Andolana originals

ಎಂಸಿಡಿಸಿಸಿಬಿ ನಿರ್ದೇಶಕ ಸ್ಥಾನಕ್ಕೆ ಮತ ಹಾಕಲು ಪ್ರತಿನಿಧಿಗಳ ಆಯ್ಕೆಗೆ ಪೈಪೋಟಿ

ಮಂಜು ಕೋಟೆ

ಕೋಟೆ: ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಿಂದ ಕಾರ್ಯತಂತ್ರ; ಮೂಡಿದ ಕುತೂಹಲ

ಎಚ್.ಡಿ.ಕೋಟೆ: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಎಚ್.ಡಿ.ಕೋಟೆ ನಿರ್ದೇಶಕ ಸ್ಥಾನಕ್ಕೆ ಮತ ಚಲಾಯಿಸಲು ಪ್ರತಿನಿಧಿಗಳನ್ನು ಆಯ್ಕೆ ಮಾಡಲು ತಾಲ್ಲೂಕಿನ ಕಾಂಗ್ರೆಸ್, ಜಾ.ದಳ, ಬಿಜೆಪಿ ಮುಖಂಡರ ನಡುವೆ ತೀವ್ರ ಸೆಣಸಾಟ ನಡೆಯುತ್ತಿದೆ.

ತಾಲ್ಲೂಕಿನಲ್ಲಿ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಟಿಎಪಿಸಿಎಂಎಸ್ ಮತ್ತು ತೋಟಗಾರಿಕೆ ಸಹಕಾರ ಸಂಘ ಹಾಗೂ ೧೫ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ತಲಾ ಒಬ್ಬರಿಗೆ ಮತದಾನ ಮಾಡಲು ಮತ್ತು ಸ್ಪರ್ಧಿಸಲು ಅವಕಾಶ ಇರುವುದರಿಂದ ಪ್ರತಿನಿಧಿ ಆಯ್ಕೆ ಮಾಡಲು ಈ ಮೂರೂ ಪಕ್ಷಗಳ ಮುಖಂಡರ ನಡುವೆ ಜಿದ್ದಾಜಿದ್ದಿ ಉಂಟಾಗಿದೆ.

ಏ.೫ರಿಂದ ೨೦ರವರೆಗೆ ಮತದಾನದ ಅವಕಾಶ ಪಡೆದಿರುವ ೧೭ ಬ್ಯಾಂಕುಗಳಲ್ಲಿ ಪ್ರತಿನಿಧಿಗಳ ಆಯ್ಕೆ ಪೂರ್ಣಗೊಳಿಸಿ, ಜಿಲ್ಲಾ ಬ್ಯಾಂಕಿನ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗಿದೆ. ಈ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಗೆಲುವು ಸಾಧಿಸಬೇಕಾದರೆ ೮ ಜನ ಪ್ರತಿನಿಧಿಗಳ ಮತಗಳನ್ನು ಪಡೆಯಬೇಕಾಗಿರುವುದರಿಂದ ಮೂರೂ ಪಕ್ಷಗಳ ಮುಖಂಡರು ತಮ್ಮ ಬೆಂಬಲಿಗರನ್ನು ಪ್ರತಿನಿಧಿಯಾಗಿ ಮಾಡಿಕೊಳ್ಳಲು ಕಾರ್ಯತಂತ್ರ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಶಾಸಕ ಅನಿಲ್ ಚಿಕ್ಕಮಾದು ಇದೇ ಪ್ರಪ್ರಥಮವಾಗಿ ಸಹಕಾರ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿರುವುದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಆ ಭಾಗದ ಮುಖಂಡರ ಜೊತೆ ಸಭೆ ನಡೆಸಿ ಕಾರ್ಯತಂತ್ರಗಳನ್ನು ನಡೆಸುತ್ತಿದ್ದಾರೆ. ಇವರ ಜೊತೆಯಲ್ಲಿ ನಾಗನಹಳ್ಳಿ ಪ್ರದೀಪ, ಈರೇಗೌಡ, ನರಸೀಪುರ ರವಿ, ಹಿರೇಹಳ್ಳಿ ಸೋಮೇಶ್, ನರಸಿಂಹಮೂರ್ತಿ, ಸತೀಶ್ ಗೌಡ, ಕ್ಯಾತನಹಳ್ಳಿ ನಾಗರಾಜು, ಜಿನ್ನಹಳ್ಳಿ ರಾಜನಾಯಕ, ಬೈಪಾಸ್ ಮಂಜು, ಭಾಸ್ಕರ್, ಗಿರಿಗೌಡ, ರಾಜು ವಿಶ್ವಕರ್ಮ, ಶಿವಮಲ್ಲಪ್ಪ, ಚಂದ್ರು, ಪರಶಿವ ಮತ್ತಿತರರು ಸಾಥ್ ನೀಡುತ್ತಿದ್ದಾರೆ.

ಜಾ.ದಳ ಮತ್ತು ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷದ ಶಾಸಕರ ಮತ್ತು ಮುಖಂಡರ ಆರ್ಭಟಕ್ಕೆ ಕಡಿವಾಣ ಹಾಕಲು ಕಾರ್ಯತಂತ್ರ ರೂಪಿಸುತ್ತಿದ್ದು, ಶಾಸಕ ಅನಿಲ್ ಚಿಕ್ಕಮಾದು ಅವರ ಪ್ರತಿಸ್ಪರ್ಧಿ  ಯಾರೆಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ತಾಲ್ಲೂಕಿನಲ್ಲಿ ಮತದಾನದ ಹಕ್ಕು ಪಡೆದಿರುವ ೧೭ ಸಹಕಾರ ಸಂಘಗಳಲ್ಲಿ ಈಗಾಗಲೇ ೮ ಸಂಘಗಳಲ್ಲಿ ಪ್ರತಿನಿಧಿ ಆಯ್ಕೆ ನಡೆಸಲಾಗಿದೆ. ಇನ್ನು ೯ ಸಂಘಗಳಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದೆ.

