ಚಂದ್ರಶೇಖರ್
ವಿಜಯನಗರದ ಐಟಿ ಉದ್ಯೋಗಿ ಚಂದ್ರಶೇಖರ್ ಸಂತಸ
ಮೈಸೂರು: ಮಧುಮೇಹದಿಂದ ಬಳಲುತ್ತಿದ್ದ ನಾನು, ಕೆಲವು ವೈದ್ಯರ ಬಳಿ ಚಿಕಿತ್ಸೆ ಪಡೆದರೂಕಾಯಿಲೆ ನಿಯಂತ್ರಣಕ್ಕೆ ಬಾರದೆ ಆತಂಕದಲ್ಲಿದ್ದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಡಾ.ಎ.ಆರ್.ರೇಣುಕಾಪ್ರಸಾದ್ ಅವರ ಸಂಪರ್ಕ ಸಿಕ್ಕಿತು. ಚಿಕಿತ್ಸೆ ಪಡೆದು ಇದೀಗ ಸಂಪೂರ್ಣ ಮಧುಮೇಹ ಮುಕ್ತನಾಗಿ ಆರೋಗ್ಯವಾಗಿದ್ದೇನೆ ಎಂದು ನಗರದ ವಿಜಯನಗರದ ಐಟಿ ಉದ್ಯೋಗಿ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದರು.
‘ಆಂದೋಲನ’ದೊಂದಿಗೆ ಮಾತನಾಡಿದ ಅವರು, ಡಾ.ಎ.ಆರ್. ರೇಣುಕಾಪ್ರಸಾದ್ ಮಧುಮೇಹ ಕಾಯಿಲೆಗೆ ಉತ್ತಮ ಚಿಕಿತ್ಸೆ ನೀಡುತ್ತಾರೆ. ಈ ಕಾಯಿಲೆ ಜೀವನ ಪೂರ್ತಿ ಬಾಧಿಸಲಿದೆ ಎಂಬ ಚಿಂತೆ ನನ್ನನ್ನು ಕಾಡಿತ್ತು. ಆದರೆ, ನಾಲ್ಕು ವರ್ಷಗಳಿಂದ ಮುಕ್ತನಾಗಿದ್ದೇನೆ ಎಂದರು.
ಕೆಲವು ವರ್ಷಗಳ ಹಿಂದೆ ಮಧುಮೇಹ ರೋಗಕ್ಕೆ ತುತ್ತಾದೆ. ಹಲವು ವೈದ್ಯರ ಬಳಿ ಚಿಕಿತ್ಸೆ ಪಡೆದೆ. ಆದರೆ, ಪ್ರಯೋಜನ ಆಗಲಿಲ್ಲ. ನನ್ನ ಸ್ನೇಹಿತರೊಬ್ಬರು ಡಾ.ಎ.ಆರ್.ರೇಣುಕಾ ಪ್ರಸಾದ್ ಅವರ ಬಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಚಿಕಿತ್ಸೆ ಪಡೆದ ಬಳಿಕ ನಿಧಾನವಾಗಿ ಮಧುಮೇಹ ನಿಯಂತ್ರಣಕ್ಕೆ ಬರಲಾರಂಭಿಸಿತು. ಇದಕ್ಕೆ ಪೂರಕವಾಗಿ ನಾನು ವ್ಯಾಯಾಮ ಆರಂಭಿಸಿದೆ. ಈಗ ಸಂಪೂರ್ಣ ಗುಣಮುಖನಾಗಿದ್ದೇನೆ. ಕಳೆದ ಮೂರೂವರೆ ವರ್ಷಗಳಿಂದ ಯಾವುದೇ ಔಷಧ, ಮಾತ್ರೆ ಸೇರಿದಂತೆ ಮಧುಮೇಹಕ್ಕೆ ಚಿಕಿತ್ಸೆ ಪಡೆಯುವು ದನ್ನೇ ನಿಲ್ಲಿಸಿದ್ದೇನೆ ಎಂದು ಹೇಳಿದರು.
ನಿತ್ಯ ವಾಕಿಂಗ್-ಜಾಗಿಂಗ್, ಜಿಮ್: ಮಧು ಮೇಹದ ನಿಯಂತ್ರಣಕ್ಕೆ ದೈಹಿಕ ವ್ಯಾಯಾಮ ಅತ್ಯವಶ್ಯ. ಹೀಗಾಗಿ ನಿತ್ಯ ೫-೬ ಕಿ.ಮೀ. ರನ್ನಿಂಗ್ ಅಥವಾ ವಾಕಿಂಗ್ ಮಾಡಬೇಕು ಅಥವಾ ಆಟೋಟಗಳಲ್ಲಿ ಭಾಗವಹಿಸಬೇಕು. ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಫುಟ್‌ಬಾಲ್ ಯಾವುದೇ ಆಟ, ಜಿಮ್ ಅಥವಾ ಸಾಮಾನ್ಯ ವ್ಯಾಯಾಮಗಳನ್ನು ಮಾಡುವಮೂಲಕ ಮಧುಮೇಹಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದರು.
ಸಿಹಿ ಪದಾರ್ಥಗಳಿಗೆ ಕಡಿವಾಣ: ಟೀ ಅಥವಾ ಕಾಫಿ ಸೇರಿದಂತೆ ನೇರವಾಗಿ ಸಕ್ಕರೆ ಬಳಸುವ ಪದಾರ್ಥಗಳ ಸೇವನೆಯನ್ನು ಸಾಕಷ್ಟು ಕಡಿಮೆಗೊಳಿಸಿದೆ. ಕುರುಕಲು ತಿಂಡಿಗಳನ್ನು ದೂರ ಮಾಡಿದೆ. ತರಕಾರಿಯಿಂದ ಸಿದ್ಧಪಡಿಸಿದ ಪದಾರ್ಥಗಳನ್ನು ಹೆಚ್ಚು ಬಳಸಲು ಆರಂಭಿಸಿದೆ ಎಂದು ಅವರು ತಿಳಿಸಿದರು.
ಹಣ್ಣು, ತರಕಾರಿ ಸೇವನೆ…:
ಅನ್ನ ತಿಂದರೂ ಅದರ ಜತೆಗೆ ತರಕಾರಿ ಮತ್ತು ಹಣ್ಣಿನ ಪದಾರ್ಥಗಳನ್ನು ಸೇವನೆ ಮಾಡುತ್ತ ಬಂದೆ. ಇದೀಗ ನಾನು ಮಧುಮೇಹ ಮುಕ್ತನಾಗಿದ್ದೇನೆ. ಇದಕ್ಕೆಲ್ಲ ಡಾ.ಎ.ಆರ್.ರೇಣುಕಾಪ್ರಸಾದ್ರ ಚಿಕಿತ್ಸೆ, ಸಲಹೆ ಮತ್ತು ಸೂಚನೆಗಳೇ ಕಾರಣ ಎಂದು ಚಂದ್ರಶೇಖರ್ ಹರ್ಷದಿಂದ ಹೇಳಿದರು.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…