Andolana originals

ಗಗನಮುಖಿಯಾಗಿದ್ದ ತೆಂಗಿನಕಾಯಿ ದರ ಇಳಿಕೆ

ಎಚ್.ಎಚ್.ದಿನೇಶ್‌ಕುಮಾರ್

ಮೈಸೂರು: ಒಂದು ತಿಂಗಳ ಹಿಂದೆ ಬಹಳಷ್ಟು ದುಬಾರಿಯಾಗಿದ್ದ ತೆಂಗಿನಕಾಯಿ ಬೆಲೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದ್ದು, ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ಒಂದೆರಡು ತಿಂಗಳುಗಳಲ್ಲಿತೆಂಗಿನಕಾಯಿ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ರಾಜ್ಯಾದ್ಯಂತ ತೆಂಗಿನಕಾಯಿ ಬೆಲೆ ಗಗನಕ್ಕೇರಿತ್ತು. ಸಣ್ಣ ಗಾತ್ರದ ಕಾಯಿಯ ದರ ೨೫ ರೂ.ನಿಂದ ೩೦ ರೂ. ವರೆಗೆ ಇತ್ತು. ದೊಡ್ಡ ಗಾತ್ರದ ಕಾಯಿಯ ಬೆಲೆಯನ್ನಂತೂ ಕೇಳುವುದೇ ಬೇಡ ಎಂಬಂತಿತ್ತು. ದರ ಹೆಚ್ಚಳದಿಂದ ಗ್ರಾಹಕನ ಜೇಬಿಗೆ ಕತ್ತರಿ ಬೀಳುವಂತಾಗಿದ್ದರೂ, ತೆಂಗು ಬೆಳೆಗಾರರಿಗೆ ಮಾತ್ರ ಆರ್ಥಿಕವಾಗಿ ಅನುಕೂಲವಾಗಿದೆ.

ಸಾಮಾನ್ಯವಾಗಿ ರಾಜ್ಯ ಹಾಗೂ ಕೇರಳದಲ್ಲಿ ಯಥೇಚ್ಛವಾಗಿ ತೆಂಗಿನ ಕಾಯಿ ಉತ್ಪಾದನೆ ಆಗುತ್ತಿತ್ತು. ಇದರಿಂದಾಗಿ ಈ ಹಿಂದೆ ತೆಂಗಿನಕಾಯಿ ಬೆಲೆ ೨೫ ರೂ.ನಿಂದ ೩೦ ರೂ. ವರೆಗೆ ಇತ್ತು. ಬೇಸಿಗೆಯ ಕಾರಣ ಜನವರಿ ತಿಂಗಳಿನಿಂದ ಮೇ ತಿಂಗಳ ವರೆಗೆ ತೆಂಗಿನಕಾಯಿಯ ಬೆಲೆ ಹೆಚ್ಚಳವಾಗುವುದು ಸಾಮಾನ್ಯ ಸಂಗತಿ. ಆದರೆ, ಹಿಂದೆ ಒಂದು ಕೆಜಿಗೆ ೩೦ರಿಂದ ೪೦ ರೂ. ಇದ್ದ ತೆಂಗಿನಕಾಯಿ ದರ, ಈ ಬಾರಿ ಬರೋಬ್ಬರಿ ೮೦ ರೂ.ಗೆ ಏರಿಕೆಯಾಗಿತ್ತು.

ತೆಂಗಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲಿ ಈ ಮಟ್ಟದ ಬೆಲೆ ಹೆಚ್ಚಳವಾಗಿದ್ದ ಉದಾಹರಣೆ ಇರಲಿಲ್ಲ. ಇದರಿಂದಾಗಿ ಸಾರ್ವಜನಿಕರು ತೆಂಗಿನಕಾಯಿ ಖರೀದಿಸಲು ಹಿಂದೆಮುಂದೆ ನೋಡುತ್ತಿದ್ದರು. ಕೆಲವರಂತೂ ಅಡುಗೆಗೆ ಕಾಯಿ ಬಳಸುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಇನ್ನು ಹೋಟೆಲ್‌ಗಳ ಮಾಲೀಕರಿಗಂತೂ ತೆಂಗಿಕಾಯಿ ಬೆಲೆ ಏರಿಕೆಯು ಬಿಸಿ ತುಪ್ಪದಂತಾಗಿದೆ. ಕಾಯಿ ಇಲ್ಲದೆ ಬಹುತೇಕ ಯಾವುದೇ ಅಡುಗೆಯನ್ನೂ ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿ ಕಾಯಿ ಬೆಲೆ ನಾಲ್ಕುಪಟ್ಟು ಹೆಚ್ಚಳವಾಗಿದ್ದರಿಂದ ಹೋಟೆಲ್‌ಗಳ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದರು.

ಇದೀಗ ತೆಂಗಿನಕಾಯಿ ಬೆಲೆ ಒಂದು ಕೆಜಿಗೆ ೧೫ ರೂ.ನಷ್ಟು ಇಳಿಕೆಯಾಗಿದೆ. ೭೫ ರೂ. ನಿಂದ ೮೦ ರೂ.ವರೆಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಬೆಲೆ ಇದೀಗ ೬೦ ರಿಂದ ೬೫ ರೂ.ಗೆ ಇಳಿದಿದೆ. ಇದರಿಂದ ಗ್ರಾಹಕರ ಮೊಗದಲ್ಲಿ ಸ್ವಲ್ಪಮಟ್ಟಿಗಿನ ಸಂತಸ ಕಾಣುತ್ತಿದೆ.

