Andolana originals

ಮ.ಬೆಟ್ಟದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಮಹಾದೇಶ್ ಎಂ.ಗೌಡ

೨೦೦ಕ್ಕೂ ಹೆಚ್ಚು ಕ್ಯಾಮೆರಾಗಳ ಅಳವಡಿಕೆ; ಕಳ್ಳರ ಪತ್ತೆಗೆ, ಜನಜಂಗುಳಿಯಲ್ಲಿ ಯಾರಾದರೂ ತಪ್ಪಿಸಿಕೊಂಡರೆ, ದೇಗುಲಕ್ಕೆ ಭೇಟಿ ಕೊಟ್ಟವರ ಸಂಖ್ಯೆ ತಿಳಿಯಲು ಸಹಕಾರಿ

ಹನೂರು: ಮಾದಪ್ಪನ ದರ್ಶನಕ್ಕೆ ತಮ್ಮ ಜೊತೆ ಬಂದವರು ತಪ್ಪಿಸಿಕೊಂಡರೆ? ಜತೆಯಲ್ಲಿ ತಂದಿದ್ದ ಅಮೂಲ್ಯ ವಸ್ತು ಕಾಣೆಯಾಯಿತೇ? ಅಥವಾ ದೇಗುಲಕ್ಕೆ ಎಷ್ಟು ಮಂದಿ ಭೇಟಿ ಕೊಟ್ಟರು ಎಂಬ ಲೆಕ್ಕ ಬೇಕೆ? ಈ ಎಲ್ಲದಕ್ಕೂ ಉತ್ತರ, ಪರಿಹಾರದ ಜೊತೆಗೆ ಭಕ್ತರ ಸುರಕ್ಷತೆಗೂ ನೆರವಾಗಲಿದೆ ಅತ್ಯಾಧುನಿಕ ತಂತ್ರಜ್ಞಾನ.

ಹೌದು, ರಾಜ್ಯದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾದ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳ ಹಿತದೃಷ್ಟಿಯಿಂದ ದಿನದ ೨೪ ಗಂಟೆಗಳೂ ಕಾರ್ಯ ನಿರ್ವಹಿಸುವ ಮಾಸ್ಟರ್ ಕಂಟ್ರೋಲ್ ರೂಂ ತೆರೆಯಲಾಗಿದ್ದು ಭಕ್ತರ ಸುರಕ್ಷತೆ, ಜನರ ಭೇಟಿಯ ನಿಖರ ಲೆಕ್ಕ ಸಿಗುತ್ತಿದೆ.

ಮ.ಬೆಟ್ಟಕ್ಕೆ ಜಾತ್ರಾ ಮಹೋತ್ಸವ, ಹಬ್ಬ ಹರಿದಿನಗಳು ಅಮಾವಾಸ್ಯೆ ಹಾಗೂ ಸರ್ಕಾರಿ ರಜೆ ದಿನಗಳಂದು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ದೇವಸ್ಥಾನದಲ್ಲಿ ಇರುವ ಸಮಸ್ಯೆಗಳನ್ನು ಗಮನಿಸುವ ಹಾಗೂ ಬಗೆಹರಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಆವರಣದಲ್ಲಿ ೨೦೦ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಎಲ್ಲೆಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ?: ಮ.ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದರ್ಶನದ ಸರತಿ ಸಾಲು, ಮುಡಿ ಕೌಂಟರ್, ದೇವಸ್ಥಾನದ ರಾಜಗೋಪುರ, ದೇವಸ್ಥಾನದ ಒಳ ಆವರಣ, ಹೊರ ಆವರಣ, ವಸತಿಗೃಹಗಳು, ಚೆಕ್ ಪೋಸ್ಟ್ , ಬಸ್ ನಿಲ್ದಾಣ ಭಕ್ತಾದಿಗಳು ಹೆಚ್ಚಾಗಿ ಸೇರುವ ಪ್ರದೇಶಗಳು, ಇನ್ನಿತರ ಕಡೆಗಳಲ್ಲಿ ೨೦೦ಕ್ಕೂ ಅಧಿಕ ಆಧುನಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಹದ್ದಿನ ಕಣ್ಣಿಡಲಾಗಿದೆ. ಬೆಟ್ಟಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯನ್ನು ನಿಖರವಾಗಿ ಹೇಳಲು ಈ ಹಿಂದೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ವಿಶೇಷ ತಂತ್ರಜ್ಞಾನವುಳ್ಳ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ದರ್ಶನಕ್ಕೆ ಹೋಗುವ ಪ್ರತಿಯೊಬ್ಬ ಭಕ್ತರನ್ನೂ (ಹೆಡ್ ಕ್ಯಾಮೆರಾ)ದ ಮೂಲಕ ಎಣಿಕೆ ಮಾಡಲಾಗುತ್ತಿದ್ದು ಪ್ರತಿನಿತ್ಯ ಎಷ್ಟು ಭಕ್ತಾದಿಗಳು ಆಗಮಿಸಿ ದರ್ಶನ ಪಡೆದಿದ್ದಾರೆ, ವಿಶೇಷ ದಿನಗಳಲ್ಲಿ ಒಂದು ಗಂಟೆಯಲ್ಲಿ ಎಷ್ಟು ಭಕ್ತಾದಿಗಳು ದರ್ಶನ ಮಾಡಲು ಸಾಧ್ಯವಾಗಿದೆ ಎಂಬುದನ್ನು ನಿಖರವಾಗಿ ಹೇಳಬಹುದಾಗಿದೆ.

