Andolana originals

ದಸರಾ ಆಹಾರ ಮೇಳ: 100 ಮಳಿಗೆಗೆ 587 ಅರ್ಜಿ!

ಕೇಶವ ಎಂ.

ರಾಜ್ಯದ ೩೦ ಜಿಲ್ಲೆಗಳಿಂದಲೂ ಅರ್ಜಿ ಸಲ್ಲಿಕೆ; ಲಾಟರಿ ಎತ್ತುವ ಪ್ರಕ್ರಿಯೆಯಲ್ಲೂ ಪಾರದರ್ಶಕತೆ ಇಲ್ಲ; ಉದ್ಯಮಿಗಳ ಆಕ್ಷೇಪ

ಮೈಸೂರು: ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ದಸರಾ ಆಹಾರ ಮೇಳಕ್ಕೆ ೧೦೦ ಸ್ಟಾಲ್‌ಗಳಿಗೆ ೫೮೭ ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಒಬ್ಬರೇ ತಮ್ಮ ಸಂಬಂಧಿಕರು, ಹಿತೈಷಿಗಳ ಮೂಲಕವೂ ಅರ್ಜಿ ಸಲ್ಲಿಸಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಅ.೧೧ರಿಂದ ೨೧ವರೆಗೆ ನಡೆಯಲಿರುವ ದಸರಾ ಮಹೋತ್ಸವದ ಮೊದಲನೇ ದಿನವೇ ಆಹಾರ ಮೇಳಕ್ಕೂ ಚಾಲನೆ ನೀಡಲಾಗುತ್ತದೆ. ಅಲ್ಲದೇ, ಆಹಾರ ಮೇಳವು ಅ.೨೫ರ ವರೆಗೆ ನಡೆಯಲಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಮಂಗಳೂರು, ಉಡುಪಿ, ಬಾಗಲಕೋಟೆ, ಹಾವೇರಿ, ಧಾರಾವಾಡ ಸೇರಿದಂತೆ ೩೦ ಜಿಲ್ಲೆಗಳಿಂದ ಅರ್ಜಿ ಸಲ್ಲಿಸಲಾಗಿದೆ.

ಈ ಬಾರಿಯ ಆಹಾರ ಮೇಳದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಸೇರಿದಂತೆ ೧೦೦ ಮಳಿಗೆಗಳನ್ನು ನಿಗದಿಪಡಿಸಿದ್ದು, ಈಗಾಗಲೇ ಲಾಟರಿ ಎತ್ತುವ ಮೂಲಕ ೮೧ ಸ್ಟಾಲ್ ಗಳನ್ನು ದಸರಾ ಆಹಾರ ಮೇಳದ ಉಪಸಮಿತಿ ಸದಸ್ಯರು ಆಯ್ಕೆ ಮಾಡಿದ್ದು, ಇನ್ನುಳಿದ ೧೯ ಮಳಿಗೆಗಳಿಗೆ ಶೀಘ್ರದಲ್ಲೇ ಲಾಟರಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಕಳೆದ ವರ್ಷದಂತೆಯೇ ಈ ಬಾರಿಯೂ ಸಸ್ಯಾಹಾರದ ಪ್ರತಿ ಮಳಿಗೆಗೆ ೫೦ ಸಾವಿರ ರೂ. ಮತ್ತು ಶೇ.೧೮ರಷ್ಟು ಜಿಎಸ್ ಟಿ, ಮಾಂಸಾಹಾರದ ಪ್ರತಿ ಮಳಿಗೆಗೆ ೭೫ ಸಾವಿರ ರೂ. ಮತ್ತು ಶೇ.೧೮ ರಷ್ಟು ಜಿಎಸ್‌ಟಿ ಬಾಡಿಗೆಯನ್ನು ನಿಗದಿಪಡಿಸಲಾಗಿದೆ ಎಂದು ಆಹಾರ ಮೇಳ ಉಪ ಸಮಿತಿ ಸದಸ್ಯರು ಹೇಳಿದ್ದಾರೆ.

ಒಬ್ಬರಿಂದ ಹಲವು ಅರ್ಜಿ: ಆಹಾರ ಮೇಳದಲ್ಲಿ ಮಳಿಗೆ ಪಡೆಯಲು, ಒಬ್ಬರಿಗೆ ಒಂದೇ ಮಳಿಗೆ ಅವಕಾಶವಿದ್ದರೂ ಕೆಲ ಉದ್ಯಮಿಗಳು, ತಮ್ಮ ಸಂಬಂಧಿಕರು, ಕೆಲಸದ ಹುಡುಗರು, ತಮ್ಮ ನಂಬಿಕಸ್ತ ವ್ಯಕ್ತಿಗಳಿಂದ ಅರ್ಜಿಗಳನ್ನು ಹಾಕಿಸಿದ್ದು, ಇದರಿಂದ ಅರ್ಹ ಮಳಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ನೊಂದ ಮಳಿಗೆದಾರರು ಆರೋಪಿಸಿದ್ದಾರೆ.

