್ಕೆ ಕಾಡಾನೆಗಳನ್ನು ಹಂತಹಂತವಾಗಿ ಸಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಆನೆ ವಿಹಾರಧಾಮಗಳು ಹುಲಿ ಸಂರಕ್ಷಿಕಾರಣ್ಯಗಳ ಮಾದರಿಯಲ್ಲಿಯೇ ಇರಲಿದೆ.

ಕಾಡಿನಿಂದ ಕಾಫಿ ತೋಟಗಳಿಗೆ ಬಂದು ನೆಲೆಸಿ ತೋಟದಾನೆಗಳಾಗಿಯೇ ಮಾರ್ಪಟ್ಟಿರುವ ಆನೆಗಳನ್ನು ಒಂದು ಸ್ಥಳಕ್ಕೆ ಸ್ಥಳಾಂತರಿಸಬೇಕಾದರೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಇದಲ್ಲದೆ ೨ ಸಾವಿರ ಹೆಕ್ಟೇರ್ ಗೆ ರೈಲ್ವೆ ಬ್ಯಾರಿಕೇಡ್ ಬೇಲಿ ನಿರ್ಮಾಣ ಮಾಡಬೇಕಿದೆ. ಅನುದಾನವೂ ಬೇಕಾಗಲಿದೆ. ಪ್ರಕ್ರಿಯೆ ನಡೆಸಬೇಕಾಗುತ್ತದೆ. ಇದೊಂದು ಪ್ರಾಯೋಗಿಕ ಅದೊಂದು ಬೃಹತ್ ಯೋಜನೆಯಾಗಿದ್ದು, ಹೆಚ್ಚು ಯೋಜನೆಯಾಗಿದ್ದು, ಕಾರ್ಯರೂಪಕ್ಕೆ ಯಶಸ್ವಿಯಾದರೆ ಕಾಡಾನ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದೊಂದು ಮೈಲಿಗಲ್ಲಾಗಲಿದೆ.

ಕಾಡಾನೆ ಮಾನವ ಸಂಘರ್ಷ ಮಿತಿ ಮೀರುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ತಜ್ಞರ ಸಲಹೆಯಂತೆ ಈ ಜೋಡ ಯೋಜನೆ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗಿತ್ತು, ತಿತಿಮತಿ ಭಾಗದಲ್ಲಿ ಈ ಯೋಜನೆಗೆ ಸೂಕ್ತ ಜಾಗ ಗುರುತಿಸುವ ಬಗ್ಗೆ ಚರ್ಚೆ ನಡೆದಿದೆ. ತಜ್ಞರು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಲಿದೆ. -ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ

ನಾಗರಹೊಳೆ ಬಫರ್ ಜೋನ್‌ನಲ್ಲಿ ಪ್ರಯೋಗ..?
ಕಾಡಾನೆಗಳನ್ನು ಒಂದೆಡೆ ಬಿಟ್ಟು ಸಂರಕ್ಷಿತ ಪ್ರದೇಶವನ್ನು ಸೃಷ್ಟಿಸುವುದಾದರೇ ಅದಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಫರ್ ಜೋನ್ ಉತ್ತಮ ಆಯ್ಕೆ ಎಂಬ ಸಂಜೆಯೂ ತೆಳಿ ಬಂದಿದೆ. ನಾಗರಹೊಳೆ ಬಮ್ ಜೋನ್‌ನಲ್ಲಿ ಹಾರಿಗಳಿಗೆ ನೀರು ಲಭ್ಯವಿರುವಂತೆ ನೋಡಿಕೊಳ್ಳಲು ತೆರೆಗಳ ಅಭಿವೃದ್ಧಿ, ಆಹಾರ, ನರಳು ಸಿಗುವಂತಾಗಲು ಬೇರಾಗುವ ಮರಗಳನ್ನು ನೆಟ್ಟು ಬೆಳೆಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬಯದು ಎಂದು ಸಲಹೆ ನೀಡಲಾಗಿದೆ. ತೊಡಗಿನಲ್ಲಿ ನಿರ್ಮಾಣವಾಗುವ ಆಣಿ ವಿಹಾರಧಾಮಲ್ಲಿ ಸಿಸಿಮಸಿ ಬಳಿ ಜಾಗ ಇರುವ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿರುವುದಾಗಿ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದು, ಹುಲಿ ಸಂರಕ್ಷಿತಾರಣ್ಯದ ಬ‌ ಬೋನ್‌ನಲ್ಲಿ ಬರುವ ಈ ಪ್ರದೇಶದಲ್ಲಿ ಆನೆ ವಿಹಾರಧಾಮ ನಿರ್ಮಿಸಲು ತೆರೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಕಾರ್ಯಗಳಾಗಬೇಕಿದೆ.

 

ಆಂದೋಲನ ಡೆಸ್ಕ್

Recent Posts

ಟಿವಿಕೆ ಗೆಲುವು : ಹನೂರಲ್ಲಿ ಸಂಭ್ರಮಾಚರಣೆ

ಹನೂರು : ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದಕ್ಕೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ…

14 mins ago

ಪ.ಬಂಗಾಳ | ವಿಟೋ ಅಧಿಕಾರ ಬಳಸಿ ಮಂತ್ರಿಮಂಡಳ ವಿಸರ್ಜಿಸಿದ ರಾಜ್ಯಪಾಲ ; ದೀದಿಗೆ ಹಿನ್ನೆಡೆ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ…

30 mins ago

ಹನೂರು | ಕಾಡು ಹಂದಿ ದಾಳಿ ; ರೈತನಿಗೆ ಗಂಭೀರ ಗಾಯ

ಹನೂರು : ತಾಲ್ಲೂಕಿನ ದಿನ್ನಳ್ಳಿ ರಸ್ತೆಯ ಸಮೀಪದ ಜಮೀನೊಂದರಲ್ಲಿ ಕಾಡು ಹಂದಿ ದಾಳಿ ನಡೆಸಿ ರೈತನಿಗೆ ಗಂಭೀರ ಗಾಯಗೊಳಿಸಿರುವ ಘಟನೆ…

43 mins ago

ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿ ; ಸ್ಟಾಲಿನ್‌ ಹೇಳಿದ್ದೇನು?

ಚೆನ್ನೆ : ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. 108 ಸ್ಥಾನಗಳೊಂದಿಗೆ ಅತಿ ದೊಡ್ಡ…

1 hour ago

ಮೇಲು-ಕೀಳು ಕಳೆಯಲಿ ; ಸರ್ವರೂ ಒಂದೇ ಎಂಬ ಮನೋಭಾವ ಮೂಡಲಿ : ಮೋಹನ್‌ ಭಾಗವತ್‌

ಮೈಸೂರು : ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು ಎಂದು ರಾಷ್ಟ್ರೀಯ…

1 hour ago

ಬೆಂಗಳೂರು ಕೈತಪ್ಪಿದ ಐಪಿಎಲ್‌ ಫೈನಲ್‌ ಪಂದ್ಯ : ಕೆಎಸ್‌ಸಿಎ ಹೇಳಿದ್ದೇನು?

ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಧಿಕೃತವಾಗಿ ಸ್ಥಳಾಂತರಿಸಿದ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್…

1 hour ago