ನಾಗಮಲೆ ಭವನದಲ್ಲಿ ಮಾಸ್ಟರ್ ಕಂಟ್ರೋಲ್ ರೂಂ ತೆರೆದಿದ್ದು ದಿನದ ೨೪ ಗಂಟೆಗಳ ಕಾಲವೂ ನುರಿತ ತಂತ್ರಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

” ಮ.ಬೆಟ್ಟಕ್ಕೆ ಬರುವ ಭಕ್ತಾದಿಗಳ ಸುರಕ್ಷತೆಗೆ ಪ್ರಾಧಿಕಾರದ ವತಿಯಿಂದ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇವಸ್ಥಾನದ ಮಾಸ್ಟರ್ ಪ್ಲಾನ್ ಆವರಣದಲ್ಲಿ ೨೦ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಇದಲ್ಲದೆ ಜಾತ್ರಾ ಸಂದರ್ಭಗಳಲ್ಲಿ ಭಕ್ತಾದಿಗಳು ನೇರವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳ ಬಹುದು. ತಕ್ಷಣ ಪ್ರಾಧಿಕಾರದ ಸಿಬ್ಬಂದಿಗಳು ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.”

ಎ.ಈ.ರಘು, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

 

ಕಳ್ಳರ ಪತ್ತೆಗೆ ಅನುಕೂಲ: 

ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು ಆಗಾಗ್ಗೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ. ಪ್ರಾಽಕಾರದ ವತಿಯಿಂದ ಚೆಕ್‌ಪೋಸ್ಟ್‌ಗಳಲ್ಲಿ ನೂತನ ತಂತ್ರಜ್ಞಾನದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ದೇವಸ್ಥಾನದ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ, ಕಾರು, ಟೆಂಪೋ, ಪ್ರವಾಸಿ ಬಸ್‌ಗಳು ಸೇರಿದಂತೆ ಯಾವುದೇ ವಾಹನಗಳು ಸಂಚರಿಸಿದರೂ ಆ ವಾಹನಗಳ ಸಂಖ್ಯೆಯನ್ನು ದೃಢೀಕರಿಸುತ್ತಿರುವುದರಿಂದ ಅಪಘಾತ ಹಾಗೂ ಕಳ್ಳತನ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರಿಗೆ ಅನುಕೂಲವಾಗಿದೆ.

