ಅಕ್ಕನ ಮನೆಯ ಖಾತೆಯನ್ನು ತನ್ನ ಹೆಸರಿಗೆ ಬದಲಿಸಿಕೊಂಡು ವಂಚನೆ
• ಶ್ರೀಧರ್ ಆರ್ ಭಟ್
ನಂಜನಗೂಡು: ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮನೆಯ ಖಾತೆಯನ್ನು ಅಕ್ರಮವಾಗಿ ತನ್ನ ಹೆಸರಿಗೆ ಬದಲಿಸಿಕೊಂಡು ವಂಚಿಸಿ, ಆಕೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಚಿನ್ನದಗುಡಿಹುಂಡಿ ಗ್ರಾಮದ ಕರಿಗಮ್ಮ ತನ್ನ ಸಹೋದರನಿಂದ ವಂಚನೆಗೆ ಒಳಗಾದವರು.
ಪ್ರಾಯದಲ್ಲೇ ಬೆಂಗಳೂರು ಸೇರಿ ಅವರಿವರ ಮನೆಯ ಮುಸುರೆ ತಿಕ್ಕಿ, ಕೂಲಿ ನಾಲಿ ಮಾಡಿ, ಒಂದಿಷ್ಟು ಕಾಸು ಕೂಡಿಟ್ಟ ಕರಿಗಮ ಅವರು ತಂದೆ ಬಸವೇಗೌಡರಿಂದ ತನಗೆ ದಾನವಾಗಿ ಬಂದ ಚಿನ್ನದಗುಡಿಹುಂಡಿ ಗ್ರಾಮದ ನಿವೇಶನದಲ್ಲಿ ಕೆಲ ವರ್ಷಗಳ ಹಿಂದೆ ಮನೆ ನಿರ್ಮಿಸಿದ್ದರು. ಆದರೆ, ತಂದೆಯಿಂದ ಬಂದ ನಿವೇಶನದಲ್ಲಿ ನಿರ್ಮಿಸಿದ ಮನೆಯಲ್ಲೀಗ ಕರಿಗಮ್ಮ ಅವರಿಗೇ ಜಾಗವಿಲ್ಲವಾಗಿದೆ. ಇತ್ತ ಅವರಿಗೆ ತಂದೆಯೂ ಇಲ್ಲ, ಅತ್ತ ಪತಿಯೂ ಇಲ್ಲ, ಮಕ್ಕಳೂ ಇಲ್ಲ. ಹೀಗಾಗಿ ಕರಿಗಮ್ಮ ಅವರ ಗೋಳು ಕೇಳುವವರಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಸಹೋದರನೇ ತನಗೆ ವಂಚನೆ ಮಾಡಬಹುದು ಎಂದು ತಿಳಿಯದ ಕರಿಗಮ್ಮ ಅವರು ಮನೆಯನ್ನು ಸಹೋದರ ನಾಗರಾಜ ಅವರ ಸುಪರ್ದಿಗೆ ವಹಿಸಿ ಮತ್ತೆ ಬೆಂಗಳೂರಿಗೆ ತೆರಳಿದ್ದರು. ಕೆಲ ವರ್ಷಗಳ ನಂತರ ಮನೆಗೆ ಬಂದರೆ ‘ನಿನಗೆ ಈ ಮನೆಯಲ್ಲಿ ಜಾಗವೇ ಇಲ್ಲ’ ಎಂಬ ಮಾತು ಸಹೋದರನಿಂದ ಬಂದಾಗ ಕರಿಗಮ್ಮನ ಸ್ಥಿತಿ ಅಯೋಮಯವಾಯಿತು.
ಕರಿಗಮ್ಮ ಅವರು ತಮ್ಮ ತಂದೆ ಬಸವೇಗೌಡರಿಂದ ಬಂದ ನಿವೇಶನದ ಜಂಜರ್ ನಂ.633ರ 30X40 ಚದರಡಿ ನಿವೇಶನದಲ್ಲಿ ಮನೆ ನಿರ್ಮಿಸಿ ಪಂಚಾಯಿತಿಯಿಂದ ಖಾತೆಯನ್ನೂ ಮಾಡಿಸಿಕೊಂಡಿದ್ದರು. ಆದರೆ ಈಗ ಆ ಮನೆ ಕರಿಗಮ್ಮನಿಗೆ ತಿಳಿಯದ ಹಾಗೆ ಸಹೋದರ ನಾಗರಾಜು ಹೆಸರಿಗೆ ಖಾತೆಯಾಗಿದೆ.
