ನಿರುದ್ಯೋಗ ನಿವಾರಣೆಗೆ ಕೆರಿಯರ್ ಹಬ್ ಸ್ಥಾಪನೆ; ಮೈಸೂರು ವಿಶ್ವವಿದ್ಯಾನಿಲಯದಿಂದ ಸಿದ್ಧತೆ
ಅನುಚೇತನ್ ಕೆ.ಎಂ.
ಮೈಸೂರು: ಕೋವಿಡ್ ಕಾರಣಕ್ಕೆ ಅನುದಾನ ಸ್ಥಗಿತಗೊಂಡಿದ್ದರಿಂದ ಮುಚ್ಚಲ್ಪಟ್ಟಿದ್ದ ಮೈಸೂರು ವಿಶ್ವವಿದ್ಯಾನಿಲಯದ ಕೌಶಲ ತರಬೇತಿ ಕೇಂದ್ರ (ಕೆರಿಯರ್ ಹಬ್)ವನ್ನು ಹೊಸ ವರ್ಷಾರಂಭದಲ್ಲಿ ಪುನಾರಂಭಿಸಲು ಸಿದ್ಧತೆ ನಡೆದಿದೆ.
ಉನ್ನತ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, ನಿರುದ್ಯೋಗ ನಿವಾರಣೆಗಾಗಿ ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ೨೦೧೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಈ ಕೆರಿಯರ್ ಹಬ್‌ನ್ನು ಸ್ಥಾಪಿಸಿದ್ದರು. ಕೋವಿಡ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಅನುದಾನ ಸ್ಥಗಿತಗೊಂಡ ಕಾರಣ ಸೀಲ್‌ಡೌನ್ ಆದ ಈ ಕೇಂದ್ರ ಕಳೆದ ನಾಲ್ಕು ವರ್ಷಗಳಿಂದ ನಿದ್ರಾವಸ್ಥೆಯಲ್ಲಿತ್ತು.
ಪ್ರಸ್ತುತ ಕುಲಪತಿಯಾಗಿರುವ ಪ್ರೊ.ಎನ್.ಕೆ. ಲೋಕನಾಥ್ ಅವರು, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗಾಗಿ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ಆರಂಭಿಸಲು ಉತ್ಸುಕತೆ ತೋರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರ -ಲವಾಗಿ ವೃತ್ತಿ ತರಬೇತಿ ನೀಡಲು ಕೇಂದ್ರ ಸರ್ಕಾರದ ರೂಸಾ(ರಾಷ್ಟ್ರೀಯ ಉತ್ಕೃಷ್ಟತಾ ಶಿಕ್ಷಾ ಅಭಿಯಾನ) ವತಿಯಿಂದ ೨ ಕೋಟಿ ರೂ. ಅನುದಾನ ದೊರೆತಿದ್ದು, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಕೂಡ ೫೦ ಲಕ್ಷ ರೂ. ಅನುದಾನ ನೀಡುತ್ತಿದೆ. ಇದರಿಂದಾಗಿ ಕೆರಿಯರ್ ಹಬ್‌ನ್ನು ಜನವರಿಯಲ್ಲಿ ಪುನಾರಂಭಿಸಲು ವಿವಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
೨೦೧೯ರಲ್ಲಿ ಆರಂಭವಾದ ಈ ಕೆರಿಯರ್ ಹಬ್‌ನಲ್ಲಿ ಎರಡು ವರ್ಷಗಳಲ್ಲಿ ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೌಶಲ ತರಬೇತಿ ಪಡೆದಿದ್ದು, ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗವನ್ನೂ ಗಿಟ್ಟಿಸಿಕೊಂಡು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ.
ಕೆರಿಯರ್ ಹಬ್ ಗುರಿ: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರೈಸಿದ ನಂತರ ಸೂಕ್ತ ಉದ್ಯೋಗ ಗಿಟ್ಟಿಸಿಕೊಳ್ಳಲು, ಕೇಂದ್ರದ ‘ಆತ್ಮ ನಿರ್ಭರ’ಯೋಜನೆಯಡಿ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೂ ಸಕಲ ರೀತಿಯ ಸ್ಪರ್ಧಾತ್ಮಕ ವಿಷಯಗಳ ತರಬೇತಿ, ಕೌಶಲಾಭಿವೃದ್ಧಿ, ಕಂಪ್ಯೂಟರ್, ಸಾ-ವೇರ್, ಹಾರ್ಡ್‌ವೇರ್, ಕೃಷಿ ಸಂಬಂಧಿತ ವಿಷಯಗಳು, ಸ್ಪೋಕನ್ ಇಂಗ್ಲಿಷ್, ಕಮ್ಯುನಿಕೇಷನ್, ಸಂದರ್ಶನ ಎದುರಿಸುವ ತರಬೇತಿ ಸೇರಿದಂತೆ ಹಲವು ರೀತಿಯ ಕೌಶಲಗಳನ್ನು ಕಲಿಸಲಾಗುತ್ತದೆ. ತದ ನಂತರ ಪ್ಲೇಸ್‌ಮೆಂಟ್‌ಗೆ ಅವಕಾಶ ಕಲ್ಪಿಸಿ, ಕೆರಿಯರ್ ಹಬ್ ನಿಂದಲೇ ಕಂಪೆನಿಗಳನ್ನು ಕ್ಯಾಂಪಸ್ ಸಂದರ್ಶನಕ್ಕೆ ಕರೆಸಲಾಗುತ್ತದೆ.