ಭಕ್ತರ ಸಮಸ್ಯೆಗೆ ಸಿಗಲಿದೆ ಪರಿಹಾರ :

ಮ.ಬೆಟ್ಟದ ಸರತಿ ಸಾಲು, ಮುಡಿ ಕೌಂಟರ್ ಹಾಗೂ ಪ್ರಮುಖ ಸ್ಥಳಗಳಲ್ಲಿ ಮೈಕ್ ಸ್ಪೀಕರ್ ಅಳವಡಿಸಲಾಗಿದ್ದು ಅನಾರೋಗ್ಯದ ಸಮಸ್ಯೆ, ಶೌಚಾಲಯ ಹಾಗೂ ಯಾವುದೇ ಸಮಸ್ಯೆಗಳಿದ್ದಾಗ ಮೈಕ್ ಮೂಲಕ ಮಾತನಾಡಿದರೆ ಮಾಸ್ಟರ್ ಕಂಟ್ರೋಲ್ ಸಿಬ್ಬಂದಿಗಳಿಗೆ ಮಾಹಿತಿ ಸಿಗಲಿದೆ. ತಕ್ಷಣ ಅವರು ಸೆಕ್ಯೂರಿಟಿ ಸಿಬ್ಬಂದಿಗಳನ್ನು ಕಳುಹಿಸಿ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.

” ಮ.ಬೆಟ್ಟದ ಮಾಸ್ಟರ್ ಪ್ಲಾನ್ ಆವರಣದಲ್ಲಿ ಪ್ರಾಧಿಕಾರದ ವತಿಯಿಂದ ಸಿಸಿ ಕ್ಯಾಮೆರಾ ಅಳವಡಿಸಿರುವುದರಿಂದ ಕಳ್ಳರ ಪತ್ತೆಗೆ ಹೆಚ್ಚಿನ ಅನುಕೂಲವಾಗಿದೆ. ರಂಗಮಂದಿರದಲ್ಲಿ ಕಳೆದುಕೊಂಡಿದ್ದ ಹಲವಾರು ಮೊಬೈಲ್‌ಗಳನ್ನು ನಮ್ಮ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ.”

ಜಗದೀಶ್, ಇನ್‌ಸ್ಪೆಕ್ಟರ್, ಮ.ಬೆಟ್ಟ ಠಾಣೆ

ಆಂದೋಲನ ಡೆಸ್ಕ್

Recent Posts

ಜಾತಿ ಜತೆಗೆ ಕನಸು ಕಾಣುವ ಅಸಮಾನತೆಯೂ ಸೃಷ್ಟಿ : ನಾಗಭೂಷಣಸ್ವಾಮಿ ವಿಷಾದ

ಮೈಸೂರು : ಸುಧಾರಣೆ ನೆಪದಲ್ಲಿ ಕ್ರೌರ್ಯ ನಡೆಯುತ್ತಿದೆ. ಜೈಲಲ್ಲಿರುವ ಕೈದಿಗಳಿಗೆ ಕನಸು ಕಾಣುವ ಸ್ವಾತಂತ್ರ್ಯವೂ ಇಲ್ಲದಾಗಿದೆ. ಆರ್ಥಿಕ, ಅಧಿಕಾರ ಮತ್ತು…

5 mins ago

ನೆತನ್ಯಾಹು ಬದುಕಿದ್ದಾರೆ, ಹತ್ಯೆ ವದಂತಿ ಸುಳ್ಳು ; ಇಸ್ರೇಲ್‌

ಜೆರುಸಲೆಮ್‌ : ಪಶ್ಚಿಮ ಏಷ್ಯಾದ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಈ ವೇಳೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು…

25 mins ago

ಕೆರೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು : ಹನೂರು ಶಾಸಕ ಮಂಜುನಾಥ್‌

ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ರೈತರಿಗೆ ವ್ಯವಸಾಯಕ್ಕೆ ಹೆಚ್ಚಿನ…

1 hour ago

ಹನೂರು | ಸುಗಮ ಸಂಚಾರಕ್ಕೆ 4.5ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ

ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ,…

1 hour ago

ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ : ಇಲ್ಲಿದೆ ಮಾಹಿತಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಭಾನುವಾರ ಪ್ರಕಟಿಸಿದೆ. ಈ ಕುರಿತು…

2 hours ago

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…

2 hours ago