ಒಟ್ಟಿನಲ್ಲಿ ಈ ಬಾರಿಯ ಎಂಸಿಡಿಸಿಸಿ ಬ್ಯಾಂಕಿನ ಕ್ಷೇತ್ರದ ನಿರ್ದೇಶಕರ ಚುನಾವಣೆ ಪೈಪೋಟಿ ಮತ್ತು ಕುತೂಹಲದಿಂದ ಕೂಡಿದೆ.

” ಶಾಸಕ ಅನಿಲ್ ಚಿಕ್ಕಮಾದು ಅವರು ನಿರ್ದೇಶಕರ ಸ್ಥಾನಕ್ಕೆ ಬಹುಮತದಿಂದ ಗೆಲ್ಲಲು ಪಕ್ಷದ ಮುಖಂಡರು ಸಹಕಾರ ಸಂಘದವರು,ಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕರಾದವರು ಸಹಕಾರ ಕ್ಷೇತ್ರಕ್ಕೆ ಚುನಾಯಿತರಾದರೆ ತಾಲ್ಲೂಕಿಗೆ ಮತ್ತು ರೈತ ಕುಟುಂಬಗಳಿಗೆ ಬಹಳಷ್ಟು ನೆರವಾಗಲಿದೆ.”

-ಸತೀಶ್ ಗೌಡ, ಮತದಾನದ ಪ್ರತಿನಿಧಿ, ಕೆ.ಬೆಳತೂರು ವಿಎಸ್‌ಎಸ್‌ಎನ್ ಬ್ಯಾಂಕ್

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾನ್ಫಿಡೆಂಟ್ ಮಾಲೀಕನಿಗೆ ಬದುಕುವ ಕಾನ್ಫಿಡೆಂಟ್ ಇಲ್ಲದಾಯಿತೇ?

ಕೋಟಿ ಕೋಟಿ ಹಣವಿದ್ದರೂ ನೆಮ್ಮದಿಯ ಸಂಬಂಧಗಳು ಇಲ್ಲದಿದ್ದರೆ ಜೀವನ ನಿರರ್ಥಕ. ಐಷಾರಾಮಿ ಬದುಕು ಎಂಬುದು ಸೌಕರ್ಯಗಳನ್ನು ನೀಡಬಲ್ಲದೇ ಹೊರತು, ಶಾಶ್ವತ…

18 mins ago

ಓದುಗರ ಪತ್ರ: ಗಬ್ಬು ನಾರುತ್ತಿರುವ ಚಾ.ನಗರದ ಮೋರಿಗಳು

ಜಾನಪದ ತವರೂರಾದ ಚಾಮರಾಜನಗರದ ನಂದಿ ಭವನ ರಸ್ತೆಯ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಮೋರಿ (ಡ್ರೈನೇಜ್)ಯಲ್ಲಿ ಸ್ವಚ್ಛತೆ ಇಲ್ಲದೆ ತ್ಯಾಜ್ಯ…

22 mins ago

ಓದುಗರ ಪತ್ರ: ಡಾ.ಜಯಮಾಲ ಅವರಿಗೆ ಅಭಿನಂದನೆಗಳು

ಹಿರಿಯ ನಟಿ, ನಿರ್ಮಾಪಕಿ, ಮಾಜಿ ಸಚಿವೆ ಡಾ.ಜಯಮಾಲ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ೨ನೇ ಬಾರಿಗೆ ಆಯ್ಕೆಯಾಗಿರುವುದು…

24 mins ago

ಓದುಗರ ಪತ್ರ: ಕಸಾಪ ಗೌರವಕ್ಕೆ ಚ್ಯುತಿ ತಂದ ಜೋಶಿ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕಳೆದ ಮೂರು ವರ್ಷಗಳಿಂದ ನಡೆದಿರುವ ಅಧಿಕಾರ…

27 mins ago

ಫೆ.೫ರಂದು ಶ್ರೀ ಶಂಭುಲಿಂಗೇಶ್ವರ ದೇವಾಲಯ ಲೋಕಾರ್ಪಣೆ

ಹೇಮಂತ್ ಕುಮಾರ್ ಕಾಶಿ ನಂತರ ಸ್ಮಶಾನವಾಸಿ ಶಿವನ ದೇವಸ್ಥಾನವೆಂಬ ಹೆಗ್ಗಳಿಕೆ  ಮಂಡ್ಯ: ದೇಶದಲ್ಲೇ ಭಸ್ಮೋದ್ಧಾರಿಯಾದ ಶಿವ ಸ್ಮಶಾನವಾಸಿಯಾಗಿರುವ ದೇವಾಲಯ ಕಾಶಿ…

3 hours ago

ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಜಿಲ್ಲಾಸ್ಪತ್ರೆ ದುಬಾರಿ!

ನವೀನ್ ಡಿಸೋಜ ವೈದ್ಯಕೀಯ ಶಿಕ್ಷಣ ಇಲಾಖೆ ಆಡಳಿತಕ್ಕೊಳಪಟ್ಟ ಬಳಿಕ ಸೇವೆಯೊಂದಿಗೆ ಶುಲ್ಕವೂ ಹೆಚ್ಚಳ; ಪ್ರತಿಯೊಂದು ಸೇವೆಗೂ ಪಾವತಿ ಮಾಡಬೇಕಾದ ಅನಿವಾರ್ಯತೆ …

3 hours ago