ಸಹೋದರ ನಾಗರಾಜು ನೋಟರಿಯವರಿಂದ ಒಂದು ಅಫಿಡವಿಟ್ ಸಿದ್ಧಪಡಿಸಿ, ಆ ದಾಖಲೆಯ ಮೇಲೆ ಬದನವಾಳು ಪಂಚಾಯಿತಿಗೆ ತೆರಳಿ ಕುತಂತ್ರ ಮಾಡಿ ತನ್ನ ಹೆಸರಿಗೆ ಮನೆಯ ಖಾತೆಯನ್ನು ಬದಲಾಯಿಸಿ ಕೊಂಡು ನಾನು ಕಟ್ಟಿದ ಮನೆಯಿಂದ ನನ್ನನ್ನು ಹೊರಹಾಕಿದ್ದಾನೆ ಎಂಬುದು ಕರಿಗಮ್ಮನವರ ಆರೋಪವಾಗಿದೆ.
ಮನೆಯಿಲ್ಲದ ಈ ವಯೋವೃದ್ಧೆ ಈಗ ಅವರಿವರ ಮನೆಯ ಜಗುಲಿಯ ಮೇಲೆ ಕಾಲ ಕಳೆಯುತ್ತಾ, ಬೆಳಗಾದರೆ ನ್ಯಾಯಕ್ಕಾಗಿ ಕಂಡ ಕಂಡ ಮುಖಂಡರು ಮತ್ತು ಅಧಿಕಾರಿಗಳ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.
ನೋಟರಿ ಅಫಿಡವಿಟ್ ಆಧಾರದ ಮೇಲೆ ಖಾತೆ ಬದಲಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಕುರಿತು ವರದಿ ತರಿಸಿಕೊಂಡು ತಪ್ಪಾಗಿದ್ದಲ್ಲಿ ಈ ಖಾತೆಯನ್ನು ರದ್ದುಪಡಿಸಲಾಗುವುದು.
-ಜೆರಾಲ್ಡ್ ರಾಜೇಶ್, ಇಒ, ತಾಪಂ.
ಹಿಂದಿದ್ದ ಪಿಡಿಒ ಈ ಖಾತೆ ಬದಲಾವಣೆ ಮಾಡಿದ್ದಾರೆ. ಮೇಲಧಿಕಾರಿಗಳಿಂದ ಆದೇಶ ಮಾಡಿಸಿದರೆ ಈ ಖಾತೆಯನ್ನು ಸ್ಥಗಿತಗೊಳಿ ಸುವೆ. ಈ ಕುರಿತು ಈಗಾಗಲೇ ಮೇಲಧಿಕಾರಿ ಗಳಿಗೆ ವರದಿ ನೀಡಿದ್ದೇನೆ.
-ಕರಿಯಪ್ಪ, ಪಿಡಿಒ, ಬದನವಾಳು ಗ್ರಾಪಂ
ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…
ಟೆಹ್ರಾನ್ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…
ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…
ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…
ಬೆಂಗಳೂರು : ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಪಾರದರ್ಶಕ ನೇಮಕಾತಿ ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗ ಅಕ್ರಮಗಳಲ್ಲಿ ಮುಳುಗಿದೆ. ಸರ್ಕಾರ ಒಂದೇ…
ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣದ ಟೌನ್‌ನಲ್ಲಿ ನಡೆದ ಮುತ್ತು ಮಾರಮ್ಮ ದೇವಿ ಕರಗದ ವೇಳೆ ಕೊಂಡದಲ್ಲಿ ಬಿದ್ದು ಇಬ್ಬರು ಗಾಯಗೊಂಡ ಘಟನೆ…