Andolana originals

ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಆಗ್ರಹ

ಕೋಟೆಯ ವಿವಿಧೆಡೆ ಕಳವು ಪ್ರಕರಣ: ಪತ್ತೆಯಾಗದ ಆರೋಪಿಗಳ ಸುಳಿವು; ಜನರಲ್ಲಿ ಭೀತಿ 

ಎಚ್.ಡಿ.ಕೋಟೆ: ಪಟ್ಟಣದಲ್ಲಿ ನಡೆಯುತ್ತಿರುವ ಗಾಂಜಾ, ಇತರ ಮಾದಕ ವಸ್ತುಗಳ ಮಾರಾಟ ಹಾವಳಿಯಿಂದಾಗಿ ಯುವ ಸಮುದಾಯ ಬಲಿಯಾಗುತ್ತಿದೆ. ಎಗ್ಗಿಲ್ಲದೆ ನಡೆಯುತ್ತಿರುವ ಸರಣಿ ಕಳ್ಳತನ ಮತ್ತು ಅಕ್ರಮ ಚಟುವಟಿಕೆಗಳು ದಿನೇದಿನೇ ಹೆಚ್ಚಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಉಂಟುಮಾಡಿದೆ.

ಕಳೆದೆರಡು ವರ್ಷಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ರಾತ್ರಿ, ಹಾಡಹಗಲಲ್ಲೇ ಕಳ್ಳತನ ನಡೆಯುತ್ತಿದ್ದು, ಮೂರು ತಿಂಗಳಿನಿಂದ ದೇವಸ್ಥಾನ ಮತ್ತು ಮನೆಗಳಲ್ಲಿ ಸರಣಿ ಕಳವು ನಿರಂತರವಾಗಿ ನಡೆಯುತ್ತಿದ್ದು ಖದೀಮರು ಲಕ್ಷಾಂತರ ರೂ. ಬೆಲೆಬಾಳುವ ಚಿನ್ನ -ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿದ್ದಾರೆ.

ಒಂದು ವಾರದಲ್ಲೇ ಪಟ್ಟಣದ ೧ನೇ ಮುಖ್ಯರಸ್ತೆಯ ವಾರಾಹಿ ಮಾರಮ್ಮ ದೇವಸ್ಥಾನ, ಪೇಪರ್ ಶೇಷಾದ್ರಿ, ವಿಶ್ವನಾಥ ಕಾಲೋನಿಯ ಗೋಬಿ ಕೃಷ್ಣ, ಸ್ಟೇಡಿಯಂ ಬಡಾವಣೆಯ ಎಎಸ್‌ಐ ಕೆ.ಕೆ.ಮಹದೇವ್ ಎಂಬವರ ಮನೆಗಳಲ್ಲಿ ೫೫ ಲಕ್ಷ ರೂ. ವೆಚ್ಚದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದನ್ನು ಕಳ್ಳರು ದೋಚಿರುವುದು ತಾಲ್ಲೂಕಿನ ಜನರನ್ನು ಬೆಚ್ಚಿಬೀಳಿಸಿದೆ.

ಇದನ್ನು ಓದಿ: ಮೈಸೂರಲ್ಲಿ ಸ್ಥಾಪನೆಯಾಗಲಿದೆ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರ 

ಪಟ್ಟಣ ಮತ್ತು ತಾಲ್ಲೂಕಿನಾದ್ಯಂತ ಎರಡು ವರ್ಷಗಳಿಂದ ನಡೆಯುತ್ತಿರುವ ಕಳ್ಳತನ ಪ್ರಕರಣಗಳ ಬಗ್ಗೆ ಪೊಲೀಸರು ಎಚ್ಚರಿಕೆ ವಹಿಸಿದರೂ ಕಳ್ಳರ ಸುಳಿವು, ಕಳವಾದ ವಸ್ತುಗಳು ಮಾಲೀಕರ ವಶವಾಗದಿರುವುದರಿಂದ ಪೊಲೀಸರ ಕಾರ್ಯವೈಖರಿ ಬಗ್ಗೆ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಕಳವು, ಅಕ್ರಮ ಚಟುವಟಿಕೆಗಳು, ದಂಧೆಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆಯವರು ಕಂಡರೂ ಕಾಣದಂತೆ ಇರುವುದರಿಂದಲೇ ದಿನದಿಂದ ದಿನಕ್ಕೆ ಸರಣಿ ಕಳ್ಳತನ ಹೆಚ್ಚಾಗಲು ಕಾರಣವಾಗಿದೆ ಎಂದು ಮಹಿಳೆಯರು ಮತ್ತು ಪ್ರಜ್ಞಾವಂತರು ಆರೋಪಿಸಿದ್ದಾರೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಅನೇಕ ಯುವಕರು ಹಣಕಾಸು ಮುಗ್ಗಟ್ಟು ಎದುರಾದಾಗ ಮನೆಗಳವು ಮಾಡುತ್ತಾರೆ. ಬೀಗ ಹಾಕಿರುವ ಮನೆಗಳು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಗುಂಪು ಕಳ್ಳತನ ನಡೆಸುತ್ತಿದ್ದಾರೆ.

ಪೊಲೀಸರು ಪಟ್ಟಣ ಮತ್ತು ತಾಲ್ಲೂಕಿನಾದ್ಯಂತ ಗಾಂಜಾ, ಅಕ್ರಮ ಮದ್ಯ ಮಾರಾಟ, ಜೂಜಾಟ, ಸರಣಿ ಕಳ್ಳತನಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಬೇಕಿದೆ. ಕಳ್ಳರನ್ನು ಸೆದೆಬಡಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಪೊಲೀಸರು ಈ ಬಗ್ಗೆ ಹದ್ದಿನ ಕಣ್ಣು ಇಡಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

” ಎಚ್.ಡಿ.ಕೋಟೆ ಪಟ್ಟಣದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಕಟ್ಟಿನಿಟ್ಟಿನ ಸೂಚನೆ ನೀಡಲಾಗಿದೆ. ಸ್ಥಳೀಯರೇ ಅಥವಾ ಹೊರಗಿನಿಂದ ಬಂದ ಕಳ್ಳರೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎಲ್ಲ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಎಎಸ್‌ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.”
-ವಿಷ್ಣುವರ್ಧನ್, ಪೊಲೀಸ್ ವರಿಷ್ಠಾಧಿಕಾರಿ

–ಮಂಜು ಕೋಟೆ

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

2 hours ago

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…

5 hours ago

ಓದುಗರ ಪತ್ರ: ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಲಿ

ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…

5 hours ago

ಓದುಗರ ಪತ್ರ: ಡಿಜಿಟಲ್ ಲಗೇಜ್ ಲಾಕರ್ ಎಲ್ಲೆಡೆ ವಿಸ್ತರಿಸಲಿ

ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…

5 hours ago

ಮಗನ ನೆನಪಲ್ಲಿ ಪೋಷಕರ ಮಾದರಿ ಕಾರ್ಯ

ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…

5 hours ago

ಭತ್ತದ ಬೆಳೆಗೆ ಎಲೆ ಸುರುಳಿ-ಬೆಂಕಿ ರೋಗದ ಬಾಧೆ

ಸಿಂಗಿ ಸತೀಶ್ ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ  ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ…

6 hours ago