ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ ವಾರದಲ್ಲಿ ಆರಂಭವಾಗಲಿದೆ. ವಿಶ್ವ ಪ್ರಸಿದ್ಧ ಚಾಮುಂಡಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಪ್ರಸಾದ ಯೋಜನೆಯಡಿ ಆಯ್ಕೆ ಮಾಡಿದೆ.
ದೇಶದ ೪೮ ಪಾರಂಪರಿಕ ದೇವಸ್ಥಾನಗಳ ಅಭಿವೃದ್ಧಿ ಪಟ್ಟಿಯಲ್ಲಿ ಚಾಮುಂಡಿ ಬೆಟ್ಟ ಕೂಡ ಸೇರಿದೆ. ಈ ಯೋಜನೆಯಡಿ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಕೇಂದ್ರ ಸರ್ಕಾರ ೪೫ ಕೋಟಿ ರೂಪಾಯಿ ನೀಡುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಕಾರ್ಕಳ, ಉಡುಪಿ ಹಾಗೂ ಮಂಗಳೂರು ಸೇರಿದಂತೆ ಹಲವು ಪ್ರಖ್ಯಾತ ಪಾರಂಪರಿಕ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ ಅನುಭವ ಹೊಂದಿರುವ ಎಸ್‌ಕೆಎಸ್ ಕಾರ್ಕಳ ಪ್ರೈ. ಲಿ.,ಗೆ ಚಾಮುಂಡಿಬೆಟ್ಟದ ಅಭಿವೃದ್ಧಿ ಗುತ್ತಿಗೆ ನೀಡಲಾಗಿದೆ.
ಈ ಯೋಜನೆಯ ಸಂಪೂರ್ಣ ಕಾಮಗಾರಿಯನ್ನು ೨೦೨೬ರ ಮಾರ್ಚ್ ೨೬ಕ್ಕೆ ಪೂರ್ಣಗೊಳಿಸುವಂತೆ ಟೆಂಡರ್ನಲ್ಲಿ ಷರತ್ತು ವಿಧಿಸಲಾಗಿದೆ. ಗುತ್ತಿಗೆ ಪಡೆದ ಎಸ್‌ಕೆಎಸ್ ಕಾರ್ಕಳ ಕಂಪೆನಿ ಈಗಾಗಲೇ ಚಾಮುಂಡಿಬೆಟ್ಟ, ನಂದಿ ಪ್ರತಿಮೆ ಹಾಗೂ ಬೆಟ್ಟದ ಪಾದದಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿದೆ. ನೀಲನಕ್ಷೆ, ‘ತ್ರಿ’ ಡೈಮೆನ್ಷನ್ ಸೇರಿದಂತೆ ಎಲ್ಲಾ ಸಿದ್ಧತೆ ಪೂರ್ಣಗೊಳಿಸಿದೆ.
ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಅಧಿಕೃತವಾಗಿ ಜಾಗ ಹಸ್ತಾಂತರ ಮಾಡಬೇಕು. ಜೊತೆಗೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಲ್ಲಿಸಿರುವಂತೆ ಅಭಿವೃದ್ಧಿ ಮಾಡಲು ನಿರಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕಿದ್ದು, ಸಂಬಂಧಪಟ್ಟ ಇಲಾಖೆ ಎನ್‌ಒಸಿ ನೀಡಿದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ.
ಯೋಜನೆಯಲ್ಲಿ ಮಾರ್ಪಾಡು: ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಚಾಮುಂಡಿಬೆಟ್ಟ ಅಭಿವೃದ್ಧಿ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ. ರಥೋತ್ಸವದ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ರಥ ದೇವಸ್ಥಾನದ ಪ್ರವೇಶ ದ್ವಾರದಿಂದ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನದ ಮೂಲಕ ಮತ್ತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರವೇಶದ್ವಾರ ತಲುಪಲಿದೆ. ರಥೋತ್ಸವ ದೇವಸ್ಥಾನದ ಒಂದು ಸುತ್ತು ಹಾಕುವ ಸಂದರ್ಭದಲ್ಲಿ ಭಕ್ತರು ರಥವನ್ನು ಹಿಂಬಾಲಿಸುತ್ತಾ ದೇವಸ್ಥಾನ ಸುತ್ತು ಹಾಕುತ್ತಾರೆ. ಸಾವಿರಾರು ಜನರು ಒಂದೆಡೆ ಸೇರುವ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗುತ್ತದೆ. ಆ ವೇಳೆ ಅವಘಡಗಳು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಇದನ್ನು ತಪ್ಪಿಸುವಂತೆ ತಾಂತ್ರಿಕ ಮಾರ್ಪಾಡು ಮಾಡಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದರು.
