Andolana originals

ನಿಯಮ ಮೀರಿ ವಾಹನ ನಿಲುಗಡೆ ಶುಲ್ಕ ವಸೂಲಿ

ಎಸ್.ಎಸ್.ಭಟ್

ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ನಿಲ್ಲಿಸುವ ವಾಹನಗಳ ಚಾಲಕರಿಂದ ಹಗಲು ದರೋಡೆ 

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗುವ ವಾಹನಗಳ ಶುಲ್ಕದ ವಸೂಲಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಒಂದು ವರ್ಷದ ಅವಧಿಗೆಂದು ಗುತ್ತಿಗೆ ಪಡೆದ ಗುತ್ತಿಗೆದಾರರು ೩೦ ರೂ.ವಸೂಲಿ ಮಾಡುವಲ್ಲಿ ೫೦ ರೂ., ೫೦ ರೂ. ವಸೂಲಿ ಮಾಡಬೇಕಾದಲ್ಲಿ ೮೦ ರೂ., ಕನ್ನಡ ಭಾಷೆ ಗೊತ್ತಿಲ್ಲದವರಿಂದ ೧೦೦ ರೂ.ಗಳನ್ನು ವಸೂಲಿ ಮಾಡುತ್ತಿರುವುದು ದಾಖಲೆ ಸಹಿತ ಬಯಲಿಗೆ ಬಂದಿದೆ.

ಮೋಟಾರ್ ಬೈಕ್‌ಗಳಿಗೆ ೫ ರೂ., ಕಾರು-ಜೀಪುಗಳಿಗೆ ೨೫ ರೂ., ಟೆಂಪೋ, ಮ್ಯಾಕ್ಸಿ ಕ್ಯಾಬ್‌ಗಳಿಗೆ ೩೫ ರೂ., ಬಸ್ ಹಾಗೂ ಲಾರಿಗಳಾದರೆ ೫೦ ರೂ. ವಸೂಲಿ ಮಾಡಬೇಕೆಂಬ ನಿಬಂಧನೆಯೊಂದಿಗೆ ೧೯.೯.೨೦೨೫ರಿಂದ ೧೮.೯.೨೦೨೬ವರಿಗೆ ಗುತ್ತಿಗೆ ಪಡೆದ ಈ ನಿಯಮಾವಳಿಗಳನ್ನು ಗಾಳಿಗೆ ತೂರಿ ೮೦ ರೂ. ವಸೂಲಿ ಮಾಡುತ್ತಿರುವ ಕುರಿತಂತೆ ಅವರು ನೀಡುತ್ತಿರುವ ಮುದ್ರಿತ ರಶೀದಿಗಳೇ ಸಾಕ್ಷಿಯಾಗಿವೆ.

ಕಳೆದ ತಿಂಗಳು ಶ್ರೀಕಂಠೇಶ್ವರ ದೇವಾಲಯದ ಆವರಣಕ್ಕೆ ಬಂದಿದ್ದ ಶಾಸಕ ದರ್ಶನ್ ಧ್ರುವನಾರಾಯಣ ವಾಹನ ಶುಲ್ಕದ ಹೆಚ್ಚುವರಿ ವಸೂಲಿ ಕುರಿತಂತೆ ಗುತ್ತಿಗೆದಾರರ ಮೇಲೆ ಕೃಮ ಕೈಗೊಳ್ಳಬೇಕು. ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಶುಲ್ಕದ ದರೋಡೆ ನಿಲ್ಲಿಸಬೇಕು ಎಂದು ದೇವಾಲಯದ ಅಂದಿನ ಅಧಿಕಾರಿಗೆ ತಾಕೀತು ಮಾಡಿದ್ದರು. ಆದರೆ ಇಂದಿಗೂ ಹೆಚ್ಚುವರಿ ವಸೂಲಿ ನಿಂತಿಲ್ಲ. ದೇವಾಲಯಕ್ಕೆ ವಾಹನಗಳಲ್ಲಿ ಆಗಮಿಸುವ ಭಕ್ತರಿಂದ ಸುಲಿಗೆ ನಡೆಯುತ್ತಲೇ ಇದೆ. ಇದಕ್ಕೆ ಟೆಂಡರ್‌ನಲ್ಲಿ ಇಲ್ಲದ ೮೦ ರೂ.ಗಳ

ರಶೀದಿಗಳೇ ಸಾಕ್ಷಿಯಾಗಿದ್ದು, ತಕ್ಷಣ ಗುತ್ತಿಗೆ ರದ್ದು ಮಾಡಿ ದೇವಾಲಯದಿಂದಲೇ ಹಣ ವಸೂಲಿ ಮಾಡಿ ಎನ್ನುವ ಒತ್ತಾಯ ಭಕ್ತರಿಂದ ಕೇಳಿ ಬರುತ್ತಿದೆ. ಈ ಆವರಣದಲ್ಲಿ ನಿಲ್ಲಿಸಲಾಗುವ ವಾಹನಗಳ ಜವಾಬ್ದಾರಿ ಗುತ್ತಿಗೆದಾರರದ್ದು ಎಂಬ ನಿಯಮ ಎಲ್ಲೆಡೆ ಇದ್ದರೆ, ಇಲ್ಲಿ ಮಾತ್ರ ಆ ಜವಾಬ್ದಾರಿ ಮಾಲೀಕರದ್ದು ಎಂಬ ಫಲಕ ನೇತುಹಾಕಲಾಗಿದೆ.