ಕೌಶಲ ತರಬೇತಿ ಪ್ರಕ್ರಿಯೆ: ಮೈಸೂರು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಇದಾಗಿದ್ದು, ಪ್ರಾರಂಭದಲ್ಲಿ ೩,೦೦೦ ಸಾವಿರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ೧,೨೦೦ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಅವರ ವಿಷಯಗಳಿಗೆ ಅನುಗುಣವಾಗಿ ಎಲ್ಲ ರೀತಿಯ ತರಬೇತಿಯನ್ನೂ ನೀಡಲಾಗುತ್ತದೆ. ಇದಕ್ಕಾಗಿ ೫೦ ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಅತ್ಯುತ್ತಮ ತರಬೇತುದಾರರನ್ನು ಆಯ್ಕೆ ಮಾಡಲಾಗಿದೆ. ೧೦ ದಿನಗಳಿಂದ ೬ ತಿಂಗಳವರೆಗೆ ತರಬೇತಿ ನೀಡಲಾಗುತ್ತದೆ. ನಿತ್ಯ ಬೆಳಿಗ್ಗೆ ೮ ರಿಂದ ೧೦ ಗಂಟೆವರೆಗೆ, ಸಂಜೆ ೪ ರಿಂದ ೬ ಗಂಟೆವರೆಗೆ ಹಾಗೂ ರಜಾದಿನಗಳಲ್ಲಿ ದಿನವಿಡಿ ತರಬೇತಿ ನೀಡಲಾಗುತ್ತದೆ.
ತರಬೇತಿ ನೀಡಲಿರುವ ವಿಷಯಗಳು: ಇಂಡಸ್ಟ್ರಿ ೪.೦, ಡಿಸೈನ್ ಕ್ಷೇತ್ರ, ಪ್ಲೇಸ್‌ಮೆಂಟ್ ಸಂದರ್ಶನ, ಬ್ಯಾಂಕಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಕಂಪ್ಯೂಟರ್ ಕೌಶಲ, ಗೊಂಬೆ ತಯಾರಿಕೆ, ಆಂಡ್ರಾಯ್ಡ್ ಅಪ್ಲಿಕೇಷನ್, ಟಾಯ್ಕಾಥಾನ್, ಧ್ವನಿ ಆಧರಿತ ತರಬೇತಿ.
ಸೌಲಭ್ಯಗಳು ಏನೇನು?: ಸಿಎನ್‌ಸಿ ಮಿಷನ್, ತ್ರಿಡಿ ಪ್ರಿಂಟಿಂಗ್, ಸ್ಕ್ಯಾನಿಂಗ್, ಮಿಕ್ಸಿಂಗ್ ಸ್ಟುಡಿಯೋ, ರೋಬೊಟಿಕ್ ಅಂಡ್ ಆಟೋಮೇಷನ್ ಲ್ಯಾಬ್, ಕೆ-ಟೇರಿಯನ್,ಹೊಲಿಗೆ ಯಂತ್ರಗಳು, ಮೇಕರ್ ಲ್ಯಾಬ್
” ಕೆರಿಯರ್ ಹಬ್ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಕಾಲೇಜು ಕಲಿಕೆಯ ಜೊತೆಗೆ ತರಬೇತಿ ನೀಡುವ ಉದ್ದೇಶದಿಂದ ಈ ಯೋಜನೆ ಸಿದ್ಧಗೊಳಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳ ಬದುಕು ಹಸನಾಗಿಸುವ ಪ್ರಯತ್ನ ನಮ್ಮದಾಗಿದೆ. ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವಲ್ಲಿ ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಳ್ಳುವ ಆಶಯವಿದೆ.”
-ಪ್ರೊ.ಆರ್.ಎಸ್.ಉಮಾಕಾಂತ್, ನಿರ್ದೇಶಕರು, ವೃತ್ತಿ ತರಬೇತಿ ಕೇಂದ್ರ
ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ನಿಂದ ೫೦ ಲಕ್ಷ ರೂ. ಅನುದಾನ ಕೆರಿಯರ್ ಹಬ್ ತರಬೇತಿಗೆ ಈಗಾಗಲೇ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನಿಂದ ೫೦ ಲಕ್ಷ ರೂ.ಮಂಜೂರಾಗಿದ್ದು, ೬ ತಿಂಗಳು ಸಹಾಯಕವಾಗುತ್ತದೆ. ರೂಸಾದಿಂದ ಒಟ್ಟು ೭.೫ ಕೋಟಿ ರೂ. ಅನುದಾನ ದೊರೆಯಲಿದ್ದು, ಪ್ರಸ್ತುತ ೨ ಕೋಟಿ ರೂ. ಬಿಡುಗಡೆಯಾಗಲಿದೆ. ಮೈಸೂರು ವಿವಿ ವ್ಯಾಪ್ತಿಯ ೧೧೧ ಕಾಲೇಜುಗಳ ೧ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಕೇಂದ್ರದ ಪ್ರಯೋಜನ ಸದುಪಯೋಗ ದೊರಕಿಸುವ ಉದ್ದೇಶವಿದೆ.
ಮೈಸೂರು : ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿ.31ರಿಂದ ಎರಡು ದಿನ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ…
ಹೊಸದಿಲ್ಲಿ : ಮುಂಬರುವ ಕೇಂದ್ರ ಬಜೆಟ್ ಕುರಿತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ತಜ್ಞರು…
ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ…
ಮೈಸೂರು : ಇನ್ನೇನು ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್…
ಬೆಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.…
ಚಾಮರಾಜನಗರ : ರಾಷ್ಟ್ರ ಮಟ್ಟದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತಾಲ್ಲೂಕಿನ ಕೋಡಿಮೋಳೆ ಬಸವನಪುರ ಬಿ.ಆರ್.ಹೇಮಂತ್ ಅವರು ಮಿಸ್ಟರ್…