ಬಿಸಿಲಿನ ತಾಪ ಕಾರಣ: ತೆಂಗು ಬೆಳೆಗಾರರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಈ ಮಟ್ಟದ ಬಿಸಿಲು ಬಂದಿರಲಿಲ್ಲ. ಈ ಬಾರಿ ಬಿಸಿಲಿನ ತಾಪ ಹೆಚ್ಚಿದ್ದರಿಂದ ಇಳುವರಿ ಕಡಿಮೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆಯಾಗುತ್ತಿರುವ ಕಾರಣ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ ಎನ್ನುತ್ತಾರೆ.

ಎಳನೀರಿಗೆ ಬೇಡಿಕೆ ಕಡಿಮೆ: ಬೇಸಿಗೆಯಲ್ಲಿ ಧಗೆ ಹೆಚ್ಚಿತ್ತು. ಅದರಿಂದ ಎಳನೀರಿಗೆ ಹೆಚ್ಚು ಬೇಡಿಕೆ ಇತ್ತು. ರಾಜ್ಯದಲ್ಲಿ ಬೆಳೆದ ಎಳನೀರು, ಉತ್ತರ ಭಾರತಕ್ಕೂ ಪ್ರತೀ ದಿನ ಸರಬರಾಜು ಆಗುತ್ತಿತ್ತು. ಮಳೆ ಶುರುವಾಗಿರುವ ಹಿನ್ನೆಲೆಯಲ್ಲಿ ಎಳನೀರಿಗೆ ಬೇಡಿಕೆ ಕಡಿಮೆಯಾಗಿದೆ. ರೈತರಿಗೆ ತೆಂಗಿನಕಾಯಿಗಿಂತ ಎಳನೀರು ಮಾರಾಟದಲ್ಲಿ ಹೆಚ್ಚು ಲಾಭ ದೊರೆಯುತ್ತಿದೆ. ಎಳನೀರು ಕೀಳುವುದು, ಸಾಗಣೆ ಎಲ್ಲವೂ ಖರೀದಿದಾರರ ವೆಚ್ಚದಲ್ಲೇ ಆಗುತ್ತದೆ. ಹೀಗಾಗಿ ತೆಂಗು ಬೆಳೆಗಾರರಿಗೆ ಅಧಿಕ ಲಾಭಾಂಶ ಸಿಗುತ್ತಿದೆ. ತೆಂಗಿನಕಾಯಿ ಬೆಲೆ ಹೆಚ್ಚಳವಾಗಲು ಈ ಅಂಶ ಕೂಡ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಇನ್ನೆರಡು ತಿಂಗಳಿನಲ್ಲಿ ಸರಿಹೋಗಲಿದೆ: ರೈತ ಮುಖಂಡರು ಹೇಳುವ ಪ್ರಕಾರ ತೆಂಗಿನಕಾಯಿ ಬೆಲೆ ಮುಂದಿನ ನವೆಂಬರ್‌ವರೆಗೂ ಏರಿಕೆಯಾಗುವ ಸಾಧ್ಯತೆ ಇಲ್ಲ.

ಕೊಬ್ಬರಿ ಬೆಲೆ ಇಳಿಕೆ: ಈ ನಡುವೆ ಕೊಬ್ಬರಿ ಗಿಟುಕಿನ ಬೆಲೆ ಕೂಡ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಇದೀಗ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ೧೫೫ ರೂ. ನಿಂದ ೧೬೦ ರೂ. ಇದೆ. ಹೀಗಾಗಿ ಬಹುತೇಕರು ತೆಂಗಿನಕಾಯಿ  ಬದಲಿಗೆ ಅಡುಗೆಗೆ ಕೊಬ್ಬರಿ ಬಳಸುತ್ತಿದ್ದಾರೆ.

” ಕಳೆದ ಎರಡು ತಿಂಗಳುಗಳಿಗೆ ಹೋಲಿಸಿದಲ್ಲಿ ತೆಂಗಿನ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ. ಅಂತರ್ಜಲ ಕೊರತೆ ಹಾಗೂ ಇಳುವರಿ ಕಡಿಮೆ ಇನ್ನಿತರ ಕಾರಣಗಳಿಂದ ರಾಜ್ಯಾದ್ಯಂತ ತೆಂಗಿನಕಾಯಿ ಬೆಲೆ ಹೆಚ್ಚಳವಾಗಿತ್ತು. ಇದೀಗ ಎಲ್ಲೆಡೆ ಮಳೆಯಾಗಿರುವ ಕಾರಣ ಇಳುವರಿ ಹೆಚ್ಚಾಗಿದ್ದು, ದರವೂ ಇಳಿಕೆಯಾಗಿದೆ.”

ನಾಗಣ್ಣ, ತೆಂಗಿನಕಾಯಿ ವ್ಯಾಪಾರಿ

” ಕಳೆದ ಮೂರು ತಿಂಗಳಿಂದಲೇ ತೆಂಗಿನಕಾಯಿ ಬೆಲೆ ಸ್ವಲ್ಪ ಸ್ವಲ್ಪವೇ ಹೆಚ್ಚಳವಾಗುವ ಮೂಲಕ ಊಹೆಗೆ ಮೀರಿ ಬೆಲೆ ಏರಿಕೆ ಕಂಡಿತ್ತು. ಇದರಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಇದೀಗ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಲ್ಲಿ ಹೋಟೆಲ್ ಉದ್ಯಮ ಇದೆ.”

ಸಿ.ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ

ಆಂದೋಲನ ಡೆಸ್ಕ್

Recent Posts

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…

2 hours ago

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

3 hours ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

4 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

9 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

16 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

16 hours ago