ಅದು ಜಾರಿಯಲ್ಲಿದ್ದರೂ ಅದೇ ಫಲಕದಲ್ಲಿರುವ ನಿಗದಿಪಡಿಸಿದ ದರ ಮಾತ್ರ ಜಾರಿಯಲ್ಲಿ ಇಲ್ಲದೆ ಹೆಚ್ಚುವರಿ ವಸೂಲಿಯಾಗುತ್ತಿದ್ದು, ಈಗಲಾದರೂ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಹಗಲು ದರೋಡೆಗೆ ಕಡಿವಾಣ ಹಾಕಬೇಕು ಎನ್ನುತ್ತಾರೆ ನಿಲುಗಡೆಯ ವಾಹನಗಳ ಮಾಲೀಕರು.

” ವಾಹನ ನಿಲುಗಡೆ ಫಲಕದಲ್ಲಿ ಇರುವುದು ೫, ೨೫, ೩೫, ೫೦ ರೂ. ಆದರೆ ಗುತ್ತಿಗೆದಾರರು ನೀಡುವ ರಶೀದಿ ಮಾತ್ರ ೩೦ ರೂ. ಅಥವಾ ೮೦ ರೂ.”

” ಹೆಚ್ಚುವರಿ ಹಣದ ವಸೂಲಿ ತಮ್ಮ ಗಮನಕ್ಕೆ ಬಂದ ತಕ್ಷಣ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ (ಬ್ಲಾಕ್ ಲೀಸ್ಟ್) ಸೇರಿಸಿ ಗುತ್ತಿಗೆ ರದ್ದು ಮಾಡಿ ಎಂದು ಅಂದೇ ಅಧಿಕಾರಿಗಳಿಗೆ ಸೂಚಿಸಿದ್ದೆ. ಇದೀಗ ಹೊಸ ಅಧಿಕಾರಿ ಬಂದಿದ್ದು, ಅವರು  ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.”

– ದರ್ಶನ್ ಧ್ರುವನಾರಾಯಣ, ಶಾಸಕ

” ಹೊಸದಾಗಿ ಬಂದಿರುವ ನನಗೆ ವಾಹನಗಳಿಂದ ಈ ಹೆಚ್ಚುವರಿ ವಸೂಲಿ ನಡೆಯುತ್ತಿರುವುದು ಇದೀಗ ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲಾಗುವುದು.”

-ಕೃಷ್ಣ, ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ

 

 

 

ಆಂದೋಲನ ಡೆಸ್ಕ್

Recent Posts

ಗ್ಯಾಸ್ ಸಿಲಿಂಡರ್‌ ಅಭಾವ: ಆಟೋ ಚಾಲಕರನ್ನು ಮುಂದೆ ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ: ಎಂ ಲಕ್ಷ್ಮಣ್ ಕಿಡಿ

ಮೈಸೂರು: ರಾಜ್ಯದಲ್ಲಿ ಗ್ಯಾಸ್‌ ಸಿಲಿಂಡರ್‌ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರನ್ನು ಮುಂದೆ ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರುವ…

8 mins ago

ಏಪ್ರಿಲ್.‌5ರಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ

ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಏಪ್ರಿಲ್.‌15ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಶ್ರೀಮಠದಲ್ಲಿ…

33 mins ago

ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತಗೊಳಿಸಲು ಶ್ರಮಿಸಿ : ಎಡಿಸಿ ತಾಕೀತು

ಮೈಸೂರು : ಬಾಲ ಕಾರ್ಮಿಕ ಪದ್ಧತಿಯು ದೇಶಕ್ಕೆ ಮಾರಕವಾಗಿದ್ದು, ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತವಾಗಿಸಲು ಅಧಿಕಾರಿಗಳು ಹೆಚ್ಚಿನ ಜಾಗೃತಿ…

48 mins ago

ಆಟೋ ಗ್ಯಾಸ್‌ ಕೊರತೆ ; ವದಂತಿಗಳಿಗೆ ಕಿವಿಗೊಡದಂತೆ ಸಲಹೆ

ಬೆಂಗಳೂರು : ರಾಜ್ಯದಲ್ಲಿರುವ ಆಟೋ ಮಾಲೀಕರು ಮತ್ತು ಚಾಲಕರು ಆತಂಕಕ್ಕೆ ಒಳಗಾಗಬಾರದು ಹಾಗೂ ಆಟೋ ಗ್ಯಾಸ್ ಕೊರತೆಯ ಬಗ್ಗೆ ಯಾವುದೇ…

56 mins ago

ಚಿಕ್ಕಮಗಳೂರು | ಚಾರಣಕ್ಕೆ ಬಂದಿದ್ದ ಕೇರಳದ ವಿದ್ಯಾರ್ಥಿ ನಾಪತ್ತೆ ; ತೀವ್ರ ಹುಡುಕಾಟ

ಚಿಕ್ಕಮಗಳೂರು : ಬಾಬಾಬುಡನ್‌ಗಿರಿ ಪ್ರದೇಶದಕ್ಕೆ ಪ್ರವಾಸ ಬಂದಿದ್ದ ಕೇರಳದ 16 ವರ್ಷದ ವಿದ್ಯಾರ್ಥಿನಿ ಶ್ರೀನಂದಾ ನಾಪತ್ತೆಯಾಗಿದ್ದು, ಕುಂಟುಬದವರು ಮತ್ತು ಪೊಲೀಸರು…

1 hour ago

ಕದನ ವಿರಾಮ ಬೆನ್ನಲ್ಲೇ ಕಚ್ಚಾ ತೈಲದ ದರ ದಿಢೀರ್‌ ಕುಸಿತ

ವಾಷಿಂಗ್ಟನ್‌ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ…

2 hours ago