Andolana originals

ಸುಳ್ಳು ಸುದ್ದಿ ನಂಬಬೇಡಿ: ಪ್ರಮೋದಾದೇವಿ ಒಡೆಯರ್‌

ರಾಜಮನೆತನದ ಆಸ್ತಿ ಹೆಸರಿನಲ್ಲಿ ವಂಚನೆ ಹುನ್ನಾರ 

ಮೈಸೂರು: ನಗರದ ಹಲವು ಕಡೆಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರಿಗೆ ಮಾರಾಟ ಮಾಡಿ ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಲೇ ಇದ್ದು, ಇದೀಗ ರಾಜಮನೆತನಕ್ಕೆ ಸೇರಿದ ಜಮೀನಿನ ವಿಚಾರದಲ್ಲಿ ಕೆಲವರು ಸುಳ್ಳು ಸುದ್ದಿ ಹಬ್ಬಿಸಿರುವ ಪ್ರಕರಣ ನಡೆದಿದೆ.

ಮೈಸೂರಿನ ಕಸಬಾ ಹೋಬಳಿಯ ಕುರುಬರಹಳ್ಳಿಯ ಸರ್ವೆ ನಂಬರ್ ೪ರಲ್ಲಿ ಕಾನೂನುಬದ್ಧ ನಮ್ಮ ಸ್ವಾಽನದಲ್ಲಿರುವ ಸುಮಾರು ೧೪ ಎಕರೆ ಭೂಮಿಗೆ ಸಂಬಂಧಿಸಿದಂತೆ ಕೆಲವು ದುಷ್ಕರ್ಮಿಗಳು ವಾಟ್ಸಾಪ್ ಮೂಲಕ ಸುಳ್ಳು, ದಾರಿತಪ್ಪಿಸುವಮತ್ತು ಮೋಸದ ಮಾಹಿತಿಯನ್ನು ಹರಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಒ.ಎಸ್.ಸಂಖ್ಯೆ ೧೪೦೦/೨೦೨೪ರಲ್ಲಿನ ಮೊಕದ್ದಮೆಗೆ ಸಂಬಂಧಿಸಿದಂತೆ ಮೈಸೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ಮುಂದೆ ಪ್ರಕರಣ ಬಾಕಿ ಇದೆ. ಇದರಲ್ಲಿ ಆಸ್ತಿಯ ಸ್ವರೂಪ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಮಧ್ಯಂತರ ಆದೇಶ ಜಾರಿಯಲ್ಲಿರುವ ಜತೆಗೆ, ನ್ಯಾಯಾಲಯದಲ್ಲಿ ಈ ವಿಷಯವು ಪ್ರಸ್ತುತ ವಿಚಾರಣೆಯಲ್ಲಿದೆ. ಲಲಿತ ಮಹಲ್ ಬಳಿಯ ಈ ೧೪ ಎಕರೆ ಭೂಮಿಯನ್ನು ನಮ್ಮ ಸ್ವಎಚ್ಚರಿಕೆ ಅಡಿಯಲ್ಲಿ ಜಂಟಿ ಉದ್ಯಮಕ್ಕಾಗಿ ನೀಡಲಾಗುತ್ತಿದೆ ಎಂದು ಸುಳ್ಳು ಹೇಳುವ ಸಂದೇಶದೊಂದಿಗೆ ಈ ವಿಡಿಯೋವನ್ನು ಸೇರಿಸಲಾಗಿದೆ ಮತ್ತು ಎನ್‌ಒಸಿ ಖಚಿತವಾಗಿದೆ ಎಂದು ಮತ್ತಷ್ಟು ಸುಳ್ಳು ಹೇಳಲಾಗಿದೆ. ಈ ವಾಟ್ಸಾಪ್ ಸುದ್ದಿ ಸಂಪೂರ್ಣವಾಗಿ ಸುಳ್ಳು, ಆಧಾರರಹಿತವಾಗಿದೆ. ಈ ಸಂದೇಶವು ೨೦ ಕೋಟಿ ರೂ. ಮರು ಪಾವತಿಸಬಹುದಾದ ಮುಂಗಡ ವನ್ನು ಸಹ ಕೋರುತ್ತದೆ. ಇದು ಸಾರ್ವ ಜನಿಕರನ್ನು ವಂಚಿಸಲು ಉದ್ದೇಶಪೂರ್ವಕ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದಾರೆ.

ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ಹೇಳಲಾದ ವ್ಯಕ್ತಿಗಳ ವಂಚನೆ, ತಪ್ಪು ನಿರೂಪಣೆ ಮತ್ತು ಕ್ರಿಮಿನಲ್ ವಂಚನೆ ಮತ್ತು ಕಾನೂನು ಬಾಹಿರವಾಗಿ ದುರುಪಯೋಗಪಡಿಸಿ ಕೊಳ್ಳಲು ಉದ್ದೇಶಿಸಿರುವ ಕೃತ್ಯವೆಂದು ಹೇಳಬಹುದಾಗಿದೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಈ ವ್ಯಕ್ತಿಗಳ ಇಂತಹ ಸುಳ್ಳು ನಿರೂಪಣೆಗಳ ಆಧಾರದ ಮೇಲೆ ವಂಚನೆಗೆ ಬಲಿ ಯಾಗಬೇಡಿ ಹಾಗೂ ಹೇಳಲಾದ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಹಿವಾಟಿನಲ್ಲಿ ಭಾಗವಹಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಮೈಸೂರು: ನಗರದ ಹಲವು ಕಡೆಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರಿಗೆ ಮಾರಾಟ ಮಾಡಿ ವಂಚಿಸುತ್ತಿರುವ ಪ್ರಕ ರಣಗಳು ನಡೆಯುತ್ತಲೇ ಇದ್ದು, ಇದೀಗ ರಾಜಮನೆತನಕ್ಕೆ ಸೇರಿದ ಜಮೀನಿನ ವಿಚಾರದಲ್ಲಿ ಕೆಲವರು ಸುಳ್ಳು ಸುದ್ದಿ ಹಬ್ಬಿ ಸಿರುವ ಪ್ರಕರಣ ನಡೆದಿದೆ.

ಕಸಬಾ ಹೋಬಳಿಯ ಕುರುಬರ ಹಳ್ಳಿಯ ಸ.ನಂ.೪ರಲ್ಲಿ ನಮ್ಮ ಸ್ವಾಧೀನದಲ್ಲಿರುವ ೧೪ ಎಕರೆ ಅಳತೆಯ ಭೂಮಿಗೆ ಸಂಬಂಧಿಸಿದ ವಿಡಿಯೋವನ್ನು ಕೆಲವು ದುಷ್ಕರ್ಮಿಗಳು ವಾಟ್ಸಾಪ್ ಮೂಲಕ ಸಾರ್ವಜನಿಕರಿಗೆ ಸುಳ್ಳು, ದಾರಿತಪ್ಪಿಸುವ ಮತ್ತು ಮೋಸದ ಮಾಹಿತಿಯನ್ನು ಹರಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ರಾಜವಂಶಸ್ಥ ರಾದ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

13 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

13 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

20 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

20 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

20 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

20 hours ago