ಕಲೆ, ವಿವಿಧೋದ್ದೇಶ ಕೇಂದ್ರ, ವೀಕ್ಷಣಾ ಗೋಪುರ ನಿರ್ಮಾಣ:
ಕೇಂದ್ರದ ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಮೇಲೆ, ನಂದಿ ಪ್ರತಿಮೆ, ಪಾದದ ಮೆಟ್ಟಿಲು ಸೇರಿದಂತೆ ಇತರೆಡೆ ೧೦ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ದೇವಸ್ಥಾನದ ಬಳಿ ಸರದಿ ಸಾಲು ಮಂಟಪ, ಮಹಿಷಾಸುರ ಪ್ರತಿಮೆ ಬಳಿ ಮಲ್ಟಿ ಪರ್ಪಸ್ ಸೆಂಟರ್, ಅಲ್ಲಿಯೇ ಪೂಜೆ, ವಿಶೇಷ ದರ್ಶನ ಸೇರಿದಂತೆ ಇತರೆ ಸೇವಾ ಕಾರ್ಯಗಳಿಗೆ ಟಿಕೆಟ್ ಕೌಂಟರ್ ತೆರೆಯಲಾಗುತ್ತದೆ. ಮಹಿಷಾಸುರ ಪ್ರತಿಮೆಯ ನೇರ ರಸ್ತೆಯಲ್ಲಿ ಈಗಿರುವ ಕಬ್ಬಿಣದ ಗೇಟ್ ಬಳಿ ಪಾರಂಪರಿಕ ಶೈಲಿಯ ಆರ್ಚ್ (ಪವೇಶ ದ್ವಾರ), ಶೌಚಾಲಯ, ಚಪ್ಪಲಿ ಸ್ಟ್ಯಾಂಡ್, ವ್ಯೂವ್ಹಿಂಗ್ ಟವರ್, ನಂದಿ ಪ್ರತಿಮೆ ಬಳಿಯ ಮೆಟ್ಟಿಲುಗಳ ನವೀಕರಣ, ಸ್ಟೀಲ್ ರೈಲಿಂಗ್ಸ್, ಮತ್ತೊಂದು ವೀಕ್ಷಣಾ ಗೋಪುರ, ಚಾಮುಂಡಿ ಬೆಟ್ಟದ ಪಾದದಲ್ಲಿ ಮೆಟ್ಟಿಲುಗಳ ನವೀಕರಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಪರಂಪರೆಗೆ ಧಕ್ಕೆ ಬಾರದಂತೆ ಕೆಲಸ: ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಗೋಪುರ ಸೇರಿದಂತೆ ಸುತ್ತಮುತ್ತಲಿನ ಎಲ್ಲ ದೇವಾಲಯಗಳನ್ನು ಮಹಾರಾಜರ ಕಾಲದಲ್ಲೇ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಾದ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳು ಚಾಮುಂಡಿ ಬೆಟ್ಟದ ಪಾರಂಪರಿಕತೆಗೆ ಧಕ್ಕೆ ತರದಂತೆ ಎಚ್ಚರ ವಹಿಸಲಾಗುತ್ತಿದೆ. ಕಾಮಗಾರಿ ವೇಳೆ ಪಾರಂಪರಿಕ ಕಟ್ಟಡಗಳ ತಂಟೆಗೆ ಹೋಗುತ್ತಿಲ್ಲ. ಈ ಮೂಲಕ ಬೆಟ್ಟದ ನೈಸರ್ಗಿಕ ಸೌಂದರ್ಯಕ್ಕೂ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುವುದು.
ಕಲೆ, ವಿವಿಧೋದ್ದೇಶ ಕೇಂದ್ರ, ವೀಕ್ಷಣಾ ಗೋಪುರ ನಿರ್ಮಾಣ: ಕೇಂದ್ರದ ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಮೇಲೆ, ನಂದಿ ಪ್ರತಿಮೆ, ಪಾದದ ಮೆಟ್ಟಿಲು ಸೇರಿದಂತೆ ಇತರೆಡೆ ೧೦ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ದೇವಸ್ಥಾನದ ಬಳಿ ಸರದಿ ಸಾಲು ಮಂಟಪ, ಮಹಿಷಾಸುರ ಪ್ರತಿಮೆ ಬಳಿ ಮಲ್ಟಿ ಪರ್ಪಸ್ ಸೆಂಟರ್, ಅಲ್ಲಿಯೇ ಪೂಜೆ, ವಿಶೇಷ ದರ್ಶನ ಸೇರಿದಂತೆ ಇತರೆ ಸೇವಾ ಕಾರ್ಯಗಳಿಗೆ ಟಿಕೆಟ್ ಕೌಂಟರ್ ತೆರೆಯಲಾಗುತ್ತದೆ. ಮಹಿಷಾಸುರ ಪ್ರತಿಮೆಯ ನೇರ ರಸ್ತೆಯಲ್ಲಿ ಈಗಿರುವ ಕಬ್ಬಿಣದ ಗೇಟ್ ಬಳಿ ಪಾರಂಪರಿಕ ಶೈಲಿಯ ಆರ್ಚ್ (ಪವೇಶ ದ್ವಾರ), ಶೌಚಾಲಯ, ಚಪ್ಪಲಿ ಸ್ಟ್ಯಾಂಡ್, ವ್ಯೂವ್ಹಿಂಗ್ ಟವರ್, ನಂದಿ ಪ್ರತಿಮೆ ಬಳಿಯ ಮೆಟ್ಟಿಲುಗಳ ನವೀಕರಣ, ಸ್ಟೀಲ್ ರೈಲಿಂಗ್ಸ್, ಮತ್ತೊಂದು ವೀಕ್ಷಣಾ ಗೋಪುರ, ಚಾಮುಂಡಿ ಬೆಟ್ಟದ ಪಾದದಲ್ಲಿ ಮೆಟ್ಟಿಲುಗಳ ನವೀಕರಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
” ಪ್ರಸಾದ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮಂಟಪ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಶ್ರೀ ಮಹಾಬಲೇಶ್ವರ ದೇವಸ್ಥಾನದ ಮಧ್ಯೆ ಭಕ್ತರು ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡುವಂತೆ ಮಾರ್ಪಾಡು ಮಾಡಲು ಜಿಲ್ಲಾಧಿಕಾರಿ ಸಲಹೆ ನೀಡಿದ್ದರು. ಅದರಂತೆ, ಪ್ರವಾಸೋದ್ಯಮ ಇಲಾಖೆಯ ಇಂಜಿನಿಯರಿಂಗ್ ವಿಭಾಗದವರು ಕೆಲವು ಮಾರ್ಪಾಡು ಮಾಡಿದ್ದಾರೆ.”
ಪ್ರಭುಸ್ವಾಮಿ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…
ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು…
ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು…
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…
ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…