ಫೈರ್ ಎಕ್ಸ್ಟಿಂಗ್ವಿಷರ್ ಕಡ್ಡಾಯ: ಈ ಬಾರಿಯ ಆಹಾರ ಮೇಳದಲ್ಲಿ ಪ್ರತಿ ಮಳಿಗೆದಾರರು ಫೈರ್ ಎಕ್ಸ್ಟಿಂಗ್ವಿಷರ್ ಅನ್ನು ಕಡ್ಡಾಯವಾಗಿ ಇಡುವಂತೆ ದಸರಾ ಆಹಾರ ಮೇಳ ಉಪ ಸಮಿತಿಯವರು ಸೂಚನೆ ನೀಡಿದ್ದಾರೆ. ಮಳಿಗೆದಾರರು ಮಳಿಗೆಗಳಿಗೆ ನೀಡುವ ಬಾಡಿಗೆಯ ಜೊತೆಯಲ್ಲಿ ಫೈರ್ ಎಕ್ಸ್ಟಿಂಗ್ವಿಷರ್‌ಗೂ ಬಿಲ್ ಪಾವತಿ ಮಾಡಬೇಕು. ಆಹಾರ ಮೇಳ ಮುಗಿದ ನಂತರ ಅದನ್ನು ಮಳಿಗೆದಾರರು ತೆಗೆದುಕೊಂಡು ಹೋಗಬಹುದಾಗಿದೆ.

” ದಸರಾ ಮಹೋತ್ಸವದಲ್ಲಿ ನಡೆಯಲಿರುವ ಆಹಾರ ಮೇಳದಲ್ಲಿ ಮಳಿಗೆಗಳನ್ನು ನೀಡಲು ಅಧಿಕಾರಿಗಳ ಲಾಟರಿ ಎತ್ತಿದ್ದಾರೆ. ಇದರಿಂದ ಉದ್ಯಮಿಗಳಿಗೆ ಅನುಕೂಲವಾಗಿದೆ. ಆದರೆ, ಬಡ ವ್ಯಾಪಾರಿಗಳಿಗೆ ಅನಾನುಕೂಲವಾಗಿದ್ದು, ಜಿಲ್ಲಾಡಳಿತವು ಮತ್ತೊಮ್ಮೆ ಪರಿಶೀಲಿಸಿ, ನೈಜ ಹಾಗೂ ಅರ್ಹ ಫಲಾನುಭವಿಗೆ ಅವಕಾಶ ಮಾಡಿಕೊಡಬೇಕು.”

ಕಂಸಾಳೆ ರವಿ, ಕಾರ್ಯದರ್ಶಿ, ಮೈಸೂರು ದಸರಾ ಆಹಾರ ಮೇಳ ತಿಂಡಿ ತಿನಿಸುಗಳ ಮಾರಾಟಗಾರರ ಸಂಘ

” ಆಹಾರ ಮೇಳಕ್ಕೆ ಅರ್ಜಿ ಆಹ್ವಾನಿಸಿದಾಗ ೭೦೦ಕ್ಕೂ ಅರ್ಜಿಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ ೫೮೭ ಸ್ವೀಕೃತಿ ಮಾಡಲಾಗಿದ್ದು, ಲಾಟರಿ ಎತ್ತುವ ಮೂಲಕ ೮೧ ಜನರಿಗೆ ವಿತರಣೆ ಮಾಡಲಾಗಿದೆ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಸರ್ಕಾರದ ನಿಯಮದಂತೆ ಲಾಟರಿ ಎತ್ತುವ ಮೂಲಕ ಮಳಿಗೆ ನೀಡಲಾಗಿದೆ.”

ಶ್ರೀನಿವಾಸಮೂರ್ತಿ, ಕಾರ್ಯಾಧ್ಯಕ್ಷ , ಆಹಾರ ಮೇಳ ಉಪಸಮಿತಿ (ನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು)

 

 

ಆಂದೋಲನ ಡೆಸ್ಕ್

Recent Posts

ಸಕ್ಕರೆ ನಾಡಿನಲ್ಲಿ ಬರದಿಂದ ಕಂಗಾಲಾದ ರೈತರು

ಹೇಮಂತ್‌ಕುಮಾರ್ ಮಂಡ್ಯ ಜಿಲ್ಲೆಯಲ್ಲಿ ೪೮,೫೯೧ ಹೆ. ಬೆಳೆ ಹಾನಿ ೫೪.೫೩ ಕೋಟಿ ರೂ. ನಷ್ಟದ ಅಂದಾಜು ಮಂಡ್ಯ: ಜಿಲ್ಲೆಯಲ್ಲಿ ಕಳೆದ…

2 mins ago

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

20 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

20 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

21 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

21 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

22 hours ago